ವಿಶ್ವ ಸಂಸ್ಥೆಯ ಬಗ್ಗೆ ಮಾಹಿತಿ Information About the World Organization Vishwa Samstheya Bagge Mahiti in Kannada
ವಿಶ್ವ ಸಂಸ್ಥೆಯ ಬಗ್ಗೆ ಮಾಹಿತಿ
ಈ ಲೇಖನಿಯಲ್ಲಿ ವಿಶ್ವ ಸಂಸ್ಥೆಯ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.
ವಿಶ್ವ ಸಂಸ್ಥೆ
ಮೊದಲನೆ ಮಹಾಯುದ್ದದ ಬಳಿಕ ಜಾಗತಿಕ ಶಾಂತಿಗಾಗಿ ಲೀಗ್ ಆಫ್ ನೇಷನ್ಸ್ ಎಂಬ ಸಂಸ್ಥೆಯು ಪ್ರಾರಂಭವಾಯಿತು. ಅದರೆ ಇದು ಪತನಗೊಂಡಿತು. ನಂತರ ಶಾಶ್ವತ ಶಾಂತಿ ಸ್ಥಾಪನೆಯ ಯತ್ನವು ನಡೆಯಲಾರಂಭಿಸಿತು. ವಿಶ್ವ ಮಟ್ಟದಲ್ಲಿ ಇಂಗ್ಲೆಂಡಿನ ವಿನ್‌ಸ್ಪನ್ ಚರ್ಚಿಲ್, ರಷ್ಯಾದ ಜೋಸೆಫ್ ಸ್ಟಾಲಿನ್ ಹಾಗೂ ಅಮೇರಿಕಾದ ಪ್ರಾಂಕ್ಲಿನ್ ಡಿ ರೂಸ್ ವೆಲ್ಟ್ ವಿಶ್ವ ಮಟ್ಟದ ಸಂಸ್ಥೆಯ ಸ್ಥಾಪನೆಗೆ ಮುಂದಾದರು. ವಿಶ್ವಸಂಸ್ಥೆ ಎಂಬ ಶಬ್ದವನ್ನು ಅಮೇರಿಕಾದ ಅಧ್ಯಕ್ಷ ಪ್ರಾಂಕ್ಲಿನ್ ಡಿ ರೂಸ್ ವೆಲ್ಟ್ ಚಾಲ್ತಿಗೆ ತಂದರು. ೧೯೪೫ ಅಕ್ಟೋಬರ್ ೨೬ ರಂದು ವಿಶ್ವ ಸಂಸ್ಥೆಯು ಉದಯವಾಯಿತು.
ವಿಶ್ವ ಸಂಸ್ಥೆಯ ಉದ್ದೇಶಗಳು
- ಅಂತರಾಷ್ಟ್ರೀಯ ಶಾಂತಿ ಮತ್ತು ಸುಭದ್ರತೆಯನ್ನು ಕಾಪಾಡುತ್ತದೆ.
- ರಾಷ್ಟ್ರಗಳ ಮಧ್ಯ ಪರಸ್ಪರ ಮೈತ್ರಿಯನ್ನು ಬೆಳೆಸುವುದು.
- ಮಾನವನ ಮೂಲಭೂತ ಹಕ್ಕುಗಳ ಬಗೆಗೆ ನಂಬುಗೆಯನ್ನು ಹೆಚ್ಚಿಸುವುದು.
- ಅಂತರಾಷ್ಟ್ರೀಯ ಮಟ್ಟದ ನ್ಯಾಯ ಹಾಗು ಒಡಂಬಡಿಕೆಗಳ ಷರತ್ತುಗಳಿಗೆ ಮನ್ನಣೆ ಒದಗಿಸುವುದು.
- ರಾಷ್ಟ್ರಗಳ ಮಧ್ಯ ಪರಸ್ಪರ ಸೌಹಾರ್ದತೆಯ ಕೇಂದ್ರವಾಗಿ ಕಾರ್ಯವನ್ನು ನಿರ್ವಹಿಸುತ್ತದೆ.
