ಕರ್ನಾಟಕದ ಬಗ್ಗೆ ಮಾಹಿತಿ Information About Karnataka Karnatakada Bagge Mahiti in Kannada
ಈ ಲೇಖನಿಯಲ್ಲಿ ಕರ್ನಾಟಕದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.
ಕರ್ನಾಟಕದ ಬಗ್ಗೆ ಮಾಹಿತಿ
ಎರಡು ಸಹಸ್ರ ವರ್ಷಗಳಿಗೂ ಹೆಚ್ಚಿನ ಇತಿಹಾಸ ಹೊಂದಿರುವ ರಾಜ್ಯ ಕರ್ನಾಟಕ. ಬನವಾಸಿ ಕದಂಬರು, ತಲಕಾಡು ಗಂಗರು, ಬಾದಾಮಿ ಚಾಲುಕ್ಯರು, ಮಳಖೇಡದ ರಾಷ್ಟ್ರಕೂಟರು, ವೆಂಗಿಯ ಚಾಲುಕ್ಯರು, ಕಲ್ಯಾಣದ ಚಾಲುಕ್ಯರು, ಹಳೇಬೀಡು ಹೋಯ್ಸಳರು, ವಿಜಯನಗರದ ಅರಸರು, ಮೈಸೂರಿನ ಒಡೆಯರು ಆಳಿದ ನಾಡಿದು. ಕಲೆ, ಸಾಹಿತ್ಯ, ಸಂಸ್ಕೃತಿ ಬೆಳವಣಿಗೆಗೆ ಈ ಅರಸರು ಕೊಟ್ಟ ಕೊಡುಗೆ ಅಪಾರ.
ಪೇಶ್ವೆ ಮತ್ತು ಟಿಪ್ಪು ಪತನದ ನಂತರ ಈ ನಾಡು ಬ್ರಿಟಿಷರ ಆಳ್ವಿಕೆಗೊಳಪಟ್ಟಿತು. ಸ್ವಾತಂತ್ರ್ಯ ಚಳವಳಿಯ ಬೆನ್ನಲ್ಲೇ ಕರ್ನಾಟಕ ಏಕೀಕರಣ ಆಂದೋಲನವೂ ನಡೆಯಿತು. ೧೯೫೬ ರ ನವೆಂಬರ್ ೧ ರಂದು ಹೊಸ ಏಕೀಕೃತ ಮೈಸೂರು ರಾಜ್ಯ ಉದಯವಾಯಿತು. ೧೯೭೩ ರಲ್ಲಿ ಅಂದಿನ ಮುಖ್ಯಮಂತ್ರಿ ದೇವರಾಜ ಅರಸರ ಕಾಲದಲ್ಲಿ ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಪುನರ್ ನಾಮಕರಣ ಮಾಡಲಾಯಿತು.
ಕರ್ನಾಟಕದ ಗಡಿ :
ಉತ್ತರದಲ್ಲಿ ಗೋವಾ ಮತ್ತು ಮಹಾರಾಷ್ಟ್ರ, ಪೂರ್ವದಲ್ಲಿ ಆಂಧ್ರಪ್ರದೇಶ, ದಕ್ಷಿಣದಲ್ಲಿ ತಮಿಳುನಾಡು ಮತ್ತು ಕೇರಳ ಹಾಗೂ ಪಶ್ಚಿಮದಲ್ಲಿ ಅರಬ್ಬೀ ಸಮುದ್ರ ೧೧.೫ ಡಿಗ್ರಿ, ಉತ್ತರ ೧೮.೫ ಡಿಗ್ರಿ ಉತ್ತರ ಅಕ್ಷಾಂಶ ಹಾಗೂ ೭೪ ಡಿಗ್ರಿ ಪೂರ್ವ ರೇಖಾಂಶಗಳೊಳಗೆ ಈ ರಾಜ್ಯ ವಿಸ್ತರಿಸಿಕೊಂಡಿವೆ. ವಿಸ್ತೀರ್ಣ ೧,೯೧, ೭೯೧ ಚ. ಕಿ. ಮೀ, ಜಿಲ್ಲೆಗಳು – ೩೦, ತಾಲೂಕು – ೧೭೬, ಹಳ್ಳಿಗಳು – ೨೯,೩೪೦
