ಕಂಪ್ಯೂಟರ್ ಬಗ್ಗೆ ಪ್ರಬಂಧ Essay on computer Computer Bagge Prabandha in Kannada
ಕಂಪ್ಯೂಟರ್ ಬಗ್ಗೆ ಪ್ರಬಂಧ
ಈ ಲೇಖನಿಯಲ್ಲಿ ಕಂಪ್ಯೂಟರ್ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.
ಪೀಠಿಕೆ
ಅತಿ ವೇಗವಾಗಿ ಹಾಗೂ ನಿಖರತೆಯಿಂದ ಕಾರ್ಯನಿರ್ವಹಿಸುವ ಇಲೆಕ್ಟ್ರಾನಿಕ್ ಯಂತ್ರವಾಗಿದೆ. ಕಂಪ್ಯೂಟರ್ ಎಂಬುದು ಈಗಿನ ಕಾಲದಲ್ಲಿ ಕಷ್ಡಕರವಾದ ಕೆಲಸಗಳನ್ನು ಸುಲಭದ ವಿಧಾನದಲ್ಲಿ ಮಾಡಲು ಸಹಾಯ ಮಾಡುವ ಉಪಯುಕ್ತ ಸಾಧನವಾಗಿದೆ. ಹಾಗುಹತ್ತು ಜನ ಮಾಡುವಂತ ಕೆಲಸವನ್ನ ಕಂಪ್ಯೂಟರ್ ಒಂದೇ ಮಾಡುವಂತ ಒಂದು ಅದ್ಬುತವಾದ ತಂತ್ರಜ್ಞಾನ ಸಾಧನವಾಗಿದೆ. ಕಂಪ್ಯೂಟರ್‌ಗೆ ಇನ್ನೊಂದು ಹೆಸರಿನಿಂದಲೂ ಕರೆಯುತ್ತಾರೆ ಅದು ಗಣಕಯಂತ್ರ ಎಂದು ಕರೆಯುತ್ತಾರೆ. ಇದನ್ನು ಅನ್ವೇಷಣೆ ಮಾಡಿ ಬಳಕೆಗೆ ತಂದವರು “ಚಾರ್ಲ್ಸ್ ಬ್ಯಾಬೇಜ್” ರವರು. ಕಂಪ್ಯೂಟರ್ ಇತ್ತೀಚಿನ ದಿನಗಳಲ್ಲಿ ಬಹಳ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಇದಕ್ಕೆ ನಾವೆಲ್ಲರೂ ಹೆಚ್ಚು ಅವಲಂಬಿತವಾಗಿ ಬದುಕುತ್ತಿದ್ದೇವೆ. ಏಕೆಂದರೆ ಅದು ತುಂಬಾ ನಿಖರವಾಗಿದೆ, ವೇಗವಾಗಿದೆ ಮತ್ತು ಅನೇಕ ಕಾರ್ಯಗಳನ್ನು ಸುಲಭವಾಗಿ ಸಾಧಿಸಬಹುದು.
ವಿಷಯ ವಿವರಣೆ
ಬಳಕೆದಾರನ ನಿರ್ದೆಶನಗಳಗೆ ಅನುಗುಣವಾಗಿ ದತ್ತಾಂಶಗಳನ್ನು ಸ್ವಿಕರಿಸಿ, ಸಂಸ್ಕರಿಸಿ ಫಲಿತಾಂಶವನ್ನು ನೀಡುವ ವಿದ್ಯುನ್ಮಾನ ಸಾಧನವಾಗಿದೆ. ಕಂಪ್ಯೂಟರ್ ಮಾನವರು ತಯಾರಿಸಿದ ಯಂತ್ರವು. ಆದರೆ ಮಾನವನಿಗಿಂತ ತುಂಬಾ ವೇಗವಾಗಿ, ಹೆಚ್ಚು ಕೆಲಸಗಳನ್ನ ಮತ್ತು ಸುಲಭವಾಗಿ ಕಂಪ್ಯೂಟರ್ ತನ್ನ ಕಾರ್ಯವನ್ನು ನಿರ್ವಹಿಸುವಂತಹ ಒಂದು ಅದ್ಬುತ ಯಂತ್ರವಾಗಿದೆ. ಈ ಕಾರಣದಿಂದಾಗಿ ಇದನ್ನು ಮಾನವ ಮೆದುಳಿಗೆ ಹೋಲಿಸುತ್ಸಂತಾರೆ. ಸಂಕಲನ, ವ್ಯವಕಲನ, ಭಾಗಾಕಾರ ಮತ್ತು ಗುಣಾಕಾರದಂತಹ ಲೆಕ್ಕಗಳನ್ನು ಸುಲಭವಾಗಿ ಮಾಡಲು ಇದರಿಂದ ಹೆಚ್ಚು ಸಹಾಯಕವಾಗಿದೆ. ಇಂದು ಶಾಲೆಗಳು, ಕಾಲೇಜುಗಳು, ಬ್ಯಾಂಕ್‌ಗಳು, ಆಸ್ಪತ್ರೆಗಳು, ರೈಲು ನಿಲ್ದಾಣಗಳು ಮತ್ತು ವಿಮಾನ ನಿಲ್ದಾಣಗಳು ಮುಂತಾದ ಪ್ರಪಂಚದ ಪ್ರತಿಯೊಂದು ಕ್ಷೇತ್ರದಲ್ಲೂ ಕಂಪ್ಯೂಟರ್‌ಗಳನ್ನು ಬಳಸಲಾಗುತ್ತಿದೆ. ಇಲ್ಲದಿದ್ದರೆ ಆ ಕೆಲಸಗಳನ್ನು ಕೈಯಾರೆ ಮಾಡಲು ಹೆಚ್ಚು ಸಮಯವನ್ನು ತೆಗೆದುಕೊಳ್ಳತ್ತದೆ. ಇದು ಕೇವಲ ಒಂದು ಸೆಕೆಂಡಿನ ಭಾಗದಲ್ಲಿ ಬಹಳ ದೊಡ್ಡ ಲೆಕ್ಕಾಚಾರಗಳನ್ನು ಮಾಡಬಹುದು.ಇದರಲ್ಲಿ ದೊಡ್ಡ ಪ್ರಮಾಣದಲ್ಲಿ ಡೇಟಾವನ್ನು ಸಂಗ್ರಹಿಸಿಡಬಹುದು. ಶಿಕ್ಷಣ ಕ್ಷೇತ್ರದಲ್ಲಿ ಕಂಪ್ಯೂಟರ್‌ಗಳ ಆವಿಷ್ಕಾರದ ಮೊದಲು, ವಿದ್ಯಾರ್ಥಿಗಳಿಗೆ ಶಿಕ್ಷಣದ ವ್ಯಾಪ್ತಿ ಕೇವಲ ಪುಸ್ತಕಗಳಿಗೆ ಸೀಮಿತವಾಗಿತ್ತು. ಯಾವುದೇ ಕಲ್ಪನೆ ಅಥವಾ ಸಹಾಯವಿಲ್ಲದೆ ಅವರು ತಮ್ಮ ಯೋಜನೆಗಳನ್ನು ಪೂರ್ಣಗೊಳಿಸಲು ಕಷ್ಟಪಡುತ್ತಿದ್ದರು. ಆದರೆ ಈಗ, ಕಂಪ್ಯೂಟರ್‌ಗಳು ಅವರ ಜೀವನವನ್ನು ಸುಲಭಗೊಳಿಸಿವೆ.
ಕಂಪ್ಯೂಟರ್ ಗಳ ಬಳಕೆ
- ಶೈಕ್ಷಣಿಕ ಕ್ಷೇತ್ರಗಳಲ್ಲಿ ಬಳಕೆ ಮಾಡುತ್ತಾರೆ.
- ವಿಜ್ಞಾನ ಮತ್ತು ತಂತ್ರಜ್ಞಾನದ ಬಳಕೆಗೆ ಬಳಸುತ್ತಾರೆ.
- ವ್ಯಾಪಾರ, ವ್ಯವಹಾರ ಕ್ಷೇತ್ರಗಳಲ್ಲಿ ಬಳಕೆ.
- ಖಾಸಗಿ ಕಛೇರಿ ಮತ್ತು ಸರ್ಕಾರಿ ಕಛೇರಿಗಳಲ್ಲಿ ಬಳಕೆ ಮಾಡುತ್ತಾರೆ.
- ಆರೋಗ್ಯ ಕ್ಷೇತ್ರಗಳಲ್ಲಿ ಬಳಕೆ ಮಾಡುತ್ತಾರೆ.
- ಬಾಹ್ಯಾಕಾಶ ವಿಜ್ಞಾನ, ಉಡಾವಣೆ ಮತ್ತು ಕೃತಕ ಉಪಗ್ರಹಗಳ ಕಾರ್ಯಾಚರಣೆಯಲ್ಲಿ ಕಂಪ್ಯೂಟರ್‌ಗಳನ್ನು ಬಳಸುತ್ತಾರೆ.
