ಮಳೆಯ ಬಗ್ಗೆ ಮಾಹಿತಿ | Information About Rain in Kannada

ಮಳೆಯ ಬಗ್ಗೆ ಮಾಹಿತಿ Information About Rain Maleya Bagge Mahiti in Kannada

ಮಳೆಯ ಬಗ್ಗೆ ಮಾಹಿತಿ

Information About Rain in Kannada
Information About Rain in Kannada

ಈ ಲೇಖನಿಯಲ್ಲಿ ಮಳೆಯ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.

ಮಳೆ

ಉಷ್ಣಾಂಶದಿಂದ ಜಲಾಶಯವು ಕಾಯ್ದು ಆವಿಯಾಗಿ ಮೇಲ್ಮುವಾಗಿ ಚಲಿಸಿ ಘನಿಕರಣಗೊಂಡು ಮೋಡವಾಗಿ ಮೋಡಕ್ಕೆ ಮಾರುತಗಳು ತಗುಲಿದಾಗ ನೀರು ಅಥವಾ ಮಂಜುಗಡ್ಡೆ ಭೂಮಿಯನ್ನು ತಲುವುದಕ್ಕೆ ಮಳೆ ಎಂದು ಕರೆಯುವರು. ಅತ್ಯಂತ ಶುದ್ದವಾದ ನೀರು ಮಳೆ ನೀರಾಗಿದೆ. ಮಳೆ ಹನಿ ಷಟ್‌ ಆಕೃತಿಯಲ್ಲಿ ಇರುತ್ತದೆ. ಮಳೆಯನ್ನು ಅಳೆಯುವ ಸಾಧನ ರೇನ್‌ ಗೇಜ್‌ ಆಗಿದೆ. ಸಮ, ಪ್ರಮಾಣದ ಮಳೆಯಾಗಿರುವ ಪ್ರದೇಶಗಳನ್ನು ಸೇರಿಸುವ ರೇಖೆಗೆ ಐಸೋ ಹೈಟ್ಸ್‌ ಅಥವಾ ಸಮವೃಷ್ಟಿ ಮಾಪಕಗಳು ಎಂದು ಕರೆಯುವರು.

ಮಳೆಯ ಪ್ರಕಾರಗಳು

ಪರಿಸರಣ ಮಳೆ :

ಸಮಭಾಜಕ ವೃತ್ತ ಪ್ರದೇಶದಲ್ಲಿ ಅಥವಾ ಅತಿ ಹೆಚ್ಚು ಉಷ್ಣತೆ ಇರುವ ಪ್ರದೇಶಗಳಲ್ಲಿ ಜಲಾಂಶವು ಕಾಯ್ದು ಮೇಲ್ಮುಖವಾಗಿ ಚಲಿಸಿ ಮೋಡವಾಗಿ ಮೋಡಕ್ಕೆ ಮಾರುತಗಳು ತಗುಲಿದಾಗ ಮತ್ತೆ ಅದೇ ಪ್ರದೇಶದಲ್ಲಿ ಮಳೆಯಾಗುವುದಕ್ಕೆ ಪರಿಸರಣ ಮಳೆ ಅಥವಾ ಪ್ರಚಲನೆ ಪ್ರವಾಹದ ಮಳೆ ಅಥವಾ ಕನ್ವೆಕ್ಷನ್‌ ರೇನ್‌ ಪಾಲ್‌ ಅಥವಾ ಅವರೋಹ ಮಳೆ ಎಂದು ಕರೆಯುವರು.

ಈ ಮಳೆಯು ಮಧ್ಯಾಹ್ನದ ಅವಧಿಯಲ್ಲಿ ಅತ್ಯಧಿಕವಾಗಿ ಆಗುವುದು ಅದರಲ್ಲಿ ಮುಖ್ಯವಾಗಿ ೪ ಗಂಟೆಯ ಸಮಯಕ್ಕೆ ಅತ್ಯಧಿಕವಾಗಿ ಆಗುವದರಿಂದ ಸಾಯಂಕಾಲ ೪ ಗಂಟೆಯ ಚಹಾದ ಮಳೆ ಎಂದು ಕರೆಯುವರು.

ಇದು ಗುಡುಗು, ಸಿಡಿಲು, ಮಿಂಚಿನಿಂದ ಕೂಡಿರುತ್ತದೆ. ಭಾರತದಲ್ಲಿ ಬೇಸಿಗೆ ಕಾಲದಲ್ಲಿ ಆಗುವ ಮಳೆ ಇದಾಗಿದೆ. ಸಮಭಾಜಕ ವೃತ್ತದಲ್ಲಿ ಅತ್ಯಧಿಕವಾಗಿ ಆಗುವ ಮಳೆ ಇದಾಗಿದೆ.

