ಯುಗಾದಿ ಹಬ್ಬದ ಬಗ್ಗೆ ಪ್ರಬಂಧ | Essay on Ugadi Festival in Kannada

ಯುಗಾದಿ ಹಬ್ಬದ ಬಗ್ಗೆ ಪ್ರಬಂಧ Essay on Ugadi Festival Yugadhi Habbada Bagge Prabandha in Kannada

Essay on Ugadi Festival in Kannada
Essay on Ugadi Festival in Kannada

ಪೀಠಿಕೆ

ಯುಗಾದಿ ಹಬ್ಬವು ಹಿಂದುಗಳ ಪವಿತ್ರ ಹಬ್ಬವಾಗಿದೆ. ಚೈತ್ರ ಮಾಸದ ಮೊದಲ ದಿನವನ್ನು ಹೊಸ ವರ್ಷದ ಹಬ್ಬ ಎಂತಲೂ ಹಾಗೂ ಯುಗಾದಿ ಹಬ್ಬ ಎಂತಲೂ ಆಚರಿಸುತ್ತೇವೆ. ಯುಗಾದಿಯ ದಿನ ಬೇವು – ಬೆಲ್ಲ ತಿನ್ನುವುದು, ಹಂಚುವುದು, ಗುರು ಹಿರಿಯರಿಗೆ ನಮಸ್ಕರಿಸುವುದು ಈ ಹಬ್ಬದ ಸಂಪ್ರದಾಯವಾಗಿದೆ. ಹೊಸ ವರ್ಷದ ದಿನ ಬೇವು – ಬೆಲ್ಲ ತಿಂದು ಒಳ್ಳೆಯ ಮಾತಾಡಬೇಕು ಎಂಬುದು ವಾಡಿಕೆಯ ನುಡಿಯಾಗಿದೆ.

ವಿಷಯ ವಿವರಣೆ

ಹೊಸವರ್ಷ ಅಥವಾ ಯುಗಾದಿ ಹಬ್ಬವೆಂದೂ ಕರೆಯುತ್ತಾರೆ. ಯುಗಾದಿ ಅಥವಾ ಉಗಾದಿ ಚೈತ್ರ ಮಾನಸ ಮೊದಲ ದಿನವಾಗಿದೆ. ಭಾರತದ ಅನೇಕ ಕಡೆಗಳಲ್ಲಿ ಈ ದಿನ ಹೊಸ ವರ್ಷದ ಮೊದಲ ದಿನ. ಹೊಸ ವರ್ಷದ ಹಬ್ಬವಾಗಿ ಯುಗಾದಿಯನ್ನು ಆಚರಿಸಲಾಗುತ್ತದೆ. ಯುಗಾದಿ ಪದದ ಉತ್ಪತ್ತಿ ಯುಗ + ಆದಿ ಹೊಸ ಯುಗದ ಆರಂಭ ಎಂದು ಅರ್ಥವನ್ನು ನೀಡುತ್ತದೆ. ಹಿಂದೂ ಕ್ಯಾಲೆಂಡರ್‌ ಪ್ರಕಾರ ಚಂದ್ರಮಾನ ಯುಗಾದಿಯು ಹೊಸ ವರ್ಷದ ಆರಂಭವಾಗಿದೆ.

ಯುಗಾದಿ ಹಬ್ಬದ ವಿಶೇಷತೆ ಬೇವು – ಬೆಲ್ಲ

ಬೇವು – ಬೆಲ್ಲ :

ಹಬ್ಬದಲ್ಲಿ ಬೆಲ್ಲ ಮತ್ತು ಬೇವನ್ನು ಸೇವಿಸುವುದೆಂದರೆ ಸಿಹಿ ಮತ್ತು ಕಹಿ ಘಟನೆಗಳೆರಡುನ್ನೂ ಕೂಡ ಜೀವಿನದಲ್ಲಿ ಸಮಾನ ದೃಷ್ಟಿಯಲ್ಲಿ ಎದುರಿಸುವಿಕೆ ಎಂಬ ಉದ್ದೇಶವನ್ನೂ ಹೊಂದಿದೆ.

