ಪ್ರಕೃತಿ ವಿಕೋಪದ ಬಗ್ಗೆ ಪ್ರಬಂಧ | Essay on Natural Disaster in Kannada

ಪ್ರಕೃತಿ ವಿಕೋಪದ ಬಗ್ಗೆ ಪ್ರಬಂಧ Essay on natural disaster prakruthi vikopada bagge prabandha in kannada

ಪ್ರಕೃತಿ ವಿಕೋಪದ ಬಗ್ಗೆ ಪ್ರಬಂಧ

Essay on natural disaster in Kannada
ಪ್ರಕೃತಿ ವಿಕೋಪದ ಬಗ್ಗೆ ಪ್ರಬಂಧ

ಈ ಲೇಖನಿಯಲ್ಲಿ ಪ್ರಕೃತಿ ವಿಕೋಪದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.

ಪೀಠಿಕೆ :

“ಪ್ರಕೃತಿ ವಿಕೋಪದ ಪರಿಣಾಮವು ಯುದ್ದ ಭೂಮಿಯ ಸಾವು ನೋವುಗಳನ್ನು ಹೋಲುತ್ತವೆ.” ನೈಸರ್ಗಿಕ ವಿಕೋಪವು ಮಾನವನ ನಿಯಂತ್ರಣದಿಂದ ಹೊರಗಿರುವ ಶಕ್ತಿಗಳಿಂದ ಉಂಟಾಗುವ ಘಟನೆಯಾಗಿದೆ. ಭೂಕುಸಿತಗಳು, ಜ್ವಾಲಾಮುಖಿ ಸ್ಫೋಟಗಳು, ಹಿಮಪಾತಗಳು ನೈಸರ್ಗಿಕ ವಿಪತ್ತಿನ ಕೆಲವು ಅತ್ಯಂತ ವಿನಾಶಕಾರಿ ಉದಾಹರಣೆಗಳಾಗಿವೆ. ಇದು ಸ್ಥಳೀಯ ಸಂಪನ್ಮೂಲಗಳನ್ನು ಅತಿಕ್ರಮಿಸುತ್ತದೆ ಮತ್ತು ಸಮುದಾಯದ ಕಾರ್ಯ ಮತ್ತು ಸುರಕ್ಷತೆಗೆ ಬೆದರಿಕೆ ಹಾಕುತ್ತದೆ. ಇವು ಭೌತಿಕವಾಗಿ, ಆರ್ಥಿಕವಾಗಿ ಮಾನವರ ಮೇಲೆ ಪ್ರಭಾವ ಬೀರುತ್ತವೆ.

ವಿಷಯ ವಿವರಣೆ :

ಪ್ರಕೃತಿ ವಿಕೋಪದ ಅರ್ಥ :

ನೈಸರ್ಗಿಕವಾಗಿ ಸಂಭವಿಸುವ ಮಾನವನ ಪ್ರಾಣ, ಆಸ್ತಿ-ಪಾಸ್ತಿ ಸೇರಿದಂತೆ ನೈಸರ್ಗಿಕ ಸಂಪತ್ತುಗಳ ನಾಶಕ್ಕೆ ಕಾರಣವಾಗುವ ವಿನಾಶಕಾರಿ ಘಟನೆಗಳೇ ಪ್ರಕೃತಿ ವಿಕೋಪಗಳು.

ನೈಸರ್ಗಿಕ ವಿಕೋಪಗಳ ವಿಧಗಳು :

  • ಭೂಮಿಯ ನೈಸರ್ಗಿಕ ವಿಪತ್ತುಗಳು :

ಭೂಕಂಪಗಳು, ಜ್ವಾಲಾಮುಖಿ ಸ್ಫೋಟಗಳು, ಭೂಕುಸಿತಗಳು, ಹಿಮಪಾತಗಳು, ಕುಸಿತ, ಮಣ್ಣಿನ ಸವೆತ ಇತ್ಯಾದಿಗಳು ಭೂಮಂಡಲದ ನೈಸರ್ಗಿಕ ವಿಪತ್ತಿನ ವಿಧಗಳಾಗಿವೆ.

