ಭಾರತದಲ್ಲಿನ ರಾಜ್ಯಗಳ ಬಗ್ಗೆ ಮಾಹಿತಿ Information About States in India Bhartadallina Rajyagala Bagge Mahiti in Kannada
ಭಾರತದಲ್ಲಿನ ರಾಜ್ಯಗಳ ಬಗ್ಗೆ ಮಾಹಿತಿ
ಕರ್ನಾಟಕ ರಾಜ್ಯ :
- ಕರ್ನಾಟಕ ರಾಜ್ಯವು ಭಾರತದಲ್ಲಿ ಅತಿ ಹೆಚ್ಚು ರಾಗಿಯನ್ನು ಬೆಳೆಯುವ ರಾಜ್ಯವಾಗಿದೆ.
- ಮೈಸೂರು ರಾಜ್ಯಕ್ಕೆ ಕರ್ನಾಟಕವೆಂದು ೧೯೭೩ ನವೆಂಬರ್ ೧ ರಂದು ನಾಮಕರಣ ಮಾಡಲಾಯಿತು.
- ಕರ್ನಾಟಕವು ೧೯೫೬ ನವೆಂಬರ್ ೧ ರಂದು ಏಕೀಕರಣಗೊಂಡಿತು.
- ಈ ರಾಜ್ಯವು ೩೧ ಜಿಲ್ಲೆಗಳನ್ನು ಹೊಂದಿದೆ. ಹಾಗೂ ೪ ಕಂದಾಯ ವಿಭಾಗಗಳನ್ನು ಹೊಂದಿದೆ.
- ಇಲ್ಲಿ ಅತಿ ಹೆಚ್ಚು ಗಂಧದ ಮರಗಳನ್ನು ಬೆಳೆಯಲಾಗುತ್ತದೆ.
- ಕರ್ನಾಟಕದ ಉಕ್ಕಿನ ಮನುಷ್ಯ ಎಂದು ಹಳ್ಳಿಕೆರೆ ಗುದ್ಲಪ್ಪ ನವರು ಗುರುತಿಸಿಕೊಂಡಿದ್ದಾರೆ.
- ಕೃಷ್ಣ ನದಿಯು ಕರ್ನಾಟಕದಲ್ಲಿ ಉದ್ದವಾಗಿ ಹರಿಯು ನದಿಯಾಗಿದೆ.
- ಕರ್ನಾಟಕ ರಾಜ್ಯವು ಭಾರತದಲ್ಲಿ ಅತಿ ಹೆಚ್ಚು ಕಾಫಿ ಬೆಳೆಯು ರಾಜ್ಯವಾಗಿದೆ.
- ಭಾರತದಲ್ಲಿಯೇ ಕರ್ನಾಟಕ ರಾಜ್ಯವು ಅತಿ ಹೆಚ್ಚು ಆನೆಗಳನ್ನು ಹೊಂದಿದ ರಾಜ್ಯವಾಗಿದೆ.
- ಕರ್ನಾಟಕದಲ್ಲಿ ೬ ಪೋಲಿಸ್ ಆಯುಕ್ತಾಲಯಗಳಿವೆ.
ಮಧ್ಯಪ್ರದೇಶ ರಾಜ್ಯ:
- ಮಧ್ಯಪ್ರದೇಶದ ರಾಜಧಾನಿ ಭೂಪಾಲ್ ಆಗಿದೆ.
- ಮಧ್ಯಪ್ರದೇಶವು ಉಜೈನಿ ನಗರವು ಶಿಪ್ರಾ/ ಕ್ಷಪ್ರಾ ಎಂಬ ನದಿ ದಂಡೆ ಮೇಲಿದೆ.
- ಮಧ್ಯಪ್ರದೇಶವು ಭಾರತದಲ್ಲಿ ಅತಿ ಹೆಚ್ಚು ಅರಣ್ಯ ಹೊಂದಿರುವ ರಾಜ್ಯವಾಗಿದೆ.
- ಇಲ್ಲಿ ಅಶೋಕನಿಗೆ ಸಂಬಂದಿಸಿದ ಸಾಂಚಿ ಸ್ಥೂಪವಿದೆ.
- ಇದು ಪನ್ಹಾ ಎಂಬ ಸ್ಥಳವು ವಜ್ರದ ಗಣಿಗಳಿಗೆ ಹೆಸರುವಾಸಿಯಾಗಿದೆ. ಹಾಗೂ ಬಾರತದಲ್ಲಿಯೇ ಅತಿ ಹೆಚ್ಚು ವಜ್ರ ಉತ್ಪಾದಿಸುವ ರಾಜ್ಯವಾಗಿದೆ.
