ರಾಷ್ಟ್ರೀಯ ಯುವ ದಿನದ ಬಗ್ಗೆ ಭಾಷಣ | Speech on National Youth Day in Kannada

ರಾಷ್ಟ್ರೀಯ ಯುವ ದಿನದ ಬಗ್ಗೆ ಭಾಷಣ Speech on National Youth Day Rashtriya Yuva Dinada Bagge Bhashana in Kannada

ರಾಷ್ಟ್ರೀಯ ಯುವ ದಿನದ ಬಗ್ಗೆ ಭಾಷಣ

Speech on National Youth Day in Kannada

ಈ ಲೇಖನಿಯಲ್ಲಿ ರಾಷ್ಟ್ರೀಯ ಯುವ ದಿನದ ಬಗ್ಗೆ ಭಾಷಣವನ್ನು ಸಂಪೂರ್ನವಾಗಿ ತಿಳಿಸಲಾಗಿದೆ.

ಶುಭ ಕೋರುವುದು :

ವೇದಿಕೆ ಮೇಲೆ ಕುಳಿತಿರು ಮುಖ್ಯ ಅಥಿತಿಗಳಿಗೆ, ಶಿಕ್ಷಕ ವೃಂದದವರಿಗೆ, ಹಾಗೂ ಇದರ ಮುಖ್ಯ ಕೇಂದ್ರ ಬಿಂದುಗಳಾದ ಮಕ್ಕಳಿಗೆ ಹಾಗೂ ಪೋಷಕರೆಲ್ಲರಿಗೂ ನನ್ನ ಶುಭೋಧಯಗಳು. ನಾವು ಇಂದು ಇಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸುವುದರ ಉದ್ದೇಶವೆನೆಂದರೆ ರಾಷ್ಟ್ರೀಯ ಯುವ ದಿನವನ್ನು ಆಚರಿಸಲು ಇಲ್ಲಿ ನಾವೆಲ್ಲರೂ ಸೇರಿದ್ದೇವೆ. ಎಲ್ಲರಿಗೂ ಕೂಡ ರಾಷ್ಟ್ರೀಯ ಯುವ ದಿನದ ಶುಭಾಷಯಗಳು.

ರಾಷ್ಟ್ರೀಯ ಯುವ ದಿನವನ್ನು ನಾವು ಏಕೆ ಆಚರಿಸಬೇಕು :

ರಾಷ್ಟ್ರೀಯ ಯುವ ದಿನವನ್ನು ಇಂದಿನ ಮಕ್ಕಳೆ ಮುಂದಿನ ಪ್ರಜೆಗಳು ಹಾಗಾಗಿ ಇಂದಿನ ಮಕ್ಕಳಲ್ಲಿ ಹಾಗು ಯುಕರಲ್ಲಿ ದೇಶದ ಬಗ್ಗೆ, ದೇಶದ ಪ್ರಗತಿಯ ಬಗ್ಗೆ, ಒಳ್ಳೆಯ ಅಲೋಚನೆಗಳನ್ನು ಬೆಳೆಸುವುದು, ಮತ್ತು ಪ್ರತಿಯೊಬ್ಬ ಪ್ರಜೆಯು ಉತ್ತಮ ಮಟ್ಟದಲ್ಲಿ ಬೆಳೆಯಬೇಕು. ಹಾಗು ಅಂದಿನ ಮಹಾನ್‌ ನಾಯಕರ ಬಗ್ಗೆ ಇಂದಿನ ಯುವ ಜನತೆಯು ನೆನಪಿಸಿಕೊಳ್ಳಬೇಕು ಮತ್ತು ಅವರಂತೆಯೇ ಮಹಾನ್‌ ವ್ಯಕ್ತಿಗಳಾಗಬೇಕೆಂದು, ಮುಖ್ಯವಾಗಿ ಸ್ವಾಮಿ ವಿವೇಕಾನಂದರಂತೆ ಪ್ರತಿಯೊಬ್ಬ ಯುವಕರು ಆಗಬೇಕೆಂದು ರಾಷ್ಟ್ರೀಯ ಯುವ ದಿನವನ್ನು ಆಚರಿಸಲಾಗುತ್ತದೆ.

ರಾಷ್ಟ್ರೀಯ ಯುವ ದಿನವನ್ನು ಯಾರ ಜನ್ಮ ದಿನದ ಅಂಗವಾಗಿ ಆಚರಿಸಲಾಗುತ್ತದೆ :

ರಾಷ್ಟ್ರೀಯ ಯುವ ದಿನವನ್ನು ಸ್ವಾಮಿ ವಿವೇಕಾನಂದರ ಜನ್ಮ ದಿನವಾದ ಜನವರಿ ೧೨ ರಂದು ಈ ದಿನವನ್ನು ಅಚರಿಸುತ್ತೇವೆ.

