ಕರ್ನಾಟಕದಲ್ಲಿನ 10 ಜಿಲ್ಲೆಗಳ ಬಗ್ಗೆ ಮಾಹಿತಿ | Information About 10 Districts in Karnataka in Kannada

ಕರ್ನಾಟಕದಲ್ಲಿನ 10 ಜಿಲ್ಲೆಗಳ ಬಗ್ಗೆ ಮಾಹಿತಿ Information About 10 Districts in Karnataka Karnatakada ೧೦ Jillegala Bagge Mahiti in Kannada

ಕರ್ನಾಟಕದಲ್ಲಿನ ೧೦ ಜಿಲ್ಲೆಗಳ ಬಗ್ಗೆ ಮಾಹಿತಿ

Information About 10 Districts in Karnataka in Kannada

ಈ ಲೇಖನಿಯಲ್ಲಿ ಕರ್ನಾಟಕದಲ್ಲಿನ 10 ಜಿಲ್ಲೆಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.

ವಿಜಯಪುರ ಜಿಲ್ಲೆ :

ಈ ಜಿಲ್ಲೆಯಲ್ಲಿ ತಾಳಿಕೋಟೆ ಅಥವಾ ರಕ್ಕಸ ತಂಗಡಗಿ ಎಂಬ ಯುದ್ದ ನಡೆದ ಭೂಮಿ ಇದೆ. ಈ ಕದನವು ೧೫೬೫ ಜನವರಿ ೨೩ ರಂದು ನಡೆಯಿತು. ಈ ಕದನವು ಬಹುಮನಿ ಸುಲ್ತಾನರು ಮತ್ತು ವಿಜಯನಗರ ಸಾಮ್ರಾಜ್ಯದ ನಡುವೆ ನಡೆಯಿತು. ಇದರಲ್ಲಿ ವಿಜಯನಗರ ಸಾಮ್ರಾಜ್ಯಕ್ಕೆ ಸೋಲಾಯಿತು. ಈ ಕದನ ನಡೆಯುತ್ತಿದ್ದಾಗ ವಿಜಯನಗರ ಸಾಮ್ರಾಜ್ಯದ ಅರಸ ಸದಾಶಿವರಾಯ ಇದ್ದನು. ಭಾರತದ ಅತೀ ದೊಡ್ಡ ಗುಮ್ಮಟವಾದ ಗೋಲಗುಮ್ಮಟವು ಬಿಜಾಪುರದಲ್ಲಿದೆ. ಬಸವನ ಬಾಗೆವಾಡಿ ಬಸವಣ್ಣನ ಜನ್ಮಸ್ಥಳವಾಗಿದೆ. ಕರ್ನಾಟಕದಲ್ಲಿ ಅತೀ ಹೆಚ್ಚು ದ್ರಾಕ್ಷಿ ಬೆಳೆಯುವ ಜಿಲ್ಲೆಯಾಗಿದೆ. ಇದನ್ನು ಕರ್ನಾಟಕದ ಪಂಜಾಬ್‌ ಎನ್ನುವರು.

ಬಾಗಲಕೋಟೆ ಜಿಲ್ಲೆ :

ನವನಗರ ಕರ್ನಾಟಕದ ಮೊದಲ ಯೋಜಿತ ನಗರವಾಗಿದೆ. ಬಾದಾಮಿಯಲ್ಲಿ ಕಪ್ಪೆ ಅರಭಟ್ಟನ ಶಾಸನವು ತ್ರಿಪದಿಯಲ್ಲಿದೆ. ಬಾದಾಮಿಯು ಚಾಲುಕ್ಯರ ರಾಜಧಾನಿಯಾಗಿತ್ತು, ಬಾದಾಮಿಯ ಹಳೆಯ ಹೆಸರು ವಾತಾಪಿ. ಬಾದಾಮಿಯಲ್ಲಿರುವಪ್ರಸಿದ್ದ ಗುಹಾಂತರ ದೇವಾಲಯವನ್ನು ಚಾಲುಕ್ಯರು ನಿರ್ಮಿಸಿದ್ದಾರೆ. ಬಾದಾಮಿಯ ನವಶಿಲಾಯುಗದ ತಾಣವಾಗಿದೆ. ಇಲ್ಲಿ ಐಹೊಳೆ, ಬಾದಾಮಿ, ಪಟ್ಟದಕಲ್ಲು ಎಂಬ ಊರು ಇದೆ.

