ಬ್ಯಾಂಕಿನ ವ್ಯವಹಾರಗಳ ಬಗ್ಗೆ ಮಾಹಿತಿ | Information About The Bank’s Affairs in Kannada

ಬ್ಯಾಂಕಿನ ವ್ಯವಹಾರಗಳ ಬಗ್ಗೆ ಮಾಹಿತಿ Information About The Bank’s Affairs Bankina Vavaharagala Bagge Mahiti in Kannada

ಬ್ಯಾಂಕಿನ ವ್ಯವಹಾರಗಳ ಬಗ್ಗೆ ಮಾಹಿತಿ

Information About The Bank's Affairs in Kannada
Information About The Bank’s Affairs in Kannada

ಈ ಲೇಖನಿಯಲ್ಲಿ ಬ್ಯಾಂಕಿನ ವ್ಯವಹಾರದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.

ಬ್ಯಾಂಕಿನ ವ್ಯವಹಾರ

ಬ್ಯಾಂಕುಗಳು ಸುಮಾರು ಎರಡುನೂರು ವರ್ಷಗಳ ಹಿಂದೆ ಅಭಿವೃದ್ದಿ ಹೊಂದಿದ್ದವು. ಬ್ಯಾಂಕುಗಳ ಸ್ವರೂಪವು ಕಾಲಕ್ಕನುಗುಣವಾಗಿ ಬದಲಾವಣೆ ಹೊದುತ್ತಾ ಬಂದಿತು. ಬ್ಯಾಂಕ್‌ ಎಂಬ ಪದವು ಹಣಕಾಸಿನ ವ್ಯವಹಾರಗಳಿಗೆ ಸಂಭಂಧಪಟ್ಟಿದೆ. ಇವು ಹಣಕಾಸಿನ ಸಂಸ್ಥೆಗಳಾಗಿದ್ದು ಗ್ರಾಹಕರು ಭದ್ರತೆಯ ದೃಷ್ಟಿಯಿಂದ ಬ್ಯಾಂಕುಗಳಲ್ಲಿ ತಮ್ಮ ಹಣವನ್ನು ಇಟ್ಟು ತಮಗೆ ಬೇಕಾದಾಗ ಹಿಂದಿರುಗಿ ಪಡೆಯಲು ಸಾಧ್ಯವಾಗಿದೆ. ಬ್ಯಾಂಕುಗಳು ಗ್ರಾಹಕರಿಗೆ ಸಾಲವನ್ನು ಕೊಟ್ಟು ಅವುಗಳಿಗೆ ಬಡ್ಡಿ ವಸೂಲು ಮಾಡುತ್ತವೆ. ವಿವಿಧ ದೇಶಗಳ ವಿವಿಧ ಹಣವನ್ನು ವಿನಿಮಯ ಮಾಡುವ ಕಾರ್ಯವನ್ನು ಮಾಡುತ್ತವೆ. ದೇಶದ ಅಭಿವೃದ್ದಿಯು ಬ್ಯಾಂಕಿಂಗ್‌ ವ್ಯವಹಾರಗಳ ಮೇಲೆ ಅವಲಂಭಿಸಿರುತ್ತದೆ.

ಬ್ಯಾಂಕ್‌ ಎಂದರೇನು

ಬ್ಯಾಂಕ್‌ ಎಂಬ ಪದವು ಇಟಾಲಿಯನ್ ಭಾಷೆಯ “ಬ್ಯಾಂಕೋ” ಅಥವಾ ಪ್ರೆಂಚ್‌ ಭಾಷೆಯ ಬ್ಯಾಂಕ್‌ ಎಂಬ ಶಬ್ದಗಳಿಂದ ಬಂದಿದೆ. ಇವುಗಳ ಅರ್ಥ “ಬೆಂಚು” ಅಥವಾ ಹಣವನ್ನು ವಿನಿಮಯ ಮಾಡಿಕೊಳ್ಳುವ ಟೇಬಲ್‌ ಆಗಿದೆ. ಬ್ಯಾಂಕಿಂಗ್‌ ಕಂಪನಿಯು ಹಣಕಾಸಿನ ವ್ಯವಹಾರ ಅಂದರೆ ಹಣವನ್ನು ತಮ್ಮಲ್ಲಿ ಇಟ್ಟುಕೊಂಡಿದ್ದನ್ನು ಸಾಲಕೊಡುವ ಸಂಸ್ಥೆಯಾಗಿದೆ ಎನ್ನಲಾಗಿದೆ. ಬ್ಯಾಂಕಿನಲ್ಲಿನ ಸೇವೆಗಳನ್ನು ಉಪಯೋಗಿಸಿಕೊಳ್ಳುವ ವ್ಯವಹಾರಗಳನ್ನು ಬ್ಯಾಂಕಿಂಗ್‌ ಎನ್ನುತ್ತೇವೆ. ಬ್ಯಾಂಕುಗಳು ಸಾರ್ವಜನಿಕರ ಠೇವಣಿಗಳನ್ನು ಅವರಿಗೆ ಅವಶ್ಯಕ ಎನಿಸಿದಾಗ ಚೆಕ್ಕು, ಡ್ರಾಪ್ಟ ಮತ್ತಿತರ ರೂಪಗಳಲ್ಲಿ ಮರುಪಾವತಿ ಮಾಡುತ್ತದೆ.

