ಭಾರತಕ್ಕೆ ಯೂರೋಪಿಯನ್ನರ ಆಗಮನ | Arrival of Europeans in India in Kannada

ಭಾರತಕ್ಕೆ ಯೂರೋಪಿಯನ್ನರ ಆಗಮನ Arrival of Europeans in India Bharatakke Uropiyannara Agamananada Bagge Mahiti in Kannada

ಭಾರತಕ್ಕೆ ಯೂರೋಪಿಯನ್ನರ ಆಗಮನ

Arrival of Europeans in India in Kannada
Arrival of Europeans in India in Kannada

ಈ ಲೇಕನಿಯಲ್ಲಿ ಭಾರತಕ್ಕೆ ಬಂದ ಯೂರೋಪಿಯನ್ನರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.

ಭಾರತಕ್ಕೆ ಯೂರೋಪಿಯನ್ನರ ಆಗಮನ

ಭಾರತತವು ಇಡೀ ಪ್ರಪಂಚದಲ್ಲಿ ಸಂಪತ್ತಭರಿತ ರಾಷ್ಟ್ರವಾಗಿದೆ. ಭಾರತವು ನಿರಂತರವಾಗಿ ದಾಳಿಗೆ ಒಳಪಟ್ಟಿವೆ. ೧೪೫೩ ಮೇ ೨೯ ರಂದು ಕಾನ್‌ಸ್ಟಾಂಟಿನೋಪಲ್‌ ಪ್ರದೇಶವನ್ನು ( ಇಸ್ತಾಂಬುಲ್‌ – ೧೯೩೦ ಜುಲೈ ನಲ್ಲಿ ಹೆಸರು ಬದಲಾವಣೆ ) ಆಟೋಮನ್‌ ಟರ್ಕರ ೨ ನೇ ಮೆಹರತ್‌ ಆಲಿ / ೨ನೇ ಮಹಮ್ಮದ್‌ ಅಲಿ ಕಾನ್‌ಸ್ಟಾಂಟಿನೋಪಲ್‌ ನಗರವನ್ನು ವಶಪಡಿಸಿಕೊಂಡನು. ಅವಶ್ಯಕತೆ ಶೋಧನೆಯ ಜನನಿ ಎಂಬಂತೆ ಯೂರೋಪಿಯನ್ನರು ಜಲಮಾರ್ಗವನ್ನು ಕಂಡುಹಿಡಿಯಲು ಸಾಧ್ಯವಾಯಿತು.

ಯೂರೋಪಿಯನ್ನರು ಮಾಂಸಹಾರಿಗಳಾಗಿದ್ದರು. ಭಾರತದಲ್ಲಿ ಸಾಂಬಾರ್‌ ಪದಾರ್ಥಗಳು ಅಧಿಕವಾಗಿರುವುದರಿಂದ ಭಾರತಕ್ಕೆ ಬರುವ ಅನಿವಾರ್ಯತೆ ಸೃಷ್ಟಿಯಾಯಿತು. ಜಲಮಾರ್ಗವನ್ನು ಕಂಡುಹಿಡಿಯಲು ಪ್ರಯತ್ನಿಸಿದ್ದು ಪೋರ್ಚುಗೀಸರು ನಂತರ ಇವರ ಮಾರ್ಗವಾಗಿ ಡಚ್ಚರು,ಇಂಗ್ಲಿಷರು, ಡೇನರು, ಫ್ರೆಂಚರು, ಸ್ವಿಡನ್ನರು ಭಾರತಕ್ಕೆ ಬಂದರು.

ಪೋರ್ಚುಗೀಸರು ( ೧೪೯೮ – ೧೯೬೧ )

