ಮೂಢನಂಬಿಕೆ ಬಗ್ಗೆ ಪ್ರಬಂಧ | Essay on Superstition in Kannada

ಮೂಢನಂಬಿಕೆ ಬಗ್ಗೆ ಪ್ರಬಂಧ Essay on Superstition in Mudanambhikeya Bagge Prabandha in Kannada

ಮೂಢನಂಬಿಕೆ ಬಗ್ಗೆ ಪ್ರಬಂಧ

Essay on Superstition in Kannada
Essay on Superstition in Kannada

ಈ ಲೇಖನಿಯಲ್ಲಿ ಮೂಢನಂಬಿಕೆ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.

ಪೀಠಿಕೆ

ಮಾನವನು ಸಮಾಜದಲ್ಲಿ ವಾಸಿಸುವಾಗ ಕೆಲವು ನಂಬಿಕೆಗಳನ್ನು ಅಳವಡಿಸಿಕೊಂಡಿರುತ್ತಾನೆ. ಅದೇ ರೀತಿ ಕೆಲವು ಮೂಢನಂಬಿಕೆಗಳನ್ನು ಕೆಲವೊಂದು ಸಾರಿ ತನಗೆ ಗೊತ್ತಿಲ್ಲದೆ ಅನುಸರಿಸುತ್ತಿರುತ್ತಾನೆ. ‘ಮೂಢನಂಬಿಕೆ’ಯು ಒಂದು ಕತ್ತಲೆಯ ಜಗತ್ತಾಗಿದೆ, ಪ್ರಕೃತಿಯ ನಿಯಮಗಳಿಗೆ ಅಥವಾ ಬ್ರಹ್ಮಾಂಡದ ವೈಜ್ಞಾನಿಕ ತಿಳುವಳಿಕೆಗೆ ಅನುಗುಣವಾಗಿಲ್ಲದ ಶಕ್ತಿಗಳು ಅಥವಾ ಘಟಕಗಳ ಅಸ್ತಿತ್ವದ ನಂಬಿಕೆ. ಇದು ಮಾನವನ ಅಜ್ಞಾನ ಮತ್ತು ವೈಜ್ಞಾನಿಕ ಜ್ಞಾನದ ಕೊರತೆಯಿಂದ ಮೂಢನಂಬಿಕೆಗಳಲ್ಲಿ ಹೆಚ್ಚಾಗಿ ನಂಬಿಕೆಯನ್ನು ಇಟ್ಟುಕೊಂಡಿರುವುದಾಗಿದೆ. ಚಾಲ್ತಿಯಲ್ಲಿರುವ ಧರ್ಮವು ಆಪಾದಿತ ಮೂಢನಂಬಿಕೆಗಳನ್ನು ಹೊಂದಿದೆಯೇ ಎಂಬುದನ್ನು ಲೆಕ್ಕಿಸದೆ ಸಮಾಜದ ಬಹುಪಾಲು ಜನರು ಆಚರಿಸದ ಧರ್ಮವನ್ನು ಉಲ್ಲೇಖಿಸಲು ‘ಮೂಢನಂಬಿಕೆ’ ಪದವನ್ನು ಹೆಚ್ಚಾಗಿ ಬಳಸಲಾಗುತ್ತದೆ.