  • ವಾತಾವರಣದ ನೈಸರ್ಗಿಕ ವಿಕೋಪಗಳು :

ಹಿಮಪಾತಗಳು, ಗುಡುಗು, ಮಿಂಚು, ಸುಂಟರಗಾಳಿ, ಉಷ್ಣವಲಯದ ಚಂಡಮಾರುತ, ಬರ, ಆಲಿಕಲ್ಲು, ಹಿಮ, ಶಾಖದ ಅಲೆ ಅಥವಾ ಲೂ, ಶೀತ ಅಲೆಗಳು ಇತ್ಯಾದಿಗಳು ವಾತಾವರಣದ ನೈಸರ್ಗಿಕ ವಿಕೋಪಕ್ಕೆ ಉದಾಹರಣೆಗಳಾಗಿವೆ.

  • ಜಲಚರ ನೈಸರ್ಗಿಕ ವಿಪತ್ತುಗಳು :

ಸುನಾಮಿ, ಪ್ರವಾಹಗಳು, ಉಬ್ಬರವಿಳಿತಗಳು, ಸಾಗರ ಪ್ರವಾಹಗಳು, ಚಂಡಮಾರುತದ ಉಲ್ಬಣವು ಇತ್ಯಾದಿಗಳು ಜಲಚರ ನೈಸರ್ಗಿಕ ವಿಪತ್ತಿನ ವಿಧಗಳಾಗಿವೆ.

  • ಜೈವಿಕ ನೈಸರ್ಗಿಕ ವಿಪತ್ತುಗಳು :

ಜೈವಿಕ ನೈಸರ್ಗಿಕ ವಿಕೋಪವು ಭೂಮಿಯ ಜೈವಿಕ ಪ್ರಕ್ರಿಯೆಗಳಿಂದ ಉಂಟಾಗುತ್ತದೆ ಮತ್ತು ಪ್ರಾಥಮಿಕವಾಗಿ ರೋಗಗಳ ಹರಡುವಿಕೆಯನ್ನು ಒಳಗೊಂಡಿರುತ್ತದೆ. ವಸಾಹತುಶಾಹಿಗಳಾಗಿ ಸಸ್ಯಗಳು ಮತ್ತು ಪ್ರಾಣಿಗಳು, ಕೀಟಗಳ ಮುತ್ತಿಕೊಳ್ಳುವಿಕೆ-ಶಿಲೀಂಧ್ರ, ಬ್ಯಾಕ್ಟೀರಿಯಾ ಮತ್ತು ವೈರಸ್ ರೋಗಗಳಾದ ಹಕ್ಕಿ ಜ್ವರ, ಡೆಂಗ್ಯೂ ಇತ್ಯಾದಿಗಳು.

ಪ್ರಕೃತಿ ವಿಕೋಪಕ್ಕೆ ಕಾರಣಗಳು :

  • ನಿರಂತರ ದೀರ್ಘಾವಧಿಯ ಮಳೆ
  • ಕರಾವಳಿ ತೀರದಲ್ಲಿ ಉಂಟಾಗುವ ದೊಡ್ಡ ಸಮುದ್ರದ ಅಲೆಗಳು
  • ನದಿಯ ಹರಿಯುವಿಕೆಯಲ್ಲಿ ಅಡಚಣೆ
  • ಹೊಳೆ-ಹಳ್ಳಿಗಳಲ್ಲಿ ಅಕ್ರಮ ಮರಳು ಗಣಿಗಾರಿಕೆ
  • ಅರಣ್ಯ ಒತ್ತುವರಿ ಹಾಗೂ ವಾಣಿಜ್ಯ ಉದ್ದೇಶಕ್ಕಾಗಿ ಕೃಷಿ ಭೂಮಿಯಲ್ಲಿ ಮಿತಿಯಿಲ್ಲದ ಪರಿವರ್ತನೆ
  • ಅವೈಜ್ಞಾನಿಕ ಆಣೇಕಟ್ಟುಗಳ ಸ್ಥಾಪನೆ
  • ಪರಿಸರದ ಸಂಪನ್ಮೂಲಗಳ ಮೇಲೆ ಅತಿಯಾದ ಬಯಕೆ
  • ಮಾನವನ ಅಭಿವೃದ್ದಿ ಚಟುವಟಿಕೆಗಳಿಂದ ಹವಾಮಾನ ಬದಲಾವಣೆ ಉಂಟಾಗಿ ಅತಿವೃಷ್ಟಿ ಅಕಾಲಿಕ ಮಳೆ ಹಾಗೂ ಪ್ರವಾಹ ಉಂಟಾಗುತ್ತದೆ.

