ವರ್ಣಮಾಲೆಯ ಬಗ್ಗೆ ಮಾಹಿತಿ | Information about the Alphabet in Kannada

ವರ್ಣಮಾಲೆಯ ಬಗ್ಗೆ ಮಾಹಿತಿ Information about the Alphabet Varnamaleya Bagge Mahiti in Kannada

ವರ್ಣಮಾಲೆಯ ಬಗ್ಗೆ ಮಾಹಿತಿ

Information about the Alphabet in Kannada
Information about the Alphabet in Kannada

ಈ ಲೇಖನಿಯಲ್ಲಿ ವರ್ಣಮಾಲೆಯ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.

ವರ್ಣಮಾಲೆಯ ಬಗ್ಗೆ ಮಾಹಿತಿ

ಮಾನವ ಮನಸ್ಸಿನ ಭಾವನೆಗಳನ್ನು ಮಾತಿನ ಮೂಲಕ ವ್ಯಕ್ತಪಡಿಸುತ್ತಾನೆ. ಆಡಿದ ಆಡಬೇಕಾದ ಮಾತುಗಳನ್ನು ನಿರ್ದಿಷ್ಟ ಲಿಪಿಯ ರೂಪಕ್ಕಿಳಿಸುವುದೇ ಬರವಣಿಗೆ. ಪದ ಮತ್ತು ಪದಗಳ ಸಂಬಂಧವನ್ನು ಖಚಿತವಾಗಿ ತಿಳಿಸುವುದೇ ವ್ಯಾಕರಣಶಾಸ್ತ್ರ. ಆದ್ದರಿಂದ ಭಾಷೆಯನ್ನು ಕಲಿಯುವವರು ಆ ಭಾಷೆಯ ವ್ಯಾಕರಣವನ್ನು ಅರಿಯುವುದು ಉತ್ತಮ. ಕ್ರಿಯಾತ್ಮಕ ವ್ಯಾಕರಣದ ಕಲಿಕೆಯಿಂದ ಭಾಷೆಯನ್ನು ಸ್ಷಷ್ಟ ಹಾಗೂ ನಿಖರವಾಗಿ ಬಳಸುವ ಸಾಧ್ಯ.