ಬ್ಯಾಂಕುಗಳ ಗುಣಲಕ್ಷಣಗಳು

ಹಣದ ವಹಿವಾಟು :

ಬ್ಯಾಂಕುಗಳು ಹಣಕಾಸಿನ ಸಂಸ್ಥೆಗಳಾಗಿದ್ದು ಸಾರ್ವಜನಿಕರ ಹಣದ ವಹಿವಾಟನ್ನು ಮಾಡುತ್ತವೆ.

ವ್ಯಕ್ತಿ \ ಸಂಸ್ಥೆ\ ಕಂಪನಿ :

ಬ್ಯಾಂಕು ಒಬ್ಬ ವ್ಯಕ್ತಿಯಾಗಿರಬಹುದು, ಸಂಸ್ಥೆ ಅಥಾವ ಕಂಪನಿಯಾಗಿರಬಹುದು. ಬ್ಯಾಂಕಿಂಗ್‌ ಕಂಪನಿ ಎಂದರೆ ಹಣಕಾಸಿನ ವ್ಯವಹಾರ ಮಾಡುವ ಸಂಸ್ಥೆ.

ಠೇವಣಿಗಳನ್ನು ಅಂಗೀಕರಿಸುತ್ತವೆ :

ಬ್ಯಾಂಕು ಸಾರ್ವಜನಿಕರಿಂದ ಠೇವಣಿಯನ್ನು ಅಂಗಿಕರಿಸುತ್ತದೆ. ಈ ಠೇವಣಿಗಳನ್ನು ಠೇವಣಿದಾರರು ಬೇಡಿಕೆ ಇಟ್ಟಾಗ ಅಥವಾ ಒಂದು ನಿರ್ಧಿಷ್ಟ ಅವಧಿ ಮುಗಿದ ಮೇಲೆ ಹಿಂದಿರುಗಿಸಬೇಕಾಗುತ್ತದೆ. ಈ ಠೇವಣಿಗಳಿಗೆ ಬ್ಯಾಂಕು ಭದ್ರತೆಯನ್ನು ಒದಗಿಸುತ್ತದೆ.

ಸಾಲವನ್ನು ಕೊಡುವುದು :

ಬ್ಯಾಂಕು ಕೈಗಾರಿಕ ಕ್ಷೇತ್ರ, ಕೃಷಿ ಕ್ಷೇತ್ರ, ಶಿಕ್ಷಣ, ಗೃಹನಿರ್ಮಾಣ ಮೊದಲಾದ ಉದ್ದೇಶಗಳಗಾಗಿ ಹಣವನ್ನು ಸಾಲ ರೂಪದಲ್ಲಿ ಕೊಡುತ್ತದೆ.

ಲಾಭ ಮತ್ತು ಸೇವಾ ಭಾವನೆ :

ಬ್ಯಾಂಕು ಸೇವಾ ಮನೋಭಾವವನ್ನು ಹೊಂದಿದ್ದು ಲಾಭ ಪಡೆಯುವ ಸಂಸ್ಥೆಯಾಗಿದೆ.

ಸಂಬಂಧ ಕಲ್ಪಿಸುವ ಕೊಂಡಿ :

ಬ್ಯಾಂಕು ಠೇಣಿದಾರರು ಮತ್ತು ಸಾಲ ಪಡೆಯುವವರ ಮಧ್ಯೆ ಸಂಪರ್ಕ ಕಲ್ಪಿಸುವಂತ ಕೊಂಡಿಯಂತೆ ತಮ್ಮ ಕಾರ್ಯಗಳನ್ನು ನಡೆಸುತ್ತದೆ.

ಬ್ಯಾಂಕಿಂಗ್‌ ವ್ಯವಹಾರ :

ಬ್ಯಾಂಕಿನ ಮುಖ್ಯ ಚಟುವಟಿಕೆ ಹಣಕಾಸಿನಿಂದ ಕೂಡಿದ ವ್ಯವಹಾರವಾಗಿದ್ದು ಇತರೆ ವ್ಯವಹಾರಗಳಿಗೆ ಅಧೀನವಾಗಿರುವುದು.