- ಮಧ್ಯಪ್ರದೇಶ ರಾಜ್ಯದಲ್ಲಿ ಗಾಂಧಿ ಸಾಗರ ಅಣೆಕಟ್ಟನ್ನು ಚಂಬಲ್ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ.
- ಮಧ್ಯಪ್ರದೇಶದ ಜಬ್ಬಲ್ ಪುರ ಭಾರತದ ಭೌಗೋಳಿಕ ಕೇಂದ್ರವಾಗಿದೆ.
- ಮಧ್ಯಪ್ರದೇಶದ ಹೋಶಂಗಾಬಾದ್ ಎಂಬಲ್ಲಿ RBI ನೋಟುಗಳನ್ನು ತಯಾರಿಸುವ ಕಾಗದದ ಕಾರ್ಖಾನೆಯಿದೆ.
- ಮಧ್ಯಪ್ರದೇಶದ ನೇಪಾ ನಗರದಲ್ಲಿ ನ್ಯೂಸ್ ಪ್ರಿಂಟ್ ಕಾಗದ ತಯಾರಿಸುವ ಕಾರ್ಖಾನೆ ಇದೆ.
ಹರಿಯಾಣ ರಾಜ್ಯ :
- ರಕ್ಷಣಾ ವಿಶ್ವವಿದ್ಯಾಲಯ ಇರುವ ಸ್ಥಳ ಗುರುಗ್ರಾಮ ಈ ರಾಜ್ಯದಲ್ಲಿದೆ.
- ಇದರ ರಾಜಧಾನಿ ಚಂಡಿಗಡ್ ಆಗಿದೆ.
- ಹರಿಯಾಣ ರಾಜ್ಯದಲ್ಲಿ ಪಾಣಿಪತ್ ಯುದ್ದ ಭೂಮಿ ಮತ್ತು ಕುರುಕ್ಷೇತ್ರ ಯುದ್ದ ಭೂಮಿ ಇದೆ.
- ಹರಿಯಾಣ ರಾಜ್ಯದ ಹಿಸ್ಸಾರ ಎಂಬ ಸ್ಥಳದಲ್ಲಿ ಎಮ್ಮೆ ತಳಿಗಳ ಸಂಶೋಧನೆ ಕೇಂದ್ರ ಇದೆ.
- ಹರಿಯಾಣ ರಾಜ್ಯವು ಭಾರತದಲ್ಲಿ ಅತಿ ಕಡಿಮೆ ಅರಣ್ಯ ಹೊಂದಿರುವ ರಾಜ್ಯವಾಗಿದೆ.
- ಕಲ್ಪನಾ ಚಾವ್ಲ, ಸಾಕ್ಷಿ ಮಲಿಕ್, ಸೈನಾ ನೆಹ್ವಾಲ್, ವಿಜೇಂದ್ರ ಸಿಂಗ್, ಬಾಬಾ ರಾಮದೇವ್, ಇವರೆಲ್ಲರೂ ಮೂಲತಃ ಹರಿಯಾಣ ರಾಜ್ಯದವರು.
ರಾಜಸ್ಥಾನ ರಾಜ್ಯ :
- ಇದರ ರಾಜ್ಯಧಾನಿ ಜೈಪುರ್ ಆಗಿದೆ.
- ರಾಜಸ್ಥಾನ್ ರಾಜ್ಯವು ಭಾರತದ ಅತಿ ದೊಡ್ಡ ರಾಜ್ಯವಾಗಿದೆ. (ವಿಸ್ತೀರ್ಣದಲ್ಲಿ).
- ಪಾಕಿಸ್ತಾನದೊಂದಿಗೆ ಅತೀ ಉದ್ದವಾದ ಗಡಿಯನ್ನು ಹೊಂದಿರುವ ರಾಜ್ಯವಾಗಿದೆ.
- ಇಲ್ಲಿಯ ನೃತ್ಯ ಇಲ್ಲಿ ರಾಣಾಪ್ರತಾಪ ಸಾಗಾರ ಅಥವಾ ರಾವತ್ ಭಟ್ ಅಣುವಿದ್ಯುತ್ ಸ್ಥಾವರ ಇದೆ.
- ರಾಜಸ್ತಾನದ ಹಲ್ದಿಘಾಟ್ ಎಂಬಲ್ಲಿ ೧೫೭೬ ಜೂನ್ ೨೧ ರಂದು ಮತಾಪ ಮತ್ತು ಮೊಘಲ್ ದೊರೆ ಅಕ್ಬರ್ ನಡುವೆ ಯುದ್ದವಾಯಿತು.