- ಬ್ಯಾಂಕ್‌ಗಳಲ್ಲಿನ ಎಲ್ಲಾ ಲೆಕ್ಕಪತ್ರಗಳನ್ನು ಕಂಪ್ಯೂಟರ್ ನ ಮೂಲಕ ಕಾರ್ಯನಿರ್ವಹಿಸಬೇಕಾಗುತ್ತದೆ.
- ರೈಲ್ವೇ ಕಚೇರಿಗಳಲ್ಲಿ ಟಿಕೆಟ್ ಕಾಯ್ದಿರಿಸುವುದರಿಂದ ಹಿಡಿದು ರೈಲು ಕಾರ್ಯಾಚರಣೆಯವರೆಗೆ ಅವುಗಳನ್ನು ಬಳಸಲಾಗುತ್ತಿದೆ.
- ಕಂಪನಿಗಳಲ್ಲಿ ಬಳಕೆ.
- ಕಂಪ್ಯೂಟರ್‌ಗಳ ಬಳಕೆಯನ್ನು ವಿಶೇಷವಾಗಿ ವಿಮಾನ ಕಾರ್ಯಾಚರಣೆ, ದೂರಸಂಪರ್ಕ, ಬೃಹತ್ ಕೈಗಾರಿಕೆಗಳ ಕಾರ್ಯಾಚರಣೆ, ಕಾರ್ಯತಂತ್ರದ ಚಟುವಟಿಕೆಗಳು, ಕ್ಷಿಪಣಿಗಳು ಮತ್ತು ಖಗೋಳ ಜ್ಞಾನ ಕ್ಷೇತ್ರದಲ್ಲಿ ಮಾಡಲಾಗುತ್ತಿದೆ. ಪ್ರಸ್ತುತ ಸಮಯದಲ್ಲಿ ಕಂಪ್ಯೂಟರ್ ಅನ್ನು ಪ್ರತಿಯೊಂದು ಕೆಲಸದಲ್ಲೂ ಬಳಸಲಾಗುತ್ತಿದೆ.
- ಕೈಗಾರಿಕೆ, ವ್ಯಾಪಾರ, ಸಂಚಾರ, ರೈಲ್ವೆ ಮೀಸಲಾತಿ, ವಿದ್ಯುತ್, ನೀರು, ಇತ್ಯಾದಿ, ಪರೀಕ್ಷೆಗೆ ಸಂಬಂಧಿಸಿದ ಎಲ್ಲಾ ಕೆಲಸಗಳು, ಮನರಂಜನೆಯ ಬಳಕೆ ಮತ್ತು ದೊಡ್ಡ ವ್ಯಾಪಾರ ಸಂಸ್ಥೆಗಳ ಕಾರ್ಯಾಚರಣೆ ಇತ್ಯಾದಿಗಳಲ್ಲಿ ಕಂಪ್ಯೂಟರ್ ಪ್ರಾಮುಖ್ಯತೆ ಇದೆ. ಹಾಗೆ ಈಗಲಂತೂ ಮನೆ ಮನೆಯಲ್ಲೂ ಕಂಪ್ಯೂಟರ್ ಗಳಿವೆ. ಇದೊಂದು ಕಂಪ್ಯೂಟರ್ ನ ಯುಗವಾಗಿದೆ.
ಕಂಪ್ಯೂಟರ್ ನ ಪ್ರಯೋಜನಗಳು
- ಆಧುನಿಕ ಯುಗದಲ್ಲಿ ಕಂಪ್ಯೂಟರ್‌ನಿಂದ ಅತೀ ವೇಗವಾಗಿ, ಸುಲಭವಾಗಿ, ಸ್ಪಷ್ಟವಾಗಿ ಅಂದರೆ ಯಾವುದೇ ತಪ್ಪುಗಳಿಲ್ಲದೆ, ಹೆಚ್ಚಿನ ಕೆಲಸಗಳನ್ನು ನಿರ್ವಹಿಸಲು ಸಾಧ್ಯವಾಗುತ್ತದೆ.
- ನಾವು ಎಲ್ಲಾ ರೀತಿಯ ಬಿಲ್‌ಗಳನ್ನು ಕಂಪ್ಯೂಟರ್ ಮೂಲಕ ಪಾವತಿಸಬಹುದು. ಶಾಪಿಂಗ್ ಮಾಲ್‌ಗಳಲ್ಲಿ ಅಥವಾ ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡಬಹುದು.
- ಇಮೇಲ್, ಸಂದೇಶವನ್ನು ಕಳುಹಿಸಬಹುದು.
