ಪ್ರಾಚೀನ ಸ್ಮಾರಕಗಳ ಸಂರಕ್ಷಣೆ ಪ್ರಬಂಧ Prachina Smarakagala Samrakshane Prabandha Conservation of Ancient Monuments Essay in Kannada
ಪ್ರಾಚೀನ ಸ್ಮಾರಕಗಳ ಸಂರಕ್ಷಣೆ ಪ್ರಬಂಧ
ಹಲೋ ಸ್ನೇಹಿತರೆ ನಾವು ಈ ಲೇಖನದಲ್ಲಿ ಪ್ರಾಚೀನ ಸ್ಮಾರಕಗಳ ಸಂರಕ್ಷಣೆ ಬಗ್ಗೆ ತಿಳಿಸಿಕೊಡುತ್ತಿದ್ದೇವೆ. ಹಳೆಯ ಸ್ಮಾರಕಗಳು ಇತಿಹಾಸವನ್ನು ಪ್ರತಿಬಿಂಬಿಸುತ್ತವೆ ಆದ್ದರಿಂದ ಅವುಗಳನ್ನು ಉಳಿಸಿಕೊಳ್ಳುವುದು ಸರ್ಕಾರ ಮತ್ತು ನಮ್ಮೆಲ್ಲರ ಕರ್ತವ್ಯ ಪ್ರಾಚೀನ ಸ್ಮಾರಕಗಳ ಸಂರಕ್ಷಣೆ ಹೇಗೆ ಮಾಡಬೇಕು ಯಾಕೆ ಮಾಡಬೇಕು ಇದೆಲ್ಲದರ ಕುರಿತಾಗಿ ಸಂಪೂರ್ಣ ಮಾಹಿತಿ ತಿಳಿಯಲು ಈ ಲೇಖನವನ್ನು ಪೂರ್ಣವಾಗಿ ಓದಿ.
ಪೀಠಿಕೆ:
ನಮ್ಮ ದೇಶದ ಪ್ರಾಚೀನ ಸ್ಮಾರಕಗಳನ್ನುರಕ್ಷಿಸಿಕೊಳ್ಳುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ. ಪ್ರಾಚೀನ ವಸ್ತುಗಳು ನಮಗೆ ಮಾರ್ಗದರ್ಶನಗಳಾಗಿವೆ ಮತ್ತು ನಮಗೆ ಒಳ್ಳೆಯ ಸಲಹೆ ಸಂದೇಶಗಳನ್ನು ನೀಡುತ್ತವೆ. ಇದಲ್ಲದೆ ಇವು ನಮಗೆ ನಮ್ಮದೇಶಕ್ಕೆ ದೊಡ್ಡ ಆಸ್ತಿಯಾಗಿವೆ, ಅವುಗಳನ್ನು ಸಂರಕ್ಷಿಸಿ ಕೊಳ್ಳುವುದು ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಇಲ್ಲದಿದ್ದರೆ ಒಂದೊಂದಾಗಿ ಎಲ್ಲವನ್ನು ಕಳೆದುಕೊಳ್ಳುತ್ತೆವೆ.
ಪ್ರಾಚೀನ ಸ್ಮಾರಕಗಳ ಸಂರಕ್ಷಣೆಯ ಬಗ್ಗೆ ಕಾಳಜಿ ವಹಿಸುವ ಜನರ ಪಟ್ಟಿಯನ್ನು ಮಾಡಬೇಕು, ಪಟ್ಟಿಯಲ್ಲಿರುವ ಎಲ್ಲಾ ಜನರು ಸಣ್ಣ ಕೊಡುಗೆಗಳನ್ನು ಸೇರಿಸಬೇಕು. ವಿವಿಧ ಸ್ಮಾರಕಗಳ ಸಂರಕ್ಷಣೆ ಮಾಡುವವರ ಗುಂಪನ್ನು ರಚಿಸಬೇಕು. ಕಣ್ಮನ ಮನಸೆಳೆಯುವ ಹಾಗೂ ವಿಸ್ಮಯ ಉಂಟುಮಾಡುವುದು ಸ್ಮಾರಕಗಳ ಉದ್ದೇಶವಾಗಿದೆ.
