ಕನ್ನಡದ ರತ್ನತ್ರಯರ ಬಗ್ಗೆ ಮಾಹಿತಿ Information about Kannada Ratnatraya bagge mahiti in Kannada
ಕನ್ನಡದ ರತ್ನತ್ರಯರ ಬಗ್ಗೆ ಮಾಹಿತಿ
ಈ ಲೇಖನಿಯಲ್ಲಿ ಕನ್ನಡದ ರತ್ನತ್ರಯರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.
ಕನ್ನಡದ ರತ್ನತ್ರಯರು (ಪಂಪ, ಪೊನ್ನ, ರನ್ನ):
ಪಂಪ :
ಕನ್ನಡ ಭಾಷೆಯಲ್ಲಿ ಬರೆದ ಜೈನ ಕವಿ ಮತ್ತು ಆದಿಕವಿ (“ಮೊದಲ ಕವಿ”) ಎಂಬ ವಿಶೇಷಣದಿಂದ ಹತ್ತನೇ ಶತಮಾನದ ಆರಂಭದಲ್ಲಿ ಸಕ್ರಿಯರಾಗಿದ್ದರು.
ಜನನ :
ಧಾರವಾಡ ಜಿಲ್ಲೆಯ ಅಣ್ಣಿಗೇರಿಯಲ್ಲಿ ಕ್ರಿ.ಶ 902 ರಲ್ಲಿ ದುಂದುಬಿ ಸಂವತ್ಸರದಲ್ಲಿ ಜನಿಸಿದರು. ಇವರ ಪೂರ್ವಜರ ವಾಸಸ್ಥಳ ನೆಂಗಿ ಮಂಡಳದ ನೆಂಗಿಪಳು. ನೆಂಗಿ ಮಂಎಲವು ಕೃಷ್ಣಾ ಮತ್ತು ಗೋದಾವಾರಿ ನದಿಗಳ ನಡುವೆ ಇದ್ದ ಪ್ರವೇಶ. ಇಂದಿನ ತೆಲಂಗಾಣ ರಾಜ್ಯದ ಕರೀಂ ನಗರ ಜಿಲ್ಲೆಯ ವೇಮುಲನಾಡ ಎಂಬ ಊರು. ಇವರ ತಂದೆ ಭೀಮಪ್ಪಯ್ಯ, ತಾಯಿ ಅಬ್ಬಣ್ಣಬ್ಬೆ, ಇವರ ಗುರು ದೇವೇಂದ್ರ ಮುನಿ.
ವಿದ್ಯಾಭ್ಯಾಸ :
ಗಣಿತ, ವ್ಯಾಕರಣ, ಅಲಂಕಾರ, ಸಂಗೀತ, ನಾಟ್ಯ, ಶಿಲ್ಪ, ವೈದ್ಯ ಮತ್ತು ವೇದಶಾಸ್ತ್ರವನ್ನು ಗುರುಕುಲದಲ್ಲಿ ಅಭ್ಯಾಸ ಮಾಡಿದ್ದನು.
ವೃತ್ತಿ :
ಕ್ರಿ.ಶ ಸುಮಾರು 935 ರಿಂದ 955 ರ ವರೆಗೆ ಆಳೀದ ವೇಮುಲನಾಡ ಚಾಲುಕ್ಯ ವಂಶದ ಅರಸು ಇಮ್ಮಡಿ ಅರಿಕೇಸರಿಯ ಅರಮನೆಯಲ್ಲಿ ನೆಲೆಯನ್ನು ಪಡೆದಿದ್ದ. ದೊರೆಯ ಅಚ್ಚುಮೆಚ್ಚಿನ ಕವಿ, ಗೆಳೆಯ, ಸೇನಾಪತಿಯಾಗಿದ್ದರು.
ಸಾಹಿತ್ಯ :
ಆದಿ ಪುರಾಣ (ಲೌಕಿಕ) :
ಆದಿಪುರಾಣ ಪಂಪನ ಮೊದಲ ಕೃತಿ ಜೀನಸೇನಾಚಾರ್ಯರ ಸಂಸ್ಕೃತದ ಪೂರ್ವ ಪುರಾಣ ಇದಕ್ಕೆ ಆಕರವಾಗಿದೆ. ಇದು ಜೈನಧರ್ಮದ ಪ್ರಥಮ ತೀರ್ಥಂಕರನಾದ ಪುರುದೇವನ ಜನ್ನಾಂತರದ ಕಥಾನಕವನ್ನು ಹೊಂದಿದೆ.
ವಿಕ್ರಮಾರ್ಜುನ ವಿಜಯ (ಅಲೌಕಿಕ) :
ತನ್ನ ಆಶ್ರಯದಾತ ವೇಮುಲವಾಡದ ಚಾಲುಕ್ಯ ದೊರೆ 2ನೇ ಅರಿಕೇಸರಿಯನ್ನು ತನ್ನ ಕಾವ್ಯದ ನಾಯಕನಾದ ಅರ್ಜುನನೊಡನೆ ಸಮೀಕರಿಸಿ ನಿರೂಪಿಸಿದ್ದಾನೆ. ಇದು 14 ಆಶ್ವಾಸನಗಳನ್ನು 1609 ಪದ್ಯಗಳನ್ನು ಒಳಗೊಂಡಿದೆ.