ಪ್ರಮುಖ ನದಿಗಳು :
ಕೃಷ್ಣಾ ಮತ್ತು ಕಾವೇರಿ. ಕಾವೇರಿ ನದಿಯ ಉಪನದಿಗಳು – ಘಟಪ್ರಭಾ, ಮಲಪ್ರಭಾ, ಭೀಮಾ, ತುಂಗಭದ್ರಾ, ಕಾವೇರಿಯ ಉಪನದಿಗಳಾಗಿವೆ. ಕಾವೇರಿಯ ಪೂರ್ವಾಭೀಮುಖವಾಗಿ ಹರಿಯುವ ನದಿಗಳು ಶರಾವತಿ, ವಾರಾಹಿ, ಗಂಗಾವಳಿ ನೇತ್ರಾವತಿ, ಗುರುಪುರ ನದಿ, ಲಕ್ಷ್ಮಣತೀರ್ಥ, ಅರ್ಕಾವರ್ತಿ, ಕೃಷ್ಣಾ, ಮತ್ತು ನದಿಗಳು. ಪಶ್ಚಿಮಾಭೀಮುಖವಾಗಿ ಹರಿಯುವ ನದಿಗಳು – ಕಾಳಿ, ಅಘನಾಶಿನಿ, ಶಾಲ್ಮಲಾ ಇನ್ನು ಮುಂತಾದವುಗಳು.
ಕೃಷಿ, ಮುಖ್ಯ ಬೆಳೆಗಳು :
ರಾಜ್ಯದ ಶೇ ೬೫ ರಷ್ಟು ಕಸಬುಗಳು. ರಾಜ್ಯದ ೧,೯೦,೪೯,೮೩೬ ಹೆಕ್ಟರ್ ಯೋಗ್ಯ ಭೂಮಿ. ಭತ್ತ, ಜೋಳ, ರಾಗಿ, ಗೋಧಿ, ಎಳ್ಳು, ಕಬ್ಬು, ಹತ್ತಿ, ತೆಂಗು, ಅಡಿಕೆ, ಸೂರ್ಯಕಾಂತಿ, ಒಣಮೆಣಸಿನಕಾಯಿ ಮುಖ್ಯ ಬೆಳೆಗಳು, ಎಣ್ಣೆಕಾಳು ತೋಟಗಾರಿಕೆ ಬೆಳೆಗಳನ್ನು ೧೮ ಲಕ್ಷ ಹೆಕ್ಟರ್ಗಳಲ್ಲಿ ಲಕ್ಷ ಟನ್, ಗರಿಷ್ಟ ನೀರಾವರಿ ಸಾಮರ್ಥ್ಯ – ೫೫ ಪ್ರದೇಶದ ಶೇ. ೫೧.೪ ಭಾಗವನ್ನು ಹೊಂದಿದೆ. ಜನರ ಜೀವನಾಧಾರ ಕೃಷಿ ಮತ್ತು ಸಂಬಂಧಿತ ಪ್ರದೇಶದಲ್ಲಿ ೧,೨೫,೯೨,೫೦೯ ಹೆಕ್ಟೇರು ಕೃಷಿ ಮುಸುಕಿನ ಜೋಳ, ಸಜ್ಜೆ, ತೊಗರಿ, ನೆಗಡಲೆ, ಮಣಸು, ಏಲಕ್ಕಿ, ಕಾಫಿ, ತಂಬಾಕು, ಉತ್ಪಾದನೆಯಲ್ಲಿ ರಾಜ್ಯಕ್ಕೆ ದೇಶದಲ್ಲಿ ೭ ನೇ ಸ್ಥಾನ.
