ವಿಶ್ವ ಪುಸ್ತಕ ದಿನದ ಬಗ್ಗೆ ಪ್ರಬಂಧ Essay on World Book Day Vishva Pustaka Dinada Bagge Mahiti in Kannada
ವಿಶ್ವ ಪುಸ್ತಕ ದಿನದ ಬಗ್ಗೆ ಪ್ರಬಂಧ
ಈ ಲೇಖನಿಯಲ್ಲಿ ವಿಶ್ವ ಪುಸ್ತಕ ದಿನದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.
ಪೀಠಿಕೆ
ಪುಸ್ತಕಗಳು ನಮಗೆ ಬದುಕುವುದನ್ನು, ವಿಚಾರ ಮಾಡುವುದನ್ನು, ಅಲೋಚಿಸುವುದನ್ನು, ಕಲಿಸುತ್ತದೆ. ಪ್ರತಿವರ್ಷ ಎಪ್ರಿಲ್ ೨೩ ರಂದು ವಿಶ್ವ ಪುಸ್ತಕ ದಿನವನ್ನು ಆಚರಿಸಲಾಗುತ್ತದೆ. ಪುಸ್ತಕವು ಜ್ಞಾನದ ಕಣಜವಿದ್ದಂತೆ, ಪುಸ್ತಕಗಳು ನಮ್ಮ ಜೊತೆ ಇರುವ ಸ್ನೇಹಿತರು. ನನ್ನನ್ನು ತಲೆ ತಗ್ಗಸಿ ಓದು, ನಾನು ನಿನ್ನನ್ನು ತಲೆ ಎತ್ತಿ ನೋಡುವಂತೆ ನಾನು ( ಪುಸ್ತಕ ) ಮಾಡುತ್ತೇನೆ.
ವಿಷಯ ವಿವರಣೆ
೧೯೯೫ ಎಪ್ರಿಲ್ ೨೩ ನ್ನು ವಿಶ್ವ ಪುಸ್ತಕ ದಿನವನ್ನು ಆಚರಿಸಬೇಕೆಂದು ಯುನೆಸ್ಕೋ ಘೋಷಿಸಿತು. ಕನ್ನಡ ಪುಸ್ತಕ ಪ್ರಾಧಿಕಾರ ಸಾರ್ವಜನಿಕ ಗ್ರಂಥಾಲಯ ಇಲಾಖೆ, ಸಾಹಿತ್ಯ ಅಕಾಡೆಮಿ ಮುಂತಾದ ಸಂಸ್ಥೆಗಳು ಪತ್ರಿಕೋದ್ಯಮಕ್ಕೆ ಸಂಬಂಧಿಸಿದಂತೆ ಕಾರ್ಯಕ್ರಮಗಳನ್ನು ಮಾಡುತ್ತವೆ. ವ್ಯಕ್ತಿತ್ವವನ್ನು ಬೆಳೆಸಲು ಪುಸ್ತಕಗಳ ಪಾತ್ರ ಮಹತ್ವದ್ದು. ವೈಜ್ಞಾನಿಕವಾಗಿ ಆಲೋಚಿಸಲು ಪುಸ್ತಕಗಳು ಸಹಾಯಕವಾಗುತ್ತವೆ.
ಪುಸ್ತಕ ದಿನಾಚರಣೆ
ಪುಸ್ತಕಗಳ ಮಹತ್ವವನ್ನು ಎಲ್ಲರಿಗೂ ತಿಳಿಸುವ ಮತ್ತು ಪುಸ್ತಕಗಳಲ್ಲಿರುವ ಜ್ಞಾನದ ಬಗ್ಗೆ ಅರಿವನ್ನು ಮೂಡಿಸುವುದಕ್ಕಾಗಿ ಪುಸ್ತಕಗಳ ದಿನವನ್ನು ಎಪ್ರಿಲ್ ೨೩ ರಂದು ಆಚರಿಸಲಾಗುತ್ತದೆ. ಪುಸ್ತಕಗಳ ಜೊತೆ ಗೆಳೆತನವನ್ನು ಬೆಳೆಸಿಕೊಂಡರೆ ಉತ್ತಮ ಭವಿಷ್ಯವನ್ನು ಕಾಣಬಹುದು. ಆರೋಗ್ಯಯುತ ಸಮಾಜವಾಗಿಸಲು ಮತ್ತು ವಾಚನಾಭಿರುಚಿ ಹೆಚ್ಚಿಸಿಕೊಳ್ಳಲು ಪುಸ್ತಕಗಳು ಸಹಾಯವಾಗುತ್ತವೆ. ನಮ್ಮ ಸಂಸ್ಕೃತಿಯ ಬಗ್ಗೆ ತಿಳಿಯಲು ಪುಸ್ತಕಗಳು ಹೆಚ್ಚಿನ ಸಹಾಯವನ್ನು ಮಾಡುತ್ತವೆ.
