ಸಾವಿತ್ರಿಬಾಯಿ ಫುಲೆ ಜೀವನ ಚರಿತ್ರೆ | Biography of Savitribai Phule in Kannada

ಸಾವಿತ್ರಿಬಾಯಿ ಫುಲೆ ಜೀವನ ಚರಿತ್ರೆ Biography of Savitribai Phule Savitribai Phule Jeevana Charitre in Kannada

ಸಾವಿತ್ರಿಬಾಯಿ ಫುಲೆ ಜೀವನ ಚರಿತ್ರೆ

ಈ ಲೇಖನಿಯಲ್ಲಿ ಸಾವಿತ್ರಿಬಾಯಿ ಫುಲೆಯವರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.

ಸಾವಿತ್ರಿಬಾಯಿ ಫುಲೆ

ಸಾವಿತ್ರಿಬಾಯಿ ಫುಲೆಯವರು ನಮ್ಮ ರಾಷ್ಟ್ರದ ಮೊದಲ ಮಹಿಳಾ ಶಿಕ್ಷಕಿ ಎಂದು ಗುರುತಿಸಲಾಗಿದೆ. ಮತ್ತು ಮುಖ್ಯೋಪಾಧ್ಯಾಯಿನಿ, ಸಂಚಾಲಕಿ, ಹಕ್ಕುಗಳ ಹೋರಾಟಗಾರ್ತಿ, ಕವಯಿತ್ರಿ ಮತ್ತು ಮರಾಠಿ ಕಾವ್ಯದ ಪ್ರವರ್ತಕಿ ಎಂದೂ ಕರೆಯುತ್ತಾರೆ. ಹಾಗು ದಣಿವರಿಯದ ಸತ್ಯಶೋಧಕಿ, ಆಧುನಿಕ ಶಿಕ್ಷಣದ ತಾಯಿಯಾಗಿದ್ದಾರೆ.

ಸಾವಿತ್ರಿಬಾಯಿ ಫುಲೆಯವರ ಜನನ

ಸಾವಿತ್ರಿಬಾಯಿ ಫುಲೆಯವರು ಜನವರಿ ೩ \ ೧೮೩೧ ರಲ್ಲಿ ಮಹಾರಾಷ್ಟ್ರದ ಸತಾರಾ ಜಿಲ್ಲೆಯ ನೈಗಾಂನ್‌ ನಲ್ಲಿ ಜನಿಸಿದರು. ಇವರ ತಂದೆ ಖಡೋಜಿ ನೆವೇಶೆ ಪಾಡೀಲ್, ತಾಯಿ ಲಕ್ಷ್ಮೀ ಇವರಿಗೆ ಮದುವೆಯಾದಾಗ ೮ ವರ್ಷ ವಯಸ್ಸು ಇವರ ಪತಿಯ ಹೆಸರು ಜ್ಯೋತಿ ಬಾಫುಲೆ ಇವರಿಗೆ ೧೩ ವರ್ಷ ವಯಸ್ಸಾಗಿತ್ತು.

ಸಾವಿತ್ರಿಬಾಯಿ ಫುಲೆಯವರ ಶಿಕ್ಷಣ

ಸಾವಿತ್ರಿಬಾಯಿ ಫುಲೆ ಮದುವೆಯ ನಂತರ ಜ್ಯೋತಿ ಬಾಫುಲೆ ತಮ್ಮ ಪತ್ನಿಗೆ ಮನೆಯಲ್ಲಿಯೇ ಶಿಕ್ಷಣ ನೀಡಿ ಶಿಕ್ಷಕಿಯಾಗುವಂತೆ ತರಬೇತಿ ನೀಡಿದರು. ಸಾವಿತ್ರಿಬಾಯಿ ಅವರು ಅಹಮ್ಮದ್‌ ನಗರದಲ್ಲಿರುವ ಮಿಸ್‌ ಫರಾರ್‌ ಸಂಸ್ಥೆಯಲ್ಲಿ ಮತ್ತು ಪುಣೆಯ ಮಿಸ್‌. ಮಿಚೆಲ್‌ ಅವರ ನಾರ್ಮಲ್‌ ಸ್ಕೂಲ್ನಲ್ಲಿ ಶಿಕ್ಷಕರ ತರಬೇತಿಯನ್ನು ಪಡೆದಿದ್ದರು.