ಯುಗಾದಿ ಹಾಡು

ಯುಗ ಯುಗಾದಿ ಕಳೆದರೂ

ಯುಗಾದಿ ಮರಳಿ ಬರುತಿದೆ

ಹೊಸ ವರುಷಕೆ ಹೊಸ ಹರುಷವ

ಹೊಸತು ಹೊಸತು ತರುತಿದೆ.

ಹೊಂಗೆ ಹೂವ ತೊಂಗಲಲ್ಲಿ ಭೃಂಗದ

ಸಂಗೀತ ಕೇಲಿ ಮತ್ತೆ ಕೇಳಬರುತಿದೆ

ಬೇವಿನ ಕಹಿ ಬಾಳಿನಲ್ಲಿ ಹೂವಿನ

ನಸುಗಂಪು ಸೂಸಿ ಜೀವಕಳೆಯ ತರುತಿವೆ

ವರುಷಕೊಂದು ಹೊಸತು ಜನ್ಮ ಹರುಷಕ್ಕೊಂದು

ಹೊಸತು ನೆಲೆಯು ಅಖಿಲ ಜೀವಜಾತಕೆ

ಒಂದೆ ಒಂದು ಜನ್ಮದಲ್ಲಿ ಒಂದೆ ಬಾಲ್ಯ ಒಂದೆ ಹರಯ

ನಮಗದಷ್ಟೆ ಎತಕೆ

ಸಿದ್ದೆಗೊಮ್ಮೆ ನಿತ್ಯ ಮರಣ ಎದ್ದ ಸಲ ನವೀನ ಜನನ

ನಮಗೆ ಏಕೆ ಬಾರದೋ

ಎಲೇ ಸನತ್ಕುಮಾರದೇವ ಎಲೇ ಸಾಹಸಿ ಚಿರಂಜೀವಿ

ಸಿನಗೆ ಲೀಲೆ ಸೇರದೋ

ಯುಗ ಯುಗಾದಿ ಕಳೆದರೂ

ಯುಗಾದಿ ಮರಳಿ ಬರುತಿವೆ

ಹೊಸ ವರುಷಕೆ ಹೊಸ ಹರುಷವ

ಹೊಸತು ಹೊಸತು ತರುತಿದೆ ನಮ್ಮ ನಷ್ಟೆ ಮರೆತಿದೆ.

ಹಬ್ಬದ ಆಚರಣೆಯ ವಿಧಾನ

ಈ ಹಬ್ಬವನ್ನು ಹೆಚ್ಚಾಗಿ ಕರ್ನಾಟಕ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರಗಳಲ್ಲಿ ಆಚರಿಸುವರು. ಆಂದ್ರ ಮತ್ತು ಕರ್ನಾಟಕಗಳಲ್ಲಿ ಇದು ಯುಗಾದಿಯಾದರೆ, ಮಹಾರಾಷ್ಟ್ರದಲ್ಲಿ ಗುಡಿಪಾಡ್‌ ಪಾಡ್ಯಮಿ ದಿವಸ ಗುಡಿಯನ್ನು ಏರಿಸುವುದೇ ಗುಡ್ಡಿಪಾಡ್ವ – ಒಂದು ಕೋಲಿಗೆ ವಸ್ತ್ರವನ್ನು ಕಟ್ಟಿ ಹೂವಿನ ಹಾರವನ್ನು ಏರಿಸಿ ಗುಡಿ ಎಂದು ಮೂಲೆಯಲ್ಲಿ ಇರಿಸುವರು. ಇದು ಹೊಸ ವರುಷದ ಆಗಮನಕ್ಕೆ ಬಾವುಟವನ್ನು ಹಾರಿಸುವುದರ ಸಂಕೇತ.

ಹುಣಿಸೇಹಣ್ಣು ಬೆಲ್ಲ, ಮಾವಿನಕಾಯಿ, ಉಪ್ಪು, ಮೆಣಸು, ಬೇವು ಇತ್ಯಾದಿಗಳ ಮಿಶ್ರಣ ಮಾಡಿ ಯುಗಾದಿ ಪಚ್ಚಡಿ ಎಂಬ ಹೆಸರಿನ ಪದಾರ್ಥವನ್ನು ಸೇವಿಸುವರು. ಅಂದು ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಇರುವುದು.

