ವಿಶ್ವ ಗ್ರಾಹಕರ ದಿನಾಚರಣೆಯ ಬಗ್ಗೆ ಮಾಹಿತಿ | Information about World Consumer Day in Kannada

ವಿಶ್ವ ಗ್ರಾಹಕರ ದಿನಾಚರಣೆಯ ಬಗ್ಗೆ ಮಾಹಿತಿ Information about World Consumer Day Vishwa Grahakra Dinacharane Bagge mahiti in Kannada

ವಿಶ್ವ ಗ್ರಾಹಕರ ದಿನಾಚರಣೆಯ ಬಗ್ಗೆ ಮಾಹಿತಿ

Information about World Consumer Day in Kannada

ಈ ಲೇಖನಿಯಲ್ಲಿ ವಿಶ್ವ ಗ್ರಾಹಕರ ದಿನಾಚರಣೆಯ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.

ವಿಶ್ವ ಗ್ರಾಹಕರ ದಿನಾಚರಣೆ

ಗ್ರಾಹಕರೆಂದರೆ ವಸ್ತುಗಳನ್ನು ಕೊಳ್ಳುವವರು ಅಥವಾ ಸೇವೆಗಳನ್ನು ಬೆಲೆಯ ರೂಪದಲ್ಲಿ ಹಣ ಅಥವಾ ವೇತನ ಪ್ರತಿಫಲ ಕೊಟ್ಟು ಕೆಲಸ ಮಾಡಿಸಿಕೊಳ್ಳುವವರಾಗಿದ್ದಾರೆ ಅಥವಾ ಪದಾರ್ಥಗಳನ್ನು ಬಳಸಿಕೊಳ್ಳುವವರಾಗಿದ್ದಾರೆ. ಯಾವುದೇ ವ್ಯವಹಾರವನ್ನು ಲಾಭದ ಉದ್ದೇಶಕ್ಕಾಗಿ ಮಾಡಿದರೆ ಅದನ್ನು ವ್ಯಾಪಾರ ಎನ್ನುವರು. ಗ್ರಾಹರು ತಮ್ಮ ಬಯಕೆಗಳನ್ನು ಈಡೇರಿಸಿಕೊಳ್ಳಲು ವಸ್ತುಗಳನ್ನು ಕೊಳ್ಳುತ್ತಾರೆ. ಉತ್ಪಾದಕರ ಕರ್ತವ್ಯವು ಗ್ರಾಹಕರ ಅವಶ್ಯಕೆಗಳನ್ನು ಪೂರೈಸುವುದೇ ಆಗಿದೆ. ನಮ್ಮಲ್ಲಿ ಮುಕ್ತ ಆರ್ಥಿಕ ನೀತಿ ರೂಢಿಯಲ್ಲಿದೆ. ಗ್ರಾಹಕರನ್ನು “ಮಾರುಕಟ್ಟೆಯ ರಾಜ” ಎಂಬುದು ಆಕರ್ಷಕವಾದ ಘೋಷಣೆಯಾಗಿದೆ. ಆದುದರಿಂದ ಗ್ರಾಹಕನು ಅತ್ಯಂತ ಪ್ರಮುಖ ಸ್ಥಾನವನ್ನು ಅಲಂಕರಿಸಿದ್ದಾನೆ. ಆದರೆ ಅನೇಕ ಸಂಧರ್ಭಗಳಲ್ಲಿ ಮಾರಾಟಗಾರರು ಗ್ರಾಹಕರನ್ನು ನಿರ್ಲಕ್ಷ್ಯ ಮಾಡುತ್ತಾರೆ, ಅವರನ್ನು ಶೋಷಿಸುತ್ತಾರೆ ಹಾಗೂ ಮೋಸಗೊಳಿಸುತ್ತಾರೆ.

ಗ್ರಾಹಕ ರಕ್ಷಣೆ

ಗ್ರಾಹಕರನ್ನು ಉತ್ಪಾದಕರ ಮತ್ತು ವ್ಯಾಪಾರಿಗಳ ಶೋಷಣೆಯಿಂದ ರಕ್ಷಿಸಲು ಕೈಗೊಂಡಿರುವ ಕಾರ್ಯಗಳನ್ನು ಗ್ರಾಹಕ ರಕ್ಷಣೆ ಎನ್ನುತ್ತಾರೆ. ಶೋಷಣೆಯಿಂದ ಮುಕ್ತಗೊಳಿಸಲು ಗ್ರಾಹಕ ರಕ್ಷಣೆ ಅಗತ್ಯವಾಗಿದೆ. ಗ್ರಾಹಕರ ಹಿತಾಸಕ್ತಿಗಳನ್ನು ರಕ್ಷಿಸಲು ಅನೇಕ ಹಕ್ಕುಗಳನ್ನು ಮತ್ತು ಭರವಸೆಗಳನ್ನು ಕೊಡಲಾಗಿದೆ. ಈ ಭರವಸೆಗಳನ್ನು ಗ್ರಾಹಕರ ಹಕ್ಕುಗಳು ಎನ್ನುವರು.