ರಾಷ್ಟ್ರೀಯ ಯುವ ದಿನದ ಇತಿಹಾಸವನ್ನು ತಿಳಿದುಕೊಳ್ಳೋಣ :

ಶ್ರೇಷ್ಠ ನಾಯಕರಾದ ಸ್ವಾಮಿ ವಿವೇಕಾನಂದರು ಜನವರಿ 12 \ 1863 ರಂದು ಕೋಲ್ಕತ್ತಾದಲ್ಲಿ ಜನಿಸಿದರು. ಅವರು ಇತರ ಸನ್ಯಾಸಿಗಳಂತೆ ಇರಲಿಲ್ಲ, ಬದಲಾಗಿ ರಾಷ್ಟ್ರ ನಿರ್ಮಾಣದ ಪ್ರಕ್ರಿಯೆಯಲ್ಲಿ ಯುವಕ ದನಿಯಾದರು. ಜಾಗತಿಕ ಮಟ್ಟದಲ್ಲಿ ಅವರ ಸಾಧನೆಗಳು ಭಾರತದ ಹೆಸರನ್ನು ನಕ್ಷೆಯಲ್ಲಿ ಗುರುತಿಸುವಂತೆ ಮಾಡಿದವು. ಇದು ಆಧ್ಯಾತ್ಮಿಕತೆಯ ಭೂಮಿಯಾಗಿ ಭಾರತದ ಚಿತ್ರಣವನ್ನು ಪುನರುಜ್ಜೀವನಗೊಳಿಸಲು ಸಹಾಯ ಮಾಡಿತು. ಯುವಕರ ಸಾಮರ್ಥ್ಯವನ್ನು ಬಳಸಿಕೊಳ್ಳುವಲ್ಲಿ ಅವರು ಅಪಾರ ಗಮನಹರಿಸಿದರು. ಬ್ರಿಟಿಷರ ವಿರುದ್ಧ ಯುವ ಪೀಳಿಗೆ ಸ್ವಾತಂತ್ರ್ಯ ಪಡೆಯಲು ಪ್ರೇರೇಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಸ್ವಾಮಿ ವಿವೇಕಾನಂದರು ತತ್ವಶಾಸ್ತ್ರ, ಧರ್ಮ, ಸಾಹಿತ್ಯ, ವೇದಗಳು, ಪುರಾಣಗಳ ಬಗ್ಗೆ ಅಪಾರ ಜ್ಞಾನವನ್ನು ಹೊಂದಿದ್ದರು. ವಿವೇಕಾನಂದರ ಮರಣದ ನಂತರ 1984 ರಲ್ಲಿ ಭಾರತ ಸರ್ಕಾರವು ಅವರನ್ನು ಗೌರವಿಸಲು ಮತ್ತು ಅವನ ಬೋಧನೆಗಳ ಬಗ್ಗೆ ಜನರಿಗೆ ಅರಿವು ಮೂಡಿಸಲು ಅವರ ಜನ್ಮದಿನವಾದ ಜನವರಿ 12 ಅನ್ನು ರಾಷ್ಟ್ರೀಯ ಯುವ ದಿನವೆಂದು ಘೋಷಿಸಿತು. 1985 ರಿಂದ ಭಾರತದಲ್ಲಿ ಪ್ರತಿ ವರ್ಷ ಈ ದಿನವನ್ನು ಆಚರಿಸಲಾಗುತ್ತಿದೆ.

ಮತ್ತೊಮ್ಮೆ ಎಲ್ಲರಿಗೂ ರಾಷ್ಟ್ರೀಯ ಯುವ ದಿನದ ಹಾಗೂ ಸ್ವಾಮಿ ವಿವೇಕಾನಂದರ ಜನ್ಮ ದಿನದ ಶುಭಾಷಯಗಳು. ಇಷ್ಟು ಹೇಳಿ ನನ್ನ ಭಾಷಣವನ್ನು ಮುಗಿಸುತ್ತಿದ್ದೇನೆ.

ಧನ್ಯವಾದಗಳನ್ನು ತಿಳಿಸುವುದು :

ಇಷ್ಟು ಸಮಯ ಮಾತನಾಡಲು ಅವಕಾಶವನ್ನು ನೀಡಿದ ತಮಗೆಲ್ಲರಿಗೂ ಧನ್ಯವಾದಗಳು.

FAQ

ಸ್ವಾಮಿ ವಿವೇಕಾನಂದರು ಯಾವಾಗ ಜನಿಸಿದರು ?

ಜನವರಿ ೧೨ ರಂದು ಸ್ವಾಮಿ ವಿವೇಕಾನಂದರು ಜನಿಸಿದರು.

ಯಾರ ಜನ್ಮ ದಿನದ ಅಂಗವಾಗಿ ರಾಷ್ಟ್ರೀಯ ಯುವ ದಿನವನ್ನು ಆಚರಿಸಲಾಗುತ್ತದೆ ?

ಸ್ವಾಮಿ ವಿವೇಕಾನಂದರ ಜನ್ಮ ದಿನದ ಅಂಗವಾಗಿ ರಾಷ್ಟ್ರೀಯ ಯುವ ದಿನವನ್ನು ಅಚರಿಸಲಾಗುತ್ತದೆ.

ಇತರೆ ವಿಷಯಗಳು :

ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ

ರಾಷ್ಟ್ರೀಯ ಯುವ ದಿನದ ಬಗ್ಗೆ ಮಾಹಿತಿ

Leave a Reply

Your email address will not be published. Required fields are marked *