ವರ್ಣಮಾಲೆ

ನಾನು ಶಾಲೆಗೆ ಹೋಗಿ ಬಂದೆನು ಈ ವ್ಯಾಕ್ಯದಲ್ಲಿ ನಾನು, ಶಾಲೆಗೆ, ಹೋಗಿ, ಬಂದೆನು ನಾಲ್ಕು ಅರ್ಥಪೂರ್ಣ ಪದಗಳಿವೆ. ಒಂದೊಂದು ಪದದಲ್ಲಿಯೂ ಬೇರೆ ಬೇರೆ ಅಕ್ಷರಗಳಿವೆ. ಉದಾ: ನಾನು ಪದದಲ್ಲಿ ನ್‌ ಆ ನ್‌ ಉ ಎಂಬ ನಾಲ್ಕು ಅಕ್ಷರಗಳಿವೆ. ಬಂದೆನು ಪದದಲ್ಲಿ ಬ್‌ ಅ ನ್‌ ದ್‌ ಎ ನ್‌ ಉ ಎಂಬ ಏಳು ಅಕ್ಷರಗಳಿವೆ. ಈ ಎರಡು ಪದಗಳಲ್ಲಿರುವ ನ್‌ ಬ್‌ ದ್‌ ಎಂಬ ಅಕ್ಷರಗಳನ್ನು ಉಚ್ಚರಿಸುವಾಗ ಧ್ವನ್ಯಂಗದ ಅಡೆತಡೆಯೊಂದಿಗೆ ಉಚ್ಚರಿಸಬೇಕಾಗುತ್ತದೆ. ಇವೇ ವ್ಯಂಜನಾಕ್ಷರಗಳು ಆ ಅಕ್ಷರಗಳ ಹಿಂದೆ ಅಥವಾ ಮುಂದೆ ಆ ಉ ಎ ಮುಂತಾದವು ಧ್ವನ್ಯಂಗದ ಅಡೆತಡೆ ಇಲ್ಲದೆ ಉಚ್ಚರಿಸಬೇಕಾಗುತ್ತದೆ. ಇವೇ ವ್ಯಂಜನಾಕ್ಷರಗಳು ಉಚ್ಚರಿಸಬಹುದಾದ ಅಕ್ಷರಗಳಿವೆ. ಇವೇ ಸ್ರಾರಾಕ್ಷರಗಳು. ಇವು ಸ್ವತಂತ್ರವಾಗಿ ಉಚ್ಚರಿಸಲ್ಪಡುವ ಅಕ್ಷರಗಳು ಹಾಗೆಯೇ ಬಂದೆನು ಎಂಬ ಪದದಲ್ಲಿರುವ ೦ ಎಂಬ ಅಕ್ಷರವನ್ನು ಉಚ್ಚರಿಸಲು ಆಗುವುದುದಿಲ್ಲ. ಇದರ ಹಿಂದೆ ಸ್ವರಾಕ್ಷರಗಳು ಬಂದಾಗ ಮಾತ್ರ ಉಚ್ಚರಿಸಬಹುದು. ಇವೇ ಯೋಗವಾಹಕ. ಕನ್ನಡ ವರ್ಣಮಾಲೆಯನ್ನು ಪ್ರಧಾನವಾಗಿ ಸ್ವರ, ವ್ಯಂಜನ ಮತ್ತು ಯೋಗವಾಹ ಎಂಬ ಮೂರು ವಿಭಾಗ ಮಾಡಲಾಗಿದೆ.

ಸ್ವರಗಳು

ಅ ಆ ಇ ಈ ಉ ಊ ಋ ಎ ಏ ಐ ಒ ಓ ಔ ಇವು ೧೩ ಸ್ವರಾಕ್ಷರಗಳು ಇವುಗಳಲ್ಲಿ ಅ ಇ ಉ ಎ ಒ ಎಂಬ ಆರು ಅಕ್ಷರಗಳು ಒಂದೊಂದು ಮಾತ್ರಾ ಲಕಾಲದಲ್ಲಿ ಉಚ್ಚರಿಸಲ್ಪಡುವಂತಹ ಅಕ್ಷರಗಳು. ಹಾಗಾಗಿ ಇವು ಹ್ರಸ್ವಸ್ವರಗಳು. ಆ ಈ ಊ ಏ ಓ ಔ ಎಂಬ ಏಳು ಅಕ್ಷರಗಳು ಎರಡೆರಡು ಮಾತ್ರಾ ಕಾಲದಲ್ಲಿ ಉಚ್ಚರಿಸಲ್ಪಡುವಂತಹ ಅಕ್ಷರಗಳು. ಹಾಗಾಗಿ ಇವು ದೀರ್ಘಸ್ವರಗಳು. ಈ ದೀರ್ಘಸ್ವರಗಳು ಕೆಲವೊಮ್ಮೆ ಮೂರು ಮಾತ್ರಾಕಾಲದಲ್ಲಿ ಉಚ್ಚರಿಸಲ್ಪಡುತ್ತವೆ. ಉದಾ ಅಣ್ಣಾ ಇಲ್ಲಿ ಬಾ ಮಕ್ಕಳೇ ಇಲ್ಲಿ ಬನ್ನಿ – ಇಲ್ಲಿ ಎಂದು ಗುರುತಿಸಲ್ಪಟ್ಟ ಆ ಏ ಅಕ್ಷರಗಳು ಮೂರು ಮಾತ್ರಕಾಲದಲ್ಲಿ ಉಚ್ಚರಿಸಲ್ಪಟ್ಟಿವೆ. ಹೀಗೆ ಮೂರು ಮಾತ್ರಾಕಾಲದಲ್ಲಿ ಉಚ್ಚರಿಸಲ್ಪಡುವ ಅಕ್ಷರಗಳೇ ಪ್ಲುತ ಸ್ವರಗಳು.