ಪರ್ವತ ಮಳೆ :

ಜಲಾಂಶವು ಸಮತಲವಾಗಿ ಚಲಿಸುವಾಗ ಅದಕ್ಕೆ ಎದುರಾಗಿ ಎತ್ತರವಾದ ಪರ್ವತಗಳು ಅಥವಾ ಭೂ ಸ್ವರೂಪಗಳು ಬಂದಾಗ ಅದಕ್ಕೆ ಅನುಗುಣವಾಗಿಯೇ ಮೇಲ್ಮುಖವಾಗಿ ಚಲಿಸಿ ಘನಿಕರಣಗೊಂಡು ಮೋಡವಾಗಿ ಮೋಡಕ್ಕೆ ಮಾರುತಗಳು ಸೃಷ್ಟಿಸಿದಾಗ ಮತ್ತೆ ಅದೇ ಪ್ರದೇಶದಲ್ಲಿ ಮಳೆಯಾಗುವುದಕ್ಕೆ ಪರ್ವತ ಮಳೆ ಅಥವಾ ಆರೋಹ ಮಳೆ ಅಥವಾ ಓರೋ ಗ್ರಾಫಿಕಲ್‌ ರೇನ್‌ ಪಾಲ್‌ ಎಂದು ಕರೆಯುವರು. ಭಾರತದ ಮಳೆಗಾಲದಲ್ಲಿ ಆಗುವ ಮಳೆ ಇದಾಗಿದೆ.

ಆವರ್ತ ಮಳೆ :

ಸುಂಟರಗಾಳಿಯಿಂದ ಕೂಡಿ ಮಳೆಯಾಗುವುದಕ್ಕೆ ಆವರ್ತ ಮಳೆಯೆಂದು ಕರೆಯುವರು. ಭಾರತದ ಚಳಿಗಾಲದಲ್ಲಿ ಆಗುವ ಮಳೆ ಇದಾಗಿದೆ.

ಆಮ್ಲ ಮಳೆ :

ಸಾರಜನಕ, ಸಲ್ಯೂರಿಕ್ಸ್‌ ಆಮ್ಲ ಮತ್ತು ಇಂಗಾಲದ ಮೊನಾಕ್ಸೈಡಗಳು, ಇಂಗಾಲ ಡೈ ಆಕ್ಸೈಡ್‌ ಮಳೆ ನೀರಿನೊಂದಿಗೆ ಬೆರೆತಾಗ ಆಗುವ ಮಳೆ ಆಮ್ಲ ಮಳೆ ಅಥವಾ ಲೇಖಕಿಲ್ವರ್‌ ಎಂತಲೂ ಕರೆಯುವರು. ಆಗ್ನೇಯ ಜರ್ಮನಿ, ಪೋಲ್ಯಾಂಡ್‌, ಜೇಕ್‌ ಗಣರಾಜ್ಯಗಳಲ್ಲಿ ಈ ಮಳೆಯು ಅತ್ಯಧಿಕವಾಗಿ ಆಗುವುದರಿಂದ ಇವುಗಳಿಗೆ ಕಪ್ಪು ತ್ರಿಕೋನ ಎಂದು ಕರೆಯುತ್ತಾರೆ.

ಪ್ರಮುಖವಾದ ಮೋಡಗಳು

ವಾಯು ಮಂಡಲದಲ್ಲಿ ಕಂಡು ಬರುವ ತೇವಾಂಶಕ್ಕೆ ನೀರಾವಿ ಅಥವಾ ಆರ್ಧ್ರತೆ ಎಂದು ಕರೆಯುವರು. ಆರ್ಧ್ರತೆಯನ್ನು ಅಳೆಯುವ ಸಾಧನ ಹೈಗ್ರೋ ಮೀಟರ್‌. ವಾಯು ಮಂಡಲದಲ್ಲಿ ಕಂಡುಬರುವ ಸಣ್ಣ ಸಣ್ಣ ನೀರಿನ ಕಣಗಳಿಗೆ ಅಥವಾ ಹಿಮದ ಕಣಗಳಿಗೆ ಮೋಡ ಎಂದು ಕರೆಯುವರು. ಮೋಡದ ಕುರಿತು ಅಧ್ಯಯನ ಮಾಡುವ ಶಾಸ್ತ್ರಕ್ಕೆ ನೇಪಾಲಾಜಿ ಎಂದು ಕರೆಯುವರು. ಮೋಡಗಳ ಪ್ರಕಾರಗಳನ್ನು ಈ ಕೆಳಕಂಡಂತೆ ತಿಳಿಸಲಾಗಿದೆ.

ಪದರು ಮೋಡಗಳು :

ಅತ್ಯಂತ ಕೆಳಮಟ್ಟದಲ್ಲಿರುವ ಮೋಡಗಳು ( ಕಿ. ಮೀ )

ಇವುಗಳು ತೆಳುವಾದ ಹಾಳೆ ಅಥವಾ ವಿಸ್ತಾರವಾದ ಪದರುಗಳಂತೆ ಕಂಡು ಬರುತ್ತದೆ.

ಉತ್ತಮ ಹವಾಮಾನಕ್ಕೆ ಸಹಕಾರಿಯಾಗಿವೆ.

ಇವುಗಳನ್ನು ಅಲ್ಪ ಮಳೆಯನ್ನು ಸುರಿಸುತ್ತವೆ.

ಇವುಗಳಿಗೆ ಸ್ಟ್ರ್ಯಾಟರ್ಸ್‌ ಕ್ಲೌಡ್ಸ ಎಂದು ಕರೆಯುವುದು.

