ವಾಯು ಮಾಲಿನ್ಯ ಬಗ್ಗೆ ಪ್ರಬಂಧ | Essay on air pollution in Kannada

ವಾಯು ಮಾಲಿನ್ಯ ಬಗ್ಗೆ ಪ್ರಬಂಧ Essay on air pollution in Kannada Vayumalinyada Bagge Prabandha in Kannada

ವಾಯು ಮಾಲಿನ್ಯ ಬಗ್ಗೆ ಪ್ರಬಂಧ

Essay on air pollution in Kannada
Essay on air pollution in Kannada

ಈ ಲೇಖನಿಯಲ್ಲಿ ವಾಯು ಮಾಲಿನ್ಯ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.

ಪೀಠಿಕೆ

ಆರೋಗ್ಯಯುತವಾದ ಜೀವನವನ್ನು ನಡೆಸಬೇಕಾದರೆ ನಾವು ಉಸಿರಾಡುವ ಗಾಳಿಯು ಆರೋಗ್ಯಕ್ಕೆ ಹಿತವಾಗಿರಬೇಕು ಆದರೆ, ಹೆಚ್ಚುತ್ತಿರುವ ಕೈಗಾರಿಕೀಕರಣ ಮತ್ತು ಪರಿಸರದಲ್ಲಿ ವಿಷಕಾರಿ ಅನಿಲಗಳ ಸಾಂದ್ರತೆಯಿಂದಾಗಿ ಗಾಳಿಯು ದಿನದಿಂದ ದಿನಕ್ಕೆ ಹೆಚ್ಚು ಮಲಿನಕಾರಿಯಾಗುತ್ತಿದೆ. ಅಲ್ಲದೆ, ಈ ವಾಯು ಮಾಲಿನ್ಯದಿಂದ ಉಸಿರಾಟ ಮತ್ತು ಇತರ ಕಾಯಿಲೆಗಳಿಗೆ ಕಾರಣವಾಗುತ್ತವೆ. ವಾಯು ಇಲ್ಲದೆ ಪ್ರತಿಯೊಂದು ಜೀವಿಗೂ ಬದುಕಲು ಸಾಧ್ಯವಿಲ್ಲ.

ವಿಷಯ ವಿವರಣೆ

ಗಾಳಿಯು ಕಲುಷಿತವಾದರೆ ವಾಯು ಮಾಲಿನ್ಯವಾಗುತ್ತದೆ. ಸ್ವಾಭಾವಿಕ ಪರಿಸರಕ್ಕೆ ಹಾನಿಯನ್ನು ಮಾಡುವ ರಾಸಾಯನಿಕ ಸೂಕ್ಷ್ಮಕಣಗಳು ವಾತಾವರಣಕ್ಕೆ ಸೇರಿಕೊಳ್ಳುವುದಕ್ಕೆ ವಾಯು ಮಾಲಿನ್ಯ ಎನ್ನುವರು. ವಾಯುಮಾಲಿನ್ಯವು ಪ್ರಪಂಚದಾದ್ಯಂತದ ಜನರ ಆತಂಕವಾಗಿದೆ. ಪೆಟ್ರೋಲಿಯಂ, ಕಲ್ಲಿದ್ದಲು ಮತ್ತು ನೈಸರ್ಗಿಕ ಅನಿಲದಂತಹ ಪಳೆಯುಳಿಕೆ ಇಂಧನಗಳನ್ನು ಸುಡುವುದರಿಂದ ವಾಯು ಮಾಲಿನ್ಯವು ಹೆಚ್ಚಾಗಿ ಉಂಟಾಗುತ್ತಿದೆ. ವಾಹನಗಳು ಬಿಡುಗಡೆ ಮಾಡುವ ಹೊಗೆಯು ವಿಷಕಾರಿ ಕಣಗಳಿಂದ ಕೂಡಿರುತ್ತದೆ. ಈ ಮಾಲಿನ್ಯವು ಆಸ್ತಮಾ, ತಲೆನೋವು ಮತ್ತು ಅಲರ್ಜಿಯ ಇತರ ಲಕ್ಷಣಗಳಂತಹ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು. ವಿಶ್ವ ಆರೋಗ್ಯ ಸಂಸ್ಥೆಯು ವಾಯು ಮಾಲಿನ್ಯವನ್ನು ಮಾನವನ ಆರೋಗ್ಯಕ್ಕೆ ಪರಿಸರ ಅಪಾಯ ಎಂದು ವರ್ಗೀಕರಿಸಿದೆ.