ವ್ಯಂಜನಗಳು

ವರ್ಗಿಯ ವ್ಯಂಜನಗಳು

ವರ್ಗವಿವರ
ಕ್‌ ಖ್ಗ್ಘ್ಙ್೫ – ಕ ವರ್ಗ
ಚ್ಛ್ಜ್ಝ್ಞ್೫ – ಚ ವರ್ಗ
ಟ್ಠ್ಡ್ಢ್ಣ್೫ – ಟ ವರ್ಗ
ತ್ಥ್ದ್ಧ್ನ್೫ – ತ ವರ್ಗ
ಪ್ಫ್ಬ್ಭ್ಮ್೫ – ಪ ವರ್ಗ
ವರ್ಗಿಯ ವ್ಯಂಜನಗಳು

ಅವರ್ಗೀಯ ವ್ಯಂಜನಗಳು :

ಯ್‌, ರ್‌, ಲ್‌, ವ್‌, ಶ್‌, ಷ್‌, ಸ್‌, ಹ್‌, ಳ್‌ = ೯ ಅವರ್ಗೀಯ ವ್ಯಂಜನಗಳು ಕೊಟ್ಟಿರುವ ಕ್‌ ದಿಂದ ಮ್‌ ವರೆಗಿನ ೨೫ ಅಕ್ಷರಗಳನ್ನು ಉಚ್ಚರಿಸುವಾಗ ಅವು ಹುಟ್ಟುವ ಸ್ಥಳವನ್ನು ಆಧರಿಸಿ ಅವನ್ನು ೫ ವರ್ಗಗಳಾಗಿ ವಿಂಗಡಿಸಲಾಗಿದೆ. ಅವೇ ವರ್ಗೀಯ ವ್ಯಂಜನಗಳು. ಅವು ಇಂತಿವೆ.

ಕ – ವರ್ಗದ ಅಕ್ಷರಗಳು : ಕಂಠಭಾಗದಲ್ಲಿ ಹುಟ್ಟುವುದರಿಂದ ಅವು ತಾಲವ್ಯ ಅಕ್ಷರಗಳು.

ಚ – ವರ್ಗದ ಅಕ್ಷರಗಳು : ತಾಲುವಿನ ಸಹಾಯದಿಂದ ಹುಟ್ಟುವುದರಿಂದ ಅವು ತಾಲವ್ಯ ಅಕ್ಷರಗಳು.

ಟ – ವರ್ಗದ ಅಕ್ಷರಗಳು : ಮೂರ್ಧಭಾಗದಲ್ಲಿ ಅಂದರೆ ನಾಲಿಗೆಯನ್ನು ಹಿಂದೆ ಚಾಚಿ ಬಾಯಿಯ ಮೇಲ್ಭಾಗವನ್ನು ಸ್ಪರ್ಶಿಸಿದಾಗ ಉಚ್ಚಾರಗೊಳ್ಳುವುದರಿಂದ ಅವು ಮೂರ್ಧನ್ಯ ಅಕ್ಷರಗಳು.

ತ ವರ್ಗದ ಅಕ್ಷರಗಳು : ಹಲ್ಲುಗಳ ಬಳಿ ಹುಟ್ಟುವುದರಿಂದ ಉಚ್ಚರಿಸಲ್ಪಡುವುದರಿಂದ ಅವು ಓಷ್ಟ್ಯ ಅಕ್ಷರಗಳು