ಪ್ರಕೃತಿ ವಿಕೋಪದ ಪರಿಣಾಮಗಳು :

  • ಪ್ರವಾಹದಿಂದ ಜೀವ, ಆಸ್ತಿ ನಾಶ, ಪ್ರಾಣಿ ಸಂಪತ್ತು, ಅರಣ್ಯ ಸಂಪತ್ತು ನಾಶವಾಗುತ್ತದೆ.
  • ಪ್ರಾಕೃತಿಕ ವಿಕೋಪದಿಂದ ಭೌತಿಕ, ಜೈವಿಕ ಮತ್ತು ಮಾನಸಿಕ ಬದಲಾವಣೆಗೆ ಕಾರಣವಾಗುತ್ತದೆ.
  • ನೈಸರ್ಗಿಕ ವಿಕೋಪದಿಂದ ಜನಸಂಖ್ಯೆ ಅದರ ಹಂಚಿಕೆ ಮತ್ತು ಜನಸಾಂದ್ರತೆಯ ಮೇಲೆ ಪರಿಣಾಮ ಉಂಟುಮಾಡುತ್ತದೆ.
  • ಮಣ್ಣಿನ ಸವಕಳಿಗೆ ಕಾರಣವಾಗಿ ಫುವತ್ತಾದ ಕೃಷಿ ಭೂಮಿ ಬೋಜರು ಭೂಮಿಯಾಗುತ್ತದೆ.
  • ಅತಿ ದೊಡ್ಡ ಪ್ರವಾಹದಿಂದ ವನ್ಯಜೀವಿ ಸಂಪತ್ತು ನಾಶವಾಗುತ್ತದೆ.
  • ಪರಿಸರ ವ್ಯವಸ್ಥೆಯ ಜೀವ ಸಂಕುಲದಲ್ಲಿ ಅಸಮತೋಲನ ಉಂಟಾಗುತ್ತದೆ.
  • ಪ್ರಾಕೃತಿಕ ವಿಕೋಪದಿಂದ ನದಿಗಳು ತಮ್ಮ ದಿಕ್ಕನ್ನು ಬದಲಾಯಿಸುತ್ತವೆ.

ಪ್ರಕೃತಿ ವಿಕೋಪದ ನಿರ್ವಹಣೆ :

  • ನೈಸರ್ಗಿಕ ಸಂಪನ್ಮೂಲಗಳನ್ನು ವ್ಯವಸ್ಥಿತವಾಗಿ ನಿರ್ವಹಣೆ ಮಾಡುವುದು.
  • ಅಕ್ರಮ ಮರಳುಗಾರಿಕೆ, ಭೂ ಒತ್ತುವರಿಯಂತಹ ಪ್ರಕೃತಿ ವಿರೋಧಿ ಚಟುವಟಿಕೆಗಳ ನಿಯಂತ್ರಣ.
  • ಕಾದಿಟ್ಟ ಮತ್ತು ಕಂದಾಯ ಭೂಮಿಯ ಅರಣ್ಯವನ್ನು ಒತ್ತುವರುಯಾಗದಂತೆ ತಡೆಯುವುದು.
  • ಗೋಮಾಳ, ಗ್ರಾಮ ಅರಣ್ಯದಂತಹ ಸಮುದಾಯದ ಸ್ವತ್ತುಗಳು ಖಾಸಗೀಕರಣವಾಗುವುದನ್ನು ತಡೆಯುವುದು.
  • ಜಿಲ್ಲಾ ಹಾಗೂ ಗ್ರಾಮ ಯೋಜನಾ ಸಮಿತಿಗಳ ಮೂಲಕ ನೆಲಬಳಕೆಯನ್ನು ಸುಸ್ಥಿರಗೊಳಿಸಿ, ಅರಣ್ಯೀಕರಣಕ್ಕೆ ಒತ್ತು ನೀಡುವುದು.
  • ನೀರಿನ ಸಂಗ್ರಹಣೆಗಾಗಿ ಹೊಂಡಗಳನ್ನು ತೋಡುವುದು.
  • “ಮನೆಗೊಂದು ಮರ, ಊರಿಗೊಂದು ವನ”. “ಕಾಡು ಬೆಳೆಸಿ ನಾಡು ಉಳಿಸಿ” ಎಂಬ ಗಾದೆಗಳ ಪಾಲನೆ ಮಾಡುವುದು.
  • ರಕ್ಷಣಾ ಸಿಬ್ಬಂದಿಗಳಿಗೆ ಆಧುನಿಕ ತಂತ್ರಜ್ಞಾನಾವಶ್ಯಕ ಸಾಮಾಗ್ರಿಗಳನ್ನು ನೀಡುವುದು.
  • ವಿಕೋಪಗಳು ಸಂಭವಿಸಿದ್ದೇ ಆದಲ್ಲಿ ಅಗತ್ಯವಿರುವಂತಹ ವಸ್ತುಗಳನ್ನು ತ್ವರಿತವಾಗಿ ಪೂರೈಕೆ ಮಾಡುವುದು.

