ಭೂಕಂಪದ ಬಗ್ಗೆ ಮಾಹಿತಿ‌ | Information about earthquake in Kannada

ಭೂಕಂಪದ ಬಗ್ಗೆ ಮಾಹಿತಿ‌ Information about earthquake Bhukampanada Bagge Mahiti in Kannada

ಭೂಕಂಪದ ಬಗ್ಗೆ ಮಾಹಿತಿ‌

Information about earthquake in Kannada
Information about earthquake in Kannada

ಈ ಲೇಖನಿಯಲ್ಲಿ ಭೂಕಂಪದ ಬಗ್ಗೆ ಸಂಫೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.

ಭೂಕಂಪ

  • ಭೂಮಿಯ ಅಂತರಾಳದಲ್ಲಿ ಒತ್ತಡ ಮತ್ತು ಉಷ್ಣತೆಯಿಂದ ಭೂಮಿಯು ಕಂಪಿಸುವುದಕ್ಕೆ ಭೂಕಂಪನ ಎನ್ನುವರು.
  • ಭೂಕಂಪನದ ಕುರಿತು ಅಧ್ಯಯನ ಮಾಡುವ ಶಾಸ್ತ್ರಕ್ಕೆ ಸಿಸ್ಮೋಲಜಿ ಎಂದು ಕರೆಯುವರು.
  • ಭೂಕಂಪನದ ಮುನ್ಸೂಚನೆಯನ್ನು ತಿಳಿಸುವ ಸಾಧನಕ್ಕೆ ಅಕ್ಟಾರೇಡಾರ್‌ ಮೀಟರ್‌ ಎಂದು ಕರೆಯುವರು.
  • ಭೂಕಂಪನದ ಉಗಮ, ಪ್ರಮಾಣ, ವೇಗ, ಮುಂತಾದವುಗಳ ಕುರಿತು ಅಳೆಯುವ ಸಾಧನಕ್ಕೆ ಸಿಸ್ಮೋಗ್ರಾಫ್‌ ಎನ್ನುವರು.
  • ಭೂಕಂಪನದ ತೀವ್ರತೆ ಮತ್ತು ಪ್ರಮಾಣವನ್ನು ನಿಖರವಾಗಿ ಅಳೆಯುವ ಸಾಧನಕ್ಕೆ ರಿಕ್ಟರ್‌ ಎಂದು ಕರೆಯುವರು.
  • ಭೂಕಂಪನದ ಉಗಮವಾಗುವ ಸ್ಥಳಕ್ಕೆ ಭೂಕಂಪನದ ಒಳಕೇಂದ್ರ, ಪೋಕಸ, ಐಸೋ ಸೆಂಟರ್‌, ಭೂಕಂಪನದ ನಾಭಿ ಹೀಗೆ ಬೇರೆ ಬೇರೆ ಹೆಸರುಗಳಿಂದ ಕರೆಯುವರು.
  • ಭೂಕಂಪನಾಭಿಯಿಂದ ಲಂಭಕೋನದಲ್ಲಿರುವ ಭೂ ಮೇಲ್ಮೈ ಸ್ಥಾನಕ್ಕೆ ಭೂಕಂಪನದ ಹೊರಕೇಂದ್ರ ಅಥವಾ ಎಫಿಸೆಂಟರ್‌ ಎಂದು ಕರೆಯುವರು.
  • ಒಂದೇ ಅವಧಿಯಲ್ಲಿ ಒಂದೇ ರೀತಿಯ ತೀವ್ರತೆ ಹೊಂದಿರುವ ಪ್ರದೇಶಗಳನ್ನು ಸೇರಿಸುವ ರೇಖೆಗೆ ಸಹ ಭೂಕಂಪನ ರೇಖೆ ಎನ್ನುವರು.
  • ಫೆಸಿಫಿಕ್‌ ಮಹಾಸಾಗರ ಸುತ್ತಲೂ ಅತಿ ಭೂಕಂಪ ಮತ್ತು ಜ್ವಾಲಾಮುಖಿಗಳು ಸಂಭವಿಸುತ್ತವೆ. ಆದ್ದರಿಂದ ಅದಕ್ಕೆ ರಿಂಗ್‌ ಫೈರ್‌ ಜೋನ ಅಥವಾ ಅಗ್ನಿ ಕಟಿಬಂದ ವಲಯ ಎಂದು ಕರೆಯುವರು.
  • ಸಮುದ್ರ ಮತ್ತು ಸಾಗರಗಳಲ್ಲಿ ಭೂಕಂಪನ ಉಂಟಾದಾಗ ದೊಡ್ಡ ಪ್ರಮಾಣದ ಅಲೆಗಳು ಸುತ್ತುವ ಭೂಭಾಗಕ್ಕೆ ಬಂದು ಅಪ್ಪಳಿಸುತ್ತವೆ. ಭೂಕಂಪನದಿಂದ ಸುನಾಮಿ ಉಂಟಾಗುತ್ತದೆ.