ಖನಿಜಗಳು :
ಚಿನ್ನ, ಕಬ್ಬಿಣದ ಅದಿರು, ಸುಣ್ಣದ ಕಲ್ಲು, ತಾಮ್ರ, ಅಲ್ಯೂಮಿನಿಯಂ, ಕಯೋಲಿನ್, ಕಯನೈಟ್, ಮ್ಯಾಗ್ನಸೈಟ್, ಓಕರ್, ಚಿಪ್ಪು ಸುಣ್ಣ, ಫೆಲ್ ಸೈನ್. ಇಡೀ ದೇಶದಲ್ಲಿ ಚಿನ್ನ ರಾಯಚೂರು ಜಿಲ್ಲೆಯ ಹಟ್ಟಿ ಚಿನ್ನದ ಗಣಿ ದೇಶವಿದೇಶಗಳಲ್ಲಿ ಭಾರಿ ಬೇಡಿಕೆ. ಮ್ಯಾಂಗನೀಸ್, ಕ್ರೋಮೈಟ್, ಬಾಕ್ಸೈಟ್, ಆಂಟಿಮನಿ, ಬೆಳ್ಳಿ, ಕಲ್ನಾರು, ಕಾವುಜೇಡು, ಬೆಣಚುಕಲ್ಲು, ಸ್ಪಿಯಟೈಟ್, ಡೊಲೋಮೈಟ್, ಉತ್ಪಾದಿಸುವ ಏಕೈಕ ರಾಜ್ಯ ಕರ್ನಾಟಕ.
ಪ್ರಮುಖ ಕೈಗಾರಿಕೆಗಳು :
ಕೈಗಡಿಯಾರ, ವಿಮಾನ, ವಿದ್ಯುನ್ಮಾನ ಸಾಧನಗಳು, ದೂರವಾಣಿ, ಕಬ್ಬಿಣ ಮತ್ತು ಉಕ್ಕು, ಶ್ರೀಗಂಧದ ಎಣ್ಣೆ – ಸಾಬೂನು, ರಾಸಾಯನಿಕಗಳು, ವಾಗನಗಳು, ಭಾರೀ – ಹಗುರ ಎಂಜಿನಿಯರಿಂಗ್, ಸಿಮೆಂಟ್, ಅಲ್ಯೂಮಿನಿಯಂ, ಹತ್ತಿ, ರೇಷ್ಮೇ ವಸ್ತ್ರ, ರಸಗೊಬ್ಬರ, ಆಹಾರ ಸಂಸ್ಕರಣ, ಕಾಗದ, ಸಕ್ಕರೆ ಇನ್ನು ಮುಂತಾದವುಗಳು.
ಪ್ರೇಕ್ಷಣೀಯ ಸ್ಥಳಗಳು :
ಬೆಂಗಳೂರಿನ ವಿಧಾನಸೌಧ, ಲಾಲ್ ಬಾಗ್, ಕಬ್ಬನ್ ಪಾರ್ಕ್, ಬನ್ನೇರುಘಟ್ಟ, ಮೈಸೂರು ಅರಮನೆ, ಶಿವಮೊಗ್ಗ ಜಿಲ್ಲೆಯ ಜೋಗ ಜಲಪಾತ, ಹಾಸನ ಜಿಲ್ಲೆಯ ಬೇಲೂರು – ಹಳೇಬೀಡು, ಶ್ರವಣ ಬೆಳಗೋಳ, ಶ್ರವಣ ಬೆಳಗೋಳದ ಗೊಮ್ಮಟೇಶ್ವರ, ಬಿಜಾಪುರದ ಗೋಳಗೊಮ್ಮಟ, ಬಾದಾಮಿ – ಐಹೊಳೆ – ಪಟ್ಟದ ಕಲ್ಲು, ಪುರಾತನ ದೇವಾಲಯಗಳು, ಬಂಡೀಪುರ, ನಾಗರಹೊಳೆ ವನ್ಯ ಮೃಗಧಾಮಗಳು, ವಿಜಯಪುರದ ಹಂಪಿ, ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ, ಕುಕ್ಕೆ ಸುಬ್ರಮಣ್ಯ, ಉಡುಪಿ ಜಿಲ್ಲೆಯ ಉಡುಪಿ ಕೊಲ್ಲೂರು ದೇವಸ್ಥಾನಗಳು, ಮಲ್ಪೆ ಸೈಂಟ್ ಮೇರಿಸ್ ದ್ವೀಪ, ರಾಜ್ಯದ ಹಲವೆಡೆಗಳಲ್ಲಿರುವ ಜಲಾಶಯ – ಜಲಪಾತಗಳು ದೇಶವಿದೇಶಗಳ ಪ್ರವಾಸಿಗರನ್ನು ಆಕರ್ಷಿಸುತ್ತದೆ.