  • ಪೋರ್ಚುಗೀಸರ ಸದಸ್ಯ ರಾಷ್ಟ್ರ ಪೋರ್ಚುಗಲ್‌, ರಾಜಧಾನಿ – ಲಿಸ್ಬನ್‌
  • ಮೊಟ್ಟ ಮೊದಲ ಬಾರಿಗೆ ಜಲಮಾರ್ಗವನ್ನು ಕಂಡುಹಿಡಿಯಲು ಪ್ರಯತ್ನಿಸಿದವರು ಪೋರ್ಚುಗೀಸರು. ಪೋರ್ಚುಗಲ್‌ನ ರಾಜಕುಮಾರ ೪ ನೇ ಹೆನ್ರಿ ಲಿಸ್ಬನ್‌ ಬಂದರಿನಲ್ಲಿ ನೌಕಶಾಲೆಯನ್ನು ಪ್ರಾರಂಭಿಸಿದನು. ಹಿಗಾಗಿ ಈತನನ್ನು ದ ನ್ಯಾವಿಗೇಟರ್‌ ಎಂದು ಕರೆಯಲಾಗಿದೆ. ಇದರ ಅರ್ಥ ನೌಕಯಾನದಲ್ಲಿ ಹೊಸದನ್ನು ಶೋಧನೆ ಮಾಡುವವ ಎಂದರ್ಥ.
  • ೪ ನೇ ಹೆನ್ರಿಯ ನಂತರ ೨ ನೇ ಜಾನ್‌ ೧೪೮೭ ಜುಲೈ ೧ ರಂದು ಬಾರ್ಥೋಲೋಮಿಯಾ ಡಯಾಸ್‌ನನ್ನ ನೇಮಕ ಮಾಡಿದನು. ಈತನು ಲಿಸ್ಬನ್‌ ಬಂದರಿನಲ್ಲಿ ಪ್ರಯಾಣ ಆರಂಭಿಸಿ ಅಫ್ರಿಕಾದ ತುತ್ತತುದಿಗೆ ಬಂದನು. ಅಲ್ಲಿ ಜೋರಾದ ಬಿರುಗಾಳಿ ಬೀಸಿತು ಹೀಗಾಗಿ ಆತನಿಗೆ ಮುಂದೆ ಹೋಗಲು ಸಾಧ್ಯವಾಗಲಿಲ್ಲಹೀಗಾಗಿ ಅದನ್ನು ಬಿರುಗಾಳಿಯ ಭೂಶಿರ ಎಂದನು. ಹಾಗೂ ೨ ನೇ ಜಾನನು ಭರವಸೆಯ ಭೂಶಿರ ಎಂದನು.

ಡಚ್ಚರು ( ೧೫೯೬ – ೧೭೫೯ ಅಥವಾ ೧೭೯೨ )

  • ಭಾರತಕ್ಕೆ ಬಂದ ೨ ನೇ ಯೂರೋಪಿಯನ್ನರೆಂದರೆ ಡಚ್ಚರು. ಇವರ ರಾಷ್ಟ್ರ ಹಾಲೆಂಡ್‌ ( ನೆದರ್‌ ಲ್ಯಾಂಡ್‌ ) ಇವರ ರಾಜಧಾನಿ ಅಮ್ಸರ್ಡ್‌ ಡ್ಯಾಮ್.‌
  • ೧೫೯೬ ರಲ್ಲಿ ಭಾತರಕ್ಕೆ ಬಂದ ಮೊದಲ ಡಚ್ ವ್ಯಕ್ತಿ ಕಾರ್ಲೆನಿಯಸ್‌ ಹೌಟುಮನ್‌
  • ಇವರು ೧೬೦೨ / ಮಾರ್ಚ್‌ ೨೦ ರಂದು ಡಚ್‌ ಈಸ್ಟ್‌ ಇಂಡಿಯಾ ಕಂಪನಿಯನ್ನು ಸ್ಥಾಪಿಸಲಾಯಿತು.
  • ಇವರ ರಾಜಧಾನಿ ಪುಲಿಕಾಟ್‌
  • ಮೊದಲ ವ್ಯಾಪಾರ ಕೇಂದ್ರ ಮಚಲಿಪಟ್ಟಣ
  • ಡಚ್ಚರು ಭಾರತದಲ್ಲಿ ಅಭಿವೃದ್ದಿ ಹೊಂದಲಿಲ್ಲ. ಏಕೆಂದರೆ ಇಂಗ್ಲಿಷರ ಜೊತೆ ಹೊರಾಡುವ ಶಕ್ತಿ ಸಾಮಾರ್ಥ್ಯವು ಇರಲಿಲ್ಲ.
  • ಇವರು ದುರ್ಬಲರಾಗಿದ್ದರು ೧೭೫೯ ರಲ್ಲಿ ತಮಿಳುನಾಡಿನ ಬಿದ್ರಾದಲ್ಲಿ ರಾಬರ್ಟ್‌ಕ್ಲೈವ್‌ ಡಚ್ಚರನ್ನು ಸೋಲಿಸಿದನು.

ಇಂಗ್ಲಿಷರು

  • ೧೫೯೯ ರಲ್ಲಿ ಜಾನ್‌ ಮಿಲ್ಟನ್‌ ಹಾಲ್‌ ಡ್ರ್ಯಾಗನ ಎಂಬ ಹಡಗಿನ ಮುಖಾಂತರ ಭಾರತಕ್ಕೆ ಬಂದನು.
  • ಈತನು ಭಾರತದಿಂದ ಅಪಾರವಾದ ಸಂಪತ್ತನ್ನು ತೆಗೆದುಕೊಂಡು ಹೋದನು.
  • ಲಂಡನ್‌ನಲ್ಲಿರುವ ೩೬ ಜನ ವರ್ತಕರು ರಾಣಿ ಎಲಿಜಬೆತ್ತಳ ಅನುಮತಿಯನ್ನು ಪಡೆದುಕೊಂಡು ೧೬೦೦ ಡಿಸೆಂಬರ್‌ ೩೧ ರಂದು ಲಂಡನ್‌ನಲ್ಲಿ ಈಸ್ಟ್‌ ಇಂಡಿಯಾ ಕಂಪನಿಯನ್ನು ಸ್ಥಾಪಿಸಲಾಯಿತು. ಈ ಸಂದರ್ಭದಲ್ಲಿ ರಾಣಿಯು ಕೇವಲ ೧೫ ವರ್ಷ ಮಾತ್ರ ಅನುಮತಿ ನೀಡಿದಳು.
  • ೧೬೦೮ ರಲ್ಲಿ ಸರ್‌ ಕ್ಯಾಪ್ಟನ್‌ ಮಿಲಿಯಂ ಹಾಕಿನ್‌ ಭಾರತಕ್ಕೆ ರಾಯಭಾರಿಯಾಗಿ ಬಂದನು. ಈತನು ಭಾರತದಲ್ಲಿ ೧೬೧೧ ರ ವರೆಗೂ ಇದ್ದ, ಆದರೆ ಔಂಗೀರ್‌ ಬಾದ್‌ ಷಾ ರವರು ಈತನಿಗೆ ವ್ಯಾಪಾರ ಹೊಂದಲು ಅನುಮತಿಯನ್ನು ನೀಡಲಿಲ್ಲ.
  • ಕಂಪನಿ ಸ್ಥಾಪನೆಯಾದಾಗ ಅಕ್ಬರ್‌ ಮಹಾ ಮೊಘಲರ ಬಾದ್‌ ಷಾ ಆಗಿದ್ದ.

ಡೇನರು ( ೧೬೧೬ – ೧೬೫೪ )

  • ಡೇನರ ರಾಷ್ಟ್ರ ಡೆನ್ಮಾರ್ಕ್‌
  • ರಾಜಧಾನಿ – ಕೋಪನ್‌ ಹೇಗನ್‌
  • ಇವರು ತುಂಬಾ ದುರ್ಬಲರಾಗಿದ್ದರು.
  • ಇಂಗ್ಲೀಷರ ಜೊತೆ ಹೋರಾಡುವ ಶಕ್ತಿ ಸಾಮಾರ್ಥ್ಯ ಡೇನರಲ್ಲಿ ಇರಲಿಲ್ಲ.
  • ಇವರ ಮೊದಲ ವ್ಯಾಪಾರ ಕೇಂದ್ರ ಖಾಸಿಂ ಬಜಾರ್‌ ಇದರ ರಾಜಧಾನಿ ತಿರುವಾಂಕೂರು.
  • ಇವರು ಭಾರತದಲ್ಲಿ ಬಹಳ ದಿನಗಳ ವರೆಗೆ ವ್ಯಾಪಾರ ಅಧಿಪತ್ಯವನ್ನು ಹೊಂದಲು ಸಾಧ್ಯವಾಗಲಿಲ್ಲ.
  • ಇವರು ೧೬೧೬ ಡಿಸೆಂಬರ್‌ ೧ ರಂದು ಡೇನ್‌ ಈಸ್ಟ್‌ ಇಂಡಿಯಾ ಕಂಪನಿಯನ್ನು ಸ್ಥಾಪನೆ ಮಾಡಿದರು.