ಪುಸ್ತಕಗಳಿಂದಾಗುವ ಉಪಯೋಗಗಳು
- ಉತ್ತಮ ಜೀವನ ಮೌಲ್ಯಗಳನ್ನು ತಿಳಿಯಲು ಪುಸ್ತಕಗಳು ಸಹಾಯಕವಾಗಿವೆ.
- ಪುಸ್ತಕಗಳು ನಮ್ಮ ಬದುಕನ್ನು ಬೆಳೆಗಬಲ್ಲ ದೀವಿಗೆಗಳು.
- ಮನುಷ್ಯ ಪುಸ್ತಕಗಳಿಂದ ತನ್ನದಲ್ಲದ ಅನುಭವಗಳನ್ನು ತನ್ನದಾಗಿಸಿಕೊಳ್ಳುತ್ತಾನೆ.
- ಪುಸ್ತಕಗಳನ್ನು ಓದುವುದು, ಸಂಗ್ರಹಿಸುವುದು ಒಂದು ಅತ್ಯುತಮ ಹವ್ಯಾಸ.
- ತಾನಿರುವ ಸ್ಥಳದಲ್ಲಿಯೇ ಲೋಕದ ಅನುಭವಗಳನ್ನು ಪಡೆಯಲು ಅವಕಾಶ ಲಭಿಸುತ್ತದೆ.
- ಒಬ್ಬ ವ್ಯಕ್ತಿಯ ಭೌದ್ದಿಕ ಪ್ರಭುದ್ದತೆ ಬರುವುದೇ ಪುಸ್ತಕ ಓದುವುದರಿಂದ, ಓದು ನಮ್ಮ ಮನೋವೈಶಾಲ್ಯವನ್ನು ಹೆಚ್ಚಿಸುವ ಬಹುದೊಡ್ಡ ಸಾಧನ.
- ಮೌಲ್ಯಗಳನ್ನು ವ್ಯಕ್ತಿಗಳ ಮನಸ್ಸಿನಲ್ಲಿ ಆಳವಾಗಿ ಬಿತ್ತುವುದರಲ್ಲಿ ಪುಸ್ತಕಗಳ ಪಾತ್ರ ಬಹಳ ಮಹತ್ತರವಾದದ್ದು.
ಉಪಸಂಹಾರ
ಓದಿರುವುದು ಕೈ ಬೊಗಸೆಯಷ್ಟು, ಓದಬೇಕಾದುದು ಕಡಲಿನಷ್ಟು. ಬರವಣಿಗೆ ಓದುವುದರಿಂದ ಬರುತ್ತದೆ. ಮತ್ತು ಓದು ಹೇಗೆ ಬರೆಯುವುದು ಎಂಬುದರ ಅತ್ಯುತ್ತಮ ಶಿಕ್ಷಕ. ಪುಸ್ತಕವು ನಿಮ್ಮ ಪಾದಗಳನ್ನು ಚಲಿಸದೆ ನಿಮಗೆ ಪ್ರಯಾಣಿಸಲು ಅವಕಾಶಮಾಡಿಕೊಡುತ್ತದೆ. ಪುಸ್ತಕವಿಲ್ಲದ ಕೋಣೆ ಆತ್ಮವಿಲ್ಲದ ದೇಹದಂತೆ. ಗ್ರಂಥಾಲಯವು ಒಬ್ಬ ಒಳ್ಳೆಯ ಸ್ನೇಹಿತ.
FAQ
ವಿಶ್ವ ಪುಸ್ತಕ ದಿನವನ್ನು ಯಾವಾಗ ಆಚರಿಸುತ್ತಾರೆ ?
ಎಪ್ರಿಲ್ ೨೩
ಪುಸ್ತಕಗಳ ದಿನದ ಉಪಯೋಗಗಳನ್ನು ತಿಳಿಸಿ ?
ಮನುಷ್ಯ ಪುಸ್ತಕಗಳಿಂದ ತನ್ನದಲ್ಲದ ಅನುಭವಗಳನ್ನು ತನ್ನದಾಗಿಸಿಕೊಳ್ಳುತ್ತಾನೆ.
ಪುಸ್ತಕಗಳನ್ನು ಓದುವುದು, ಸಂಗ್ರಹಿಸುವುದು ಒಂದು ಅತ್ಯುತಮ ಹವ್ಯಾಸ.