ವಾಯು ಮಾಲಿನ್ಯಕ್ಕೆ ಕಾರಣಗಳು

  • ವಾಯು ಮಾಲಿನ್ಯಕ್ಕೆ ಪ್ರಮುಖವಾದ ಅಂಶವಾಗಿದೆ. ಜ್ವಾಲಮುಖಿಯ ಸ್ಪೋಟದಿಂದ ಬರುವ ಹೊಗೆ ಗಾಳಿಯಲ್ಲಿ ಸೇರಿ ಮಾಲಿನ್ಯವಾಗುತ್ತದೆ.
  • ಕಾರ್ಖಾನೆಗಳಿಂದ ಹೊರ ಸೂಸುವ ತ್ಯಾಜ್ಯ ಹೊಗೆಯಿಂದ ವಾಯು ಮಾಲಿನ್ಯವಾಗುತ್ತದೆ.
  • ಮನೆ ಸುತ್ತ ಮುತ್ತಲಿನ ಕಸವನ್ನು ಸುಡುವುದರಿಂದ ಮಾಲಿನ್ಯವಾಗುತ್ತದೆ.
  • ಕೊಳೆತ ಸಸ್ಯದಿಂದ ಬಿಡುಗಡೆಯಾಗುವ ಅನಿಲದಿಂದ ಮಾಲಿನ್ಯವಾಗುತ್ತದೆ.
  • ದೊಡ್ಡ ನಗರಗಳು ವಾಯು ಮಾಲಿನ್ಯವಾಗಿವೆ.
  • ಅರಣ್ಯ ನಾಶದಿಂದ ವಾಯು ಮಾಲಿನ್ಯವನ್ನು ಉಂಟು ಮಾಡುತ್ತದೆ.
  • ವಾಹನಗಳಿಂದ ಬಿಡುಗಡೆಯಾಗುವ ಕಾರ್ಬನ್‌ ಡೈ ಆಕ್ಸೈಡ್‌ ಗಾಳಿಯಲ್ಲಿ ಸೇರಿ ವಾಯು ಮಾಲಿನ್ಯವಾಗುತ್ತದೆ.
  • ಕಾರ್ಬನ್‌ ಡೈ ಆಕ್ಸೈಡ್‌ ಹೆಚ್ಚಳದಿಂದ ಹಸಿರು ಮನೆ ಪರಿಣಾಮ ಉಂಟಾಗುತ್ದೆ.
  • ಗಾಳಿಯಲ್ಲಿರುವ ಹಾನಿಕಾರಕ ವಸ್ತುಗಳು ವಾಯು ಮಾಲಿನ್ಯಕ್ಕೆ ಕಾರಣವಾಗುತದೆ.

ವಾಯು ಮಾಲಿನ್ಯದಿಂದಾಗುವ ಪರಿಣಾಮಗಳು

  • ವಾಯು ಮಾಲಿನ್ಯದಿಂದ ಆರೋಗಯಕ್ಕೆ ಸಂಬಂದಿಸಿದಂತೆ ಅಸ್ತಮಾ, ಉಸಿರಾಟಕ್ಕೆ ಸಂಬಂದಿಸಿದ ತೊಂದರೆಗಳು, ಬ್ರಾಂಕೈಟಿಸ್‌, ಕ್ಯಾನ್ಸರ್‌ ಇನ್ನು ಮುಂತಾದ ರೋಗಗಳು ಬರುತ್ತವೆ. ಭೂಮಿಯ ವಾತವರಣದ ಸರಾಸರಿ ಉಷ್ಣತೆಯು ನಿಧಾನವಾಗಿ ಹೆಚ್ಚಾಗುತ್ತದೆ. ಇದರಿಂದ ಜಾಗತಿಕ ತಾಪಮಾನದ ಏರಿಕೆಯಾಗಿ ವಾಯು ಮಾಲಿನ್ಯವು ಹೆಚ್ಚಾಗುತ್ತದೆ.
  • ವಾತಾವರಣದಲ್ಲಿ ಬದಲಾವಣೆಗಳು.
  • ಹೃದಯಕ್ಕೆ ಸಂಬಂದಿಸಿದ ತೊಂದರೆಗಳು ಉಂಟಾಗುತ್ತವೆ.
  • ಚರ್ಮರೋಗಗಳು ಬರುತ್ತವೆ.
  • ಕಲುಷಿತ ಗಾಳಿಯಿಂದ ಜೀವಿತಾವಧಿಯು ಕಡಿಮೆಯಾಗುತ್ತದೆ.
  • ವಾಯು ಮಾಲಿನ್ಯದಿಂದ ಓಜೋನ್‌ ಪದರವು ತೆಳುವಾಗುತ್ದೆ. ಮತ್ತು ಕ್ಷೀಣಿಸುತ್ತದೆ.
  • ಕಣ್ಣಿನ ಸಮಸ್ಯಗಳು ಕೂಡ ಕಂಡುಬರುತ್ತವೆ.

