ಸಂವಿಧಾನದ ರಚನೆಯ ಬಗ್ಗೆ ಮಾಹಿತಿ | Information About The Structure Of The Constitution in Kannada

ಸಂವಿಧಾನದ ರಚನೆಯ ಬಗ್ಗೆ ಮಾಹಿತಿ Information About The Structure Of The Constitution Samvidhanada Rachaneya Bagge Mahiti in Kannada

ಸಂವಿಧಾನದ ರಚನೆಯ ಬಗ್ಗೆ ಮಾಹಿತಿ

Information About The Structure Of The Constitution in Kannada

ಈ ಲೇಖನಿಯಲ್ಲಿ ಸಂವಿಧಾನದ ರಚನೆಯ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.

ಸಂವಿಧಾನದ ರಚನೆ

ದೇಶದ ಆಡಳಿತ ಸುಗಮವಾಗಿ ಸಾಗಬೇಕಾದರೆ ಸರ್ಕಾರ ಮತ್ತು ಪ್ರಜೆಗಳ ಮಧ್ಯ ಉತ್ತಮ ಸಂಬಂಧ ಇರಬೇಕು. ಆ ಸಂಬಂಧವನ್ನು ತಿಳಿಸಲು ಕೆಲವು ನಿಯಮವಳಿಯ ಚೌಕಟ್ಟೇ ಸಂವಿಧಾನವಾಗಿದೆ. ೧೯೨೨ ರಲ್ಲಿ ಸಂವಿಧಾನದ ಪರಿಕಲ್ಪನೆಯನ್ನು ಪ್ರತಿಪಾದಿಸಿದವರು ಮಹಾತ್ಮ ಗಾಂಧೀಜಿಯವರದ್ದಾಗಿದೆ. ೧೯೩೪ ರಲ್ಲಿ ಬ್ರಿಟಿಷರ ಮುಂದೆ ಲಿಖಿತ ಸಂವಿಧಾನದ ಬೇಡಿಕೆಯನ್ನು ಇಟ್ಟ ಮೊದಲ ವ್ಯಕ್ತಿ ಎಮ್‌. ಎನ್‌ ರಾಯ್ ರವರು. ೧೯೩೫ ರಲ್ಲಿ ಸಂವಿಧಾನದ ಬೇಡಿಕೆಯನ್ನು ಇಟ್ಟ ಮೊದಲ ಪಕ್ಷ ಕಾಂಗ್ರೆಸ್ ಪಕ್ಷವಾಗಿದೆ. ಇದರ ಸ್ಥಾಪಕರು ಎ . ಓ. ಹ್ಯೂಮ್ ರವರು. ೧೯೩೮ ರಲ್ಲಿ ಸಂವಿಧಾನ ರಚನೆಗೆ ಸಂಬಂಧಿಸಿದ ಹಾಗೆ ಜವಾಹರಲಾಲ ನೆಹರು ಅವರು ಸಂವಿಧಾನ ರಚನೆಯು ಹೆರ ವ್ಯಕ್ತಿಗಳಿಂದ ಕೂಡಿದರೆ ವಯಸ್ಕರ ಮತದಾನದ ಮೂಲಕ ಒಂದು ಸಮಿತಿಯನ್ನು ರಚಿಸಿ ಅವರಿಂದ ಸಂವಿಧಾನ ರಚನೆಯಾಗಬೇಕೆಂದು ಬೇಡಿಕೆ ಇಟ್ಟರು.