ಫ್ರೆಂಚರು ( ೧೬೬೪ – ೧೯೫೪ )

  • ಇವರ ರಾಷ್ಟ್ರ ಪ್ರಾನ್ಸ್‌, ರಾಜಧಾನಿ ಪ್ಯಾರಿಸ್‌.
  • ೧೪ ನೇ ಲೂಹಿಯ ಅರ್ಥ ಸಚಿವ ಕೋಲ್ಪರ್ಟನ ಸಲಹೆಯ ಮೇರೆಗೆ ಫ್ರೆಂಚರು ಫ್ರೆಂಚ್‌ ಈಸ್ಟ್‌ ಇಂಡಿಯಾ ಕಂಪನಿಯನ್ನು ಸ್ಥಾಪಿಸಿದರು. ( ೧೬೬೪ ಸೆಪ್ಟೆಂಬರ್‌ ೦೧ )
  • ಕಂಪನಿಯ ಪರವಾಗಿ ೧೬೬೮ ರಲ್ಲಿ ಪ್ರಾಂಕೋಯಿನ್‌ ಕೋರಂ ಸೂರತ್‌ ಎಂಬ ಸ್ಥಳದಲ್ಲಿ ಮೊದಲ ವ್ಯಾಪಾರ ಕೇಂದ್ರವನ್ನು ಪ್ರಾರಂಭಿಸಿದರು.
  • ೧೬೭೪ ರಲ್ಲಿ ಪ್ರಾಂಕೋಯಿನ್‌ ಮಾರ್ಟಿನ್‌ ಬಿಜಾಪುರದ ಆದಿಲ್‌ ಷಾಹಿ ಸಿಕಂದರ್‌ ಆದಿಲ್‌ ಷಾಹಿಯ ಅಧೀನದಲ್ಲಿದ್ದ ಆದಿಲ್‌ ಖಾನ್‌ನಿಂದ ಒಂದು ಸ್ಥಳವನ್ನು ಬಾಡಿಗೆ ಪಡೆದು ಪಾಂಡಿಚೇರಿಯನ್ನು ನಿರ್ಮಿಸಿದನು.
  • ಇದರಿಂದ ಪ್ರಾಂಕೋಯಿನ್‌ ಪ್ರೆಂಚ್‌ ಸಾಮ್ರಾಜ್ಯದ ನಿಜವಾದ ವ್ಯವಸ್ಥಾಪಕ ಎಂದು ಕರೆಯಲಾಗಿದೆ.
  • ೧೭೪೨ ರಲ್ಲಿ ಡೂಪ್ಲೆ ಭಾರತಕ್ಕೆ ಪ್ರೆಂಚ್‌ ಅಧಿಕಾರಿಯಾಗಿ ಬಂದನು. ಈತನನ್ನು ಪ್ರೆಂಚ್‌ ಸಾಮ್ರಾಜ್ಯದ ನಿಜವಾದ ಸೂರ್ಯ, ಚಂದ್ರ ಎಂದು ವರ್ಣಿಸಲಾಗಿದೆ. ಈತನು ಭಾರತದಲ್ಲಿ ಪ್ರೆಂಚ್‌ ಸಾಮ್ರಾಜ್ಯವನ್ನು ಸ್ಥಾಪಿಸುವ ಉದ್ದೇಸವನ್ನು ಹೊಂದಿದ್ದನು.
  • ೧೭೩೧ ರಲ್ಲಿ ಭಾರತಕ್ಕೆ ಸ್ವಡನ್ನರು ಬಂದರು. ಭಾರತಕ್ಕೆ ಬಂದ ಕೊನೆಯ ಯೂರೋಪಿಯನ್ನರು.

FAQ

ಪೋರ್ಚುಗಲ್‌ ನ ರಾಜಧಾನಿ ಯಾವುದಾಗಿತ್ತು ?

ಲಿಸ್ಬನ್

ವಾಸ್ಕೋಡಿಗಾಮನು ಕಲ್ಲಿಕೋಟೆಗೆ ಯಾವಾಗ ಬಂದನು ?

೧೪೯೮ ಮೇ ೨೦

ಇತರೆ ವಿಷಯಗಳು :

ವಿಶ್ವ ಸಂಸ್ಥೆಯ ಅಂಗಸಂಸ್ಥೆಗಳ ಬಗ್ಗೆ ಮಾಹಿತಿ

ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ಮಾಹಿತಿ

Leave a Reply

Your email address will not be published. Required fields are marked *