ಅಂಬೇಡ್ಕರ ರವರ ಜೀವನ ಚರಿತ್ರೆ | Biography of Ambedkar in Kannada

ಅಂಬೇಡ್ಕರ ರವರ ಜೀವನ ಚರಿತ್ರೆ Biography of Ambedkar ambedkar jeevana charitre information in kannada

ಅಂಬೇಡ್ಕರ ರವರ ಜೀವನ ಚರಿತ್ರೆ

Biography of Ambedkar in Kannada
Biography of Ambedkar in Kannada

ಈ ಲೇಖನಿಯಲ್ಲಿ ಅಂಬೇಡ್ಕರ್‌ ರವರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.

ಸಂವಿಧಾನ ಶಿಲ್ಪಿ

ಸಂವಿಧಾನಶಿಲ್ಪಿ ಕರೆಸಿಕೊಂಡ ಮಹಾನ್‌ ವ್ಯಕ್ತಿಯೆಂದರೆ ಡಾ. ಭೀಮರಾವ್ ರಾಮ್‌ಜಿ ಅಂಬೇಡ್ಕರ್ ಇವರು ಭಾರತದ ನ್ಯಾಯಾಂಗ, ಸಾಮಾಜಿಕ ಮತ್ತು ರಾಜಕೀಯದ ಸುಧಾರಕರು ಕೂಡ ಹೌದು. ಇವರನ್ನು ನಾವು ‘ಭಾರತೀಯ ಸಂವಿಧಾನದ ಪಿತಾಮಹ’ ಎಂದ ಕರೆಯುತ್ತಾರೆ. ಇವರು ಹೆಸರಾಂತ ರಾಜಕಾರಣಿ ಮತ್ತು ಪ್ರಖ್ಯಾತ ನ್ಯಾಯ ಶಾಸ್ತ್ರಜ್ಞ ಆಗಿದ್ದರು. ಅಸ್ಪೃಶ್ಯತೆ ಮತ್ತು ಜಾತಿ ನಿರ್ಬಂಧಗಳಂತಹ ಸಾಮಾಜಿಕ ಅನಿಷ್ಟಗಳನ್ನು ತೊಡೆದುಹಾಕಲು ಅವರು ಮಾಡಿದ ಪ್ರಯತ್ನಗಳು ತುಂಬಾ ಮಹತ್ವದ್ದಾಗಿವೆ.

ಅಂಬೇಡ್ಕರ್‌ ರವರ ಬಾಲ್ಯ ಜೀವನ

ಅಂಬೇಡ್ಕರ್ ರವರು 1891 ರಲ್ಲಿ ಏಪ್ರಿಲ್ 14 ಮಧ್ಯಪ್ರದೇಶದ ಮೊವ್ ಸೇನಾ ಕಂಟೋನ್ಮೆಂಟ್‌ನಲ್ಲಿ ರಂದು ಹುಟ್ಟಿದರು. ಇವರ ತಂದೆಯ ಹೆಸರು ರಾಮ್ಜಿ ಮತ್ತು ತಾಯಿಯ ಹೆಸರು ಭೀಮಾಬಾಯಿ. ಅಂಬೇಡ್ಕರರ ತಂದೆ ಅವರು ಭಾರತೀಯ ಸೇನೆಯಲ್ಲಿ ಸುಬೇದಾರರಾಗಿ ಸೇವೆ ಸಲ್ಲಿಸುತ್ತಿದ್ದರು. 1894 ರಲ್ಲಿ ಸೇನೆಯ ನಿವೃತ್ತಿಯ ನಂತರ, ಅವರ ಕುಟುಂಬವು ಸತಾರಾಕ್ಕೆ ಸ್ಥಳಾಂತರ ಗೊಂಡರು.

ಅಂಬೇಡ್ಕರ್ ಜೀವನ ಚರಿತ್ರೆ ಚಿಕ್ಕ ಇರುವಾಗಲೇ ಭೀಮರಾಯನ ತಾಯಿ ತೀರಿ ಕೊಂಡರು. ನಾಲ್ಕು ವರ್ಷಗಳ ನಂತರ ಅಂಬೇಡ್ಕರ್ ಅವರ ತಂದೆ ಮರು ಮದುವೆಯಾದರು ಮತ್ತು ನಂತರ ಇವರ ಕುಟುಂಬ ಬಾಂಬೆಗೆ ಸ್ಥಳಾಂತರ ಆದರು. 1906 ರಲ್ಲಿ, 15 ವರ್ಷದ ಭೀಮರಾವ್ 9 ವರ್ಷದ ಬಾಲಕಿ ರಮಾಬಾಯಿಯನ್ನು ಮದುವೆ ಆದರೂ. 1912 ರಲ್ಲಿ, ಅವರ ತಂದೆ ರಾಮ್ಜಿ ಸಕ್ಪಾಲ್ ಮುಂಬೈನಲ್ಲಿ ನಿಧನ ಹೊಂದಿದರು.