ವಿಷಯ ವಿವರಣೆ

ನಮ್ಮ ಭಾರತ ದೇಶವು 21 ನೇ ಶತಮಾನದ ನಂತರವೂ ಮೂಢನಂಬಿಕೆಯನ್ನು ನಂಬುತ್ತದೆ. ಈ ಮೂಢನಂಬಿಕೆಯನ್ನು ಎಲ್ಲಾ ದೇಶದಲ್ಲೂ, ಎಲ್ಲಾ ಜನಾಂಗದಲ್ಲೂಕಾಣಬಹುದು. ಇಂದಿಗೂ ನಮ್ಮ ಸಮಾಜದಲ್ಲಿ ಅನೇಕ ಜನರು ಮೂಢನಂಬಿಕೆಯನ್ನು ನಂಬುತ್ತಾರೆ. ಬೆಕ್ಕು ಅಡ್ಡ ಬಂದಾಗ ನಿಲ್ಲಿಸುವುದು, ಮನೆಯ ಮಾಳಿಗೆಯ ಮೇಲೆ ಗೂಬೆ ಕೂರುವುದು ಅಶುಭವೆಂದು ಪರಿಗಣಿಸುವುದು, ಎಡಗಣ್ಣು ಬಡಿದರೆ ಅಶುಭವೆಂದು ಪರಿಗಣಿಸುವುದು ಹೀಗೆ ಹಲವಾರು ಘಟನೆಗಳು ಇಂದಿಗೂ ನಮ್ಮ ನಡುವೆ ಇವೆ. ಹೆಚ್ಚಿನ ಮಹಿಳೆಯರು ಪುತ್ರರು ಮತ್ತು ಮಕ್ಕಳನ್ನು ಪಡೆಯಲು ಬಾಬಾನನ್ನು ಪ್ರದಕ್ಷಿಣೆ ಮಾಡುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ಬಾಬಾ ಸಾಧು ಅಮಾಯಕ ಮಹಿಳೆಯರಿಂದ ದೊಡ್ಡ ಮೊತ್ತವನ್ನು ಸಂಗ್ರಹಿಸುತ್ತಾರೆ.

ಮೂಢನಂಬಿಕೆಗಳಿಗೆ ಉದಾಹರಣೆಗಳು

  • ಬೆಕ್ಕು ಅಡ್ಡ ಬಂದಾಗ ಅಪಶಕುನ ಎಂದು ಭಾವಿಸುವುದು.
  • ಒಳ್ಳೆ ಕೆಲಸಕ್ಕೆ ಅಥವಾ ಹೊರಗೆ ಹೋಗುವಾಗ ಖಾಲಿ ಕೊಡವನ್ನು ತರುವುದು ಅಪಶಕುನವೆಂದು ಭಾವಿಸುವುದು.
  • ಮನೆ ಮೇಲೆ ಗೂಬೆ ಕೂರುವುದು ಅಪಶಕುನವೆಂದುಕೊಳ್ಳವುದು.
  • ಎಡಗಣ್ಣು ಬಡಿದರೆ ಕೆಡಕಾಗುತ್ತದೆ ಎಂದು ಭಾವಿಸುವುದು.
  • ಭವಿಷ್ಯ ವಾಣಿ ಯನ್ನು ದಿನನಿತ್ಯ ತಿಳಿದುಕೊಂಡು ಅದರಂತೆ ನಡೆಯುವುದು.
  • ಮಾಟಿ – ಮಂತ್ರಗಳನ್ನು ಮಾಡುವುದು.

ಮೂಢನಂಬಿಕೆಗಳಿಂದ ಆಗುತ್ತಿರುವ ದುಷ್ಪರಿಣಾಮಗಳು

  • ವ್ಯಕ್ತಿಯು ಎಷ್ಟು ಮೂಢನಂಬಿಕೆಗಳನ್ನು ಅವಲಂಬಿಸಿದ್ದಾನೆಂದರೆ ಬಾಬಾನ ಸೂಚನೆಗಳ ಪ್ರಕಾರ, ದಿನ ಭವಿಷ್ಯವಾಣಿ ಪ್ರಕಾರಗಳ ಮೂಲಕ ಜೀವನವನ್ನು ನಡೆಸುತ್ತಿರುತ್ತಾರೆ. ಇದರಿಂದ ಕೆಲವರು ತಮ್ಮ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಾರೆ.
  • ಈ ಮೂಢನಂಬಿಕೆಗಳಿಂದ ಮಾಟ – ಮಂತ್ರಗಳು ಹೆಚ್ಚು ಅವಲಂಬಿತರಾಗಿದ್ದಾರೆ.
  • ಕೆಲವೊಂದು ಸಾರಿ ಈ ಮೂಢನಂಬಿಕೆಗಳಿಂದ ಮಕ್ಕಳನ್ನ, ಪ್ರಾಣೆಗಳನ್ನ ಬಲಿ ಕೊಡುತ್ತಾರೆ.
  • ಹಾಗೆ ಇದರಿಂದ ಸ್ತ್ರೀಯರು ಹೆಚ್ಚು ಶೋಷಣೆಗೆ ಒಳಗಾಗುತ್ತಿದ್ದಾರೆ.

