ಮಹಿಳಾ ದೌರ್ಜನ್ಯ ಮತ್ತು ಕಾನೂನು ಬಗ್ಗೆ ಪ್ರಬಂಧ | Essay on Women Violence and Law in Kannada

ಮಹಿಳಾ ದೌರ್ಜನ್ಯ ಮತ್ತು ಕಾನೂನು ಬಗ್ಗೆ ಪ್ರಬಂಧ Essay on Women Violence and Law Mahila Dourjanya Mattu Kanunu Prabandha in Kannada

ಮಹಿಳಾ ದೌರ್ಜನ್ಯ ಮತ್ತು ಕಾನೂನು ಬಗ್ಗೆ ಪ್ರಬಂಧ

Essay on Women Violence and Law in Kannada

ಈ ಲೇಖನಿಯಲ್ಲಿ ಮಹಿಳಾ ದೌರ್ಜನ್ಯ ಮತ್ತು ಕಾನೂನು ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.

ಪೀಠಿಕೆ

ಮಹಿಳೆಗೆ ನಾವು ಕೊಡುವ ಶ್ರೇಷ್ಟವಾದ ಉಡುಗೊರೆ ಎಂದರೆ ಅದು ಗೌರವ. ಹೆಣ್ಣನ್ನು ಪೂಜಿಸುತ್ತೇವೆ, ಗೌರವಿಸುತ್ತೇವೆ, ಆದರೆ ಅದನ್ನು ಪಾಲಿಸುವುದಿಲ್ಲ. ಹೆಣ್ಣನ್ನು ಕೀಳಾಗಿ ಕಾಣುವ ಪ್ರವೃತ್ತಿಯಲ್ಲೇ ಬೆಳೆದಿದ್ದೇವೆ. ಹೆಣ್ಣ ಒಂದು ಕುಟುಂಬದಲ್ಲಿ ಪುತ್ರಿಯಾಗಿ, ಸೊಸೆಯಾಗಿ, ತಾಯಿಯಾಗಿ, ಅತ್ತೆಯಾಗಿ ಕುಟುಂಬದಲ್ಲಿ ತನ್ನ ಮಹತ್ತರವಾದ ಪಾತ್ರವನ್ನು ನಿರ್ವಹಿಸುತ್ತಾಳೆ. ಇಷ್ಟೆಲ್ಲ ಜವಾಬ್ದಾರಿಗಳನ್ನು ಹೊಂದಿದ ಸ್ತ್ರೀಯು ಭಯ- ಆತಂಕದ ಜೀವನವನ್ನು ನಡೆಸುವುದಾಗಿದೆ.

ವಿಷಯ ವಿವರಣೆ

ಮಹಿಳಾ ದೌರ್ಜನ್ಯ ಎಂದರೆ ಮಾನಸಿಕವಾಗಿ, ಲೈಂಗಿಕವಾಗಿ, ಭಾವನಾತ್ಮಕವಾಗಿ, ಹಾಗು ಇನ್ನು ಕೆಲವೊಂದು ವಿಷಯಳಿಂದ ಕುಗ್ಗುವಂತ ಸ್ಥಿತಿಯಾಗಿದೆ. ವೇದಗಳ ಕಾಲದಿಂದಲೂ ಕೇಳುತ್ತ ಬಂದಿರುವುದು “ಹೆಣ್ಣನ್ನು ಎಲ್ಲಿ ಗೌರವಿಸುತ್ತಾರೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ”. ಎಂಬ ನಂಬಿಕೆಯೂ ಇದೆ. ಆದರೂ ಅದನ್ನು ಪಾಲಿಸುತ್ತಿಲ್ಲ. ಆರ್ಥಿಕವಾಗಿ, ಸಾಮಾಜಿಕವಾಗಿ, ಹಾಗು ಮತ್ತಿತ್ತರ ವಿಷಯಗಳಿಂದಲೂ ದೌರ್ಜನ್ಯಕ್ಕೆ ಒಳಪಡುತ್ತಿದ್ದಾರೆ. ಇವೆಲ್ಲದರಿಂದ ಹೊರಬರಲು ಮಹಿಳಾ ಕಾನೂನು ಕ್ರಮಗಳನ್ನುಕೈಗೊಳ್ಳಬೇಕು.