ಕಲಬುರ್ಗಿ ಜಿಲ್ಲೆ :

ಇಲ್ಲಿ ಸನ್ನತಿ ಎಂಬ ಸ್ಥಳ ಇದೆ. ಸನ್ನತಿಯು ಭೀಮಾ ನದಿ ದಂಡೆಯ ಮೇಲಿದೆ. ಸನ್ನತಿಯಲ್ಲಿ ಬೌದ್ದರ ಸ್ಮಾರಕಗಳು ಇವೆ. ಕರ್ನಾಟಕದಲ್ಲಿ ಅತಿ ಹೆಚ್ಚು ಸುಣ್ಣದ ಕಲ್ಲಿನ ನಿಕ್ಷೇಪವನ್ನು ಹೊಂದಿದೆ. ಇದು ಅತೀ ಹೆಚ್ಚು ಸಿಮೆಂಟ್‌ ಉತ್ಪಾದನೆ ಮಾಡುವ ಜಿಲ್ಲೆಯಾಗಿದೆ. ರಾಷ್ಟ್ರಕೂಟರ ರಾಜಧಾನಿ ಮಳಖೇಡ ಅಥವಾ ಮಾನ್ಯಖೇಟ ಕಲಬುರ್ಗಿ ಜಿಲ್ಲೆಯಲ್ಲಿದೆ. ಕರ್ನಾಟಕದಲ್ಲಿ ಮೊದಲ ದೂರ್ದರ್ಶನ ಬಂದಿದ್ದು ಕಲಬುರ್ಗಿ ಜಿಲ್ಲೆಯಲ್ಲಿ.

ಯಾದಗಿರಿ ಜಿಲ್ಲೆ :

ಈ ಜಿಲ್ಲೆಯ ಗೋಗಿಯಲ್ಲಿ ಯುರೇನಿಯಂ ನಿಕ್ಷೇಪ ಪತ್ತೆಯಾಗಿದೆ. ಇದು ಕಾಕತೀಯ ರಾಜರ ಆಳ್ವಿಕೆಗೆ ಒಳಪಟ್ಟಿತ್ತು. ಇಲ್ಲಿ ರೈಲ್ವೆ ಬೋಗಿ ತಯಾರಿಕಾ ಘಟಕವಿದೆ. ಬೋನಾಳ ಪಕ್ಷಿಧಾಮ ಇದು ಕರ್ನಾಟಕ ಅತಿ ದೊಡ್ಡ ಪಕ್ಷಿಧಾಮವಿದೆ. ಇಲ್ಲಿ ಮಲಗಿರುವ ಬುದ್ದನ ಬೆಟ್ಟ ಕಂಡು ಬರುತ್ತದೆ. ಇದು ಶಹಾಪುರ ತಾಲೂಕಿನಲ್ಲಿದೆ. ಇಲ್ಲಿ ಸುರಪುರ, ಶಹಾಪುರ, ಎಂಬ ಮೂರು ತಾಲೂಜುಗಳನ್ನು ಒಳಗೊಂಡಿದೆ.