ವಾಯು ಮಾಲಿನ್ಯಕ್ಕೆ ಪರಿಹಾರಗಳು

  • ವಾಯು ಮಾಲಿನ್ಯವನ್ನು ಕಡಿಮೆ ಮಾಡಬೇಕು. ಇದಕ್ಕಾಗಿ ಕಾನೂನು ಕ್ರಮಗಳನ್ನು ಕೂಡ ಮಾಡಬೇಕು. ಗಿಡದಿಂದ ಉದುರಿದ ಎಲೆಗಳನ್ನು ಸುಡುವುದರ ಬದಲಾಗಿ ಗೊಬ್ಬರದ ಗುಂಡಿಗೆ ಹಾಕುವುದು.
  • ಅರಣ್ಯ ನಾಶವನ್ನು ತಡೆಯುವುದು ಮತ್ತು ಗಿಡಗಳನ್ನು ಹೆಚ್ಚಾಗಿ ಬೆಳೆಸಬೇಕು.
  • ಡೀಸೆಲ್‌ ಮತ್ತು ಪೆಟ್ರೋಲ್‌ ಚಾಲಿತ ವಾಹನಗಳ ಬದಲಿಯಾಗಿ CNG ಮತ್ತು ಸೀಸರಹಿತ ಪೆಟ್ರೋಲ್‌ ಬಳಸುವುದು.
  • ಪ್ರಯಾಣ ಮಾಡುವಾಗ ಸಾರ್ವಜನಿಕ ವಾಹನಗಳನ್ನು ಹೆಚ್ಚಾಗಿ ಬಳಸುವದು.
  • ಒಂದು ಮನೆಗೆ ಮೂರು ನಾಲ್ಕು ವಾಹನಗಳ ಬದಲಿಯಾಗಿ ಒಂದು ಮನೆಗೆ ಒಂದೇ ವಾಹನವನ್ನು ಇಟ್ಟುಕೊಳ್ಳುವುದು.
  • ಪ್ಲಾಸ್ಟಿಕ್‌ ಬಳಕೆ ಕಡಿಮೆ ಮಾಡುವುದು.
  • ತುಂಬಾ ಹತ್ತಿರವಿರು ಸ್ಥಳಕ್ಕೆ ಹೋಗುವಾಗ ವಾಹನ ಬಳಕೆ ಮಾಡದೆ ನಡೆದುಕೊಂಡು ಹೋಗುವುದು.
  • ಮರು ಬಳಕೆಯಾಗುವ ವಸ್ತುಗಳನ್ನು ಬಳಸುವುದು.
  • ಹಾಗೆ ಕಲವು ಕಾನೂನು ಕ್ರಮಗಳನ್ನು ಜಾರಿಗೆ ತರುವುದು.