ಮಹಿಳೆ ದೌರ್ಜನ್ಯಕ್ಕೆ ಒಳಗಾಗಲು ಕಾರಣಗಳು

  • ಮಹಿಳೆಯು ಭಾವನಾತ್ಮಕವಾಗಿ ಕುಗ್ಗುವಂತ ಸ್ಥಿತಿಯಲ್ಲಿರುವಳು ಹಾಗು ಲೈಂಗಿಕ ಹಿಂಸೆಯಿಂದ ಕುಗ್ಗುವಂತ ಸ್ಥಿತಿ. ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯು ಅಲ್ಪಸಂಖ್ಯಾತರಂತೆ ಇರುವುದಾಗಿದೆ.
  • ಮಹಿಳೆಯನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡಿರುವುದೇ ಮುಖ್ಯ ಕಾರಣವಾಗಿದೆ.
  • ಆರ್ಥಿಕವಾಗಿಯೂ ಮಹಿಳೆಯು ತನ್ನ ಸ್ಥಾನಮಾನದಿಂದ ವಂಚಿತಳಾಗಿದ್ದಾಳೆ. ಹಾಗೆ ಮಹಿಳೆಯು ಹುಟ್ಟಿನಿಂದ ಸಾವುವರೆಗೆ ಬೇರೆಯವರಿಗೆ ಅವಲಂಬಿತವಾಗಿಯೇ ತಮ್ಮ ಜೀವನವನ್ನು ನಡೆಸುವುದಾಗಿದೆ. ಅಂದರೆ ಬಾಲ್ಯದಲ್ಲಿ ತಂದೆಯ, ಯೌವ್ಹನದಲ್ಲಿ ಗಂಡನ, ಮುಪ್ಪಿನಲ್ಲಿ ಮಗನ ಆಶ್ರಯದಲ್ಲಿ ಜೀವನವನ್ನು ನಡೆಸುವುದಾಗಿದೆ.
  • ಎಲ್ಲವನ್ನು ಸಹಿಸಿಕೊಳ್ಳುವ ಮನಸ್ಥಿತಿಯನ್ನು ಮಹಿಳೆಯು ಹೊಂದಿರುವುದಾಗಿದೆ. ಕುಟುಂಬದ ಹಿತಕ್ಕಾಗಿ ಮಹಿಳೆಯು ಮಾನಸಿಕ ಹಿಂಸೆಯನ್ನು ಸಹಿಸಿಕೊಂಡು ಜೀವನವನ್ನು ನಡೆಸುತ್ತಿರುವುದು.
  • ಹೆಣ್ಣನ್ನು ಮಕ್ಕಳನ್ನು ಹೆರುವಯಂತ್ರವೆಂದು ಕೆಲವರು ಭಾವಿಸಿರುವುದು ಕೂಡ ಮುಖ್ಯಕಾರಣವಾಗಿದೆ.

