ಅತಿ ಆಸೆ ಗತಿಗೇಡು ಗಾದೆ ಬಗ್ಗೆ ಮಾಹಿತಿ | Ati Ase Gati Gedu Gade Information in Kannada

ಅತಿ ಆಸೆ ಗತಿಗೇಡು ಗಾದೆ ಬಗ್ಗೆ ಮಾಹಿತಿ Ati Ase Gati Gedu Gade Information Ati Ase Gati Gedu Gade Mahiti in Kannada

ಅತಿ ಆಸೆ ಗತಿಗೇಡು ಗಾದೆ ಬಗ್ಗೆ ಮಾಹಿತಿ

Ati Ase Gati Gedu Gade Information in Kannada

ಈ ಲೇಖನಿಯಲ್ಲಿ ಅತಿ ಆಸೆ ಗತಿಗೇಡು ಗಾದೆಯ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.

ಅತಿ ಆಸೆ ಗತಿಗೇಡು ಗಾದೆ

ಗಾದೆಯು ಹಿರಿಯರ ಅನುಭವದ ಮಾತುಗಳಾಗಿವೆ. ಪ್ರತಿಯೊಬ್ಬರ ಜೀವನವನಕ್ಕೆ ಅನುಗುಣವಾಗಿ ಈ ಗಾದೆಗಳು ಇವೆ. ಗಾದೆಗಳು ವೇದಗಳಿಗಳಿಗೆ ಸಮವಾಗಿವೆ. ಒಂದು ವೇಳೆ ವೇದ ಸುಳ್ಳಾದರು ಗಾದೆ ಸುಳ್ಳಾಗದು ಎಂಬ ಮಾತಿದೆ. ಗಾದೆ ಮಾತುಗಳು ಗ್ರಾಮೀಣ ಬದುಕಿನ ಪ್ರತಿಬಿಂಬಗಳಾಗಿವೆ. ಸುಪ್ರಸಿದ್ದ ಗಾದೆಗಳಲ್ಲಿ ʼಅತಿ ಆಸೆ ಗತಿಗೇಡುʼ ಎಂಬ ಈ ಅರ್ಥಪೂರ್ಣವಾದ ಗಾದೆಯು ಹೆಚ್ಚು ಎಲ್ಲರಿಗು ಪರಿಚಿತವಾದ ಹಾಗು ಅನ್ವಯಿಕ ಗಾದೆಯಾಗಿದೆ. ಆಸೆ ಯೆಂಬುದು ಮನುಷ್ಯನ ಸಹಜ ಗುಣವಾಗದೆ. ಈ ಆಸೆಯೆಂಬುದು ಇಲ್ಲದ್ದಿದ್ದರೆ ಮನುಷ್ಯ ಕಾಡುಪ್ರಾಣಿಯಂತೆ ಜೀವಿಸುತ್ತಿದ್ದ. ಆದರೆ ಈ ಆಸೆಗಳು ಹಿತವಾಗಿ, ಮಿತವಾಗಿರುವುದು ಒಳಿತು.