ವಿಶ್ವ ಸಂಸ್ಥೆಯ ಅಂಗ ಸಂಸ್ಥೆಗಳು
ಸಾಮಾನ್ಯ ಸಭೆ :
ಎಲ್ಲಾ ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳನ್ನು ಒಳಗೊಂಡ ಅಂಗ ಸಂಸ್ಥೆ ಇದಾಗಿದೆ. ಪ್ರತಿಯೊಂದು ಸದಸ್ಯ ರಾಷ್ಟ್ರವು ೫ ಸದಸ್ಯರನ್ನು ಇದಕ್ಕೆ ಕಳುಹಿಸಿಕೊಡುತ್ತದೆ. ಆದರೆ ಪ್ರತಿ ಸದಸ್ಯ ರಾಷ್ಟ್ರಕ್ಕೆ ಒಂದು ಮತದ ಹಕ್ಕು ಮಾತ್ರ ಇರುತ್ತದೆ. ಈ ಸಾಮಾನ್ಯ ಸಭೆ ತನ್ನ ಪ್ರಥಮ ಅಧಿವೇಶನದಲ್ಲಿಯೇ ಒಂದು ವರ್ಷದ ಅವಧಿಗೆ ಓರ್ವ ಅಧ್ಯಕ್ಷನ್ನು ಆರಿಸುತ್ತದೆ. ಅದೇ ರೀತಿ ೧೭ ಉಪಾದ್ಯಕ್ಷರನ್ನು, ೭ ಸ್ಥಾಯಿ ಸಮಿತಿಗಳಿಗೆ ೭ ಮಂದಿ ಅಧ್ಯಕ್ಷರನ್ನು ಆರಿಸಲಾಗುತ್ತದೆ. ಈ ಸಾಮಾನ್ಯ ಸಭೆಯ ಅಧಿವೇಶನ ಸಾಮಾನ್ಯವಾಗಿ ಸೆಪ್ಟೆಂಬರ್ ತಿಂಗಳಲ್ಲಿ ಆರಂಭಗೊಂಡು ಡಿಸೆಂಬರ್ ಮಧ್ಯಭಾಗದವರೆಗೆ ಜರುಗುತ್ತದೆ.
ಭದ್ರತಾ ಸಮಿತಿ :
ಇದು ವಿಶ್ವಸಂಸ್ಥೆಯ ಸಚಿವ ಸಂಪುಟ ಎನ್ನುವ ಮಾದರಿಯಲ್ಲಿದ್ದು ಅತ್ಯಂತ ಪ್ರಭಾವಿ ಅಂಗವೆನಿಸಿದೆ. ಇದರಲ್ಲಿ ೧೫ ಮಂದಿ ಸದಸ್ಯರಿದ್ದು, ಅವರ ಪೈಕಿ ಅಮೆರಿಕಾ ಸಂಯುಕ್ತ ಸಂಸ್ಥಾನ, ರಷ್ಯಾ, ಬ್ರಿಟನ್, ಫ್ರಾನ್ಸ್ ಹಾಗು ಚೈನಾ ಖಾಯಂ ಸದಸ್ಯತ್ವ ಹೊಂದಿದ ರಾಷ್ಟ್ರಗಳೆನಿಸಿದೆ. ಇವುಗಳು ವಿಟೋ ಅಧಿಕಾರವನ್ನು ಹೊಂದಿವೆ.
ಜಾಗತಿಕ ಸಮಸ್ಯೆಗಳಿಗೆ ಶಾಂತಿಯುತ ಪರಿಹಾರಕ್ಕಾಗಿ ಭದ್ರತಾ ಸಮಿತಿ ಯತ್ನಿಸುತ್ತದೆ. ಅವಶ್ಯಕವಿದ್ದರೆ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯನ್ನು ಅಂತರಾಷ್ಟ್ರೀಯ ಶಾಂತಿ ಹಾಗೂ ಸುವ್ಯಸ್ಥೆಗೆ ನಿಯೋಜಿಸುತ್ತದೆ. ಅಂತರಾಷ್ಟ್ರೀಯ ನ್ಯಾಯಾಲಯದ ನ್ಯಾಯಾಧೀಶರನ್ನು ಇದು ನೇಮಕ ಮಾಡುತ್ತದೆ ಹಾಗೂ ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಉಮೇದುವಾರಿಕೆಗೆ ಹೆಸರು ಸೂಚಿಸುತ್ತದೆ.