ಮಹಿಳಾ ದೌರ್ಜನ್ಯ ತಡೆಯಲು ಪರಿಹಾರ ಕ್ರಮಗಳು

  • ಮಹಿಳಾ ದೌರ್ಜನ್ಯವನ್ನು ತೆಡೆಯಲು ಹಲವಾರು ಕಾನೂನು ಕ್ರಮಗಳನ್ನು ತೆಗೆದುಕೊಳ್ಳಬೇಕು.
  • ಮಹಿಳೆಯರನ್ನು ಆರ್ಥಿಕವಾಗಿ ಬಲಿಷ್ಟರನ್ನಾಗಿಸಬೇಕು.
  • ಆತ್ಯಾಚಾರಿಗಳಿಗೆ ಕಠಿಣವಾದ ಶಿಕ್ಷೆಯನ್ನು ಕಡ್ಡಾಯವಾಗಿ ನೀಡಬೇಕು.
  • ಮಹಿಳಾ ಪೋಲಿಸ್‌ ಠಾಣೆ ಮತ್ತು ಮಹಿಳಾ ಸಿಬ್ಬಂದಿಯು ಇರುವುದು.
  • ಕೆಲವೊಂದು ಲೈಂಗಿಕ ಪ್ರಕರಣಗಳ ವಿಚಾರಣೆಯನ್ನು ಮಹಿಳಾ ಸಿಬ್ಬಂದಿಯು ನಡೆಸುವುದು ಸೂಕ್ತ.
  • ಮಹಿಳೆಯರಿಗೋಸ್ಕರ ನ್ಯಾಯಾಲಯಗಳನ್ನು ಇರಿಸುವುದು ಸೂಕ್ತ. ಹಾಗು ಇನ್ನು ಹಲವಾರು ಕ್ರಮಗಳಿಂದ ಮಹಿಳಾ ದೌರ್ಜನ್ಯ ತಡೆಯಲು ಸಾಧ್ಯವಾಗಿತ್ತದೆ.

ಮಹಿಳಾ ದೌರ್ಜನ್ಯಕ್ಕೆ ಕಾನೂನಾತ್ಮಕವಾಗಿ ತಂದಿರುವ ಕೆಲವೊಂದು ಕಾಯ್ದೆಗಳು

  • ಮರು ವಿವಾಹ ಕಾಯ್ದೆ – ೧೮೫೬
  • ಸತಿ ಸಹಗಮನ ನಷೇಧ ಕಾಯ್ದೆ – ೧೯೨೯
  • ವರದಕ್ಷಿಣೆ ನಿಷೇಧ ಕಾಯ್ದೆ – ೧೯೬೧
  • ವಿಶೇಷ ವಿವಾಹ ಕಾಯ್ದೆ ೧೯೫೪
  • ಕೌಟುಂಬಿಕ ಜಾಗೃತ ಕಾಯ್ದೆ – ೧೯೫೪
  • ಪ್ರಸವ ಪೂರ್ವದಲ್ಲಿ ಭ್ರೂಣ ಪತ್ತೆ ಹಚ್ಚುವ ಕಾಯ್ದೆ – ೧೯೫೪

ಹಾಗು “೨೦೦೧ ರಲ್ಲಿ ಮಹಿಳಾ ಸಬಲಿಕರಣ ವರ್ಷ” ವೆಂದು ಆಚರಿಸಲಾಗಿದೆ.

ಉಪಸಂಹಾರ

ಹೆಣ್ಣು ಬೋಗದ ವಸ್ತುವಲ್ಲ, ತ್ಯಾಗದ ಮೂರ್ತಿ“. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬುದನ್ನು ಅರಿತು. ಹೆಣ್ಣಿನ ಬಗ್ಗೆ ಅಭಿಮಾನ ಮತ್ತು ಸ್ಥೈರ್ಯದ ಗುಣಗಳನ್ನು ಆಕೆಯ ಭಾವನೆಯಲ್ಲಿ ಬರುವಂತೆ ಮಾಡೋಣ, ಮಹಿಳಾ ಸ್ಥಾನಮಾನವನ್ನು ಕಲ್ಪಿಸಿ ಮಹಿಳಾ ದೌರ್ಜನ್ಯ ಇಂದೇ ಕೊನೆಗಾಣುವಂತೆ ಮಾಡಬೇಕು.

FAQ

ಮಹಿಳಾ ಸಬಲಿಕರಣ ವರ್ಷ” ವೆಂದು ಯಾವಾಗ ಆಚರಿಸಲಾಗಿದೆ ?

೨೦೦೧

ವಿಶ್ವ ಮಹಿಳಾ ದಿನವನ್ನು ಯಾವಾಗ ಆಚರಿಸುತ್ತಾರೆ ?

ಮಾರ್ಚ೮

Leave a Reply

Your email address will not be published. Required fields are marked *