ಆಗಸ್ಟ ಕೊಡುಗೆ :

ಬ್ರಿಟಿಷರು ಭಾರತೀಯರನ್ನು ಉದ್ದೇಶಿಸಿ ನೀವು ೨ನೇ ಮಹಾಯುದ್ದಕ್ಕೆ ಸಹಕರಿಸಿ ೨ನೇ ಮಹಾಯುದ್ದದ ನಂತರ ಸಂವಿಧಾನದ ರಚನೆಗೆ ಅವಕಾಶವನ್ನು ಕಲ್ಪಿಸಿ ಕೊಡಲಾಗುವುದು. ಎಂದು ೧೯೪೦ ಆಗಸ್ಟ ೮ ರಂದು ಬ್ರಿಟಿಷರು ಒಪ್ಪಗೆ ಸೂಚಿಸಿದರು. ಈ ಒಪ್ಪಗೆ ಸೂಚಿಸಿದ ದಿನವನ್ನು ಆಗಸ್ಟ ಕೊಡುಗೆ ಎಂದು ಕರೆಯಲಾಗುತ್ತದೆ.

ಕ್ರಿಪ್ಸ ಆಯೋಗ :

೧೯೪೨ ಮಾರ್ಚ್‌ ೨೨ ರಂದು ಸ್ಟ್ಯಾಪೋರ್ಡ ಕ್ರಿಪ್ಸರವರ ನೇತೃತ್ವದಲ್ಲಿ ಈ ಆಯೋಗವು ಭಾರತಕ್ಕೆ ಬಂದಿತು. ಈ ಆಯೋಗವು ಸಹ ಭಾರತೀಯರನ್ನು ಉದ್ದೇಶಿ ನೀವು ೨ನೇ ಮಹಾಯುದ್ದಕ್ಕೆ ಸಹಕರಿಸಿ ಯುದ್ಧ ಮಗಿದ ನಂತರ ಸಂವಿಧಾನದ ರಚನೆಗೆ ಅವಕಾಶ ಕಲ್ಪಿಸಿಕೊಡಲಾಗುವುದು ಎಂದು ತಿಳಿಸಿತು. ಆದರೆ ಮುಸ್ಲಿಂ ಲೀಗ್‌ ನಾಯಕರಾದ ಮಹಮ್ಮದ್‌ ಆಲಿ ಜಿನ್ನಾ ತಿರಸ್ಕರಿಸಿದರು.

ಕ್ಯಾಬಿನೆಟ್‌ ಆಯೋಗ :

೧೯೪೬ ಮಾರ್ಚ್‌ ೨೪ ರಂದು ಲೇಬರ್‌ ಪಕ್ಷದ ನಾಯಕರಾದ ಕ್ಪೈಮೆಂಟ್‌ ಅಟ್ಲಿಯವರ ನೇತೃತ್ವದಲ್ಲಿ ಜೊತೆಗೆ ಮೂರು ಜನ ಸದಸ್ಯರನ್ನು ಒಳಗೊಂಡಂತೆ ಈ ಆಯೋಗವು ಭಾರತಕ್ಕೆ ಬಂದಿತು.

ಸಂವಿಧಾನ ರಚನಾ ಸಭೆಗಳು

ಮೊದಲ ಸಭೆ :

೧೯೪೬ ಡಿಸೆಂಬರ್‌ ೯ ರಂದು ಸೋಮವಾರ ಬೆಳಿಗ್ಗೆ ೧೧ ಗಂಟೆಗೆ ದೆಹಲಿಯ ಸೆಂಟ್ರಲ್‌ ಹಾಲ್‌ ನಲ್ಲಿ ನಡೆಯಿತು. ಈ ಸಭೆಯ ಹಂಗಾಮಿ ಅಧ್ಯಕ್ಷರಾಗಿ ಸಚ್ಚಿದಾನಂದ ಸಿಹ್ಹಾರವರು ಆಯ್ಕೆಯಾದರು.

ಎರಡನೆ ಸಭೆ :

೧೯೪೬ ಡಿಸೆಂಬರ್‌ ೧೧ ರಂದು ಬುಧವಾರ ದೆಹಲಿಯಲ್ಲಿಯೇ ಈ ಸಭೆ ನಡೆಯಿತು. ಈ ಸಭೆಯ ಖಾಯಂ ಅಧ್ಯಕ್ಷರಾಗಿ ಡಾ ಬಾಬು ರಾಜೇಂದ್ರ ಪ್ರಸಾದ್‌ ಅವರು ಆಯ್ಕೆಯಾಗಿದ್ದರು.