- ವಿದ್ಯಾರ್ಥಿಗಳು ಅದ್ಯಯನದ ವಿಷಯಗಳಿಗೆ ಸಂಬಂದಿಸಿದಂತೆ ವಿಷಯಕ್ಕೆ ತಕ್ಕಂತೆ ಚಿತ್ರಗಳನ್ನು ನೋಡಲು ಸಹಕಾರಿಯಾಗಿದೆ. ಇದು ಮಕ್ಕಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ ಮತ್ತು ವಿದ್ಯಾರ್ಥಿಗಳು ತಮ್ಮ ಶಾಲೆ ಮತ್ತು ಪ್ರಾಜೆಕ್ಟ್ ಕೆಲಸಗಳಿಗೆ ಇದನ್ನ ಬಳಕೆಮಾಡಿಕೊಳ್ಳಬಹುದು.
- ರೈಲುಗಳು ಮತ್ತು ವಿಮಾನಗಳ ಆಗಮನ ಮತ್ತು ನಿರ್ಗಮನವನ್ನು ನಿಯಂತ್ರಿಸುತ್ತದೆ.
- ಪುಸ್ತಕಗಳು ಮತ್ತು ಸುದ್ದಿ ಪತ್ರಿಕೆಗಳನ್ನು ಮುದ್ರಿಸುವಲ್ಲಿ ಕಂಪ್ಯೂಟರ್ ಹೆಚ್ಚು ಅವಶ್ಯಕವಾಗಿದೆ
- ರೋಗಿಗಳ ವೈದ್ಯಕೀಯ ಇತಿಹಾಸ ಮತ್ತು ವಿಶೇಷವಾಗಿ ಶಸ್ತ್ರಚಿಕಿತ್ಸೆಗಳು ಮತ್ತು ಕಾಯಿಲೆಯ ದಾಖಲೆಗಳನ್ನು ಇಟ್ಕೊಟುಕೊಳ್ಳ್ಳಲು ಆಸ್ಪತ್ರೆಯಲ್ಲಿ ಕಂಪ್ಯೂಟರ್‌ಗಳನ್ನು ಬಳಸಲಾಗುತ್ತದೆ.
- ಅಪರಾಧಿಗಳ ದಾಖಲೆಗಳನ್ನು ಇಡಲು ಪೊಲೀಸರು ಕಂಪ್ಯೂಟರ್‌ಗಳನ್ನು ಸಹ ಬಳಸುತ್ತಾರೆ.
- ಖಾತೆಗಳು, ಸ್ಟಾಕ್, ಇನ್‌ವಾಯ್ಸ್‌ಗಳು ಮತ್ತು ವೇತನದಾರರ ಇತ್ಯಾದಿಗಳನ್ನು ನಿರ್ವಹಿಸಲು ಕಂಪ್ಯೂಟರ್‌ಗಳನ್ನು ಬಳಸುತ್ತಾರೆ.
ಉಪಸಂಹಾರ
ಪ್ರಸ್ತುತವಾಗಿ “ಅಕ್ಷರ ಕಲಿಯದವನು ಮಾತ್ರ ಅನಕ್ಷರಸ್ಥನಲ್ಲ, ಜೊತೆಗೆ ಕಂಪ್ಯೂಟರ್ ಜ್ಞಾನವಿಲ್ಲದವನು ಕೂಡ ಅನಕ್ಷರಸ್ಥನು” ಎನ್ನುವಂತ ಪರಿಸ್ಥಿತಿಗೆ ನಾವು ತಲುಪಿದ್ದೇವೆ. ನಾವು ಕಂಪ್ಯೂಟರ್ ಗೆ ಅಷ್ಟೋಂದು ಅವಲಂಬಿತವಾಗಿದ್ದೇವೆ. ಆಧುನಿಕ ಯುಗವು ಕಂಪ್ಯೂಟರ್ ನ ಯುಗವಾಗಿ ಬದಲಾಗದೆ.
FAQ
ಕಂಪ್ಯೂಟರ್ ನ ಪಿತಾಮಹಾ ಯಾರು ?
“ಚಾರ್ಲ್ಸ್ ಬ್ಯಾಬೇಜ್”
ಕಂಪ್ಯೂಟರ್ ನ ಮೆದುಳು ಯಾವುದು ?
CPU
ಇತರೆ ವಿಷಯಗಳು :
ಮಹಿಳಾ ದೌರ್ಜನ್ಯ ಮತ್ತು ಕಾನೂನು ಬಗ್ಗೆ ಪ್ರಬಂಧ
ರಾಷ್ಟ್ರೀಯ ಯುವ ದಿನದ ಬಗ್ಗೆ ಪ್ರಬಂಧ