ಮಹಿಳಾ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಮಾಹಿತಿ Information About Women Freedom Fighters Mahila Swatantra Horatagarara Bagge Mahiti in Kannada
ಮಹಿಳಾ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಮಾಹಿತಿ
ಈ ಲೇಖನಿಯಲ್ಲಿ ಮಹಿಳಾ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.
ಮಹಿಳಾ ಸ್ವಾತಂತ್ರ್ಯ ಹೋರಾಟಗಾರರು
ಚಾರಿತ್ರಿಕವಾಗಿ ಮಹಿಳೆಯರನ್ನು ಕುಟುಂಬದ ಚೌಕಟ್ಟಿಗೆ ನಮ್ಮ ಪುರುಷ ಪ್ರಧಾನ ಸಮಾಜ ಸೀಮಿತಗೋಳಿಸಿತ್ತು. ಆಗಾಗ ಸಾರ್ವಜನಿಕ ಕೇತ್ರಕ್ಕೆ ಪ್ರವೇಶಿಸಿ, ನಿರ್ಣಾಯಕ ಪಾತ್ರವನ್ನು ವಹಿಸಿದ ಮಹಿಳೆಯರು ವಿರಳವಾಗಿ ಕಾಣುತ್ತಾರೆ. ಸ್ವಾತಂತ್ರ ಹೋರಾಟದಲ್ಲಿ ಮಹಿಳೆಯರ ಪಾತ್ರ ಮಹತ್ತರವಾದುದ್ದಾಗಿದೆ.
ಮಹಿಳಾ ಸ್ವಾತಂತ್ರ್ಯ ಹೋರಾಟಗಾರರು
ರಾಣಿ ಅಬ್ಬಕ್ಕದೇವಿ :
ಗಾಂಧಿ ಪೂರ್ವ ಸ್ವಾತಂತ್ರ್ಯ ಹೋರಾಟದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ, ಕೆಳದಿ ಚೆನ್ನಮ್ಮರ ಸಾಲಿನಲ್ಲಿ ನಿಲ್ಲುವ ಮತ್ತೊಬ್ಬ ಮಹಿಳೆ “ರಾಣಿ ಅಬ್ಬಕ್ಕದೇವಿ” ಇವರು ಚೌಟ ಮನೆತನಕ್ಕೆ ಸೇರಿದ್ದರು. ಇವರ ಚಿಕ್ಕಪ್ಪನಾದ “ತಿರುಮಲರಾಯರು” ಅಬ್ಬಕ್ಕ ದೇವಿಗೆ ಯುದ್ದ ತಂತ್ರಕಲೆಗಳಲ್ಲಿ ತರಬೇತಿಗೊಳಿಸಿದ ನಂತರ ಉಳ್ಳಾಲದ ರಾಣಿಯನ್ನಾಗಿ ಅಧಿಕ್ಕಾರಕ್ಕೆ ತಂದರು. ಅಬ್ಬಕ್ಕನು ಮಂಗಳೂರಿನ ಭಂಗ ಪ್ರಾಂತ್ಯದ ಲಕ್ಷ್ಮಪ್ಪ ಅರಸರನ್ನು ವಿವಾಹವಾದರು. ಆದರೆ ಇವರ ವೈವಾಹಿಕ ಜೀವನ ಬಹಳ ಕಾಲ ಉಳಿಯಲಿಲ್ಲ. ಹೀಗಾಗಿ ಉಳ್ಳಾಲಕ್ಕೆ ಹಿಂತಿರುಗಿದರು. ಪೋರ್ಚುಗೀಸರು ಅಬ್ಬಕ್ಕಳಿಗೆ ಕಪ್ಪ ನೀಡಲು ಒತ್ತಾಯಿಸಿದಾಗ ಇವರು ತಿರಸ್ಕರಿಸಿದರು. ಪರಿಣಾಮವಾಗಿ ೧೫೫೫ ರಲ್ಲಿ ಪೋರ್ಚುಗೀಸರು ರಾಣಿ ಅಬ್ಬಕ್ಕ ದೇವಿಯ ಮೇಲೆ ಯುದ್ದ ಸಾರಿದರು. ಈ ಯುದ್ದದಲ್ಲಿ ಅಬ್ಬಕ್ಕ ಜಯವನ್ನು ಸಾಧಿಸಿದಳು.
ಅಬ್ಬಕ್ಕ ದೇವಿಯ ಪತಿಯಾದ ಲಕ್ಷ್ಮರಸನ ಸರ್ಕಾರದಿಂದ ಪೋರ್ಚುಗೀಸರು ಅಬ್ಬಕ್ಕ ದೇವಿಯನ್ನು ಯುದ್ದದಲ್ಲಿ ಸೋಲಿಸಿ ಸೆರೆಮನೆಗೆ ತಳ್ಳಿದರು. ಅಬ್ಬಕ್ಕ ಸೆರೆಮನೆಯಲ್ಲಿಯೇ ತೀರಿಕೊಂಡಳು.
ಬಳ್ಳಾರಿ ಸಿದ್ದಮ್ಮ :
ಇವರು ಇಂದಿನ ಹಾವೇರಿ ಜಿಲ್ಲೆಯ ದುಂಡಿಸೀ ಗ್ರಾಮದ ಸಂಪ್ರದಾಯಸ್ಥ ಕುಟುಂಬದಲ್ಲಿ ೧೯೦೩ ರಲ್ಲಿ ಜನಿಸಿದರು. ತಂದೆ ಕೊಟ್ಟಿಗೆ ಬಸಟಪ್ಪ ಇವರು ವೃತ್ತಿಯಲ್ಲಿ ವ್ಯಾಪಾರಸ್ಥರಾದರೂ ಸ್ವಾತಂತ್ರ್ಯ ಚಳುವಳಿಯ ಬಗೆಗೆ ಉತ್ಸಾಹವನ್ನು ಹೊಂದಿದ್ದರು. ತಂದೆ ಸಿದ್ದಮ್ಮನವರಿಗೆ ಅಂದಿನ ದಿನಪತ್ರಿಕೆಗಳನ್ನು ಮತ್ತು ನಿಯತಕಾಲಿಕೆಗಳನ್ನು ತರಿಸಿಕೊಡುತ್ತದೆ. ರಾಷ್ಟ್ರೀಯವಾದಿ ವಿಚಾರಧಾರೆಗಳನ್ನು ಓದಿ ತಿಳಿಯುತ್ತಿದ್ದರು. ಸ್ವಾರಂತ್ರ್ಯ ಹೋರಾಟಗಾರರಾದ ಬಳ್ಳಾರಿ ಮುರುಗಪ್ಪರವರನ್ನು ವಿವಾಹವಾಗಿದ್ದರೂ ಕೂಡ ಇವರು ಸ್ವಾತಂತ್ರ್ಯ ಹೋರಾಟದಲ್ಲಿ ಪೂರ್ಣಪ್ರಮಾಣದಲ್ಲಿ ತೊಡಗಿಸಿಕೊಳ್ಳಲು ಕಾರಣವಾಯಿತು. ಇವರು ಮೈಸೂರಿನ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರೀಯವಾಗಿ ಭಾಗವಹಿಸಿ ಮಹಿಳೆಯರ ಗೌರವವನ್ನು ಹೆಚ್ಚಿಸಿದ್ದಾರೆ.
ಕಮಲಾದೇವಿ ಚಟ್ಟೋಪಾಧ್ಯಯ :
ಕಮಲಾದೇವಿ ಚಟ್ಟೋಪಾಧ್ಯಯ ಅವರು ೧೯೦೩ ಏಪ್ರಿಲ್ ೩ ರಂದು ಮಂಗಳೂರಿನ ಶ್ರೀಮಂತ ಕುಟುಂಬದಲ್ಲಿ ಜನಿಸಿದರು. ತಂದೆ ಧಾರೇಶ್ವರ ಅನಂತರಾಯರು, ತಾಯಿ ಗಿರಿಜಾಬಾಯಿ. ಬ್ರಿಟೀಷ್ ವಸಹಾತುಶಾಹಿ ವ್ಯವಸ್ಥೆಯಲ್ಲಿ ಉನ್ನತ ಅಧಿಕಾರಿಯಾಗಿದ್ದರು. ಕಮಲಾದೇವಿಯವರು ಕ್ಯಾಥೋಲಿಕ್ ಕಾನ್ವೆಂಟ್ ಮತ್ತು ಸೇಂಟ್ ಮೇರಿಸ್ ಶಾಲೆಯಲ್ಲಿ ಉನ್ನತ ಶಿಕ್ಷಣವನ್ನು ಪಡೆದರು. ಇವರಿಗೆ ೧೪ ನೇ ವಯಸ್ಸಿನಲ್ಲಿ ವಿವಾಹವಾಯಿತು. ಮತ್ತು ಸ್ವಲ್ಪ ಕಾಲದಲ್ಲೇ ವಿಧವೆಯಾದರು. ಕಮಲಾದೇವಿಯವರು ರಾಷ್ಟ್ರರಾಜಕಾರಣಿದಲ್ಲಿ ಗುರುತಿಸಿಕೊಂಡ ಕರ್ನಾಟಕದ ಬಹುಮುಖ ಪ್ರತಿಭೆಯ ಮಹಿಳೆಯಾಗಿದ್ದರು. ಅಸಹಕಾರ ಚಳುವಳಿಯಲ್ಲಿ ಭಾಗವಹಿಸಿದರು. ಮತ್ತು ಸ್ವಾತಂತ್ರ ಹೋರಾಟದಲ್ಲಿ ಯುವಜನತೆಯು ಕೂಡ ಭಾಗವಹಿಸುವಂತೆ ಪ್ರೇರೇಪಿಸಿದರು. ಹಾಗೂ ಇವರ ಪಾತ್ರವೂ ಕೂಡ ಮಹತ್ತರವಾಗಿದೆ.
ಯಶೋಧರಮ್ಮ ದಾಸಪ್ಪ :
ಯಶೋಧರಮ್ಮನವರು ೨೮ \ ೫\ ೧೯೦೫ ರಲ್ಲಿ ಬೆಂಗಳೂರಿನಲ್ಲಿ ಜನಿಸಿದರು. ತಂದೆ ರಾಮಯ್ಯ, ತಾಯಿ ರೇವಮ್ಮ. ತಂದೆಯವರು ಸುಧಾರಣಾ ಮನೋಭಾವ ವ್ಯಕ್ತಿತ್ವದವರಾಗಿದ್ದರು. ಬೆಂಗಳೂರಿನಲ್ಲಿ ಆರಂಭಿಕ ಶಿಕ್ಷಣವನ್ನು ಮುಗಿಸಿ ನಂತರ ಮದ್ರಾಸ್ ನ ಕ್ವೀನ್ ಮೇರಿ ಕಾಲೇಜಿಗೆ ಪ್ರವೇಶವನ್ನು ಪಡೆದರು. ಇಂಟರ್ ಮೀಡಿಯೇಟ್ ಶಿಕ್ಷಣವನ್ನು ಮುಗಿಸಿದರು. ಮೈಸೂರು ಸಂಸ್ಥಾನದ ಸ್ವಾತಂತ್ರ್ಯ ಚಳುವಳಿಯಲ್ಲಿ ನಿರಂತರವಾಗಿ ತೊಡಗಿಕೊಂಡು ಸ್ವಾತಂತ್ರ್ಯ ನಂತರ ಮೈಸೂರು ಭಾರತ ಒಕ್ಕೂಟಕ್ಕೆ ಸೇರಿದ್ದಕ್ಕೆ ಸಾಕ್ಷಿಪ್ರಜ್ಞೆಯಾದರು.
ಮೈಸೂರು ಸಂಸ್ಥಾನದಲ್ಲಿ ಪ್ರಜಾ ಸರ್ಕಾರ ಸ್ಥಾಪನೆಗೆಗಾಗಿ ೧೯೪೭ ರಲ್ಲಿ ನಡೆದ ಮೈಸೂರು ಚಲೋ ಚಳುವಳಿಯಲ್ಲಿ ಯಶೋಧರಮ್ಮ ದಾಸಪ್ಪನವರು ಜನರನ್ನು ಸಂಘಟಿಸುವಲ್ಲಿ ನೆರವಾದರು.
FAQ
ಭಾರತಕ್ಕೆ ಯಾವಾಗ ಸ್ವಾತಂತ್ರ್ಯವು ಸಿಕ್ಕಿತು ?
೧೯೪೭ ಆಗಸ್ಟ್ ೧೫
ಯಶೋಧರಮ್ಮ ದಾಸಪ್ಪ ಯಾವಾಗ ಜನಿಸಿದರು ?
ಯಶೋಧರಮ್ಮನವರು ೨೮ \ ೫\ ೧೯೦೫ ರಲ್ಲಿ ಜನಿಸಿದರು.
ಇತರೆ ವಿಷಯಗಳು :