ಈ ವರ್ಗೀಯ ವ್ಯಂಜನಗಳನ್ನು ಅಲ್ಪಪ್ರಾಣ, ಮಹಾಪ್ರಾಣ ಮತ್ತು ಅನುನಾಸಿಕ ಅಕ್ಷರಗಳೆಂದು ವಿಭಾಗಿಸಲಾಗಿದೆ. ಪ್ರಾಣ ಎಂದರೆ ಉಸಿರು ಎಂದರ್ಥ. ಕಡಿಮೆ ಪ್ರಾಣದಿಂದ ಉಚ್ಚರಿಸಲ್ಪಡುವ ಕ್‌ ಚ್‌ ಟ್‌ ತ್‌ ಪ್‌ ಗ್‌ ಜ್‌ ಡ್‌ ದ್‌ ಬ್‌ ಅಕ್ಷರಗಳು ಅಲ್ಪಪ್ರಾಣ ಅಕ್ಷರಗಳು. ಹೆಚ್ಚು ಪ್ರಾಣದಿಂದ ಉಚ್ಚರಿಸಲ್ಪಡುವ ಖ್‌ ಛ್‌ ಠ್‌ ಥ್‌ ಫ್‌ ಘ್‌ ಝ್‌ ಢ್‌ ಧ್‌ ಭ್‌ ಅಕ್ಷರಗಳು ಅಂದರೆ ಪ್ರತಿ ವರ್ಗದ ಎರಡು ಮತ್ತು ನಾಲ್ಕನೇಯ ಅಕ್ಷರಗಳು ಮಹಾಪ್ರಾಣ ಅಕ್ಷರಗಳು ಅಲ್ಪಪ್ರಾಣ ಅಕ್ಷರಗಳು. ಮೂಗಿನ ಸಹಾಯದಿಂದ ಉಚ್ಚರಿಸ್ಪಡುವ ಙ್‌ ಜ್ಞ್‌ ಣ್‌ ನ್‌ ಮ್‌ ಅಕ್ಷರಗಳು ಅಂದರೆ ವರ್ಗದ ಕೊನೆಯ ಅಕ್ಷರಗಳು ಮಹಾಪ್ರಾಣ ಅಕ್ಷರಗಳು ಅನುನಾಸಿಕ ಅಕ್ಷರಗಳು. ಉಳಿದ ಒಂಬತ್ತು ಅಕ್ಷರಗಳು ಬೇರೆ ಬೇರೆ ಸ್ಥಳಗಳಲ್ಲಿ ಹುಟ್ಟುವುದರಿಂದ ವರ್ಗಗಳಾಗಿ ವಿಂಗಡಿಸಲು ಸಾದ್ಯವಿಲ್ಲ. ಹಾಗಾಗಿ ಅವು ಅವರ್ಗೀಯ ವ್ಯಂಜನಗಳು.

ಯೋಗವಾಹಕಗಳು

ಅನುಸ್ವಾರ ( ೦ ), ವಿಸರ್ಗ ( ಃ )

ಯೋಗ ಎಂದರೆ ಕೂಡು, ವಾಹ ಎಂದರೆ ಹೋಗುವ ಎಂದರ್ಥ. ಯೋಗವಾಹ ಎಂದರೆ ಕೂಡಿಹೋಗುವ ( ಕೂಡಿಕೊಂಡಿರುವ ) ಅಂದರೆ ಬೇರೆ ಅಕ್ಷರಗಳ ಜೊತೆಯಲ್ಲಿ ಮಾತ್ರ ಉಚ್ಚರಿಸಬಹುದಾದ ಅಕ್ಷರ ಎಂದರ್ಥ.

FAQ

ವರ್ಣಮಾಲೆಯಲ್ಲಿ ಎಷ್ಟು ಅಕ್ಷರಗಳಿವೆ ?

೪೯

ವರ್ಗೀಯ ವ್ಯಂಜನಗಳು ಎಷ್ಟು ಇವೆ ?

೨೫

ಇತರೆ ವಿಷಯಗಳು :

ಹವಾಮಾನದ ಬಗ್ಗೆ ಪ್ರಬಂಧ

ವಿಶ್ವ ಆರೋಗ್ಯ ದಿನದ ಬಗ್ಗೆ ಮಾಹಿತಿ

Leave a Reply

Your email address will not be published. Required fields are marked *