ಪರಿಸರ ಸಂರಕ್ಷಣೆ ಬಗ್ಗೆ ಪ್ರಬಂಧ | Essay on Environmental Protection in Kannada

ಪರಿಸರ ಸಂರಕ್ಷಣೆ ಬಗ್ಗೆ ಪ್ರಬಂಧ Essay on Environmental Protection Parisara Samrakshane Prabandha in Kannada

ಪರಿಸರ ಸಂರಕ್ಷಣೆ ಬಗ್ಗೆ ಪ್ರಬಂಧ

Essay on Environmental Protection in Kannada

ಈ ಲೇಖನಿಯಲ್ಲಿ ಪರಿಸರ ಸಂರಕ್ಷಣೆ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.

ಪೀಠಿಕೆ

ನಾವು ವಾಸಿಸುತ್ತಿರುವ ನಮ್ಮಸುತ್ತ ಮುತ್ತಲಿನ ವಾತವರಣವೇ ಪರಿಸರವಾಗಿದೆ. ಪರಿಸರ ಮನುಷ್ಯನ ಜೀವನಕ್ಕೆ ಎಲ್ಲವನ್ನೂ ಕೊಟ್ಟಿದೆ. ಪ್ರತಿಯೊಂದು ಜೀವಿಯು ತನಗೆ ಬೇಕಾದ ಎಲ್ಲವನ್ನು ಪರಿಸರದಿಂದಲೇ ಪಡೆದುಕೊಳ್ಳುವುದು. ಹೀಗಾಗಿ ಪರಿಸರವನ್ನು ʼಪ್ರಕೃತಿ ಮಾತೆʼ ಎಂದು ಕರೆಯುತ್ತಾರೆ. ಪರಿಸರವು ನಮ್ಮ ಉಳಿವು ಅಳಿವಿನ ಮೇಲೆ ನಿಂತಿದೆ. ಮತ್ತು ಭೂಮಿಯ ಅಸ್ತಿತ್ವದ ಆಧಾರವಾಗಿದೆ. ಪರಿಸರವು ನಮ್ಮ ಸುತ್ತಲಿನ ನೈಸರ್ಗಿಕ ಪರಿಸರದ ಒಟ್ಟು ಮೊತ್ತವಾಗಿದೆ. ಪರಿಸರ ಸಂರಕ್ಷಣೆಯು ಮಾನವ ಮತ್ತು ಮಾನವ ನಿರ್ಮಿತ ಚಟುವಟಿಕೆಗಳ ಭೀಕರ ಪ್ರಭಾವದಿಂದ ಪರಿಸರದ ರಕ್ಷಣೆ ಮತ್ತು ಉಳಿಸುವಿಕೆಯನ್ನು ಸೂಚಿಸುತ್ತದೆ.

ವಿಷಯ ವಿವರಣೆ

ನಮಗೆ ಕೊಡುಗೆಯಾಗಿ ಸಿಕ್ಕಿರುವ ನೈಜವಾದ ಪರಿಸರವು ನಾಶವಾಗದಂತೆ ರಕ್ಷಿಸುವುದು ಮುಖ್ಯವಾಗಿದೆ. ಮತ್ತುಅದಕ್ಕೆ ಇರುವ ಏಕೈಕ ಮಾರ್ಗವೆಂದರೆ ಪರಿಸರ ಸಂರಕ್ಷಣೆ. ಮಾನವನಿಗೂ ಪರಿಸರಕ್ಕು ಗಾಢವಾದ ಸಂಬಂಧವಿದೆ. ಅವನು ಪ್ರಕೃತಿಯಲ್ಲೇ ಹುಟ್ಟಿ ಪ್ರಕೃತಿಯಲ್ಲೇ ಮಣ್ಣಾಗಿ ಹೋಗುತ್ತಾನೆ. ಹೀಗೆ ಬದುಕಿ ಸಾಯುವವರೆಗೂ ಪ್ರತಿಯೊಂದು ಜೀವಸಂಕುಲಕ್ಕು ಪ್ರಕೃತಿ ಮಡಿಲಾಗಿದೆ. ಆದರೆ ಇತ್ತಿಚೆಗಿನ ದಿನಗಳಲ್ಲಿ ಆಧುನಿಕತೆ, ನಗರೀಕರಣ, ವಿಜ್ಞಾನ ತಂತ್ರಜ್ಞಾನದ ಅಭಿವೃದ್ದಿ, ಹೀಗೆ ಹತ್ತು- ಹಲವು ಕಾರಣಗಳಿಗೆ ಶರಣಾಗಿ, ಅನೇಕ ರೀತಿಯಲ್ಲಿ ಪರಿಸರ ನಾಶವಾಗುತ್ತಿದ್ದು, ಅಲ್ಲದೆ ಹೆಚ್ಚುತಿರುವ ಜನಸಂಖ್ಯೆ, ಪ್ಲಾಸ್ಟಿಕ್‌ ಬಳಕೆ ಹೆಚ್ಚು ಹೀಗೆ ಮುಂತಾದವುಗಳಿಂದ ಪರಿಸರ ನಾಶವಾಗುತಿದೆ. ನಾವು ಈಗಲು ಎಚ್ಚೆತ್ತುಕೊಳ್ಳದಿದ್ಧರೆ ಪರಿಸರದ ನಾಶದ ಜೊತೆಗೆ ನಮ್ಮ ಸರ್ವನಾಶ ನಮ್ಮ ಕಣ್ಣೆದುರೇ ಆಗುತ್ತದೆ.