ಐತಿಹಾಸಿಕ ಸ್ಮಾರಕಗಳು ಹಳೆಯ ವಿಚಾರಗಳು ಹಾಗೂ ರಾಜಕೀಯ ಮಾಹಿತಿಗಳನ್ನು ತಿಳಿಸುವ ಉದ್ದೇಶದಿಂದ ನಿರ್ಮಿಸಲ್ಪಡುತ್ತದೆ, ಅವುಗಳ ನಿರ್ಮಾಣ ಕೂಡ ಕಷ್ಟಕರವಾಗಿರುತ್ತದೆ ಮತ್ತು ಸಾಕಷ್ಟು ಜನರ ಪರಿಶ್ರಮ ಇರುತ್ತದೆ. ಸ್ಮಾರಕಗಳನ್ನು ನಿರ್ಮಿಸಲು ಸುಮಾರು ವರ್ಷಗಳೆ ಬೇಕಾಗುತ್ತದೆ, ಆದ್ದರಿಂದ ಅವು ಹೆಚ್ಚುಕಾಲ ಇರುತ್ತವೆ ಮತ್ತು ಇವು ಹಳೆಯ ನಾಗರಿಕತೆಯನ್ನು ತಿಳಿಯಲು ಸಹಾಯ ಮಾಡುತ್ತವೆ.
ಪ್ರಾಚೀನ ಸ್ಮಾರಕಗಳ ಸಂರಕ್ಷಣೆ ಎಂದರೇನು.
ಪ್ರಾಚೀನ ಎಂದರೆ ಪುರಾತನ, ಸ್ಮಾರಕಗಳು ಎಂದರೆ ವ್ಯಕ್ತಿ ಅಥವಾ ಘಟನೆಗಳನ್ನು ಸ್ಮರಿಸಲು ಅಥವಾ ನೆನಪಿಸಲು ನಿರ್ಮಿಸಲಾದ ರಚನೆ. ಸಂರಕ್ಷಣೆ ಎಂದರೆ ರಕ್ಷಿಸುವುದು ಅಥವಾ ಸಂರಕ್ಷಿಸುವುದು.
ವಿವರಣೆ :
ರಾಜ ಮಹಾರಾಜರ ಕಾಲದ ದೊಡ್ಡ ದೊಡ್ಡ ಕಟ್ಟಡಗಳು, ಯುದ್ದೋಪಕರಣಗಳು , ನಾಣ್ಯಗಳು, ದೇವಾಲಯ, ಮಸೀದಿಗಳು, ಚರ್ಚುಗಳು , ಅರಮನೆ, ಸಾಂಸ್ಕೃತಿಕ ಕೊಡುಗೆ, ಮೂರ್ತಿ ಶಿಲೆಗಳು ಪ್ರಾಚೀನ ಸ್ಮಾರಕಗಳು ಇನ್ನು ಮುಂತಾದವುಗಳನ್ನು ಸ್ಮಾರಕಗಳು ಎಂದು ಕರೆಯಲಾಗುತ್ತದೆ. ಇಂದು ಕೆಲವು ಸ್ಮಾರಕಗಳು ಭೂಗತವಾಗಿದೆ. ಕೆಲವು ಸ್ಮಾರಕಗಳು ತುಂಡು ತುಂಡುಗಳಾಗಿವೆ. ಇಗೀನ ಕಾಲದ ಆರ್ಥಿಕ ಬೆಳವಣಿಗೆಯಿಂದಾಗಿ ಪ್ರಾಚೀನ ಸ್ಮಾರಕಗಳ ಸಂರಕ್ಷಣೆ ಅಂತ್ಯವಾಗುತ್ತಿವೆ.
ವಿಜಯನಗರ ಸಾಮ್ರಾಜ್ಯದ ಬಗ್ಗೆ ತಿಳಿದುಕೊಳ್ಳಲು ಆಧಾರವಾಗಿರುವ ಇತಿಹಾಸದ ಪುಸ್ತಕಗಳು ಇಂದಿಗೂ ಲಭ್ಯವಿದೆ ಮತ್ತು ಅದಕ್ಕೆ ಆಧಾರವಾಗಿರುವ ಪ್ರಾಚೀನ ಸ್ಮಾರಕಗಳು ಇಂದಿಗೂ ಕಾಣಲು ಸಿಗುತ್ತವೆ. ಇಂದಿಗೂ ಹಂಪಿಯಲ್ಲಿ ಹಳೆಯ ಸ್ಮಾರಕಗಳನ್ನು ಕಾಣಬಹುದು. ಬೇಲೂರು – ಹಳೇಬೀಡಿನ ಶಿಲ್ಪಕಲೆ, ವಾಸ್ತು ,ಸುಂದರವಾದ ಮೂರ್ತಿ ಇವೆಲ್ಲವು ಪ್ರಾಚೀನ ಸ್ಮಾರಕಗಳಿಗೆ ಸಾಕ್ಷಿಗಳಾಗಿವೆ. ಪ್ರಪಂಚದ 7 ಅದ್ಭುತಗಳಲ್ಲಿ ತಾಜಮಹಲ್ ಕೂಡ ಒಂದಾಗಿದೆ. ಇದು ನಮಗೆಲ್ಲ ಹೆಮ್ಮೆಯ ವಿಷಯವಾಗಿದೆ. ಹೈದರಾಲಿ, ಟಿಪ್ಪುವಿನ ಸಮಾಧಿ ಹಳೆಯ ಕಾಲದಲ್ಲಿ ಉಪಯೋಗಿಸುತ್ತಿದ್ದ ಯುದ್ದ ಸಾಮಗ್ರಿಗಳು ಬಟ್ಟೆ, ನಣ್ಯ ಇಂದಿಗೂ ಜೀವಂತ ಸಾಕ್ಷಿಗಳಾಗಿವೆ.