ಭೂಕಂಪನ ಮಾಪನ ಕೇಂದ್ರಗಳು

  • ತಮಿಳುನಾಡು – ಕೊಡೈಕೆನಾಲ್‌
  • ಕರ್ನಾಟಕ – ಗೌರಿಬಿದನೂರು ಮತ್ತು ಚಿಂಚೋಳಿ
  • ಮಹಾರಾಷ್ಟ್ರ – ಪುಣೆ ಸಮೀಪ ಕೊಲಾಬಾ
  • ಆಂಧ್ರಪ್ರದೇಶ – ಹೈದರಾಬಾದ್‌
  • ಪಶ್ಚಿಮ ಬಂಗಾಳ – ಕೊಲ್ಕತ್ತಾ

ಭೂಕಂಪನದ ಅಲೆಗಳು

ಭೂಕಂಪನದಲ್ಲಿ ೩ ಅಲೆಗಳನ್ನು ಹೊಂದಿದೆ. ಅವುಗಳನ್ನು ಈ ಕೆಳಕಂಡಂತೆ ತಿಳಿಸಲಾಗಿದೆ.

೧. ನೀಳ ಅಲೆ :

ಭೂ ಮೇಲ್ಮೈಯನ್ನು ಮೊದಲು ಬಂದು ತಲುಪುತ್ತವೆ. ಆದ್ದರಿಂದ ಇವುಗಳಿಗೆ ಪ್ರಾಥಮಿಕ ಅಲೆಗಳೆಂದು ಕರೆಯುತ್ತಾರೆ. ಈ ಅಲೆಗಳಿಗೆ ತಳ್ಳುವ ಅಲೆಗಳು, ಒತ್ತಡದ ಅಲೆಗಳು, ಲ್ಯಾಂಗಿ ಟ್ಯೂಡನಲ್‌ ವ್ಹೇವ್ಸ್‌ ಎಂತಲೂ ಕರೆಯುತ್ತಾರೆ. ಇವುಗಳು ಘನ, ದ್ರವ, ಅನಿಲ ಮಾಧ್ಯಮದಲ್ಲಿ ಚಲಿಸುತ್ತವೆ. ಇವುಗಳು ಕೇಂದ್ರಗೋಳ, ಮಿಶ್ರಗೋಳ, ಶಿಲಾಗೋಳದ ಮೂಲಕ ಚಲಿಸುತ್ತವೆ. ಇವುಗಳ ವೇಗ ಪ್ರತಿ ಸೆಕೆಂಡಿಗೆ ೫.೫ ಕಿ. ಮೀ ೧೩ ಕಿ. ಮೀ ಈ ಅಲೆಗಳನ್ನು P ಸಂಕೇತಾಕ್ಷರದಿಂದ ಗುತಿಸುತ್ತಿಸುತ್ತಾರೆ.