- ರಾಜಸ್ಥಾನದಲ್ಲಿ ಸಾರಿಸ್ಕಾ ರಾಷ್ಟ್ರೀಯ ಉದ್ಯಾನವನವಿದೆ.
- ಇಲ್ಲಿ ಪುಷ್ಕರ ಮೇಳದಲ್ಲಿ ಒಂಟೆಗಳ ಜಾತ್ರೆ ನಡೆಯುತ್ತದೆ.
- ರಾಜಸ್ಥಾನದ ಜೈಪುರವನ್ನು ಭಾರತದ ಗುಲಾಬಿ ನಗರವೆಂದು ಕರೆಯುತ್ತಾರೆ.
- ಇಲ್ಲಿ ಘಾನಪಕ್ಷಿಧಾಮವಿದೆ.
ಉತ್ತರ ಪ್ರದೇಶ ರಾಜ್ಯ :
- ಇದರ ರಾಜ್ಯಧಾನಿ ಲಖ್ನೋ ಆಗಿದೆ.
- ಇಲ್ಲಿ ಚೌರಿಚೌರ ಎಂಬ ಊರು ಇದೆ.
- ಕಾನ್ಪರ ನಗರದಲ್ಲಿ ಗ್ರೀನ್ ಪಾರ್ಕ ಇದೆ.
- ಅತಿ ಹೆಚ್ಚು ಲೋಕಸಭೆ ಕ್ಷೇತ್ರಗಳನ್ನು ಹೊಂದಿದ ರಾಜ್ಯವಾಗಿದೆ. (೮೦)
- ಅತಿ ಹೆಚ್ಚು ರಾಜ್ಯಸಭೆಗಳನ್ನು ಹೊಂದಿದ ರಾಜ್ಯವಾಗಿದೆ. (೩೧)
- ಈ ರಾಜ್ಯದಲ್ಲಿ ಅತಿ ಹೆಚ್ಚು ಪಂಚಾಯತಿಗಳನ್ನು ಹೊಂದಿದ ರಾಜ್ಯವಾಗಿದೆ.
- ಭಾರತದಲ್ಲಿ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿದ ರಾಜ್ಯವಾಗಿದೆ.
- ರಾಜ್ಯದ ಆಗ್ರಾ ಎಂಬ ನಗರದಲ್ಲಿ ಸಲೀಂ ಚಿಸ್ತಿಯ ಗೋರಿ ಇದೆ.
- ಭಾರತದಲ್ಲಿ ಅತಿ ಹೆಚ್ಚು ರಾಸಾಯನಿಕ ಗೊಬ್ಬರವನ್ನು ಉತ್ಪಾದಿಸುವ ರಾಜ್ಯವಾಗಿದೆ.
ಬಿಹಾರ ರಾಜ್ಯ :
- ಇದರ ರಾಜ್ಯಧಾನಿ ಪಾಟ್ನ ಆಗಿದೆ.
- ಅಶೋಕನು ಬೌದ್ದಧರ್ಮ ಸಮ್ಮೇಳನವನ್ನು ಪಾಟಲಿಪುತ್ರದಲ್ಲಿ ನಡೆಸಿದರು.
- ಬಿಹಾರ ರಾಜ್ಯದ ಪಾವಪುರಿ ಎಂಬ ನಗರದಲ್ಲಿ ಮಹಾವೀರ ನಿರ್ಮಾಣ ಹೊಂದಿದೆ.
- ಬಿಹಾರದ ರಾಜ್ಯದಲ್ಲಿ ಜಯಪ್ರಕಾಶ್ ನಾರಾಯಣ್ ವಿಮಾನ ನಿಲ್ದಾಣವಿದೆ.
- ಇಲ್ಲಿ ನಳಂದ ವಿಶ್ವ ವಿದ್ಯಾಲಯವಿದೆ.
- ಭಾರತದಲ್ಲಿ ಅತೀ ಕಡಿಮೆ ಸಾಕ್ಷರತೆಯನ್ನು ಹೊಂದಿರುವ ರಾಜ್ಯವಾಗಿದೆ.
- ಭಾರತದಲ್ಲಿ ಅತಿ ಹೆಚ್ಚು ಜನಸಾಂದ್ರತೆಯನ್ನು ಹೊಂದಿರುವ ರಾಜ್ಯವಾಗಿದೆ.
- ಇಲ್ಲಿ ಕೋಸಿ ಜಲವಿದ್ಯುತ್ ಉತ್ಪಾದನಾ ಕೇಂದ್ರವಿದೆ.
- ಕೋಸಿ ನದಿಯು ಬಿಹಾರಿನ ಕಣ್ಣೀರಿನ ನದಿಯಾಗಿದೆ.
