ಮಾನವನ ವಿಕಾಸದ ಹಂತಗಳ ಬಗ್ಗೆ ಮಾಹಿತಿ Information About the Stages of Human Evolution Manavana Vikasada Hantada Bagge Mahiti in Kannada
ಮಾನವನ ವಿಕಾಸದ ಹಂತಗಳ ಬಗ್ಗೆ ಮಾಹಿತಿ
ಈ ಲೇಖನಿಯಲ್ಲಿ ಮಾನವನ ವಿಕಾಸದ ಹಂತಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.
ಮಾನವನ ವಿಕಾಸದ ಹಂತಗಳು
- ಮಾನವನ ವಿಕಾಸದ ಹಂತಗಳನ್ನು ಈ ಕೆಳಕಂಡಂತೆ ತಿಳಿಸಲಾಗಿದೆ.
- ಹಳೆಯ ಶಿಲಾಯುಗ – ಪ್ಯಾಲಿಯೋಲಿಥಿಕ್ Age
- ಮಧ್ಯ ಶಿಲಾಯುಗ – ಮೆಸೋಲಿಥಿಕ್ Age
- ನವ ಶಿಲಾಯುಗ – ನಿಯೋಲಿಥಿಕ್ Age
- ತಾಮ್ರ ಶಿಲಾಯುಗ – ಚಾಲ್ಕೋಲಿಥಿಕ್ Age
- ಕಬ್ಬಿಣ ಸಿಲಾಯುಗ – ಮೆಘಾಲಿಥಿಕ್ Age
ಹಳೆಯ ಶಿಲಾಯುಗ ( ಕ್ರಿ. ಪೂ ೪೦,೦೦೦ – ೧೦,೦೦೦ )
- ಈ ಶಿಲಾಯುಗವನ್ನು ಗ್ರೀಕ್ ಭಾಷೆಯಲ್ಲಿ ಪ್ಯಾಲಿಯೋ ಎಂದರೆ ಹಳೆಯ ಲಿಥಿಕ್ ಎಂದರೆ ಶಿಲೆ Age ಎಂದರೆ ಯುಗ.
- ಈ ಶಿಲಾಯುಗದ ಮಾನವನು ಕಪಿ ಮಾನವನಾಗಿದ್ದು ಗಡ್ಡೆ, ಗೆಣಸು, ಹಣ್ಣು – ಹಂಪಲು, ಹಸಿ ಮಾಂಸವನ್ನು ಸೇವಿಸುತ್ತಿದ್ದು, ಕಲ್ಲಿನ ಗುಹೆ ಮತ್ತು ಮರದ ತೊಗಟೆ / ಪೊಟರೆಗಳಲ್ಲಿ ವಾಸಿಸುತ್ತಿದ್ದರು.
- ಈ ಶಿಲಾಯುಗದ ಮಾವನು ನಿಗ್ರಿಟೋ ಜನಾಂಗಕ್ಕೆ ಸೇರಿದ ಮಾನವನಾಗಿದ್ದಾನೆ.
- ಈ ಶಿಲಾಯುಗದ ಮಾನವನು ಬಳಸುವ ಕಲ್ಲು ಕ್ವಾಟ್ ಜೆಟ್ ಅಥವಾ ಬೆಣಚು ಕಲ್ಲು.
- ಕ್ರಿ. ಶಕ ೧೮೬೩ ರಲ್ಲಿ ರಾಬರ್ಟ್ ಬ್ರುಸ್ ಪುಟ್ ರವರು ಮದ್ರಾಸನ ಪಲ್ಲವರಂ ನಲ್ಲಿ ಮಾನವನ ಕೈಗೊಡಲಿಯನ್ನು ಪತ್ತೆ ಹಚ್ಚಿದರು.
- ಈ ಶಿಲಾಯುಗದ ಅಂತ್ಯಕ್ಕೆ ಮಾನವನು ಬೆಂಕಿಯನ್ನು ಪರಿಚಯಿಸಿಕೊಂಡನು.