ಪ್ರಾಚೀನ ಸ್ಮಾರಕಗಳು ಯಾವುವು:
- ದೆಹಲಿಯ ಕೆಂಪು ಕೋಟೆ
- ಆಗ್ರಾದ ತಾಜ್ ಮಹಲ್
- ಜೈಪುರದ ನಗರ ಅರಮನೆ
- ಕುತುಬ್ ಮಿನಾರ್
- ಕೆಂಪು ಕೋಟೆ
- ಹುಮಾಯೂನ್ ಸಮಾಧಿ
- ಫತೇಪುರ್ ಸಿಕ್ರಿ
- ಸಾಂಚಿ ಬೌದ್ಧ
- ಹಂಪಿ ಇತ್ಯಾದಿ
ಪ್ರಾಚೀನ ಸ್ಮಾರಕಗಳ ಸಂರಕ್ಷಣೆ ಅಗತ್ಯ ಏಕೆ:
ಪ್ರಾಚೀನ ಸ್ಮಾರಕಗಳು ನಮ್ಮ ದೇಶದ ಸಂಪತ್ತು ಮತ್ತು ನಮ್ಮ ನಾಗರಿಕತೆ ಪ್ರತಿಬಿಂಬಿಸುವ ಅಂಶಗಳು. ನಮ್ಮ ಹಿಂದಿನ ಕಾಲದ ಕಲೆ ಮತ್ತು ಚಿಂತನೆ, ಜ್ಞಾನ ಮತ್ತು ನಾಗರಿಕತೆಯ ಬೆಳವಣಿಗೆ ಇವೆಲ್ಲವನ್ನು ಪ್ರಶಂಸಿಸಲು ಸ್ಮಾರಕಗಳ ಸಂರಕ್ಷಣೆ ನಮಗೆ ಸಹಾಯ ಮಾಡುತ್ತವೆ. ಇತಿಹಾಸ ಪುರಾವೆಗಳು ಪ್ರಮುಖ ಮೂಲವಾಗಿ ಕಾರ್ಯನಿರ್ವಹಿಸುತ್ತವೆ. ಪ್ರವಾಸಿಗರನ್ನು ಆಕರ್ಷಿಸುತ್ತವೆ.
ಆದ್ದರಿಂದ, ನೈಸರ್ಗಿಕ ಸಂಪತ್ತು, ಹವಾಮಾನ, ಭಯೋತ್ಪಾದಕ ದಾಳಿ, ಬೇಜಾವಾಬ್ದಾರಿಯುತ ನಾಗರಿಕರು, ಸ್ಮಾರಕಗಳ ಪ್ರಾಮುಖ್ಯತೆಯನ್ನು ಗೌರವಿಸದೆ ಇರುವವರು ಸಂದರ್ಶಕರಿಂದ ಸ್ಮಾರಕಗಳನ್ನು ರಕ್ಷಿಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದೆ.
ಪ್ರಾಚೀನ ಸ್ಮಾರಕಗಳ ಸಂರಕ್ಷಣೆ ಮಾಡುವುದು ಹೇಗೆ:
ಪ್ರಾಚೀನ ಸ್ಮಾರಕಗಳ ಸಂರಕ್ಷಣೆ ಸರಿಯಾದ ಕ್ರಮಗಳನ್ನು ಕೈಗೊಳ್ಳಬೇಕು. ಇದರ ಮಹತ್ವವನ್ನು ಪ್ರತಿಯೊಬ್ಬರಿಗು ತಿಳಿಸಿಕೊಡಬೇಕು, ಪ್ರಾಚೀನ ಅಥವಾ ಐತಿಹಾಸಿಕ ಕೇಂದ್ರಗಳಲ್ಲಿ ಹೆಚ್ಚು ಹೆಚ್ಚು ವಸ್ತುಗಳ ಸಂಗ್ರಹಾಲಯಗಳನ್ನು ನಿರ್ಮಿಸಬೇಕು ಮತ್ತು ಐತಿಹಾಸಿಕ ಸ್ಥಳಗಳನ್ನು ಸಂರಕ್ಷಿಸಬೇಕು, ನಿರ್ಮಿಸಲು ಪ್ರೋತ್ಸಾಹ ನೀಡಬೇಕು.