ಬೀದರ್‌ ಜಿಲ್ಲೆ :

ಸಿಖ್‌ ಧರ್ಮದ ಸಂಸ್ಥಾಪಕ ಗುರುನಾನಕ್ ರವರು ಬೀದರ್‌ ಜಿಲ್ಲೆಗೆ ಬೇಟಿಕೊಟ್ಟಿದ್ದರು. ಇಲ್ಲಿ ಗುರುನಾನಕ್‌ ಝರ ಇದೆ. ವೈಮಾನಿಕ ತರಬೇತಿ ಕೇಂದ್ರವಾಗಿದೆ. ಕರ್ನಾಟಕದ ಉತ್ತರದ ತುತ್ತತುದಿಯ ಜಿಲ್ಲೆ. ಇದು ಬಿದಿರಿ ಕಲೆಗೆ ಹೆಸರುವಾಸಿಯಾಗಿದೆ. ಬಹುಮನಿ ಸುಲ್ತಾನರ ೨ನೇ ರಾಜಧಾನಿ ಆಗಿತ್ತು. ಇಲ್ಲಿ ಕಾರಂಜಾ ಆನೆಕಟ್ಟು ಇದೆ. ಇಲ್ಲಿ ಮಹಮ್ಮದ್‌ ಗವಾನ ಕಟ್ಟಿಸಿದ ಮದರಸ ಇದೆ.

ಧಾರವಾಢ ಜಿಲ್ಲೆ :

ಕರ್ನಾಟಕದಲ್ಲಿ ಹೋಂ ರೂಲ್‌ ಚಳುವಳಿ ಧಾರವಾಡದಿಂದ ಪ್ರಾರಂಭವಾಯಿತು. ಇಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಗಾರರಾದ ಗಂಗೂಬಾಯಿ ಹಾನಗಲ್‌, ಪಂಡಿತ್‌ ಬೀಮ್ ಸೇನ್‌ ಜೋಷಿ ಮತ್ತು ಪಂಡಿತ್ ಮಲ್ಲಿಕಾರ್ಜುನ ಮನ್ಸೂರ್‌ ಇವರು ಈ ಜಿಲ್ಲೆಯಲ್ಲಿ ಇದ್ದಾರೆ. ಇಲ್ಲಿ ಪಂಪನ ಜನ್ಮ ಸ್ಥಳ ಅಣ್ಣಿಗೆರೆ ಇದೆ. ಧಾರವಾಡ ಎಮ್ಮೆಗೆ ರಾಷ್ಟ್ರೀಯ ಮಾನ್ಯತೆಯನ್ನು ನೀಡಲಾಗಿದೆ. ಹಾಗೂ ಇಲ್ಲಿ ಆಲೂರು ವೆಂಕಟರಾಯರು ರಾಷ್ಟ್ರೀಯ ಶಾಲೆಯನ್ನು ಸ್ಥಾಪಿಸಿದ್ದಾರೆ. ಕೃಷಿ ವಿಶ್ವ ವಿದ್ಯಾಲಯವಿದೆ.

ದಾವಣಗೆರೆ ಜಿಲ್ಲೆ :

ಇದಕ್ಕೆ ಕರ್ನಾಟಕದ ಮ್ಯಾಂಚೆಸ್ಟರ್‌ ಎಂದೇ ಕರೆಯಲಾಗಿದೆ. ಹಾಗೂ ಇಲ್ಲಿ ವಿಶ್ವವಿದ್ಯಾಲಯವಿದೆ. ಇಲ್ಲಿ ಸಮಗ್ರ ಅಂಗವಿಕಲರ ಪುರ್ವಸತಿ ಪ್ರಾದೇಶಿಕ ಕೇಂದ್ರವಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ :

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿರುವ ದೊಡ್ಡ ಬಳ್ಳಾಪುರ ರೇಷ್ಮೆಗೆ ಹೆಸರುವಾಸಿಯಾಗಿದೆ. ಇಲ್ಲಿ ದೇವನಹಳ್ಳಿಯಲ್ಲಿ ನಾಡಪ್ರಭು ಕೆಂಪೇಗೌಡ ಅಂತರ್‌ ರಾಷ್ಟ್ರೀಯ ವಿಮಾನ ನಿಲ್ದಾಣವಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿರುವ ದೇವನಹಳ್ಳಿಯಲ್ಲಿ ಟಿಪ್ಪು ಸುಲ್ತಾನ ೧೭೫೦ ನವೆಂಬರ್‌ ೨೦ ಜನಿಸಿದನು.