ಸಾವಿತ್ರಿಬಾಯಿ ಫುಲೆಯವರ ಸಾಧನೆಗಳು

ಸಾವಿತ್ರಿಬಾಯಿ ಫುಲೆಯವರಿಗೆ ಸ್ವಂತ ಮಕ್ಕಳಿರಲಿಲ್ಲ. ಅದಕ್ಕಾಗಿ ಒಬ್ಬ ಬ್ರಾಹ್ಮಣ ವಿಧವೆಯ ಮಗುವನ್ನು ದತ್ತು ಪಡೆದುಕೊಳ್ಳುತ್ತಾರೆ. ಮಗುವಿಗೆ ಶಿಕ್ಷಣ ನೀಡಿದರು ಮತ್ತು ಅಂತರ್ಜಾತಿ ವಿವಾಹವನ್ನು ಏರ್ಪಡಿಸಿದರು. ಶಿಕ್ಷಣ ಮತ್ತು ಜ್ಞಾನವನ್ನು ಹರಡಲು ಅವರು ತಮ್ಮ ಜೀವನವನ್ನು ಮುಡಿಪಾಗಿಟ್ಟರು. ಅವರು ದೇಶದ ಮೊದಲ ಹೆಣ್ಣು ಮಕ್ಕಳ ಶಾಲೆ ಮತ್ತು ಸ್ಥಳಿಯ ಗ್ರಂಥಾಲಯವನ್ನು ಪ್ರಾರಂಭಿಸಿದರು. ಮತ್ತು ೧೪ ಶಾಲೆಗಳನ್ನು ಸ್ಥಾಪಿಸಿದರು. ಇವರಿಗೆ ಬ್ರಿಟಿಷರು “ಇಂಡಿಯಾಸ್‌ ಫಸ್ಟ್ ಲೇಡಿ ಟೀಚರ್‌” ಎಂಬ ಬಿರುದನ್ನು ನೀಡಿದರು.

ಸಾವಿತ್ರಿಯವರು ತಮ್ಮ ಪತಿಯೊಂದಿಗೆ ಮಹಿಳೆಯರು, ರೈತರು ದಲಿತರು ಮತ್ತು ಹಿಂದುಳಿದ ಜಾತಿಗಳ ಹಕ್ಕುಗಳಿಗಾಗಿ ಹೋರಾಡಿದರು. ಇವರಿಬ್ಬರು ದೇಶದ ಶೂದ್ರ ಮತ್ತು ಅತಿಶೂದ್ರ ಮಹಿಳೆಯರಿಗಾಗಿ ಕ್ರಾಂತಿಕಾರಿ ಸಾಮಾಜಿಕ ಶಿಕ್ಷಣ ಚಳುವಳಿಯನ್ನು ನಿರ್ಮಿಸಿದರು. ೧೮೬೩ ರಲ್ಲಿ, ಅವರು ಗರ್ಭಿಣಿ ಮತ್ತು ಶೋಷಿತ ವಿಧವೆಯರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ತಮ್ಮ ಸ್ವಂತ ಮನೆಯಲ್ಲಿ “ಶಿಶುಹತ್ಯೆ ತಡೆಗಟ್ಟುವ ಮನೆ” ಪ್ರಾರಂಭಿಸಿದರು. ಅವರು ಸತ್ಯ ಶೋಧಕ್‌ ಸಮಾಜವನ್ನು ಸ್ಥಾಪಿಸಿದರು. ವರದಕ್ಷಿಣೆ ಅಥವಾ ಬಹಿರಂಗ ವೆಚ್ಚಗಳಿಲ್ಲದೆ ಮದುವೆಯ ಅಭ್ಯಾಸವನ್ನು ಪ್ರಾರಂಭಿಸಿದರು. ಬಾಲ್ಯ ವಿವಾಹವನ್ನು ವಿರೋಧಿಸಿದರು. ಮತ್ತು ವಿಧವೆಯ ಮರುವಿವಾಹಗಳನ್ನು ಬೆಂಬಲಿಸಿದರು.

