ವಿಶ್ವ ಆರೋಗ್ಯ ದಿನದ ಬಗ್ಗೆ ಮಾಹಿತಿ Information about World Health Day Vishva Arogya Dinada Bagge Mahiti in Kannada
ವಿಶ್ವ ಆರೋಗ್ಯ ದಿನದ ಬಗ್ಗೆ ಮಾಹಿತಿ
ಈ ಲೇಖನಿಯಲ್ಲಿ ವಿಶ್ವ ಆರೋಗ್ಯ ದಿನದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.
ವಿಶ್ವ ಆರೋಗ್ಯ ದಿನ
ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ. ವಿಶ್ವ ಆರೋಗ್ಯ ಸಂಸ್ಥೆ ೧೯೪೫ ರ ಹೇಳಿಕೆಯ ಪ್ರಕಾರ ಒಂದು ಜೀವಿಯ ದೇಹ ಮನಸ್ಸು ಸಂಪೂರ್ಣ ಸಮತೋಲನದಲ್ಲಿರುವ ಸ್ಥಿತಿಯನ್ನು ಆರೋಗ್ಯ ಎಂದು ಕರೆಯುತ್ತಾರೆಆರೋಗ್ಯ ನಮ್ಮ ಜೀವನದ ಪ್ರಮುಖ ಅಂಶವಾಗಿದೆ. ಆರೋಗ್ಯವೆಂದರೆ ಸಂಪೂರ್ಣ ದೈಹಿಕ ಮಾನಸಿಕ ಮತ್ತು ಸಾಮಾಜಿಕ ಸುಸ್ಥಿತಿ ಒಳ್ಳೆಯ ಆರೋಗ್ಯವು ನಮಗೆ ಯಾವಾಗಲೂ ಸಂತೋಷವಾಗಿದೆ. ಮತ್ತು ಯಾವಾಗಲೂ ಸಾಮಾಜಿಕ ಮತ್ತು ಭೌದ್ದಿಕ ಯೋಗಕ್ಷೇಮದ ಅನುಭವವನ್ನು ನೀಡುತ್ತದೆ.
ಆರೋಗ್ಯ ದಿನದ ಹಿನ್ನೆಲೆ
೧೯೪೮ ಎಪ್ರಿಲ್ ೦೭ ರಂದು ಸ್ವಿಡ್ಜಲ್ಯಾಂಡಿನ ಜೀನಿವಾದಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಸ್ಥಾಪನೆಯಾಯಿತು. ವಿಶ್ವ ಆರೋಗ್ಯ ದಿನವನ್ನು ಎಪ್ರಿಲ್ ೭ ರಂದು ಆಚರಿಸಲಾಗುತ್ತದೆ. ಒಂದು ಜೀವಿಯ ದೇಹ – ಮನಸ್ಸು ಸಂಪೂರ್ಣ ಸಮತೋಲನದಲ್ಲಿರುವ ಸ್ಥಿತಿಯನ್ನು ಆರೋಗ್ಯ ಎಂದು ಕರೆಯುತ್ತಾರೆ. ಉತ್ತಮ ಆಹಾರವೇ ಆರೋಗ್ಯದ ಉತ್ತಮ ಔಷಧವಾಗಿರುತ್ತದೆ. “ಆಯುರಾರೋಗ್ಯ ಐಶ್ವರ್ಯ ಪ್ರಾಪ್ತಿರಸ್ತು ” ಎಂದು ಹಿರಿಯರು ಆಶೀರ್ವಾದವನ್ನು ಮಾಡುತ್ತಾರೆ. ಇದರಿಂದ ನಾವೆಲ್ಲರೂ ಅರ್ಥಮಾಡಿಕೊಳ್ಳಬೇಕಾದದ್ದು ಆರೋಗ್ಯವು ಸಂಪತ್ತು, ಐಶ್ವರ್ಯಕ್ಕಿಂತಲೂ ಶೇಷ್ಟವಾದ ಸಂಪತ್ತಾಗಿದೆ.