ಉಪಸಂಹಾರ

ಮೂಢನಂಬಿಕೆಯು ಸಮಾಜಕ್ಕೆ ಅಂಟಿದ ಶಾಪವಾಗಿದೆ. ಇದು ಅಜ್ಞಾನ ಮತ್ತು ಭಯದ ವಾತವರಣವನ್ನು ಸೃಷ್ಠಿಸುತ್ತದೆ. ಹಾಗೆ ಕತ್ತಲೆಯ ಜಗತ್ತನ್ನು ಸೃಷ್ಠಿಸುವಂತದ್ದು, ವಿಜ್ಞಾನ ಮತ್ತುಅದರ ಪರಿಶೋಧನೆಯಿಂದ ಮೂಢನಂಬಿಕೆಗಳ ಬಗ್ಗೆ ಸಮಾಜಕ್ಕೆ ಸಾಕಷ್ಟು ಅರಿವನ್ನು ಮೂಡಿಸುವುದರ ಮೂಲಕ ಮೂಢನಂಬಿಕೆಯನ್ನು ಹೋಗಲಾಡಿಸುವುದು ಅಗತ್ಯವಾಗಿದೆ. ಈ ಮೂಢನಂಬಿಕೆಯಿಂದ ಆಗುವಂತ ಅನೇಕ ಶೋಷಣೆಗಳನ್ನುತಪ್ಪಿಸಬೇಕು. ನಂಬಬೇಕು ಆದರೆ ಮೂಡರಂತೆ ವರ್ತಿಸಬಾರದು.

FAQ

ಮೂಢನಂಬಿಕೆಗೆ ಉದಾಹರಣೆಯನ್ನು ತಿಳಿಸಿ ?

ಬೆಕ್ಕು ಅಡ್ಡ ಬಂದಾಗ ಅಪಶಕುನ ಎಂದು ಭಾವಿಸುವುದು.
ಒಳ್ಳೆ ಕೆಲಸಕ್ಕೆ ಅಥವಾ ಹೊರಗೆ ಹೋಗುವಾಗ ಖಾಲಿ ಕೊಡವನ್ನು ತರುವುದು ಅಪಶಕುನವೆಂದು ಹೇಳುವುದು.

ಮೂಢನಂಬಿಕೆಗಳಿಂದ ಆಗುತ್ತಿರುವ ದುಷ್ಪರಿಣಾಮಗಳನ್ನು ತಿಳಿಸಿ ?

ಈ ಮೂಢನಂಬಿಕೆಗಳಿಂದ ಮಾಟ – ಮಂತ್ರಗಳು ಹೆಚ್ಚು ಅವಲಂಬಿತರಾಗಿದ್ದಾರೆ.
ಕೆಲವೊಂದು ಸಾರಿ ಈ ಮೂಢನಂಬಿಕೆಗಳಿಂದ ಮಕ್ಕಳನ್ನ, ಪ್ರಾಣೆಗಳನ್ನ ಬಲಿ ಕೊಡುತ್ತಾರೆ.

ಇತರೆ ವಿಷಯಗಳು :

ವಿಜ್ಞಾನ ಮತ್ತು ತಂತ್ರಜ್ಞಾನದ ಬಗ್ಗೆ ಪ್ರಬಂಧ

ಸಾವಿತ್ರಿಬಾಯಿ ಫುಲೆ ಜೀವನ ಚರಿತ್ರೆ

Leave a Reply

Your email address will not be published. Required fields are marked *