- ಹಳೆಯ ಶಿಲಾಯುಗದ ಬೂದಿಯ ಅವಶೇಷ ದೊರೆತ ಸ್ಥಳ ಆಂಧ್ರ ಪ್ರದೇಶದ ಕರ್ನೂಲ್
ಪ್ರಮುಖ ತಾಣಗಳು :
- ಪಾಕಿಸ್ತಾನದ ಸೋಹಾನ್ ಮತ್ತು ಬಿಯಾಸ್ ಕಣಿವೆ
- ಮಹರಾಷ್ಟ್ರದ ಅಹಮ್ಮದ್ ನಗರ
- ಉತ್ತರ ಪ್ರದೇಶದ ಮಿರ್ಜಾಪುರ
- ಮಧ್ಯಪ್ರದೇಶದ ಅಧಮ್ ಪುರ
- ಕರ್ನಾಟಕದ ಬಳ್ಳಾರಿ ಜಿಲ್ಲೆಯ ನಿಟ್ಟೂರು
- ಚಿತ್ರದುರ್ಗ ಜಿಲ್ಲೆಯ ಬ್ರಹ್ಮಗಿರಿ
- ಬಾಗಲಕೋಟೆ ಜಿಲ್ಲೆಯ ಅನಗವಾಡಿ ಮತ್ತು ಕ್ಯಾಡ್
- ತುಮಕೂರು ಜಿಲ್ಲೆ ಕಿಬ್ಬನಹಳ್ಳಿ
ಮದ್ಯಶಿಲಾಯುಗ ( ಕ್ರಿ. ಪೂ ೧೦,೦೦೦ – ೮,೦೦೦ )
- ಈ ಶಿಲಾಯುಗವನ್ನು ಗ್ರೀಕ್ ಭಾಷೆಯಲ್ಲಿ ಮೆಸೋ ಎಂದರೆ ಮದ್ಯ , ಲಿಥಿಕ್ ಎಂದರೆ ಶಿಲೆ, ಯೆಜ್ ಎಂದರೆ ಯುಗ ಎಂಬ ಅರ್ಥವನ್ನು ನೀಡುತ್ತದೆ.
- ಈ ಶಿಲಾಯುಗದ ಮಾನವನು ಸಣ್ಣ ಸಣ್ಣ ಅಥವಾ ಅತಿ ತೀಕ್ಷ್ಣವಾದ ಕಲ್ಲುಗಳನ್ನುಉಪಯೋಗಿಸಿ ಆಯುಧವನ್ನು ತಯಾರಿಸಿದ್ದರಿಂದ ಈ ಶಿಲಾಯುಗವನ್ನು ಸೂಕ್ಷ್ಮ ಶಿಲಾಯುಗ ಎನ್ನುತ್ತಾರೆ.
- ಈ ಶಿಲಾಯುಗದಲ್ಲಿ ಮಾನವನು ಆಯುಧಗಳಿಗೆ ರೂಪವನ್ನು ಕೊಟ್ಟು ಮರದ ಪೊಟರೆ ಮತ್ತು ಮೂಳೆಗಳನ್ನು ಉಪಯೋಗಿಸಿ ಕೈ ಹಿಡಿಕೆಗಳನ್ನು ನೀಡಿದನು. ಆದ್ದರಿಂದ ಇದನ್ನು ಸಂಯುಕ್ತ ಆಯುಧದ ಯುಗ ಎನ್ನುವರು.
- ಈ ಶಿಲಾಯುಗದ ಮಾನವನು ಆಹಾರವನ್ನು ಸಂಗ್ರಹಿಸುವುದನ್ನು ಕಲಿತರು / ಮಾನವನು ಬೇಟೆಯಾಡುವುದು, ಮೀನು ಹಿಡಿಯುವುದು, ಶವಗಳನ್ನು ಹೂಳುವುದನ್ನು ಕಲಿತನು.
- ಈ ಶಿಲಾಯುಗದ ಮಾನವನು ಸಂಪೂರ್ಣವಾಗಿ ಬೆಂಕಿಯನ್ನು ಉಪಯೋಗಿಸುವುದನ್ನು ಕಲಿತನು.
- ಈ ಶೀಲಾಯುಗದ ಮಾನವನು ಬಳಸುವ ಕಲ್ಲು ಚಕಮಕಿ ಕಲ್ಲು.