ಅತಿ ಆಸೆ ಗತಿಗೇಡು ಗಾದೆ ವಿವರಣೆ

ಆಸೆಯೇ ದುಃಖಕ್ಕೆ ಮೂಲವೆಂದು ಬುಧ್ದ ಹೇಳಿರುವ ಮಾತಿದೆ. ಆಸೆಯನ್ನು ಪಡುವುದು ಸಹಜ ಆದರೆ ಅತಿಯಾಗಿ ಅಥವಾ ದುರಾಸೆಯನ್ನು ಪಡುವುದು ತಪ್ಪು. ಮನುಷ್ಯನ ಆಸೆಗೆ ಮಿತಿ ಇರಬೇಕು ಎಂಬುದು ಈ ಗಾದೆಯ ಮುಖ್ಯ ಉದ್ದೇಶವಾಗಿದೆ. ಆಸೆ ಅಗಾಧವಾದುದ್ದು ಆದರೆ ಆಸೆ ಪಡುವುದಕ್ಕು ಮಿತಿ ಇದೆ. ಯಾವುದಾದರು ʼಅತೀ ಆದರೂ ಅಮೃತವು ಕೂಡ ವಿಷವಾದಿತುʼ ಎಂಬ ಅನುಭವದ ಗಾದೆ ಮಾತು ಕೂಡ ಇದೆ. ಕೆಲವೊಮ್ಮೆ ಅತಿಯಾದ ಆಸೆಯಿಂದ ಇರುವುದನ್ನು ಕಳೆದುಕೊಳ್ಳುವ ಪರಿಸ್ಥಿತಿಯು ಬರುವಂತ ಸಾಧ್ಯತೆಯು ಇರುತ್ತದೆ. ಈ ಅತಿ ಆಸೆಯಿಂದ ಮನುಷ್ಯನ ನೆಮ್ಮದಿಯನ್ನು ಹಾಳುಮಾಡಿಕೊಳ್ಳುತ್ತಾರೆ. ಹಾಗೆ ಈ ಆಸೆ ಎಂಬುದು ಮನಷ್ಯನ್ನ ಪ್ರವೇಶಿಸುವುದು ಯಾವಗ ಅಂದರೆ ́ಜೀವನದಲ್ಲಿ ನಮ್ಮ ಸುತ್ತಮುತ್ತಲಿನ ಜನರು ನಮಗಿಂತ ಉತ್ತಮ ಜೀವನವನ್ನು ನೆಡೆಸುತ್ತಿರವರನ್ನು ನೋಡಿ ʼನಾವು ಅವರ ಮಟ್ಟಕ್ಕೆ ಜೀವನ ನಡೆಸಬೇಕು ಎಂದು ಕೊಳ್ಳುವುದು ತಪ್ಪಲ್ಲ. ಈ ತುಡಿತವು ನಮ್ಮನ್ನು ಒಳ್ಳೆಯ ಕೆಲಸಕ್ಕೆ ಪ್ರೆರೇಪಿಸಿದರೆ ಒಳ್ಳೆಯದು. ಆದರೆ ಆ ಮಟ್ಟವನ್ನ ತೀರ ವೇಗವಾಗಿ ತಲುಪಬೇಕೆಂಬ ಹುಚ್ಚು ಆಸೆಯೆ ಅತಿ ಆಸೆಯಾಗಿ ಅಪಾಯಕ್ಕೆ ಸಿಲುಕಿಕೊಳ್ಳುವ ಸಾಧ್ಯತೆಯು ಇರುತ್ತದೆ. ಆದರೆ ಅತಿ ಆಸೆಯಿಂದ ನಮ್ಮ ಮನಸ್ಸು ಕೆಟ್ಟ ಕೆಲಸವನ್ನ ಮಾಡಲು ನಾಚುವುದಿಲ್ಲ. ಆಸೆಯು ಮಿತಿ ಮೀರಿ ಹೋದರೆ ಮನುಷ್ಯನ ವರ್ತನೆ ಬದಲಾಗುತ್ತದೆ. ಅವನು ಕಳ್ಳತನ, ಕೊಲೆ, ದರೋಡೆ ಮಾಡಬೇಕಾಗುತ್ತದೆ. ಕೊನೆಯಲ್ಲಿ ಅವನಿಗೆ ಒಳ್ಳೆಯ ಪ್ರತಿಫಲ ಸಿಗದೆ, ಅವನು ಕಷ್ಟಕ್ಕೆ ಒಳಗಾಗುತ್ತಾನೆ. ನಾವು ನಮ್ಮ ಆಸೆಗಳನ್ನೂ ನಮ್ಮ ನಿಯಂತ್ರಣದಲ್ಲಿ ಇಟ್ಟುಕೊಂಡು ಒಳ್ಳೆಯ ಮಾರ್ಗದಲ್ಲಿ ಬದುಕು ನಡೆಸುವಂತಹ ಗುಣವನ್ನು ಬೆಳೆಸಿಕೊಳ್ಳಬೇಕು.

ಆಸೆಯೆಂಬುದು ನಮ್ಮನ್ನು ಒಂದು ಸಾರಿ ಪ್ರವೇಶಿಸಿದರೆ ಸಾಕು ಮತ್ತೆ ಹೆಚ್ಚು ಆಸೆಯಾಗಿ ಅದು ದುರಾಸೆಯಾಗಿ ಕೊನೆಗೆ ಈ ಆಸೆಗಳನ್ನು ಈಡೆರಿಸಲು ಕೆಟ್ಟ ಕೆಲಸಗಳನ್ನು ಮಾಡಲು ಪೇರೇಪಿಸುತ್ತದೆ. ಆಸೆಯು ನಮ್ಮಲ್ಲಿ ಇನ್ನೂ ಸಾಧಿಸಬೇಕೆಂಬ ಉತ್ಸಾಹವನ್ನು ತುಂಬುತ್ತದೆ. ಸುಖವಾಗಿ ಬದುಕಬೇಕೆಂಬ ಆಸೆಯು ನಮ್ಮಲ್ಲಿರುವ ಕಾರಣ ನಾವು ಸಂತೋಷದಿಂದ ಜೀವಿಸುತ್ತೇವೆ. ಆಸೆಯನ್ನುವುದು ಕೆಟ್ಟದ್ದಲ್ಲ. ಆದರೆ ಅತಿಯಾಸೆ ಎನ್ನುವುದು ಬುದ್ಧ ಹೇಳಿದಂತೆ ದುಃಖಕ್ಕೆ ಮೂಲವಾಗಿದೆ. ಇದಕ್ಕೆ ಹೇಳುವುದು ಅತಿಯಾದರೆ ಅಮೃತವೂ ವಿಷ ಎಂದು. ನಾವು ಅತಿ ಆಸೆಗೆ ಬಲಿಯಾದರೆ ನಮ್ಮ ನೆಮ್ಮದಿ ಹಾಳಾಗುತ್ತದೆ, ಬದುಕು ಬರಡಾಗುತ್ತದೆ ಹಾಗೂ ಜೀವನ ನಾಶವಾಗುತ್ತದೆ. ಅತಿಯಾಸೆಯಿಂದ ಕೆಡುಕು ಉಂಟಾಗುತ್ತದೆ. ಆದ್ದರಿಂದ ಅತಿ ಆಸೆ ಪಡಬಾರದು.