ಗ್ರಾಹಕ ಸಂರಕ್ಷಣಾ ಕಾಯ್ದೆ

ನಿರಂತರ ಶೋಷಣೆಯಿಂದ ಬೇಸತ್ತ ಕೆಲವರು ಬಳಕೆದಾರರ ಅಸಾಹಕತೆಯನ್ನು ಅರಿತು ಗ್ರಾಹಕರ ಪರದಾಟ ಹೋರಾಟ, ಚಳುವಳಗಳನ್ನು ಆರಂಭಿಸಿದರು. ಈ ರೀತಿಯ ಒತ್ತಡಗಳಿಂದ ಸರ್ಕಾರ ಎಚ್ಚೆತ್ತುಕೊಂಡು ಗ್ರಾಹಕರ ಪರವಾದ ಹೊಸ ಕಾಯ್ದೆಗಳನ್ನು ರೂಪಿಸಿತು. ಕಳೆದ ಐದು ದಶಕಗಳಲ್ಲಿ ಸುಮಾರು ಮೂವತ್ತಕ್ಕಿಂತ ಹೆಚ್ಚು ಕಾಯ್ದೆಗಳು ಅನುಷ್ಟಾನಗೊಂಡಿವೆ. ಭಾರತ ಸರ್ಕಾರವು ೧೯೮೬ ರಲ್ಲಿ ಜಾರಿಗೆ ತಂದ ಗ್ರಾಹಕ ಸಂರಕ್ಷಣಾ ಕಾಯ್ದೆ ಈ ದಿಸೆಯಲ್ಲಿ ಅತ್ಯಂತ ಮಹತ್ವದ್ದಾಗಿದೆ.

ವಿಶ್ವ ಗ್ರಾಹಕ ದಿನಾಚರಣೆ

ವಿಶ್ವ ಗ್ರಾಹಕ ಆಂದೋಲನ ಚರಿತ್ರೆಯಲ್ಲಿ ಮಾರ್ಚ್‌ ೧೫ \ ೧೯೬೨ ಒಂದು ಮಹತ್ವದ ದಿನವಾಗಿದೆ. ಅಂದು ಅಂದಿನ ಅಮೆರಿಕದ ಅಧ್ಯಕ್ಷರಾಗಿದ್ದ ಜಾನ್‌ ಎಫ್.‌ ಕೆನಡಿ ಅವರು ಅಲ್ಲಿನ ನಾಗರಿಕರಿಗೆ ಸಂರಕ್ಷಣೆ, ಮಾಹಿತಿ, ನಿವೇಧನೆ ಮತ್ತು ಪರಿಹಾರ ಎಂಬ ನಾಲ್ಕು ಹಕ್ಕುಗಳನ್ನು ನೀಡುವ ವಿಧೇಯಕವನ್ನು ಅಂಗೀಕರಿಸಿದರು. ಈ ಕಾರಣದಿಂದ ಪ್ರತಿ ವರ್ಷವು ಮಾರ್ಚ್‌ ೧೫ ನೇ ತಾರೀಖಿನಂದು ವಿಶ್ವಗ್ರಾಹಕರ ಹಕ್ಕುಗಳ ದಿನ ಆಚರಿಸಲಾಗುತ್ತದೆ.

ಕಾಯ್ದೆಯ ಮುಖ್ಯ ಉದ್ದೇಶಗಳು

  • ಗ್ರಾಹಕ ಸಂರಕ್ಷಣಾ ಕಾಯ್ದೆಯು ಸುರಕ್ಷಿತೆ ಹಾಗೂ ಗುಣಮಟ್ಟಕ್ಕೆ ಮೊದಲ ಪ್ರಾಶಸ್ತ್ಯ ನೀಡುವುದು.
  • ಅಪಾಯಕಾರಿ ವಸ್ತುಗಳ ತಯಾರಿಕೆ ಮತ್ತು ಮಾರಾಟವನ್ನು ತಪ್ಪಿಸುವುದು.
  • ಮಾರುಕಟ್ಟೆಯಲ್ಲಿ ನಡೆಯಬಹುದಾದ ಅನುಚಿತ ವ್ಯವಹಾರ ಪದ್ದತಿಗಳನ್ನು ತಡೆಗಟ್ಟುವುದು.
  • ಗುಣಮಟ್ಟ, ಅಳತೆ, ತೂಕ, ಬೆಲೆ ಇತ್ಯಾದಿಗಳು ಮೇಲೆ ನಿಗಾವಹಿಸುವುದು.
  • ಬಳಕೆದಾರರು ತಾವು ಖರೀದಿಸುವ ವಸ್ತು ಅಥವಾ ಸೇವೆಗಳಿಂದ ತೊಂದರೆಗೆ ಒಳಗಾಲ್ಲಿ ಅವರಿಗೆ ಸೂಕ್ತ ಪರಿಹಾರ ಕೊಡಿಸುವುದು.

FAQ

ವಿಶ್ವ ಗ್ರಾಹಕರ ದಿನವನ್ನು ಯಾವಾಗ ಆಚರಿಸುತ್ತಾರೆ ?

ಮಾರ್ಚ್‌ ೧೫

ರಾಷ್ಟ್ರೀಯ ಗ್ರಾಹರ ದಿನವನ್ನು ಯಾವಾಗ ಆಚರಿಸುತ್ತಾರೆ ?

ಡಿಸೆಂಬರ್‌ ೨೪

ಇತರೆ ವಿಷಯಗಳು :

ಅತಿ ಆಸೆ ಗತಿಗೇಡು ಗಾದೆ ಬಗ್ಗೆ ಮಾಹಿತಿ 

ಕಂಪ್ಯೂಟರ್ ಬಗ್ಗೆ ಪ್ರಬಂಧ

Leave a Reply

Your email address will not be published. Required fields are marked *