ಆರ್ಥಿಕ ಮತ್ತು ಸಾಮಾಜಿಕ ಸಮಿತಿ :
ಈ ಸಮಿತಿಯು ಮುಖ್ಯ ಕಾರ್ಯಗಳನ್ನು ಹೊಂದಿವೆ.
- ಅಂತರಾಷ್ಟ್ರೀಯ ವಲಯದ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿ, ಶೈಕ್ಷಣಿಕ, ಆರೋಗ್ಯ ಹಾಗೂ ಇನ್ನಿತರ ಸಂಬಂಧಿತ ವಿಷಯಗಳ ಅಧ್ಯಯನ ಹಾಗೂ ವರದಿ ಮಾಡುವಿಕೆ.
- ನಿರಾಶ್ರಿತರ ಬಗ್ಗೆ, ಮಹಿಳೆಯರ ಸ್ಥಾನಮಾನ, ವಸತಿ ಸಮಸ್ಯೆ ಮುಂತಾದ ಹಲವಾರು ವಿಚಾರಗಳು ಈ ಸಮಿತಿಯ ಕಾರ್ಯವ್ಯಾಪ್ತಿಯೊಳಗೆ ಬರುತ್ತದೆ.
- ಮಾನವ ಸಂಪನ್ಮೂಲ, ಸಂಸ್ಕೃತಿ, ಶಿಕ್ಷಣ ಮುಂತಾದ ವಿಷಯಗಳ ಬಗ್ಗೆ ಅಂತರಾಷ್ಟ್ರೀಯ ಸಮ್ಮೇಳನಗಳನ್ನು ಸಂಘಟಿಸಿದರು.
- ಮಾನವ ಹಕ್ಕುಗಳ ಬಗ್ಗೆ ಹಾಗೂ ಮೂಲಭೂತ ಸ್ವಾತಂತ್ರ್ಯಗಳ ಬಗ್ಗೆ ಈ ಸಮಿತಿಯು ಶಿಫಾರಸ್ಸು ಮಾಡುತ್ತವೆ.
ದತ್ತಿ ಸಮಿತಿ :
ಈ ಸಂಸ್ಥೆ ವಾಸ್ತವಿಕವಾಗಿ ಸಾಮನ್ಯ ಸಭೆ ಉಪ ಸಂಸ್ಥೆ ಅಥವಾ ಸಹಾಯಕ ಸಂಸ್ಥೆಯಾಗಿ ಕಾರ್ಯನಿರ್ವನಿರ್ವಹಿಸುತ್ತದೆ. ಟ್ರಸ್ಟ್ ಆಶ್ರಯಿತಿ ಪ್ರದೇಶಗಳ ಸಂಖ್ಯೆ ಕಡಿಮೆಯಾದುದರಿಂದ ಈ ಸಮಿತಿಯ ಕಾರ್ಯಕ್ಷೇತ್ರವೂ ಕಡಿಮೆಯಾಗುತ್ತಾ ಸಾಗಿದೆ. ಸ್ವತಂತ್ರ ರಾಜ್ಯದ ಮಟ್ಟಕ್ಕೆ ಏರದ ಪ್ರದೇಶಗಳ ಉಸ್ತುವಾರಿಯನ್ನು ಈ ಸಮಿತಿ ಹೊಂದಿದೆ. ಈಗ ಇದು ನಿಷ್ಕಿಯವಾಗಿದೆ. ಏಕೆಂದರೆ ಯಾವುದೇ ದತ್ತಿ ಉಳಿದಿಲ್ಲ.