ಸಿಕ್ಕಿಂ ರಾಜ್ಯ :
- ಇದರ ರಾಜ್ಯಧಾನಿ ಗ್ಯಾಂಗ್ ಟಕ್ ಆಗಿದೆ.
- ಸಿಕ್ಕಿಂ ರಾಜ್ಯವು ಭಾರತದಲ್ಲಿಯೇ ಅತಿ ಕಡಿಮೆ ಜನಸಂಖ್ಯೆಯನ್ನು ಹೊಂದಿರುವ ರಾಜ್ಯವಾಗಿದೆ.
- ಸಿಕ್ಕಿಂ ರಾಜ್ಯದ ಜೀವನದಿ ತಿಸ್ತಾ.
- ಇಲ್ಲಿ ನಾಥುಲಾ ಫಾಲ್ಸ್ ಇದೆ.
- ಈ ರಾಜ್ಯವು ಭಾರತದ ಮೊದಲ ಸಾವಯವ ರಾಜ್ಯವಾಗಿದೆ.
- ಈ ರಾಜ್ಯದ ಗ್ಯಾಂಗ್ ಟಕ್ ಎಂಬ ನಗರದಲ್ಲಿ ಹೈಕೋರ್ಟ ಇದೆ.
- ಸಿಕ್ಕಿಂನಲ್ಲಿ ಕಾಂಚನಚುಂಗ ಪರ್ವತ ಇದೆ.
- ಸಿಕ್ಕಿಂ ರಾಜ್ಯವು ಹೆಬ್ಬೆರಳಿನಾಕಾರದಲ್ಲಿದೆ.
ಅಸ್ಸಾಂ ರಾಜ್ಯ :
ಇದರ ರಾಜ್ಯಧಾನಿ ದಿಸ್ ಪುರ್ ಆಗಿದೆ.
ಈ ರಾಜ್ಯದ ಹಬ್ಬ ಸಾತ್ರಿಯಾ.
ಇಲ್ಲಿ ಕಾಜಿರಂಗ ರಾಷ್ಟ್ರೀಯ ಉದ್ಯಾನವನವಿದೆ.
ಇಲ್ಲಿ ಸುರ್ಮಾ ಕಣಿವೆ ಇದೆ.
ಇಲ್ಲಿ ಮಾನಸ ಹುಲಿ ಸಂರಕ್ಷಣಾ ಕೇಂದ್ರವಿದೆ.
ಭಾರತದಲ್ಲಿ ಅತೀ ಹೆಚ್ಚು ಚಹಾ ಬೆಳೆಯುವ ರಾಜ್ಯವಾಗಿದೆ.
ಬ್ರಹ್ಮಪುತ್ರ ನದಿ ಅಸ್ಸಾಂ ರಾಜ್ಯದ ಕಣ್ಣೀರಿನ ನದಿಯಾಗಿದೆ.
ಇಲ್ಲಿ ಚಹಾ ಸಂಶೋಧನ ಕೇಂದ್ರವಿದೆ.
ಪ್ರಪಂಚದ ಅತಿ ದೊಡ್ಡ ನದಿ ದ್ವೀಪವಾದ ಮಜೂಲಿಯು ಈ ರಾಜ್ಯದಲ್ಲಿದೆ.
ಇಲ್ಲಿ ಲೋಕಪ್ರಿಯ ಗೋಪಿನಾಥ್ ಬಾರ್ಡೋಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವಿದೆ.
FAQ
ಕೋಸಿ ನದಿಯು ಯಾವ ರಾಜ್ಯದಲ್ಲಿದೆ ?
ಬಿಹಾರ
ಅಸ್ಸಾಂ ರಾಜ್ಯದ ರಾಜಧಾನಿ ಯಾವುದು ?
ದಿಸ್ ಪುರ್
ಬಿಹಾರದ ರಾಜ್ಯಧಾನಿ ಯಾವುದು ?
ಪಾಟ್ನ
ಅತಿ ಹೆಚ್ಚು ಲೋಕಸಭೆ ಕ್ಷೇತ್ರಗಳನ್ನು ಹೊಂದಿದ ರಾಜ್ಯ ಯಾವುದು ?
ಉತ್ತರ ಪ್ರದೇಶ
ಭಾರತದಲ್ಲಿ ಅತಿ ಹೆಚ್ಚು ಅರಣ್ಯವನ್ನು ಹೊಂದಿದ ರಾಜ್ಯ ಯಾವುದು ?
ಮಧ್ಯಪ್ರದೇಶ
ಇತರೆ ವಿಷಯಗಳು :