ಪ್ರಮುಖ ತಾಣಗಳು :
- ಮಧ್ಯಪ್ರದೇಶದ ಛೋಟಾನಾಗ್ ಪುರ್
- ರಾಜಸ್ಥಾನದ ಅಜ್ಮೀರ್
- ಉತ್ತರ ಪ್ರದೇಶದ ಧಮ್ ಧಮ್
- ಗುಜರಾತಿನ ಸಬರ್ ಮತಿ
- ಬಿಹಾರದ ಪಾಟ್ನಾ
- ಕರ್ನಾಟಕದ ಬಳ್ಳಾರಿ ಜಿಲ್ಲೆಯ ಸಂಕನಕಲ್ಲು ಮತ್ತು ತೇರೆದಾಳ
- ಮೈಸೂರು ಸಮೀಪದ T ನರಸೀಪುರ
- ಬೆಂಗಳೂರು ಸಮೀಪದ ಜಾಲಹಳ್ಳಿ
- ರಾಯಚೂರು ಜಿಲ್ಲೆಯ ಲಿಂಗಸೂರು
ನವಶಿಲಾಯುಗ ( ೮,೦೦೦ – ೪,೦೦೦ )
- ಈ ಶಿಲಾಯುಗವನ್ನು ಗ್ರೀಕ್ ಭಾಷೆಯಲ್ಲಿ ನಿಯೋ ಎಂದರೆ ಹೊಸ ಲಿಥಿಕ್ ಎಂದರೆ ಶಿಲೆ, ಯೆಜ್ ಎಂದರೆ ಯುಗ ಎಂದರ್ಥ.
- ಈ ಶಿಲಾಯುಗದ ಮಾನವನು ಸಂಪೂರ್ಣ ಅಭಿವೃದ್ದಿ ಹೊಂದಿ ತನ್ನ ವಾಸ್ತವ್ಯಕ್ಕಾಗಿ ಗುಡಿಸಲುಗಳನ್ನು ನಿರ್ಮಿಸಲು ಆರಂಭಿಸಿದನು.
- ಈ ಮಾನವನು ಕೃಷಿ ಮಾಡುವುದರ ಜೊತೆಗೆ ಪಶುಸಂಗೋಪನೆಯನ್ನು ಆರಂಭಿಸಿದನು.
- ಈ ಯುಗದ ಮಾನವನು ಭೂಮಿಯನ್ನು ಹದ ಮಾಡಿ ಬಿತ್ತನೆ ಕಾರ್ಯ ಆರಂಭಿಸಿದನು.
- ಈ ಶಿಲಾಯುಗದ ಮಾನವನು ಪ್ರೋಟೋ ಆಸ್ಟ್ರಾಲಾಯ್ಡ್ ಜನಾಂಗಕ್ಕೆ ಸೇರಿದವನು.
- ಮಾನವನು ಪಳಗಿಸಿದ ಮೊದಲ ಪ್ರಾಣಿ ನಾಯಿ , ಕುರಿ
- ಈ ಶಿಲಾಯುಗದ ಮಾನವನು ಬಳಸಿದ ಕಲ್ಲು ಕಪ್ಪು ಕಲ್ಲು
- ಈ ಶಿಲಾಯುಗದಲ್ಲಿ ಮಾನವನು ಚಕ್ರಗಳನ್ನು ಉಪಯೋಗಿಸಿ ಮಡಿಕೆ ತಯಾರಿಸುತ್ತಿದ್ದನು.
ಪ್ರಮುಖ ತಾಣಗಳು :
- ಕಾಶ್ಮೀರ
- ಉತ್ತರ ಪ್ರದೇಶ
- ಪಂಜಾಬ್
- ರಾಜಸ್ಥಾನ
- ಗುಜರಾತ್
- ಕರ್ನಾಟಕದ ಬಳ್ಳಾರಿ ಜಿಲ್ಲೆಯ ಸಂಗನಕಲ್ಲು ಮತ್ತು ತೆಕ್ಜಲಕೋಟೆ
- ಚಿತ್ರದುರ್ಗದ ಬ್ರಹ್ಮಗಿರಿ
- ಕಲ್ಬುರ್ಗಿಯ ಸನ್ನತಿ
- ರಾಯಚೂರಿನ ಮಸ್ಕಿ ಮತ್ತು ಲಿಂಗಸೂರು
ತಾಮ್ರ ಯುಗ ( ಕ್ರಿ. ಪೂ ೧೮೦೦ – ೧೦೦೦ )
- ಈ ಶಿಲಾಯುಗವನ್ನು ಗ್ರಿಕ್ ಭಾಷೆಯಲ್ಲಿ ಚಾಲ್ಕೋಲಿಥಿಕ್ ಯೆಜ್ ಎನ್ನುತ್ತಾರೆ.