ರಾಶಿ ಮೋಡಗಳು :

ಇದರ ಮೇಲ್ಮೈ ಗೋಪುರ, ಹೂಕೋಸು, ಉಣ್ಣೆ ಗುಡ್ಡೆಯ ರೂಪದಲ್ಲಿ ಊರ್ಧ್ವ ಮುಖವಾಗಿ ಚಲಿಸುತ್ತಿರುತ್ತವೆ.

ಈ ಮೋಡಗಳನ್ನು ಉಣ್ಣೆ ಗುಡ್ಡೆಯ ಮೋಡಗಳು ಎಂದು ಕರೆಯುವರು.

ಇವುಗಳನ್ನು ಕಪ್ಪು ಬಣ್ಣದಿಂದ ಬಿಳಿ ಬಣ್ಣದವರೆಗೆ ಕಂಡು ಬರುತ್ತವೆ.

ಈ ಮೋಡಗಳು ಸಾಂದ್ರಗೊಂಡಾಗ ಮಳೆ ಸುರಿಸುತ್ತವೆ.

ಈ ಮೋಡಗಳಿಗೆ ಕ್ಯೂಮಲಸ್‌ ಕ್ಲೌಡ್ಸ್‌ ಎನ್ನುವರು.

ಹಿಮಕಣ ಮೋಡಗಳು :

ಇವುಗಳು ಗುಂಗುರು ಕೂದಲು ಅಥವಾ ಕುದುರೆ ಬಾಲ ಅಥವಾ ಹಿಂಜಿದ ಹತ್ತಿಯ ಹಾಗೆ ಕಂಡು ಬರುತ್ತದೆ. ಇವುಗಳಿಗೆ ಗುಂಗುರು ಕೂದಲು ಮೋಡಗಳು ಎಂದು ಕರೆಯುವರು. ಜನಪ್ರಿಯ ಹೆಸರು ಕುದುರೆ ಬಾಲ. ಇವುಗಳ ಅತ್ಯಂತ ಎತ್ತರದಲ್ಲಿರುವ ಮೋಡಗಳಾಗಿವೆ. ಮೋಡಗಳು ಇದ್ದಾಗ ಸೂರ್ಯ ಪ್ರಕಾಶಿಸುತ್ತಿರುತ್ತಾನೆ. ಈ ಮೋಡಗಳಿಗೆ ಸಿರಸ್‌ ಕ್ಲೌಡ್ಸ್‌ ಎಂದು ಕರೆಯುವರು.

ರಾಶಿ ಋಷ್ಕಿ ಮೋಡಗಳು :

ಈ ಮೋಡಗಳು ಕೆಳ ಮಟ್ಟದಲ್ಲಿರುತ್ತವೆ. ಈ ಮೋಡಗಳು ಪದರು ಅಥವಾ ರಾಶಿಗಳ ರೂಪಕ್ಕೆ ಕಂಡು ಬರುತ್ತವೆ.

ಈ ಮೋಡಗಳು ಅತಿ ಹೆಚ್ಚು ಮಳೆ ತರುವ ಮತ್ತು ಹಿಮದಿಂದ ಕೂಡಿದ ಮಳೆಯನ್ನು ತರುವ ಮೋಡಗಳಾಗಿವೆ.

ಈ ಮೋಡಗಳಿಗೆ ನಿಂಬಸ್ಸ್‌ ಕ್ಲೌಡ್‌ ಎಂದು ಕರೆಯುವರು.

ಪ್ರಪಂಚದಲ್ಲಿ ಅತಿ ಹೆಚ್ಚು ಮಳೆ ಬೀಳುವ ಸ್ಥಳ ಮೇಘಾಲಯದ ಕಾಶೀ ಬೆಟ್ಟದ ಚಿರಾಪುಂಜಿ ಸಮೀಪದ ಮೌಸಿನ್‌ ರಾಮ್‌.

ಪ್ರಪಂಚದಲ್ಲಿ ಅತ್ಯಂತ ಕಡಿಮೆ ಮಳೆ ಬೀಳುವ ಸ್ಥಳ ದಕ್ಷಿಣ ಅಮೇರಿಕಾದ ಚಿಲಿ ದೇಶಧ ಅಟಕಾಂ ಮರುಭೂಮಿ.

FAQ

ಅತ್ಯಂತ ಶುದ್ದವಾದ ನೀರು ಯಾವುದಾಗಿದೆ ?

ಮಳೆ ನೀರು

ಪರಿಸರಣ ಮಳೆ ಯಾವ ಕಾಲದಲ್ಲಿ ಆಗುವ ಮಳೆಯಾಗಿದೆ ?

ಬೇಸಿಗೆ ಕಾಲದಲ್ಲಿ ಆಗುವ ಮಳೆಯಾಗಿದೆ.

ಇತರೆ ವಿಷಯಗಳು :

ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ಮಾಹಿತಿ 

ವಾಯು ಮಾಲಿನ್ಯ ಬಗ್ಗೆ ಪ್ರಬಂಧ

Leave a Reply

Your email address will not be published. Required fields are marked *