ರಾಷ್ಟ್ರೀಯ ಯುವ ದಿನದ ಬಗ್ಗೆ ಮಾಹಿತಿ Information about National Youth Day Rashtriya Yuva Dinada Bagge Mahiti in Kannada
ರಾಷ್ಟ್ರೀಯ ಯುವ ದಿನದ ಬಗ್ಗೆ ಮಾಹಿತಿ
ಈ ಲೇಖನಿಯಲ್ಲಿ ರಾಷ್ಟ್ರೀಯ ಯುವ ದಿನದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.
ಪೀಠಿಕೆ
ಭಾರತದ ಶ್ರೇಷ್ಠ ನಾಯಕ ಮತ್ತು ಯುವಜನತೆಯಲ್ಲಿ ಅಚ್ಚಾಗಿ ಉಳಿದಿರುವ ಅಪಾರ ನಂಬಿಕೆಯುಳ್ಳ ಮಹಾನ್ ವ್ಯಕ್ತಿಯೆಂದರೆ ಸ್ವಾಮಿ ವಿವೇಕಾನಂದರು. ಹಾಗಾಗಿ ಇವರ ಜನ್ಮದಿನವನ್ನು ಗೌರವಿಸುವುದಕ್ಕಾಗಿ ಪ್ರತಿ ವರ್ಷ ಜನವರಿ 12 ರಂದು ರಾಷ್ಟ್ರೀಯ ಯುವ ದಿನವನ್ನು ಆಚರಿಸಲಾಗುವುದು.
ವಿಷಯ ವಿವರಣೆ
ರಾಷ್ಟ್ರೀಯ ಯುವ ದಿನದ ಇತಿಹಾಸ
ಸ್ವಾಮಿ ವಿವೇಕಾನಂದರು ಜನವರಿ 12,1863 ರಂದು ಕೋಲ್ಕತ್ತಾದಲ್ಲಿ ಜನಿಸಿದರು. ಅವರು ಇತರ ಸನ್ಯಾಸಿಗಳಂತೆ ಇರಲಿಲ್ಲ, ಬದಲಾಗಿ ರಾಷ್ಟ್ರ ನಿರ್ಮಾಣದ ಪ್ರಕ್ರಿಯೆಯಲ್ಲಿ ಯುವಕರ ದನಿಯಾದರು. ಜಾಗತಿಕ ಮಟ್ಟದಲ್ಲಿ ಅವರ ಸಾಧನೆಗಳು ಭಾರತದ ಹೆಸರನ್ನು ನಕ್ಷೆಯಲ್ಲಿ ಗುರುತಿಸುವಂತೆ ಮಾಡಿದವು. ಇದು ಆಧ್ಯಾತ್ಮಿಕತೆಯ ಭೂಮಿಯಾಗಿ ಭಾರತದ ಚಿತ್ರಣವನ್ನು ಪುನರುಜ್ಜೀವನಗೊಳಿಸಲು ಸಹಾಯ ಮಾಡಿತು. ಯುವಕರ ಸಾಮರ್ಥ್ಯವನ್ನು ಬಳಸಿಕೊಳ್ಳುವಲ್ಲಿ ಅವರು ಅಪಾರ ಗಮನಹರಿಸಿದರು. ಬ್ರಿಟಿಷರ ವಿರುದ್ಧ ಯುವ ಪೀಳಿಗೆ ಸ್ವಾತಂತ್ರ್ಯ ಪಡೆಯಲು ಪ್ರೇರೇಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಸ್ವಾಮಿ ವಿವೇಕಾನಂದರು ತತ್ವಶಾಸ್ತ್ರ, ಧರ್ಮ, ಸಾಹಿತ್ಯ, ವೇದಗಳು, ಪುರಾಣಗಳ ಬಗ್ಗೆ ಅಪಾರ ಜ್ಞಾನವನ್ನು ಹೊಂದಿದ್ದರು. ವಿವೇಕಾನಂದರ ಮರಣದ ನಂತರ 1984 ರಲ್ಲಿ ಭಾರತ ಸರ್ಕಾರವು ಅವರನ್ನು ಗೌರವಿಸಲು ಮತ್ತು ಅವನ ಬೋಧನೆಗಳ ಬಗ್ಗೆ ಜನರಿಗೆ ಅರಿವು ಮೂಡಿಸಲು ಅವರ ಜನ್ಮದಿನವಾದ ಜನವರಿ 12 ಅನ್ನು ರಾಷ್ಟ್ರೀಯ ಯುವ ದಿನವೆಂದು ಘೋಷಿಸಿತು. 1985 ರಿಂದ ಭಾರತದಲ್ಲಿ ಪ್ರತಿ ವರ್ಷ ಈ ದಿನವನ್ನು ಆಚರಿಸಲಾಗುತ್ತಿದೆ.