ಅಂಬೇಡ್ಕರ್‌ರವರ ಶಿಕ್ಷಣ

ಬಿ. ರ್ ಅಂಬೇಡ್ಕರ್ ಅವರು 1908 ರಲ್ಲಿ ಎಲ್ಫಿನ್‌ಸ್ಟೋನ್ ಹೈಸ್ಕೂಲ್‌ನಿಂದ ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಉತ್ತೀರ್ಣ ಆಡಯೂ.ನಂತರ 1908 ರಲ್ಲಿ ಅಂಬೇಡ್ಕರ್ ಅವರು ಎಲ್ಫಿನ್‌ಸ್ಟೋನ್ ಕಾಲೇಜಿನಲ್ಲಿ ಅಧ್ಯಯನ ಮಾಡಲು ಅವಕಾಶವನ್ನು ಪಡೆದುಕೊಂಡಿದೆ. ನಂತರ 1912 ರಲ್ಲಿ ಅವರು ಬಾಂಬೆ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರ ಮತ್ತು ರಾಜ್ಯಶಾಸ್ತ್ರದಲ್ಲಿ ತಮ್ಮ ಪದವಿಯನ್ನು ಪಡೆದರು. ಎಲ್ಲಾ ಪರೀಕ್ಷೆಗಳಲ್ಲಿ ಯಶಸ್ವಿಯಾಗಿ ಅಂಬೇಡ್ಕರ್ ಅವರು ಉತ್ತೀರ್ಣರಾಗಿದ್ದರು.

ವಿದ್ಯಾರ್ಥಿವೇತನ ದಿಂದ ಬಂದ ಹಣವನ್ನು ಅಮೆರಿಕದಲ್ಲಿ ಉನ್ನತ ಶಿಕ್ಷಣಕ್ಕೆ ಬಳಸಲು ಅಂಬೇಡ್ಕರ್ ರವರು ನಿರ್ಧಾರ ಮಾಡಿದ್ದರು. ಅವರು ಅರ್ಥಶಾಸ್ತ್ರವನ್ನು ಅಧ್ಯಯನ ಮಾಡಲು ನ್ಯೂಯಾರ್ಕ್ ನಗರದ ಕೊಲಂಬಿಯಾ ವಿಶ್ವವಿದ್ಯಾಲಯಕ್ಕೆ ಸೇರಿ ಕೊಂಡರು. ಅವರು ಜೂನ್ 1915 ರಲ್ಲಿ ‘ಭಾರತೀಯ ವಾಣಿಜ್ಯ’ದಿಂದ ಸ್ನಾತಕೋತ್ತರ ಪದವಿ ಅನ್ನು ಪಡೆದರು.