ಬಿರುದುಗಳು :
ಆದಿ ಕವಿ, ಕನ್ನಡ ಕಾವ್ಯಗಳ ಜನಕ
ಪೊನ್ನ :
ಕನ್ನಡ ರತ್ನತ್ರಯರಲ್ಲಿ ಎರಡನೆಯವರು.
ಜನನ ಮತ್ತು ವಿದ್ಯಾಭ್ಯಾಸ :
ಕ್ರಿ.ಶ 950 ರಲ್ಲಿ ವೆಂಗಿಮಂಡಲದಲ್ಲಿ ಜನಿಸಿದರು. ರಾಷ್ಟ್ರಕೂಟರ 3ನೇ ಕೃಷ್ಣನ ಆಸ್ಥಾನದಲ್ಲಿದಂತಹ ಕವಿ. ಈತ ತನ್ನ ಗುರುವಾದಂತಹ ದೀನಚಂದ್ರದೇವನ ಬಳಿ ವಿದ್ಯಾಭ್ಯಾಸ ಮುಗಿಸಿದರು.
ಕೃತಿಗಳು :
ಶಾಂತಿ ಪುರಾಣ, ಜಿನಾಕ್ಷರ ಮಾಲೆ, ಭುವನೈಕ ರಾಮಾಭ್ಯುದಯ, ಗತಪ್ರತ್ಯಾಗತ. ಶಂತಿಪುರಾಣ ಒಂದು ಧಾರ್ಮಿಕ ಕೃತಿಯಾಗಿದೆ. ಇದು 16ನೇ ತೀರ್ಥಂಕರನಾದ ಶಾಂತಿನಾಥನ ಚರಿತ್ರೆಯುಳ್ಳ ಜೈನಪುರಾಣ. ಚಂಪೂ ಸಾಹಿತ್ಯದಲ್ಲಿ ರಚಿತವಾಗಿರುವ 12 ಆಶ್ವಾಸಗಳ್ಳುಳ್ಳ ಗ್ರಂಥವಾಗಿದೆ.
ಬಿರಿದುಗಳು :
ಉಭಯ ಚಕ್ರವರ್ತಿ
ರನ್ನ :
ಜನನ :
ಕ್ರಿ. ಶ ಸುಮಾರು 949 ರಲ್ಲಿ ಬಾಗಲಕೋಟೆಯ ಮುದುವೊಳಲು ಈಗಿನ ಮುಧೋಳ ಎಂಬ ಗ್ರಾಮದಲ್ಲಿ ಜನಿಸಿದರು. ತಂದೆ ಜಿನವಲ್ಲಭ, ತಾಯಿ ಅಬ್ಬಲಬ್ಬೆ, ಗುರು ಅಜಿತಸೇನಾಚಾರ್ಯ.
ಆಶ್ರಯ :
ಗಂಗರ ಚಾವುಂಡರಾಯ (ಮಂತ್ರಿ), ಚಾಲುಕ್ಯರ ತೈಲಪ, ಸತ್ಯಾಶ್ರಮ.
ಕಾವ್ಯಗಳು:
ಸಾಹಸ ಭೀಮ ವಿಜಯಂ(ಗದಾಯುದ್ದ), ಅಜಿತತೀರ್ಥಂಕರ ಪುರಾಣತಿಲಕಂ, ಪರಶುರಾಮಚರಿತಂ, ಚಕ್ರೇಶ್ವರಚರಿತಂ.
ಬಿರುದುಗಳು :
ಕವಿ ಚಕ್ರವರ್ತಿ, ಕವಿಜನ ಚೂಡಾರತ್ನ, ಕವಿ ತಿಲಕ, ಕವಿಚತುರ್ಮುಖ, ಶಬ್ದಬ್ರಹ್ಮ, ಕವಿಮುಖಚಂದ್ರ, ಕವಿರಾಜಶೇಖರ.
FAQ
ಕನ್ನಡದ ರತ್ನತ್ರಯರು ಯಾರು?
ಪಂಪ, ಪೊನ್ನ, ರನ್ನ.
ಪೊನ್ನನಿಗೆ ಇದ್ದ ಬಿರದು ಏನು?
ಉಭಯ ಚಕ್ರವರ್ತಿ.
ಆದಿ ಪುರಾಣ ಬರೆದವರು ಯಾರು?
ಪಂಪ.
ಇತರೆ ವಿಷಯಗಳು :
ಶ್ರೀನಿವಾಸ ರಾಮಾನುಜನ್ ಜೀವನ ಚರಿತ್ರೆ