ಕರ್ನಾಟಕದ ಅಂಕಿ – ಅಂಶಗಳು
ಜಿಲ್ಲೆಗಳು | ಜಿಲ್ಲಾ ಮುಖ್ಯ ಸ್ಥಳ | ವಿಸ್ತೀರ್ಣ | ಸಾಕ್ಷರತೆ |
ಉತ್ತರ ಕನ್ನಡ | ಕಾರವಾರ | 10,291 | 84.06 |
ಉಡುಪಿ | ಉಡುಪಿ | 3,880 | 86.24 |
ಕೊಡಗು | ಮೆಡಿಕೇರಿ | 4,102 | 82.61 |
ಕೊಪ್ಪಳ | ಕೊಪ್ಪಳ | 7,189 | 68.09 |
ಕೋಲಾರ | ಕೋಲಾರ | 3,969 | 74.39 |
ಗದಗ | ಗದಗ | 4,656 | 75.12 |
ಗುಲ್ಬರ್ಗಾ | ಗುಲ್ಬರ್ಗಾ | 10,591 | 64.85 |
ಚಾಮರಾಜನಗರ | ಚಾಮರಾಜನಗರ | 5,101 | 61.43 |
ಚಿಕ್ಕಮಗಳೂರು | ಚಿಕ್ಕಮಗಳೂರು | 7,201 | 79.25 |
ಚಿತ್ರದುರ್ಗ | ಚಿತ್ರದುರ್ಗ | 8,440 | 73.71 |
ದಾವಣಗೆರೆ | ದಾವಣಗೆರೆ | 5,924 | 75.74 |
ತುಮಕೂರು | ತುಮಕೂರು | 10,597 | 75.14 |
ದಕ್ಷಿಣ ಕನ್ನಡ | ಮಂಗಳೂರು | 4,560 | 88.57 |
ಧಾರವಾಡ | ಧಾರವಾಡ | 4,260 | 80.00 |
ಬಳ್ಳಾರಿ | ಬಳ್ಳಾರಿ | 8,450 | 67.43 |
ಬಾಗಲಕೋಟೆ | ಬಾಗಲಕೋಟೆ | 6,575 | 68.82 |
ಬಿಜಾಪುರ | ಬಿಜಾಪುರ | 10,494 | 67.15 |
ಬೀದರ್ | ಬೀದರ್ | 5,448 | 70.51 |
ಬೆಂಗಳೂರು ( ನ ) | ಬೆಂಗಳೂರು ನಗರ | 2,985 | 87.67 |
ಬೆಂಗಳೂರು ( ಗ್ರಾ ) | ಬೆಂಗಳೂರು | 2,259 | 77.93 |
ಬೆಳಗಾವಿ | ಬೆಳಗಾವಿ | 13,415 | 73.48 |
ಮಂಡ್ಯ | ಮಂಡ್ಯ | 4,961 | 70.40 |
ಮೈಸೂರು | ಮೈಸೂರು | 6,854 | 72.79 |
ರಾಯಚೂರು | ರಾಯಚೂರು | 6,827 | 59.56 |
ಶಿವಮೊಗ್ಗ | ಶಿವಮೊಗ್ಗ | 8,477 | 80.45 |
ಹಾವೇರಿ | ಹಾವೇರಿ | 4,823 | 77.40 |
ಹಾಸನ | ಹಾಸನ | 6,814 | 76.07 |
ಚಿಕ್ಕಬಳ್ಳಾಪುರ | ಚಿಕ್ಕಬಳ್ಳಾಪುರ | 4,524 | 69.76 |
ರಾಮನಗರ | ರಾಮನಗರ | 3,556 | 69.22 |
ಯಾದಗಿರಿ | ಯಾದಗಿರಿ | 5,273 | 51.83 |
FAQ
ಕರ್ನಾಟಕ ರಾಜ್ಯದಲ್ಲಿ ಎಷ್ಟು ತಾಲೂಕುಗಳಿವೆ ?
೧೭೬
ಕರ್ನಾಟಕ ರಾಜ್ಯದ ರಾಜಧಾನಿ ಯಾವುದು ?
ಬೆಂಗಳೂರು
ಇತರೆ ವಿಷಯಗಳು :
ಭಾರತದ ಕೆಲವು ಮುಖ್ಯ ನದಿ ಕಣಿವೆ ಯೋಜನೆಗಳ ಬಗ್ಗೆ ಮಾಹಿತಿ