ಕೊಡುಗೆ ಜಿಲ್ಲೆ :

ಇದು ಕರ್ನಾಟಕದಲ್ಲಿ ಅತೀ ಕಡಿಮೆ ಜನಸಂಖ್ಯೆ ಹೊಂದಿದ ಜಿಲ್ಲೆಯಾಗಿದೆ. ಇದು ಕರ್ನಾಟಕದಲ್ಲಿ ಅತೀ ಕಡಿಮೆ ಜನಸಾಂದ್ರತೆ ಹೊಂದಿದ ಜಿಲ್ಲೆಯಾಗಿದೆ. ಇದನ್ನು ಕರ್ನಾಟಕದ ಕಾಶ್ಮೀರ ಎಂದು ಕರೆಯಲಾಗುತ್ತದೆ. ಇಲ್ಲಿ ದುಬಾರೆ ಫಾರೆಸ್ಟ್‌ ಮತ್ತು ದೇವರ ಕಾಡುಗಳು ಕಂಡು ಬರುತ್ತದೆ. ಇಲ್ಲಿ ಹಾರಂಗಿ ಜಲಾಶಯ ಇದೆ. ಇಲ್ಲಿ ಕೊಡವ ಭಾಷೆ ಮಾತನಾಡುತ್ತಾರೆ. ಇದು ರೈಲು ಮಾರ್ಗ ಹೊಂದಿಲ್ಲದ ಏಕೈಕ ಜಿಲ್ಲೆಯಾಗಿದೆ. ಇದನ್ನು ಕಿತ್ತಳೆ ನಾಡು ಎಂದು ಕರೆಯಲಾಗುತ್ತದೆ.

ಚಾಮರಾಜನಗರ ಜಿಲ್ಲೆ :

ಇದು ಕರ್ನಾಟಕದ ದಕ್ಷಿಣದ ತುತ್ತ ತುದಿಯ ಜಿಲ್ಲೆಯಾಗಿದೆ. ಬಿಳಿಗುಂಡ್ಲು ಎಂಬಲ್ಲಿ ಕಾವೇರಿ ಜಲಮಾಪನ ಕೇಂದ್ರ ಇದೆ. ಕರ್ನಾಟಕದಿಂದ ತಮಿಳುನಾಡಿಗೆ ಹರಿಯುವ ಕಾವೇರಿ ನದಿ ನೀರನ್ನು ಬಿಳಿಗುಂಡ್ಲು ಎಂಬ ಪ್ರದೇಶದಲ್ಲಿ ಅಳೆಯಲಾಗುವುದು. ಇಲ್ಲಿ ಭರಚುಕ್ಕಿ – ಗಗನಚುಕ್ಕಿ ಜಲಪಾತ ಇದೆ. ಇಲ್ಲಿ ಸುವರ್ಣವತಿ ಡ್ಯಾಂ ಇದೆ. ಹಾಗೂ ಇಲ್ಲಿ ಬಿಳಿಗಿರಿ ರಂಗನ ಬೆಟ್ಟವಿದೆ. ಇಲ್ಲಿ ಆನೆಗಳನ್ನು ರಕ್ಷಿಸಲಾಗಿದೆ.

FAQ

ಕರ್ನಾಟಕದ ಕಾಶ್ಮೀರ ಎಂದು ಯಾವ ಜಿಲ್ಲೆಯನ್ನು ಕರೆಯುತ್ತಾರೆ ?

ಕೊಡಗು

ತಾಳಿಕೋಟೆ ಯುದ್ದವು ಯಾವ ಜಿಲ್ಲೆಯಲ್ಲಿ ನಡೆಯಿತು ?

ವಿಜಯಪುರ

ಇತರೆ ವಿಷಯಗಳು :

ವಿಶ್ವ ಸಂಸ್ಥೆಯ ಬಗ್ಗೆ ಮಾಹಿತಿ

ಗಣರಾಜ್ಯೋತ್ಸವದ ಬಗ್ಗೆ ಪ್ರಬಂಧ

Leave a Reply

Your email address will not be published. Required fields are marked *