ಸಂವಿಧಾನ ರಚನಾ ಕಾರ್ಯ

ಬಿ. ಆರ್‌ ಅಂಬೇಡ್ಕರ ಅವರು ಸಂವಿಧಾನದ ರಚನಾ ಸಭೆಯ ಸದಸ್ಯರ ಮುಂದೆ ೩ ಬಾರಿ ಓದಿದರು. ಹಾಗು ೧೧ ಬಾರಿ ಅಧಿವೇಶನ ನಡೆಸಲಾಗಿದೆ. ಸಂವಿಧಾನದ ಕರಡು ಪ್ರತಿಯನ್ನು ೧೯೪೯ ನವೆಂಬರ್‌ ೨೬ ರಂದು ಅಂಗಿಕರಿಸಲಾಯಿತು. ಈ ಸಂಧರ್ಭದಲ್ಲಿ ಹಾಜರಿದ್ದ ಸದಸ್ಯರ ಸಂಖ್ಯೆ ೨೮೪, ಭಾರತದ ಸಂವಿಧಾನವು ಅಧಿಕೃತವಾಗಿ ಜಾರಿಗೆ ಬಂದಿದ್ದು ೧೯೫೦ ಜನವರಿ ೨೬ ರಂದು ಜಾರಿಗೆ ಬಂದಿತು. ಭಾರತದ ಸಂವಿಧಾನದ ರಚನೆಗೆ ತೆಗೆದುಕೊಂಡ ಸಮಯ ೨ ವರ್ಷ ೧೧ ತಿಂಗಳು ೧೮ ದಿನವನ್ನು ತೆಗೆದುಕೊಂಡಿದೆ. ನಮ್ಮ ಸಂವಿಧಾನವು ಬೃಹತ್‌ ಸಂವಿಧಾನವಾಗಿದೆ. ಮೂಲ ಸಂವಿಧಾನದಲ್ಲಿ ೩೯೫ ವಿಧಿಗಳು, ೨೨ ಭಾಗಗಳು, ೮ ಅನುಸೂಚಿಗಳಿವೆ. ಪ್ರಸ್ತುತ ನಮ್ಮ ಸಂವಿಧಾನದಲ್ಲಿ ೪೫೦ ಕ್ಕೂ ಹೆಚ್ಚು ವಿಧಿಗಳು ಅಂದರೆ (ಉಪವಿಧಿಗಳನ್ನು ಸೇರಿ) ೨೫ ಭಾಗಗಳು, ೧೨ ಅನುಸೂಚಿಗಳನ್ನು ಹೊಂದಿವೆ.

FAQ

ಆಗಸ್ಟ ಕೊಡುಗೆ ಯಾವಾಗ ಜಾರಿಗೆ ಬಂದಿತು ?

೧೯೪೦ ಆಗಸ್ಟ ೮ ರಂದು ಜಾರಿಗೆ ಬಂದಿದೆ.

ಭಾರತ ಸಂವಿಧಾನದ ರಚನೆಗೆ ಎಷ್ಟು ಸಮಯವನ್ನು ತೆಗೆದುಕೊಂಡಿದೆ ?

ಭಾರತದ ಸಂವಿಧಾನದ ರಚನೆಗೆ ತೆಗೆದುಕೊಂಡ ಸಮಯ ೨ ವರ್ಷ ೧೧ ತಿಂಗಳು ೧೮ ದಿನವನ್ನು ತೆಗೆದುಕೊಂಡಿದೆ.

ಇತರೆ ವಿಷಯಗಳು :

ರಾಷ್ಟ್ರೀಯ ಯುವ ದಿನದ ಬಗ್ಗೆ ಮಾಹಿತಿ

ವಿಜ್ಞಾನ ಮತ್ತು ತಂತ್ರಜ್ಞಾನದ ಬಗ್ಗೆ ಪ್ರಬಂಧ 

Leave a Reply

Your email address will not be published. Required fields are marked *