ಐತಿಹಾಸಿಕ ಸ್ಥಳಗಳಲ್ಲಿ ಜನವಸತಿಯನ್ನು ನಿಷೇದಿಸಬೇಕು. ಕೇಂದ್ರಸರ್ಕಾರ ಮತ್ತು ರಾಜ್ಯಸರ್ಕಾರಗಳು ಪ್ರಾಚೀನ ಸ್ಮಾರಕಗಳ ಸಂರಕ್ಷಣೆ ಕುರಿತು ಮಾಧ್ಯಮಗಳಲ್ಲಿ ಜಾಯಿರಾತು ನೀಡಬೇಕು. ಈ ರೀತಿ ಕಾರ್ಯಗಳಲ್ಲಿ ಹೆಚ್ಚಿನ ಅಸಕ್ತಿ ವಹಿಸಿ ಅಥವಾ ವಿಷೇಶ ಕಾಳಜಿ ವಹಿಸಿದವ ಅಧಿಕಾರಿಗಳಿಗೆ ಗೌರವ ಮತ್ತು ಪ್ರೋತ್ಸಾಹ ನೀಡಬೇಕು.
ಉಪಸಂಹಾರ
ನಾವು ನಮ್ಮ ದೇಶದ ಪ್ರಾಚೀನ ಸ್ಮಾರಕಗಳನ್ನುರಕ್ಷಿಸಬೇಕು.ಪ್ರಾಚೀನ ಸ್ಮಾರಕಗಳು ಒಳ್ಳೆಯ ಸಲಹೆ ಸಂದೇಶಗಳನ್ನು ನಮಗೆ ನೀಡುತ್ತವೆ. ದೇಶದ ಸುಂದರತೆ ಕಾಪಾಡುತ್ತವೆ. ಪ್ರಾಚೀನ ಸ್ಮಾರಕಗಳನ್ನು ಸಂರಕ್ಷಣೆ ಮಾಡಿಕೊಳ್ಳುವುದರಿಂದ ನಮಗೆ ಲಾಭವೇ ಹೊರತು ನಷ್ಟವಿಲ್ಲ. ಮುಂದಿನ ಪೀಳಿಗೆಗೆ ಪ್ರಾಚೀನ ಸ್ಮಾರಕಗಳ ಬಗ್ಗೆ ತಿಳಿಸಿಕೊಡಲು ಸಂರಕ್ಷಣೆ ಮಾಡಬೇಕು. ಆಧುನಿಕತೆ ಹೆಸರಿನಲ್ಲಿ ಇದೆಲ್ಲದರ ಅವನತಿಯಾಗುತ್ತಿದೆ. ಆದ್ದರಿಂದ ಇವುಗಳ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ.
FAQ
1.ಪ್ರಾಚೀನ ಸ್ಮಾರಕಗಳ ಸಂರಕ್ಷಣೆ ಎಂದರೇನು?
ಪ್ರಾಚೀನ ಎಂದರೆ ಪುರಾತನ, ಸ್ಮಾರಕಗಳು ಎಂದರೆ ವ್ಯಕ್ತಿ ಅಥವಾ ಘಟನೆಗಳನ್ನು ಸ್ಮರಿಸಲು ಅಥವಾ ನೆನಪಿಸಲು ನಿರ್ಮಿಸಲಾದ ರಚನೆ. ಸಂರಕ್ಷಣೆ ಎಂದರೆ ರಕ್ಷಿಸುವುದು ಅಥವಾ ಸಂರಕ್ಷಿಸುವುದು.
2.ಪ್ರಾಚೀನ ಸ್ಮಾರಕಗಳೆಂದರೆ ಯಾವುವು?
ರಾಜ ಮಹಾರಾಜರ ಕಾಲದ ಕಟ್ಟಡಗಳು, ಯುದ್ದೋಪಕರಣಗಳು , ನಾಣ್ಯಗಳು, ದೇವಾಲಯ, ಮಸೀದಿಗಳು, ಚರ್ಚುಗಳು , ಅರಮನೆ, ಸಾಂಸ್ಕೃತಿಕ ಕೊಡುಗೆ, ಮೂರ್ತಿ ಶಿಲೆಗಳು.
ಇತರೆ ವಿಷಯಗಳು :