ಅಂತರಾಷ್ಟ್ರೀಯ ನ್ಯಾಯಾಲಯ :
ಇದು ವಿಶ್ವ ಸಂಸ್ಥೆಯ ಒಂದು ಪ್ರಧಾನ ಅಂಗ ಸಂಸ್ಥೆ ಹಾಗೂ ಎಲ್ಲಾ ಸದಸ್ಯರಾಷ್ಟ್ರಗಳು ಈ ನ್ಯಾಯಾಲಯದ ಸನ್ನಧಿಗೆ ತಮ್ಮ ಸಹಮತವನ್ನು ನೀಡಲು ಬದ್ದರಾಗಿದ್ದಾರೆ. ಇದರ ಕೇಂದ್ರ ಕಛೇರಿ ನೆದರ್ ಲ್ಯಾಂಡಿನ ಹೇಗ್ ಎಂಬಲ್ಲಿ ಈ ನ್ಯಾಯಾಲಯ ಸ್ಥಾಪಿತಗೊಂಡಿದೆ. ನೈತಿಕ ಹಾಗೂ ವೈಚಾರಿಕ ನೆಲೆಗಟ್ಟಿನ ಮೇಲೆ ಈ ನ್ಯಾಯಾಲಯದ ನಿರ್ಣಯಗಳು ಮಹತ್ವ ಹೊಂದಿದೆ. ಆದರೆ ಈ ನ್ಯಾಯಾಲಯದ ತೀರ್ಪು ಕಡ್ಡಾಯವಾಗಿ ಯಾವ ದೇಶಕ್ಕೂಅನ್ವಯಿಸುವಂತಿಲ್ಲ. ಈ ಎಲ್ಲಾ ಇತಿಮಿತಿಗಳ ಮಧ್ಯಯೂ ಅಂತರಾಷ್ಟ್ರೀಯ ಶಾಂತಿ ಹಾಗೂ ಸುಭದ್ರತೆಗೆ ಅಂತರಾಷ್ಟ್ರೀಯ ನ್ಯಾಯಾಲಯ ತನ್ನದೆ ಆದ ಕೊಡುಗೆಯನ್ನು ನೀಡಿದೆ.
ಸಚಿವಾಲಯ :
ಮಹಾಕಾರ್ಯದರ್ಶಿ ಹಾಗು ವಿಶ್ವಸಂಸ್ಥೆಯ ಸಿಬ್ಬಂದಿ ವರ್ಗ ಈ ಅಂಗ ಸಂಸ್ಥೆಗೆ ಸೇರಿದವರಾಗಿದ್ದಾರೆ. ಮಹಾಕಾರ್ಯದರ್ಶಿಯವರು ಈ ಕಾರ್ಯಾಂಗದ ಮುಖ್ಯಸ್ಥರು ಎನಿಸಿದ್ದಾರೆ. ಇವರನ್ನು ಭದ್ರತಾ ಸಮಿತಿಯ ಶಿಫಾರಸ್ಸಿನ ಮೇರೆಗೆ ಸಾಮಾನ್ಯ ಸಭೆಯು ೫ ವರ್ಷಗಳ ಅವಧಿಗೆ ಆರಿಸುತ್ತದೆ. ಇದರ ಪ್ರಧಾನ ಕಾರ್ಯಾಲಯವು ನ್ಯೂಯಾರ್ಕ್ ನಲ್ಲಿದ್ದು, ಜಿನೇವಾ, ವಿಯಾನ್ನಾ ಹಾಗೂ ನೈರೋಬಿಗಳಲ್ಲಿ ಇದರ ಶಾಖೆಗಳಿವೆ.
FAQ
ವಿಶ್ವ ಸಂಸ್ಥೆಯು ಯಾವಾಗ ಜಾರಿಗೆ ಬಂದಿತು ?
೧೯೪೫ ಅಕ್ಟೋಬರ್ ೨೪
ವಿಶ್ವಸಂಸ್ಥೆಯ ಅಂಗಸಂಸ್ಥೆಗಳನ್ನು ತಿಳಿಸಿ ?
ಸಾಮನ್ಯ ಸಭೆ, ಭದ್ರತಾ ಸಮಿತಿ
ಇತರೆ ವಿಷಯಗಳು :