ಆರೋಗ್ಯ ದಿನದ ಆಚರಣೆ
ಎಲ್ಲರಿಗೂ ಉತ್ತಮ ಆರೋಗ್ಯವನ್ನು ನೀಡುವಲ್ಲಿ ವಿಶ್ವ ಆರೋಗ್ಯ ದಿನದ ಆಚರಣೆಯು ಸಹಾಯಕವಾಗಿದೆ. ಈ ಆಚರಣೆಯಲ್ಲಿ ಆಯಾ ಸರ್ಕಾರೇತರ ಸಂಸ್ಥೆಗಳನ್ನು ಏರ್ಪಡಿಸಿ ಆರೋಗ್ಯದ ಬಗ್ಗೆ ಮಾರ್ಗದರ್ಶನ ನೀಡಲಾಗುತ್ತದೆ. ವಿವಿಧ ರೋಗಗಳಿಗೆ ಹರಡಲು ಕಾರಣ ಮತ್ತು ಪರಿಹಾರಗಳ ಬಗ್ಗೆ ಮಾಹಿತಿ ನೀಡವಲ್ಲಿ ಮತ್ತು ಜಾಗೃತಿ ಮೂಡಿಸುವುದೇ ಈ ಆಚರಣೆಯ ಮುಖ್ಯ ಉದ್ದೇಶವಾಗಿದೆ. ಈ ದಿನದ ಆಚರಣೆಯ ಮೂಲಕ ನೈರ್ಮಲ್ಯ ಸ್ವಚ್ಚತಾ ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು. ಈ ಆಚರಣೆಯ ಮೂಲಕ ಆಹಾರದಲ್ಲಿ ಮಾಡುತ್ತಿರು ತಪ್ಪುಗಳ ಬಗ್ಗೆ ಜಾಗೃತರಾಗುತ್ತಾರೆ.
ಉತ್ತಮ ಆರೋಗ್ಯಕರ ಮಾಹಿತಿಗಳು
ದಿನಕ್ಕೆ ಕನಿಷ್ಟ ೭ ರಿಂದ ೮ ಗಂಟೆಗಳ ಕಾಲ ಸಿದ್ದ ಮಾಡುವುದು. ದಿನದ ಆಹಾರದಲ್ಲಿ ಅರ್ಥಭಾಗದಷ್ಟು ಹಸಿ ತರಕಾರಿಯನ್ನು ಸೇವೆಸುವುದು.
ಆಹಾರ : ನಮ್ಮ ಎಲ್ಲಾ ಚಟುವಟಿಕೆಗಳಿಗೂ ಆಹಾರ ಪೋಷಕಾಂಶ ಮೂಲ. ಮತ್ತು ಇವು ನಮಗೆ ಚೈತನ್ಯವನ್ನು ಒದಗಿಸುತ್ತದೆ.
ಪ್ರೋಟೀನ್‌ಗಳು : ಸಸ್ಯಗಳನ್ನು ಮತ್ತು ಸಸ್ಯಹಾರ ಸೇವಿಸುವುದರ ಮೂಲಕ ಪ್ರೋಟೀನ್ ಗಳನ್ನು ಪಡೆಯಬಹುದು.
ಕೊಬ್ಬು : ಇದು ಪ್ರಾಣಿ ಮತ್ತು ಸಸ್ಯಜನ್ಯ ಆಹಾರದಿಂದ ದೊರೆಯುತ್ತದೆ. ಮೀನು, ಮೊಟ್ಟೆ, ಮಾಂಸ, ಹಾಲು, ಬೆಣ್ಣೆ ಇವು ಪ್ರಾಣಿಜನ್ಯ ಕೊಬ್ಬಿನ ಮೂಲವಾಗಿದೆ.
ಶರ್ಕರ ಪಿಷ್ಟ : ಇದು ಅಕ್ಕಿ, ರಾಗಿ, ಗೋಧಿ, ಜೋಳ, ಬಾರ್ಲಿ, ಸಜ್ಜೆ ಇವುಗಳಲ್ಲಿ ವಿಪುಲವಾಗಿರುತ್ತದೆ.
ಉಪಸಂಹಾರ
ಈ ಮೂಲಕ ತಿಳಿಯುವುದೆನೇಂದರೆ ನಮ್ಮ ಆರೋಗ್ಯ ನಮ್ಮ ಕೈಯಲ್ಲಿ ಇದೆ ನಾವೆಲ್ಲರೂ ಜೀವಿಸಲು ಮತ್ತು ನಮ್ಮ ಬೆಳವಣಿಗೆಗೆ ಆರೋಗ್ಯ ಸರಿಯಾಗಿದ್ದರೆ ನಮ್ಮ ಜೀವನದ ಪ್ರಮುಖ ಅಂಶವಾಗಿದೆ. ಆದ್ದರಿಂದ ನಾವೆಲ್ಲರೂ ಕೂಡ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು.
FAQ
ವಿಶ್ವ ಆರೋಗ್ಯ ದಿನವನ್ನು ಯಾವಾಗ ಆಚರಿಸುತ್ತಾರೆ ?
ಎಪ್ರಿಲ್ ೭
ವಿಶ್ವ ಆರೋಗ್ಯ ಸಂಸ್ಥೆ ಎಲ್ಲಿದೆ ?
ಸ್ವಿಡ್ಜಲ್ಯಾಂಡಿನ ಜೀನಿವಾದಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಸ್ಥಾಪನೆಯಾಯಿತು.
ಇತರೆ ವಿಷಯಗಳು :
ವಿಶ್ವ ಗುಬ್ಬಚ್ಚಿ ದಿನದ ಬಗ್ಗೆ ಮಾಹಿತಿ