ಉಪಸಂಹಾರ :

“ಒಲೆಹತ್ತಿ ಉರಿದಡೆ ನಿಲಬಹುದಲ್ಲದೆ ಧರೆಹತ್ತಿ ಉರಿದಡೆ ನಿಲಲುಬಾರದು ” ಎಂದು ಬಸವಣ್ಣ ನವರು ಹೇಳಿದ್ದಾರೆ.

“ಪ್ರಕೃತಿಯು ಮಾನವನ ಆಸೆಗಳನ್ನು ಈಡೇರಿಸಬಹುದೇ ಹೊರತು ದುರಾಸೆಗಳನ್ನಲ್ಲ” ಎಂಬ ಮಾತು ಇಲ್ಲಿ ಪ್ರಸ್ತುತವಾಗುತ್ತದೆ. ಮಾನವನು ವೈಜ್ಞಾನಿಕವಾಗಿ ಎಷ್ಟೇ ಮುಂದುವರೆದರು ಪ್ರಕೃತಿ ಮುಂದೆ ಅವನು ನಿಮಿತ್ತ ಮಾತ್ರ”ಮಾಡಿದುಣ್ಣೋ ಮಹಾರಾಯ” ಎಂಬಂತೆ ಮಾನವನ ಕೃತ್ಯಗಳಿಗೆ ಪ್ರಕೃತಿಯು ನೀಡುತ್ತಿರುವ ಉತ್ತರವೇ ಪ್ರಕೃತಿ ವಿಕೋಪವಾಗಿದೆ.

FAQ :

ನೈಸರ್ಗಿಕ ವಿಪತ್ತುಗಳ ವಿಧಗಳಾವುವು?

ಭೂಮಿಯ ನೈಸರ್ಗಿಕ ವಿಪತ್ತುಗಳು, ವಾತಾವರಣದ ನೈಸರ್ಗಿಕ ವಿಕೋಪಗಳು, ಜಲಚರ ನೈಸರ್ಗಿಕ ವಿಪತ್ತುಗಳು, ಜೈವಿಕ ನೈಸರ್ಗಿಕ ವಿಪತ್ತುಗಳು.

ಪ್ರಕೃತಿ ವಿಕೋಪಕ್ಕೆ ಕಾರಣಗಳು ಯಾವುವು?

ನಿರಂತರ ದೀರ್ಘಾವಧಿಯ ಮಳೆ.
ಕರಾವಳಿ ತೀರದಲ್ಲಿ ಉಂಟಾಗುವ ದೊಡ್ಡ ಸಮುದ್ರದ ಅಲೆಗಳು.
ನದಿಯ ಹರಿಯುವಿಕೆಯಲ್ಲಿ ಅಡಚಣೆ.
ಹೊಳೆ-ಹಳ್ಳಿಗಳಲ್ಲಿ ಅಕ್ರಮ ಮರಳು ಗಣಿಗಾರಿಕೆ.
ಅರಣ್ಯ ಒತ್ತುವರಿ ಹಾಗೂ ವಾಣಿಜ್ಯ ಉದ್ದೇಶಕ್ಕಾಗಿ ಕೃಷಿ ಭೂಮಿಯಲ್ಲಿ ಮಿತಿಯಿಲ್ಲದ ಪರಿವರ್ತನೆ.

ಇತರೆ ವಿಷಯಗಳು :

ವಾಯು ಮಾಲಿನ್ಯ ಬಗ್ಗೆ ಪ್ರಬಂಧ

ಹವಾಮಾನ ಬದಲಾವಣೆ ಪ್ರಬಂಧ

Leave a Reply

Your email address will not be published. Required fields are marked *