ರಾಷ್ಟ್ರೀಯ ಯುವ ದಿನದ ಮಹತ್ವ
ಸ್ವಾಮಿ ವಿವೇಕಾನಂದರ ವಿಚಾರಧಾರೆಗಳನ್ನು ಯುವಜನತೆಯಲ್ಲಿ ಬಿತ್ತುವ ಮಹತ್ತರವಾದ ಮಹತ್ವವನ್ನು ರಾಷ್ಟ್ರೀಯ ಯುವ ದಿನವು ಹೊಂದಿದೆ. ವಿವೇಕಾನಂದರ ಜೀವನ ಮತ್ತು ಬೋಧನೆಗಳು ಯುವ ಮನಸ್ಸುಗಳಿಗೆ ಸ್ಫೂರ್ತಿ ನೀಡುವ ಉತ್ತಮ ಮೂಲವಾಗಿವೆ. ಜಗತ್ತನ್ನು ಗೆಲ್ಲುವ ಅತ್ಯುತ್ತಮ ಅಸ್ತ್ರ ಶಾಂತಿ ಮತ್ತು ಶಿಕ್ಷಣ ಎಂದು ಅವರು ನಂಬಿದ್ದರು. ಹಾಗಾಗಿ ಅವರು ವಿದ್ಯಾರ್ಥಿಗಳಿಗೆ ಆರಾಮಾಗಿರುವುದರಿಂದ ಹೊರಬಂದು ಬಯಸಿದ್ದನ್ನು ಸಾಧಿಸಬೇಕೆಂದು ಅವರು ಬಯಸಿದ್ದರು. ಈ ದಿನವು ಯುವಜನರಿಗೆ ವಿವೇಕಾನಂದರ ಬೋಧನೆಗಳ ಬಗ್ಗೆ ಅರಿವು ಮೂಡಿಸುವ ಗುರಿಯನ್ನು ಹೊಂದಿದೆ. ಅವರ ವಿಚಾರಗಳು ರಾಷ್ಟ್ರವನ್ನು ನಿರ್ಮಿಸುವಲ್ಲಿ ಪ್ರಮುಖ ಪಾತ್ರವಹಿಸಿದೆ. ಅವರ ದೃಷ್ಟಿಕೋನವನ್ನು ಗೌರವಿಸುವ ಸಲುವಾಗಿ ಮತ್ತು ಅದರಂತೆ ಕಾರ್ಯನಿರ್ವಹಿಸಲು ಯುವಕರನ್ನು ಪ್ರೇರೇಪಿಸುವ ಸಲುವಾಗಿ ರಾಷ್ಟ್ರೀಯ ಯುವ ದಿನವು ಬಹಳ ಮಹತ್ವದ್ದಾಗಿದೆ. ರಾಷ್ಟ್ರೀಯ ಯುವ ದಿನ ಅಥವಾ ಸ್ವಾಮಿ ವಿವೇಕಾನಂದ ಜಯಂತಿಯನ್ನು ವಿದ್ಯಾರ್ಥಿಗಳಿಗೆ ಉಪನ್ಯಾಸಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ವಿವಿಧ ಸ್ಪರ್ಧೆಗಳನ್ನು ಆಯೋಜಿಸುವ ಮೂಲಕ ಆಚರಿಸಲಾಗುತ್ತದೆ.
2022 ರ ಯುವ ದಿನದ ಥೀಮ್
2022 ರ ಯುವ ದಿನದ ಥೀಮ್ ‘ಇಟ್ಸ್ ಆಲ್ ಇನ್ ದಿ ಮೈಂಡ್’ ರಾಷ್ಟ್ರೀಯ ಯುವ ದಿನದ ಥೀಮ್ ಆಗಿದೆ. ರಾಷ್ಟ್ರೀಯ ಯುವ ದಿನದಂದು ಭಾರತ ಸರ್ಕಾರವು ಪ್ರತಿ ವರ್ಷವು ಕೂಡ ಹೊಸ ಹೊಸ ಥೀಮ್ ನೊಂದಿಗೆ ಯುವ ದಿನವನ್ನು ಆಚರಣೆ ಮಾಡಲಾಗುತ್ತದೆ. ರಾಷ್ಟ್ರದ ಪ್ರಸ್ತುತ ಮತ್ತು ಸಂಬಂಧಿತ ಸನ್ನಿವೇಶವನ್ನು ಆಧರಿಸಿ ಥೀಮ್ ಅನ್ನು ಆಯ್ಕೆ ಮಾಡಲಾಗಿದೆ. ಯುವ ದಿವಸ್ ಅನ್ನು ಒಂದು ವಿಭಿನ್ನ ಥೀಮ್ ನೊಂದಿಗೆ ಆಚರಣೆ ಮಾಡುವುದು ಹೆಚ್ಚು ಮಹತ್ವದ್ದಾಗಿದೆ. ಇದು ರಾಷ್ಟ್ರದ ಯುವಜನತೆಯ ಏಕೀಕರಣಕ್ಕೆ ಕೊಡುಗೆ ನೀಡುತ್ತದೆ.