ಅಂಬೇಡ್ಕರ್‌ ರವರ ಸಾಧನೆ

ಡಾ. ಅಂಬೇಡ್ಕರ್ ಅವರನ್ನು ಆಗಸ್ಟ್ 29, 1947 ರಂದು ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರನ್ನಾಗಿ ಅಂಬೇಡ್ಕರ್ ಅವರನ್ನು ನೇಮಿಸಲಾಯಿತು. ಅಂಬೇಡ್ಕರ್ ಅವರು ಸಮಾಜದ ಎಲ್ಲಾ ವರ್ಗಗಳ ನಡುವೆ ನಿಜವಾದ ಸೇತುವೆಯನ್ನು ನಿರ್ಮಿಸಲು ಹೆಚ್ಚು ಒತ್ತನ್ನು ನೀಡಿದರು. ಅವರ ಪ್ರಕಾರ, ದೇಶದ ವಿವಿಧ ವರ್ಗಗಳ ನಡುವಿನ ಭಿನ್ನಾಭಿಪ್ರಾಯಗಳನ್ನು ಕಡಿಮೆ ಮಾಡದಿದ್ದರೆ, ದೇಶದ ಏಕತೆಯನ್ನು ಕಾಪಾಡುವುದು ತುಂಬಾ ಕಷ್ಟ ಎಂಬೋದು ಅವರ ಅಭಿಪ್ರಾಯ ಆಗಿತ್ತು. ಅಂಬೇಡ್ಕರ್ ಅವರು ಧಾರ್ಮಿಕ, ಲಿಂಗ ಮತ್ತು ಜಾತಿ ಸಮಾನತೆಗೆ ವಿಶೇಷ ಒತ್ತನ್ನು ನೀಡಿದರು.ಅಸ್ಪೃಶ್ಯ ಸಮುದಾಯವನ್ನು ಹರಿಜನರೆಂದು ಕರೆಯುವ ಕಾಂಗ್ರೆಸ್ ಮತ್ತು ಮಹಾತ್ಮ ಗಾಂಧಿಯವರ ನಿರ್ಧಾರವನ್ನು ಅಂಬೇಡ್ಕರ್ ತೀವ್ರವಾಗಿ ವಿರೋಧ ಮಾಡಿದರು. ಅಸ್ಪೃಶ್ಯ ಸಮುದಾಯದವರೂ ಸಮಾಜದ ಇತರರಿಗೆ ಸಮಾನರು ಎಂದು ಹೇಳಿದರು. ಅಂಬೇಡ್ಕರ್ ರವರು ರಕ್ಷಣಾ ಸಲಹಾ ಸಮಿತಿ ಮತ್ತು ವೈಸರಾಯ್ ಕಾರ್ಯಕಾರಿ ಮಂಡಳಿಗೆ ಕಾರ್ಮಿಕ ಸಚಿವರಾಗಿ ನೇಮಕ ಆದರು. ಸ್ವತಂತ್ರ ಭಾರತದ ಮೊದಲ ಕಾನೂನು ಸಚಿವರಾಗಿ ಮತ್ತು ಸ್ವತಂತ್ರ ಸಮಿತಿಯನ್ನು ರಚಿಸುವ ಜವಾಬ್ದಾರಿಯುತ ಸಮಿತಿಯ ಅಧ್ಯಕ್ಷರಾಗಿ ನೇಮಕಗೊಳ್ಳಲು ಇವುಗಳು ಪ್ರಮುಖ ಕಾರಣವಾಯಿತು.

ಅಂಬೇಡ್ಕರ್‌ ರವರ ನಿಧನ

ಅಂಬೇಡ್ಕರ್‌ ರವರಿಗೆ ಮಧುಮೇಹ, ದೃಷ್ಟಿತೊಂದರೆ ಸೇರಿದಂತೆ ಗಂಭೀರ ಆರೋಗ್ಯ ಸಮಸ್ಯೆ ಗಳಿಂದ ಎದುರಿಸುತ್ತಿದ್ದರು. ಡಿಸೆಂಬರ್ 6, 1956 ರಂದು ಅಂಬೇಡ್ಕರ್ ಅವರು ದೆಹಲಿಯ ತಮ್ಮ ಮನೆಯಲ್ಲಿ ತನ್ನ ಕೊನೆ ಉಸಿರು ಬಿಟ್ಟರು. ಅಂಬೇಡ್ಕರ್ ಅವರು ಬೌದ್ಧ ಧರ್ಮವನ್ನು ತಮ್ಮ ಧರ್ಮವಾಗಿ ಸ್ವೀಕರ ಮಾಡಿದ್ದರಿಂದ ಅವರನ್ನು ಬೌದ್ಧ ಶೈಲಿಯಲ್ಲಿ ಅಂತ್ಯಕ್ರಿಯೆ ಮಾಡಲಾಯಿತು. ಲಕ್ಷಾಂತರ ಬೆಂಬಲಿಗರು, ಕಾರ್ಯಕರ್ತರು, ಅಭಿಮಾನಿಗಳು ಈ ಅಂತಿಮ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

FAQ

ವಿಶ್ವ ಜ್ಞಾನ ದಿನವನ್ನು ಯಾರ ಜನ್ಮದಿನದ ಅಂಗವಾಗಿ ಆಚರಿಸಲಾಗಿದೆ ?

ಅಂಬೇಡ್ಕರ್

ಅಂಬೇಡ್ಕರ್‌ ರವರು ಯಾವಾಗ ಜನಿಸಿದರು ?

ಎಪ್ರಿಲ್‌ ೧೪

ಇತರೆ ವಿಷಯಗಳು :

ರಾಷ್ಟ್ರೀಯ ಪಂಚಾಯತ್‌ರಾಜ್‌ ದಿನದ ಬಗ್ಗೆ ಮಾಹಿತಿ

ಭಾರತದ ಪ್ರಥಮ ಮಹಿಳೆಯರ ಬಗ್ಗೆ ಮಾಹಿತಿ

Leave a Reply

Your email address will not be published. Required fields are marked *