ಉಪಸಂಹಾರ

ನಮ್ಮ ಮುಂದಿನ ಪೀಳಿಗೆಗೆ ಆರೋಗ್ಯಯುತವಾದ ವಾತಾವರಣವನ್ನು ಕೊಡುಗೆಯಾಗಿ ಕೊಡಬೇಕು. ಅದಕ್ಕಾಗಿ ಯಾವುದೇ ಮಾಲಿನ್ಯವಾಗದಂತೆ ಎಚ್ಚರಿಕೆಯನ್ನು ವಹಿಸಬೇಕು. ಯಾವುದೇ ಮಾಲಿನ್ಯವಾಗದಂತೆ ನಮ್ಮ ಪರಿಸರವನ್ನು ನೋಡಿಕೊಳ್ಳಬೇಕು. ಇದನ್ನು ನಿಯಂತ್ರಿಸುವುವುದು ಅಗತ್ಯವಾಗಿದೆ. ಇಲ್ಲದಿದ್ದರೆ ಭೂಮಿಯ ಮೇಲಿನ ಜೀವಿಗಳ ಕುರುಹುಗಳು ನಶಿಸಿದಂತಾಗುತ್ದೆ. ವಾಯು ಮಾಲಿನ್ಯದ ಬಗ್ಗೆ ಜನರಿಗೆ ತಿಳಿಸಿ ಜಾಗೃತಿಯನ್ನು ಮೂಡಿಸುವುದು. ಇದರ ಬಗ್ಗೆ ಕೆಲವು ಕ್ರಮಗಳನ್ನು ಕೈಗೊಂಡು ನಾವು ವಾಯು ಮಾಲಿನ್ಯವನ್ನು ನಿಯಂತ್ರಿಸಬಹುದು.

FAQ

ವಾಯು ಮಾಲಿನ್ಯಕ್ಕೆ ಪರಿಹಾರಗಳನ್ನು ತಿಳಿಸಿ ?

ವಾಯು ಮಾಲಿನ್ಯವನ್ನು ಕಡಿಮೆ ಮಾಡಬೇಕು. ಇದಕ್ಕಾಗಿ ಕಾನೂನು ಕ್ರಮಗಳನ್ನು ಕೂಡ ಮಾಡಬೇಕು. ಗಿಡದಿಂದ ಉದುರಿದ ಎಲೆಗಳನ್ನು ಸುಡುವುದರ ಬದಲಾಗಿ ಗೊಬ್ಬರದ ಗುಂಡಿಗೆ ಹಾಕುವುದು.
ಅರಣ್ಯ ನಾಶವನ್ನು ತಡೆಯುವುದು ಮತ್ತು ಗಿಡಗಳನ್ನು ಹೆಚ್ಚಾಗಿ ಬೆಳೆಸಬೇಕು.
ಡೀಸೆಲ್‌ ಮತ್ತು ಪೆಟ್ರೋಲ್‌ ಚಾಲಿತ ವಾಹನಗಳ ಬದಲಿಯಾಗಿ CNG ಮತ್ತು ಸೀಸರಹಿತ ಪೆಟ್ರೋಲ್‌ ಬಳಸುವುದು.

ವಾಯು ಮಾಲಿನ್ಯದಿಂದಾಗುವ ಪರಿಣಾಮಗಳನ್ನು ತಿಳಿಸಿ ?

ವಾಯು ಮಾಲಿನ್ಯದಿಂದ ಆರೋಗಯಕ್ಕೆ ಸಂಬಂದಿಸಿದಂತೆ ಅಸ್ತಮಾ, ಉಸಿರಾಟಕ್ಕೆ ಸಂಬಂದಿಸಿದ ತೊಂದರೆಗಳು, ಬ್ರಾಂಕೈಟಿಸ್‌, ಕ್ಯಾನ್ಸರ್‌ ಇನ್ನು ಮುಂತಾದ ರೋಗಗಳು ಬರುತ್ತವೆ. ಭೂಮಿಯ ವಾತವರಣದ ಸರಾಸರಿ ಉಷ್ಣತೆಯು ನಿಧಾನವಾಗಿ ಹೆಚ್ಚಾಗುತ್ತದೆ. ಇದರಿಂದ ಜಾಗತಿಕ ತಾಪಮಾನದ ಏರಿಕೆಯಾಗಿ ವಾಯು ಮಾಲಿನ್ಯವು ಹೆಚ್ಚಾಗುತ್ತದೆ.

ಇತರೆ ವಿಷಯಗಳು :

ಮಹಿಳಾ ದೌರ್ಜನ್ಯ ಮತ್ತು ಕಾನೂನು ಬಗ್ಗೆ ಪ್ರಬಂಧ

ಸಾವಿತ್ರಿಬಾಯಿ ಫುಲೆ ಜೀವನ ಚರಿತ್ರೆ

Leave a Reply

Your email address will not be published. Required fields are marked *