- ಈ ಶಿಲಾಯುಗದಲ್ಲಿ ಮಾನವನು ಸಂಪೂರ್ಣವಾಗಿ ತಾಮ್ರ ಎಂಬ ಲೋಹವನ್ನು ಉಪಯೋಗಿಸಿ ಆಯುಧವನ್ನು ತಯಾರಿಸುತ್ತಿದ್ದನು.
- ಹಸಿ ಇಟ್ಟಿಗೆಗಳನ್ನು ಉಪಯೋಗಿಸಿ, ಮನೆಯನ್ನು ನಿರ್ಮಿಸುತ್ತಿದ್ದನು.
- ಕಂಚು ಎಂಬ ಮಿಶ್ರ ಲೋಹವನ್ನು ಪರಿಚಯಿಸಿಕೊಂಡಿದ್ದನು. ( ತಾಮ್ರ, ತವರ )
ಪ್ರಮುಖ ತಾಣಗಳು :
- ರಾಜಸ್ಥಾನ್
- ಗುಜರಾತ್
- ಪಂಜಾಬ್
- ಉತ್ತರ ಪ್ರದೇಶ
- ಕರ್ನಾಟಕದ ಬಳ್ಳಾರಿ ಜಿಲ್ಲೆಯ ಸಂಗನಕಲ್ಲು
- ರಾಯಚೂರಿನ ಮಸ್ಕಿ
- ಚಿತ್ರದುರ್ಗ ಜಿಲ್ಲೆಯ ಬ್ರಹ್ಮಗಿರಿ
- ಕಲಬುರ್ಗಿಯ ಸನ್ನತಿ
ಕಬ್ಬಿಣ ಯುಗ ( ಕ್ರಿ. ಪೂ ೧೦೦೦ )
- ಈ ಶಿಲಾಯುಗದಲ್ಲಿ ಮಾನವನು ಬೃಹತ್ ಶಿಲೆಗಳನ್ನು ಉಪಯೋಗಿಸಿ ಸಮಾಧಿಯನ್ನು ನಿರ್ಮಿಸಿದ್ದರಿಂದ ಇದನ್ನು ಬೃಹತ್ ಶಿಲಾ ಸಂಸ್ಕೃತಿ ಎಂದು ಕರೆಯುತ್ತಾರೆ.
- ಮಾನವನು ಸಂಪೂರ್ಣವಾಗಿ ಕಬ್ಬಿಣ ಎಂಬ ಲೋಹವನ್ನು ಉಪಯೋಗಿಸಿ ಆಯುಧವನ್ನು ತಯಾರಿಸುತ್ತಿದ್ದನು.
- ಕಬ್ಬಿಣದ ಅವಶೇಷ ದೊರೆತ ಮೊದಲ ಸ್ಥಳ ಹಾವೇರಿ ಜಿಲ್ಲೆಯ ಹಳ್ಳೂರು.
- ಕಬ್ಬಿಣದ ಕುಲುಮೆಯ ಅವಶೇಷ ದೊರೆತ ಸ್ಥಳ ಕೋಲಾರ ಜಿಲ್ಲೆಯ ಬನವಳ್ಳಿ
- ದಕ್ಷಿಣ ಭಾರತದ ಮಾನವನು ಬಳಸಿದ ಮೊದಲ ಲೋಹ ಕಬ್ಬಿಣ
ಪ್ರಮುಖ ತಾಣಗಳು :
- ಜಾರ್ಖಂಡ್
- ಒಡಿಸ್ಸಾ
- ಅಸ್ಸಾಂ
- ಮಧ್ಯಪ್ರದೇಶ
- ಗುಜರಾತ್
- ಕರ್ನಾಟಕದ ಕೊಡಗು ಜಿಲ್ಲೆಯ ದೊಡ್ಡ ಮಾಳತೆ
- ಯಾದಗಿರಿ ಜಿಲ್ಲೆಯ ರಾಜನ ಕೊಳ್ಳೂರು
FAQ
ಮಾನವನು ಸಂಶೋಧಿಸಿದ ಮೊದಲ ಲೋಹ ಯಾವುದು ?
ಚಿನ್ನ
ಭೂಮಿಯ ಮೇಲಿನ ಮೊದಲ ರೈತ ಯಾರು ?
ನವಶಿಲಾಯುಗದ ಮಾನವ
ಇತರೆ ವಿಷಯಗಳು :
ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ಮಾಹಿತಿ
ಮಹಿಳಾ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಮಾಹಿತಿ