ಇಂಟರ್ನೆಟ್ ಬಳಕೆಗಳ ಬಗ್ಗೆ ಪ್ರಬಂಧ Uses of Internet Essay Internet Balakegala Bagge Mahiti in Kannada
ಇಂಟರ್ನೆಟ್ ಬಳಕೆಗಳ ಬಗ್ಗೆ ಪ್ರಬಂಧ
ಈ ಲೇಖನಿಯಲ್ಲಿ ಇಂಟರ್ನೆಟ್ ಬಳಕೆಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.
ಪೀಠಿಕೆ
ಇಂಟರ್ನೆಟ್ ಪ್ರತಿಯೊಬ್ಬರ ಜೀವನವನ್ನು ತುಂಬಾ ಸುಲಭ ಮತ್ತು ಸರಳಗೊಳಿಸುವಂತ ಪ್ರಮುಖವಾದ ಸಾಧನವಾಗಿದೆ. ಇಂಟರ್ನೆಟ್ ಇತ್ತೀಚಿನ ದಿನಗಳಲ್ಲಿ ಒಂದು ಸಂಚಲನವಾಗಿದೆ. ಇದು ಮಾನವರು ಇನ್ನು ಮುಂದೆ ಕಾರ್ಯನಿರ್ವಹಿಸಲು ಸಾಧ್ಯವಿಲ್ಲದ ವಿಷಯವಾಗಿದೆ. ಇದು ನಮ್ಮ ಜೀವನದ ಬಹುಪಾಲು ಭಾಗವನ್ನು ಆಕ್ರಮಿಸಿಕೊಂಡಿದೆ. ನಾವು ಈಗ ಪ್ರತಿಯೊಂದು ಸಣ್ಣ ಮತ್ತು ದೊಡ್ಡ ಕೆಲಸಗಳಿಗೆ ಇಂಟರ್ನೆಟ್ ಬಳಸುತ್ತೇವೆ.
ವಿಷಯ ವಿವರಣೆ
ಇಂಟರ್ ನೆಟ್ ಎಂಬ ಇಂಗ್ಲಿಷ್ ಪದಕ್ಕೆ ಅಂತರರ್ಜಾಲ ಎಂಬ ಕನ್ನಡ ಪದ ಬಳಕೆಯಾಲ್ಲಿದೆ. ಅಂತರ್ಜಾಲ ಎನ್ನುವುದು ಕಂಪ್ಯೂಟರ್ ನೆಟ್ ವರ್ಕ್ ಆಗಿದೆ. ಇದು ಜಾಗತಿಕ ಕಂಪ್ಯೂಟರ್ ನಟ್ವರ್ಕ್ ಆಗಿದ್ದು, ಅದು ಹಲವು ರೀತಿಯ ಮಾಹಿತಿ ಮತ್ತು ಸಂವಹನ ಸೌಲಭ್ಯಗಳನ್ನು ಒದಗಿಸುತ್ತದೆ. ಈ ವ್ಯವಸ್ಥೆಯನ್ನು ಇಂಟರ್ನೆಟ್‌ನ ಭಾಷೆಯಲ್ಲಿ ಮಾಧ್ಯಮ ಅಥವಾ ಪ್ರಸರಣ ಮಾಧ್ಯಮ ಎಂದು ಕರೆಯಲಾಗುತ್ತದೆ.
ಇಂಟರ್ನೆಟ್‌ನ ಉಪಯೋಗಗಳು
- ಎಲೆಕ್ಟಾನಿಕ್ ಮೇಲೆ ವಿನಿಮಯಕ್ಕಾಗಿ ಶೇಕಡ ೮೫ ಕ್ಕಿಂತ ಹೆಚ್ಚು ಹೆಚ್ಚು ಜನರು ಬಳಸುತ್ತಾರೆ.
- ಸಂಶೋಧನೆಗೆ ಇಂಟರ್ನೆಟ್ ದಾಖಲೆಗಳ ದೊಡ್ಡ ಮೂಲವಾಗಿದೆ.
- ಫೈಲ್‌ಗಳನ್ನು ಡೌನ್ ಲೋಡ್ ಮಾಡಬಹುದು ಅಥವಾ ಅಪ್ ಲೋಡ್ ಮಾಡಬಹುದು.
- ಚರ್ಚಾ ಗುಂಪುಗಳಲ್ಲಿ ಯಾವುದಾದರೂ ವಿಷಯಗಳನ್ನು ಕುರಿತು ಮಾರ್ಗದರ್ಶನಕ್ಕಾಗಿ ಅನೇಕ ಅನುಭವಿ ಮತ್ತು ತಜ್ಞರನ್ನು ಪಡೆಯಬಹುದು.
- ದಣಿದ ಸಮಯದಲ್ಲಿ ನಮ್ಮನ್ನು ನಾವು ಉತ್ತೇಜಿಸಿಕೊಳ್ಳಲು ಮನರಂಜನೆಗಾಗಿ ಅಂತರ್ಜಾಲದಲ್ಲಿ ಸಂವಾಧಾತ್ಮಕ ಆಟಗಳ ಆಡಬಹುದು.
- ಹಾಡುಗಳನ್ನು ವಿಡಿಯೋಗಳನ್ನು ಡೌನ್ ಲೋಡ್ ಮಾಡಿಕೊಂಡು ವೀಕ್ಷಿಸಬಹುದು.
- ಶಿಕ್ಷಣ ಮತ್ತು ಸ್ವಯಂ ಸುಧಾರಣೆಗಾಗಿ ಅನೇಕ ಅನ್ ಲೈನ್ ಕೋರ್ಸುಗಳು ಮತ್ತು ಕಾರ್ಯಾಗಾರಗಲಲ್ಲಿ ಹಾಜರಾಗಬಹುದು.
- ನಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರಗಳನ್ನು ಪಡೆಯಬಹುದು.
- ಆನ್ ಲೈನ್ ಸ್ನೇಹಿತರನ್ನು ಮಾಡಿಕೊಳ್ಲಲು ಬಯಸಿದರೆ ಇಲ್ಲಿ ಫೇಸ್ ಬುಕ್, ಇನ್ ಸ್ಟ್ರಾಗ್ರಾಮ್, ಟ್ವಿಟರ್ ನಂತಹ ಅನೇಕ ಸಾಮಾಜಿಕ ಜಾಲತಾಣಗಳು ಇಲ್ಲಿವೆ.
- ಇತ್ತೀಚಿನ ಬ್ರೇಕಿಂಗ್ ನ್ಯೂಸ್, ಹವಾಮಾನ ಮತ್ತು ಕ್ರೀಡಾ ಸುದ್ದಿಗಳನ್ನು ಪಡೆಯಬಹುದು. ಆನ್‌ಲೈನ್ ನಿಯತಕಾಲಿಕೆಗಳನ್ನು ಸಹ ಇಲ್ಲಿ ಓದಬಹುದು.
- ಅನೇಕ ವೆಬ್ ಸೈಟ್‌ಗಳು ಉದ್ಯೋಗಗಳ ಬಗ್ಗೆ ನಿರಂತರವಾಗಿ ಮಾಹಿತಿಯನ್ನು ನೀಡುತ್ತವೆ.
- ಆನ್‌ಲೈನ್ ಶಾಪಿಂಗ್, ಆನ್‌ಲೈನ್ ರೀಚಾರ್ಜ್ ಇಂಟರ್‌ನೆಟ್ ಬ್ಯಾಂಕಿಂಗ್ ಮುಂತಾದುದನ್ನು ಮಾಡಬಹುದು.
- ಸಮಯ ಉಳಿತಾಯವಾಗುತ್ತದೆ. ಬಹಳಷ್ಟು ಕಲಿಯಬಹುದು.
ಇಂಟರ್ನೆಟ್‌ನ ಅನಾನೂಕೂಲಗಳು
- ಇಂಟರ್ನೆಟ್ ಅತೀರೇಕ ಉಪಯೋಗ ದುಷ್ಪರಿಣಾಮದ ಅಭ್ಯಾಸವಾಗಿದೆ. ಇದು ವ್ಯಸನಿಗಳನ್ನಾಗಿ ಮಾಡಿ ಬಿಡುತ್ತದೆ. ನಮ್ಮ ಸಮಯ ವ್ಯರ್ಥವಾಗುತ್ತದೆ.
- ಇದರಲ್ಲಿ ಯಾರಾದರೂ ಸರಿಯಾಗಲಿ ಅಥವಾ ಬೇಸ್ ಆಗಿರಲಿ, ತಪ್ಪು ಡೇಟಾವನ್ನು ವ್ಯಕ್ತಿಗಳು ಗ್ರಹಿಸುವ ಮೂಲಕ, ಸಂಯೋಜಿಸುವ ಮೂಲಕ ಏನನ್ನಾದರೂ ಹಂಚಿಕೊಳ್ಳುತ್ತಾರೆ.
- ಇದರ ಮೂಲಕ ಯಾರಾದರೂ ನಮ್ಮ ಪ್ರತಿಯೊಂದು ಮಾಹಿತಿಯನ್ನು ನಮ್ಮ PC ಯಿಂದ ಹ್ಯಾಕರ್‌ಗಳ ಮೂಲಕ ತೆಗೆದುಕೊಳ್ಳಬಹುದು.
ಉಪಸಂಹಾರ
ನಾವು ಇಂಟರ್ನೆಟ್ ಯುಗದಲ್ಲಿ ವಾಸಿಸುತ್ತಿದ್ದೇವೆ. ಅಲ್ಲದೆ ಅದು ನಮ್ಮ ಜೀವನದ ಪ್ರಮುಖ ಭಾಗವಾಗಿದೆ. ಇಂಟರ್ನೆಟ್ ಇಲ್ಲದೆ ಒಂದು ಕ್ಷಣ ಊಹಿಸಿಕೊಳ್ಳಲು ಸಾಧ್ಯವಿಲ್ಲ. ಇಂಟರ್ನೆಟ್‌ನಲ್ಲಿ ಒಳ್ಳೆಯ ಆಯ್ಕೆಗಳನ್ನು ಪಡೆದುಕೊಳ್ಳಬೇಕು. ಇಂಟರ್ನೆಟ್ ನಮ್ಮೇಲ್ಲರ ಜೀವನವನ್ನು ಉತ್ತಮ ಸ್ಥಾನಕ್ಕೆ ತಲುಪಿಸುತ್ತದೆ.
FAQ
ಭಾರತದಲ್ಲಿ ಇಂಟರ್ನೆಟ್ ಅನ್ನು ಮೊದಲು ಯಾವಾಗ ಬಳಸಲಾಯಿತು ?
ಆಗಸ್ಟ್ ೧೫ ೧೯೯೫
ಇಂಟರ್ನೆಟ್‌ನ ಉಪಯೋಗಗಳನ್ನು ತಿಳಿಸಿ ?
ಸಂಶೋಧನೆಗೆ ಇಂಟರ್ನೆಟ್ ದಾಖಲೆಗಳ ದೊಡ್ಡ ಮೂಲವಾಗಿದೆ.
ಫೈಲ್‌ಗಳನ್ನು ಡೌನ್ ಲೋಡ್ ಮಾಡಬಹುದು ಅಥವಾ ಅಪ್ ಲೋಡ್ ಮಾಡಬಹುದು.
ಇತರೆ ವಿಷಯಗಳು :
ವಿಶ್ವ ಮಲೇರಿಯಾ ದಿನದ ಬಗ್ಗೆ ಮಾಹಿತಿ