ಸಾಹಿತಿಯಾಗಿ ಸಾವಿತ್ರಿಬಾಯಿ ಫುಲೆಯವರು

  • ಸಾವಿತ್ರಿಬಾಯಿ ಫುಲೆಯವರು ಸಾಹಿತ್ಯ ಕ್ಷೇತ್ರದಲ್ಲೂ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದರು.
  • ೧೮೫೪ ರಲ್ಲಿ ಸಾವಿತ್ರಿಬಾಯಿಯವರು “ಕಾವ್ಯಫೂಲೆ” ಎನ್ನುವ ಕವನ ಸಂಕಲನವನ್ನು ಪ್ರಕಟಿಸಿದರು.
  • ಭವನಕಾಶಿ ಸುಬೋಧ ರತ್ನಾಕರ್“‌ ಎಂಬ ಕೃತಿಯು ಪ್ರಕಟವಾಗಿದೆ.
  • ಹೀಗೆ ಆತ್ಮಕಥನ, ಮುಂತಾದವುಗಳ ಮೂಲಕ ಸಾಹಿತ್ಯ ಕೇತ್ರದಲ್ಲಿ ಕೊಡುಗೆಯನ್ನು ನೀಡಿದ್ದಾರೆ.

ಸಾವಿತ್ರಿಬಾಯಿ ಫುಲೆಯವರ ಮರಣ

೧೮೯೭ ರಲ್ಲಿ ಪ್ಲೇಗ್‌ ಪೀಡಿತ ರೋಗಿಗಳ ಸೇವೆಯಲ್ಲಿ ತೊಡಗಿದ್ದಾಗ ಸ್ವತಃ ಸಾವಿತ್ರಿಬಾಯಿ ಫುಲೆಯವರೇ ಆ ಕಾಯಿಲೆಯ ಸೋಂಕಿಗೆ ಬಲಿಯಾಗಿ ತೀರಿಕೊಂಡರು.

FAQ

ಸಾವಿತ್ರಿಬಾಯಿ ಫುಲೆಯವರು ಎಲ್ಲಿ ಜನಿಸಿದರು ?

ಮಹಾರಾಷ್ಟ್ರದ ಸತಾರಾ ಜಿಲ್ಲೆಯ ನೈಗಾಂನ್‌ ನಲ್ಲಿ ಜನಿಸಿದರು.

ಸಾವಿತ್ರಿಬಾಯಿ ಫುಲೆಯವರು ಯಾವಾಗ ಮರಣವನ್ನು ಹೊಂದಿದರು ?

೧೮೯೭

ಭಾರತದ ಪ್ರಥಮ ಶಿಕ್ಷಕಿ ಯಾರು ?

ಸಾವಿತ್ರಿಬಾಯಿ ಫುಲೆ

ಸಾವಿತ್ರಿಬಾಯಿ ಫುಲೆಯವರ ಪತಿಯ ಹೆಸರೇನು ?

ಜ್ಯೋತಿ ಬಾಫುಲೆ

ಬ್ರಿಟಿಷರು ಸಾವಿತ್ರಿಬಾಯಿ ಫುಲೆಯವರಿಗೆ ಏನೆಂದು ಬಿರುದನ್ನು ನೀಡಿದರು.

ಬ್ರಿಟಿಷರು “ಇಂಡಿಯಾಸ್‌ ಫಸ್ಟ್ ಲೇಡಿ ಟೀಚರ್‌” ಎಂಬ ಬಿರುದನ್ನು ನೀಡಿದರು.

ಇತರೆ ವಿಷಯಗಳು :

ಮಹಿಳಾ ದೌರ್ಜನ್ಯ ಮತ್ತು ಕಾನೂನು ಬಗ್ಗೆ ಪ್ರಬಂಧ

Leave a Reply

Your email address will not be published. Required fields are marked *