ತಳಿರು ತೋರಣವನ್ನು ಮನೆಗಳ ಮುಂಬಾಗಿಲಿಗೆ ಮತ್ತು ದೇವರ ಮನೆಯ ಬಾಗಿಲಿಗೆ ತಳಿರು ತೋಣ ಕಟ್ಟುವರು.

ಮನೆಯ ಮುಂದೆ ಬಣ್ಣ ಬಣ್ಣದ ರಂಗೋಲಿಯನ್ನಿಡುವರು ಮುಂಜಾನೆ ಬೇಗನೆದ್ದು ಅಭ್ಯಂಜನ ಮಾಡಿ ಪುಣ್ಯಾಹ ಮಂತ್ರಗಳನ್ನು ಉಚ್ಚರಿಸಿ ಮಾವಿನೆಲೆಯಿಂದ ಮನೆಯ ಎಲ್ಲ ಕಡೆ ಕಳಶದ ನೀರನ್ನು ಸಿಂಪಡಿಸುವರು. ನಂತರ ಹೊಸ ಬಟ್ಟೆ ಧರಿಸಿ ಪಂಜಾಂಗವನ್ನು ಮನೆಯ ಹಿರಿಯರು ಓದುವರು ಮತ್ತೆಲ್ಲರೂ ಅದನ್ನು ಕೇಳುವರು.

ಯುಗಾದಿ ಹಬ್ಬದಲ್ಲಿ ಮಾಡುವ ವಿಶೇಷ ತಿನಿಸುಗಳು

ಯುಗಾದಿ ಹಬ್ಬದಲ್ಲಿ ಹೋಳಿಗೆ, ತೆಂಗಿನಕಾಯಿ ಹೂರಣದಲ್ಲಿ ಮಾಡಿದ ಹೋಳಿಗೆ, ಹೊಸದಾದ ಮಾವಿನ ಫಲದಿಂದ ಮಾವಿನಕಾಯಿಂದ ಉಪ್ಪಿನಯನ್ನು ಮಾಡುವರು. ಮತ್ತು ಈ ಹಬ್ಬದ ವಿಶೇಷವಾಗಿ ಬೇವು – ಬೆಲ್ಲವನ್ನು ತಯಾರಿಸುತ್ತಾರೆ.

FAQ

ಯುಗಾದಿ ಹಬ್ಬದಲ್ಲಿ ಮಾಡುವ ವಿಶೇಷ ತಿನಿಸುಗಳನ್ನು ತಿಳಿಸು ?

ಯುಗಾದಿ ಹಬ್ಬದಲ್ಲಿ ಹೋಳಿಗೆ, ತೆಂಗಿನಕಾಯಿ ಹೂರಣದಲ್ಲಿ ಮಾಡಿದ ಹೋಳಿಗೆ, ಹೊಸದಾದ ಮಾವಿನ ಫಲದಿಂದ ಮಾವಿನಕಾಯಿಂದ ಉಪ್ಪಿನಯನ್ನು ಮಾಡುವರು. ಮತ್ತು ಈ ಹಬ್ಬದ ವಿಶೇಷವಾಗಿ ಬೇವು – ಬೆಲ್ಲವನ್ನು ತಯಾರಿಸುತ್ತಾರೆ.

ಪ್ರಸ್ತುತ ೨೦೨೩ ರಲ್ಲಿ ಯುಗಾದಿ ಹಬ್ಬವು ಯಾವ ದಿನಾಂಕದಂದು ಬಂದಿದೆ ?

ಎಪ್ರಿಲ್‌ ೨೨

ಇತರೆ ವಿಷಯಗಳು :

ವಿಶ್ವ ಜಲ ದಿನದ ಬಗ್ಗೆ ಪ್ರಬಂಧ

GST ಯ ಬಗ್ಗೆ ಮಾಹಿತಿ

Leave a Reply

Your email address will not be published. Required fields are marked *