೨. ಅಡ್ಡ ಅಲೆಗಳು :

ಈ ಅಲೆಗಳಿಗೆ ಅಡ್ಡ ಅಲೆ, ದ್ವಿತೀಯ ಅಲೆ, ಛೇದನಾ ಅಲೆ, ಕಂಡಿದ ಅಲೆ, ಟ್ರಾನ್ಜರವೇಷನ್‌ ವ್ಹೇವ್ಸ್‌ ಎಂದು ಬೇರೆ ಬೇರೆ ಹೆಸರುಗಳಿಂದ ಕರೆಯುವರು. P ಅಲೆಗಳ ನಂತರ ಭೂ ಮೇಲ್ಮೈಯನ್ನು ಬಂದು ತಲುಪುತ್ತದೆ. ಇವುಗಳನ್ನು S ಮತ್ತು T ಸಂಕೇತದಿಂದ ಗುರುತಿಸುವರು. ಇವುಗಳ ವೇಗ ಪ್ರತಿ ಸೆಕೆಂಡಿಗೆ ೩. ೨ ಕಿ. ಮೀ ದಿಂದ ೭.೨ ಕಿ. ಮೀ ಇವುಗಳು ದ್ರವ ಮಾಧ್ಯಮದಿಂದ ಚಲಿಸುತ್ತವೆ. ಇವುಗಳು ಮಿಶ್ರಗೋಳ ಮತ್ತು ಶಿಲಾಗೋಳದ ಮೂಲಕ ಭೂ ಮೇಲ್ಮೈಗೆ ಬಂದು ತಲುಪುತ್ತದೆ.

೩. ಮೇಲ್ಮೈ ಅಲೆಗಳು :

ಈ ಅಲೆಗಳನ್ನು P ಮತ್ತು S ಅಲೆಗಳ ನಂತರ ಭೂ ಮೇಲ್ಮೈಯನ್ನು ಬಂದು ತಲುಪುವುದರಿಂದ ತೃತಿಯ ಅಲೆಗಳು ಎಂದು ಕರೆಯುವರು. ಈ ಅಲೆಗಳನ್ನು ಇ. ಎಚ್‌. ಲವ್‌ ಮತ್ತು ರೈಲ್ವೆ ಎಂಬುವರು ಕಂಡುಹಿಡಿದ್ದರಿಂದ ಇವುಗಳಿಗೆ ಲವ್‌ ಅಲೆಗಳು ಎಂದು ಕರೆಯುವರು. ಈ ಅಲೆಗಳನ್ನು ಉದ್ದ ಅಲೆ, ಧೀರ್ಘ ಅಲೆ, ಲವ್‌ ಅಲೆ, ಅತಿ ವಿನಾಶವನ್ನುಂಟು ಮಾಡುವ ಅಲೆ, ಭಯಂಕರವಾದ ಅಲೆ ಹೀಗೆ ಬೇರೆ ಬೇರೆ ಹೆಸರುಗಳಿಂದ ಕರೆಯುವರು. ಇವುಗಳ ವೇಗ ಪ್ರತಿ ಸೆಕೆಂಡಿಗೆ ೪.K̤ M ದಿಂದ ೪. ೩ ಕಿ. ಮೀ ಹಾಗೂ ಈ ಅಲೆಗಳನ್ನು L ಸಂಕೇತಾಕ್ಷರದಿಂದ ಗುರುತಿಸುವರು.

ಭೂಕಂಪನದ ವಲಯಗಳು

೧ನೇ ವಲಯ :

  • ಅತಿ ಕಡಿಮೆ ಭೂಕಂಪನದ ತೀವ್ರತೆ ಉಂಟಾಗುವುದು.
  • ದಕ್ಷಿಣ ಪ್ರಸ್ಥ ಭೂಮಿಯ ಪ್ರದೇಶಗಳು ಭಾರತದ ಉಳಿದ ಭಾಗಗಳು ಈ ವಲಯದಲ್ಲಿ ಕಂಡು ಬರುತ್ತವೆ.