ಬ್ಯಾಂಕಿನ ಕಾರ್ಯಗಳು

  • ಸಾರ್ವಜನಿಕರಿಂದ ಅಥವಾ ಇತರರಿಂದ ಠೇವಣಿಯನ್ನು ಅಂಗೀಕರಿಸುವುದು.
  • ಸಾರ್ವಜನಿಕರರಿಗೆ ಮತ್ತು ಸಂಘ ಸಂಸ್ಥೆಗಳಿಗೆ ಸಾಲವನ್ನು ಕೊಡುವುದು.
  • ಹಣವನ್ನು ಒಂದು ಸ್ಥಳದಿಂದ ಮತ್ತೋಂದು ಸ್ಥಳಕ್ಕೆ ವರ್ಗಾಯಿಸುವುದು.
  • ಚೆಕ್ಕು ಮತ್ತು ಹುಂಡಿಗಳ ಮೇಲೆ ಹಣ ವಸೂಲು ಮಾಡುವುದು.
  • ಹುಂಡಿಗಳನ್ನು ಸೋಡಿ ಮಾಡುವುದು.
  • ಭದ್ರತಾ ಕಪಾಟುಗಳನ್ನು ಬಾಡಿಗೆಗೆ ಕೊಡುವುದು.
  • ವಿದೇಶಿ ವಿನಿಮಯದ ವ್ಯವಹಾರಗಳನ್ನು ನಿರ್ವಹಿಸುವುದು.
  • ಬೆಲೆ ಬಾಳುವ ವಸ್ತುಗಳನ್ನು ತಮ್ಮ ಸುಪರ್ಧಿನಲ್ಲಿ ಭದ್ರವಾಗಿ ಇಟ್ಟುಕೊಳ್ಳುವುದು.
  • ಸಾಲಪತ್ರಗಳನ್ನು ಮತ್ತು ಜವಾಬ್ದಾರಿ ಪತ್ರಗಳನ್ನು ಕೊಡುವುದು.

ಬ್ಯಾಂಕುಗಳು ಸಲ್ಲಿಸುವ ಸೇವೆಗಳು

  • ಖಾಸಗಿ ಮತ್ತು ವ್ಯಾಪಾರಕ್ಕೆ ಸಾಲ
  • ಮನೆ ಕಟ್ಟಲು ಅಥವಾ ವಾಹನ ಖರೀದಿಸಲು ಸಾಲ ಕೊಡುವುದು.
  • ಪರಸ್ಪರ ನಿಧಿಗಳನ್ನು ನಿರ್ವಹಿಸುವುದು.
  • ಭದ್ರತಾ ಅಥವಾ ರಕ್ಷಣಾ ಕಪಾಟುಗಳನ್ನು ಕೊಡುವುದು.
  • ಭರವಸೆ ಸೇವೆಗಳು
  • ಸಹಿಗಳಿಗೆ ಜವಾಬ್ದಾರಿ ಹಾಕುವುದು.
  • ಇ ಬ್ಯಾಂಕಿಂಗ್‌ ಸೇವೆಗಳು

FAQ

ಬ್ಯಾಂಕುಗಳು ಸಲ್ಲಿಸುವ ಸೇವೆಗಳನ್ನು ತಿಳಿಸಿ ?

ಭದ್ರತಾ ಅಥವಾ ರಕ್ಷಣಾ ಕಪಾಟುಗಳನ್ನು ಕೊಡುವುದು, ಇ ಬ್ಯಾಂಕಿಂಗ್‌ ಸೇವೆಗಳು ಇನ್ನು ಮುಂತಾದವುಗಳು.

ಬ್ಯಾಂಕಿನ ಕಾರ್ಯಗಳನ್ನು ತಿಳಿಸಿ ?

ಸಾರ್ವಜನಿಕರರಿಗೆ ಮತ್ತು ಸಂಘ ಸಂಸ್ಥೆಗಳಿಗೆ ಸಾಲವನ್ನು ಕೊಡುವುದು, ಹಣವನ್ನು ಒಂದು ಸ್ಥಳದಿಂದ ಮತ್ತೋಂದು ಸ್ಥಳಕ್ಕೆ ವರ್ಗಾಯಿಸುವುದು ಇನ್ನು ಮುಂತಾದವುಗಳು.

ಇತರೆ ವಿಷಯಗಳು :

ಸಂವಿಧಾನದ ರಚನೆಯ ಬಗ್ಗೆ ಮಾಹಿತಿ

ಗಣರಾಜ್ಯೋತ್ಸವ ದಿನಾಚರಣೆ ಭಾಷಣ

Leave a Reply

Your email address will not be published. Required fields are marked *