ಉಪಸಂಹಾರ
ಇಂದಿನ ಯುವತೆಯೇ ಮುಂದಿನ ಪ್ರಜೆಗಳು. ಯುವಕರು ದೇಶವನ್ನು ಅಭಿವೃದ್ದಿಯತ್ತ ಸಾಗಿಸುವಲ್ಲಿ ಅದ್ಬುತವಾದ ಪಾತ್ರವನ್ನು ಯುಕರು ವಹಿಸಬೇಕು. ಆದ್ದರಿಂದ ಈಗಿನ ಯುವಕರು ಸದೃಢ ಮತ್ತು ಧೈರ್ಯಶಾಲಿಯಾಗಿದ್ದರೆ ಮಾತ್ರ ಅವರು ಮುಂದೆ ಪರಿಪೂರ್ಣ ನಾಗರಿಕರಾಗಿ ಹೊರಹೊಮ್ಮಲು ಸಾಧ್ಯ. ಇಂದಿನ ಯುವ ಜನತೆಯು ನಮ್ಮ ದೇಶದ ಆಸ್ತಿಯಿದ್ದಂತೆ. ಬಿಸಿ ರಕ್ತದ ಯುವಕರು ಒಂದು ರೀತಿಯಲ್ಲಿ ಬೆಂಕಿಯಿದ್ದ ಹಾಗೆ. ಸಣ್ಣ ಸಣ್ಣ ವಿಷಯಕ್ಕೂ ಬೇಗನೆ ರೊಚ್ಚಿಗೇಳುವ ಇವರನ್ನು ಸರಿಯಾದ ಹಾದಿಯಲ್ಲಿ ಸಾಗಿಸುವ ಕೆಲಸ ಎಲ್ಲರದ್ದು. ದೇಶವೊಂದರ ಯುವಶಕ್ತಿ ಸೂಕ್ತ ದಾರಿಯಲ್ಲಿ ಮುನ್ನಡೆದರೆ ಮಾತ್ರ ಆ ದೇಶ ಪ್ರಗತಿಯತ್ತು ಸಾಗಲು ಸಾಧ್ಯ. ಇಲ್ಲದಿದ್ದರೆ ಆ ದೇಶ ಅಧಃಪತನ ನಿಶ್ಚಿತ. ಭಾರತದಲ್ಲಿ ಯುವ ಶಕ್ತಿಗೆ ಅತ್ಯಂತ ಮಹತ್ವದ ಆದ್ಯತೆ ನೀಡಲಾಗಿದೆ.
FAQ
ರಾಷ್ಟ್ರೀಯ ಯುವ ದಿನವನ್ನು ಯಾರ ಜನ್ಮ ದಿನದ ಅಂಗವಾಗಿ ಅಚರಿಸಲಾಗುತ್ತದೆ ?
ಸ್ವಾಮಿ ವಿವೇಕಾನಂದಾರವರ ಜನ್ಮ ದಿನದ ಅಂಗವಾಗಿ ಆಚರಿಸುತ್ತಾರೆ.
ರಾಷ್ಟ್ರೀಯ ಯುವ ದಿನವನ್ನು ಯಾವಾಗ ಆಚರಿಸುತ್ತಾರೆ ?
ಜನವರಿ ೧೨
ಇತರೆ ವಿಷಯಗಳು :
ವಿಜ್ಞಾನ ಮತ್ತು ತಂತ್ರಜ್ಞಾನದ ಬಗ್ಗೆ ಪ್ರಬಂಧ
ಮಹಿಳಾ ದೌರ್ಜನ್ಯ ಮತ್ತು ಕಾನೂನು ಬಗ್ಗೆ ಪ್ರಬಂಧ