೨ನೇ ವಲಯ :

  • ೨ ರಿಂದ ೩ ರಿಕ್ಟರ್ ದಷ್ಟು ಭೂಕಂಪನದ ತೀವ್ರತೆ ಕಂಡು ಬರುತ್ತದೆ.
  • ಈ ವಲಯದಲ್ಲಿ ಕರ್ನಾಟಕದ ಕೆಲ ಭಾಗ ಆಂಧ್ರಪ್ರದೇಶ, ಒಡಿಸ್ಸಾದಲ್ಲಿ ಸೇರುತ್ತದೆ.

೩ನೇ ವಲಯ :

  • ೩ ರಿಂದ ೫ ರಿಕ್ಟರ್‌ ದಷ್ಟು ಭೂಕಂಪನದ ತೀವ್ರತೆ ಕಂಡು ಬರುತ್ತದೆ.
  • ಇಲ್ಲಿ ಗುಜರಾತ್‌, ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಡ್‌, ಒರಿಸ್ಸಾ, ಮಹಾರಾಷ್ಟ್ರ, ಉತ್ತರ ಕರ್ನಾಟಕ, ಆಂಧ್ರಪ್ರದೇಶ, ಪಶ್ಚಿಮ ಕರಾವಳಿ ತೀರ ಪ್ರದೇಶ ಮುಂತಾದವುಗಳು.

೪ನೇ ವಲಯ :

  • ೫ ರಿಂದ ೭ ರಿಕ್ಟರ್‌ ದಷ್ಟು ಭೂಕಂಪನದ ತೀವ್ರತೆ ಕಂಡು ಬರುತ್ತದೆ.
  • ಜಮ್ಮು ಕಾಶ್ಮೀರದ ಉತ್ತರ ಭಾಗ, ಹಿಮಾಚಲ ಪ್ರದೇಶ, ಬಿಹಾರದ ಭಾಗಗಳು, ಉತ್ತರ ಪ್ರದೇಶ, ಗುಜರಾತ್‌, ಪಶ್ಚಿಮ ಬಂಗಾಳ ಮುಂತಾದವುಗಳು.

೫ನೇ ವಲಯ :

  • ೭ ರಿಕ್ಟರ್‌ ಗಿಂತ ಹೆಚ್ಚು ಭೂಕಂಪನ ಉಂಟಾಗುತ್ತದೆ.
  • ಇಲ್ಲಿ ಈಶಾನ್ಯ ರಾಜ್ಯಗಳು ಜಮ್ಮು ಕಾಶ್ಮೀರದ ಉತ್ತರ ಖಂಡ, ಬಿಹಾರ ಮತ್ತು ಕಛ್‌ ಪ್ರದೇಸಗಳು.

FAQ

ಭೂಕಂಪನದ ಕುರಿತು ಅಧ್ಯಯನ ಮಾಡುವ ಶಾಸ್ತ್ರಕ್ಕೆ ಏನೆಂದು ಕರೆಯುತ್ತಾರೆ ?

ಭೂಕಂಪನದ ಕುರಿತು ಅಧ್ಯಯನ ಮಾಡುವ ಶಾಸ್ತ್ರಕ್ಕೆ ಸಿಸ್ಮೋಲಜಿ ಎಂದು ಕರೆಯುವರು.

ಭೂಕಂಪನದ ತೀವ್ರತೆ ಅಳೆಯುವ ಸಾಧನವು ಯಾವುದು ?

ರಿಕ್ಟರ್

ಇತರೆ ವಿಷಯಗಳು :

ಭಾರತಕ್ಕೆ ಯೂರೋಪಿಯನ್ನರ ಆಗಮನ

ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ಮಾಹಿತಿ

Leave a Reply

Your email address will not be published. Required fields are marked *