ಅತಿ ಆಸೆ ಗತಿಗೇಡು ಗಾದೆಯ ಸಂದೇಶ

ನಾವು ಅಂದರೆ ಪ್ರತಿಯೊಬ್ಬರು ಒಂದೊಂದು ಗಾದೆಯನ್ನು ನಮ್ಮ ಜೀವನಕ್ಕೆ ಅಳವಡಿಸಿಕೊಳ್ಳಬೇಕು. ಈ ಗಾದೆಯಿಂದ ನಾವೆಲ್ಲರು ಅರ್ಥ ಮಾಡಿಕೊಳ್ಳಬೇಕಾದ್ದದ್ದು ಆಸೆಗೆ ಮಿತಿ ಇರಲಿ ಆಸೆಯೇ ಜೀವನದ ಸಾರ್ಥಕತೆಯಲ್ಲವೆಂಬುದನ್ನು ನಾವೆಲ್ಲರು ಮೊದಲು ಅರ್ಥ ಮಾಡಿಕೊಳ್ಳಬೇಕು. ಮಾನವ ತನ್ನ ಜೀವನ ನಡೆಸಲು ಬೇಕಾದ ಸೌಲಭ್ಯಗಳನ್ನು ಮಾತ್ರ ಹೊಂದುವುದು ಉತ್ತಮ. ಸಂತೋಷ, ನೆಮ್ಮದಿ ಜೀವನ ಮುಖ್ಯ ಅದಕ್ಕೆ ಅಗತ್ಯವಿರುವಷ್ಟು ಪ್ರಾಮಾಣದ ಅಗತ್ಯಗಳೊಂದಿಗೆ ಜೀವನವನ್ನ ನಡೆಸಿ.

FAQ

ಅತಿ ಆಸೆ ಗತಿಗೇಡು ಗಾದೆಯ ಸಂದೇಶವೇನು ?

ಈ ಗಾದೆಯಿಂದ ನಾವೆಲ್ಲರು ಅರ್ಥ ಮಾಡಿಕೊಳ್ಳಬೇಕಾದ್ದದ್ದು ಆಸೆಗೆ ಮಿತಿ ಇರಲಿ ಆಸೆಯೇ ಜೀವನದ ಸಾರ್ಥಕತೆಯಲ್ಲವೆಂಬುದನ್ನು ನಾವೆಲ್ಲರು ಮೊದಲು ಅರ್ಥ ಮಾಡಿಕೊಳ್ಳಬೇಕು. ಮಾನವ ತನ್ನ ಜೀವನ ನಡೆಸಲು ಬೇಕಾದ ಸೌಲಭ್ಯಗಳನ್ನು ಮಾತ್ರ ಹೊಂದುವುದು ಉತ್ತಮ. ಸಂತೋಷ, ನೆಮ್ಮದಿ ಜೀವನ ಮುಖ್ಯ ಅದಕ್ಕೆ ಅಗತ್ಯವಿರುವಷ್ಟು ಪ್ರಾಮಾಣದ ಅಗತ್ಯಗಳೊಂದಿಗೆ ಜೀವನವನ್ನ ನಡೆಸಿ.

ಇತರೆ ವಿಷಯಗಳು :

ವಿಜ್ಞಾನ ಮತ್ತು ತಂತ್ರಜ್ಞಾನದ ಬಗ್ಗೆ ಪ್ರಬಂಧ

ಸಾವಿತ್ರಿಬಾಯಿ ಫುಲೆ ಜೀವನ ಚರಿತ್ರೆ 

Leave a Reply

Your email address will not be published. Required fields are marked *