ಪರಿಸರದ ಮಹತ್ವ

ನಾವು ಭೂಮಿಯ ಮೇಲೆ ವಾಸಿಸುತ್ತಿದ್ದೇವೆ. ಈ ಭೂಮಿಯ ಮೇಲೆ ಮನುಷ್ಯನೇ ಅಲ್ಲದೆ ಬೇರೆ ಬೇರೆ ಪ್ರಾಣಿಗಳು, ಸಸ್ಯಗಳು, ಗುಡ್ಡ, ಬೆಟ್ಟ, ಪರ್ವತಗಳು, ಹಳ್ಳ, ನದಿ, ಕೆರೆ, ಸರೋವರಗಳು, ಸಾಗರ, ಜಲಪಾತಗಳು, ಮಳೆ, ಬಿಸಿಲು,ಗಾಳಿ, ವಿವಿಧ ಪಕ್ಷಿಗಳು ಎಲ್ಲವೂ ಸೇರಿ ಪ್ರಕೃತಿ ಅಥವಾ ಪರಿಸರವಾಗಿದೆ. ನಾವು ಎಷ್ಟೇ ಪ್ರಯತ್ನಿಸಿದರೂ ಈಗಾಗಲೇ ಆಗಿರುವ ವಿನಾಶವನ್ನು ನಾವು ರದ್ದುಗೊಳಿಸಲು ಸಾಧ್ಯವಿಲ್ಲ. ಹೀಗಾಗಿ, ನಿಸರ್ಗದ ಜೊತೆ ಬೆರೆತು ಬಾಳಿದರೆ ಪರಿಸರದ ಮೇಲೆ ದುಷ್ಪರಿಣಾಮ ಬೀರುವ ಪರಿಸರದ ಉಳಿವಿಗೆ ಪೂರಕವಾಗುವ ನಮ್ಮ ಸಾಮಾನ್ಯ ಜ್ಞಾನ ತಾನಾಗಿಯೆ ಬೆಳೆಯುತ್ತದೆ. ಈ ಪ್ರಕ್ರಿಯೆಯ ಉದ್ದೇಶವು ಎಲ್ಲಾ ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಿಸುವುದು ಮತ್ತು ದುರಸ್ತಿ ಮಾಡಲು ಸಾಧ್ಯವಿರುವ ಪರಿಸರದ ಕೆಲವು ಭಾಗಗಳನ್ನು ಸರಿಪಡಿಸಲು ಪ್ರಯತ್ನಿಸುವುದು. ಅತಿಯಾದ ಬಳಕೆ, ಜನಸಂಖ್ಯೆಯ ಬೆಳವಣಿಗೆ ಮತ್ತು ತಂತ್ರಜ್ಞಾನದ ತ್ವರಿತ ಅಭಿವೃದ್ಧಿಯಿಂದಾಗಿ ಜೈವಿಕ ಭೌತಿಕ ಪರಿಸರವು ಶಾಶ್ವತವಾಗಿ ಅವನತಿ ಹೊಂದುತ್ತಿದೆ.

ಈ ಚಟುವಟಿಕೆಗಳನ್ನು ನಿಯಂತ್ರಿತ ರೀತಿಯಲ್ಲಿ ನಿರ್ವಹಿಸಲು ಸರ್ಕಾರವು ಕಾರ್ಯತಂತ್ರಗಳನ್ನು ಯೋಜಿಸಿದರೆ ಇದನ್ನು ನಿಲ್ಲಿಸಬಹುದು. ಎಷ್ಟು ಮುಖ್ಯವಾಗಿದೆ ಎಂದರೆ ಪರಿಸರವಿಲ್ಲದೆ ನಮ್ಮ ಅಸ್ತಿತ್ವವಿಲ್ಲ. ಇದರ ಬಗ್ಗೆ ಜನರಿಗೆ ಜಾಗೃತಿ ಮಾಡಲು ವಿಶ್ವದಾದ್ಯಂತ ಜೂನ್‌ ೦೫ ರಂದು ಪ್ರತಿವರ್ಷ ವಿಶ್ವ ಪರಿಸರ ದಿನವನ್ನು 1974 ರಿಂದ ಸುಮಾರು 143 ದೇಶಗಳು ಆಚರಿಸುತ್ತವೆ. ಪರಿಸರವು ಪ್ರತಿಯೊಂದು ಜೀವರಾಶಗು ಅತ್ಯಂತ ಅಮೂಲ್ಯ ಕೊಡುಗೆಯಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ, ನಮ್ಮ ಪರಿಸರವು ನೈಸರ್ಗಿಕ ಸೌಂದರ್ಯದ ಮೂಲವಾಗಿದೆ ಮತ್ತು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಅವಶ್ಯಕವಾಗಿದೆ. ವಿಶ್ವ ಪರಿಸರ ದಿನವನ್ನ ಪರಿಸರದ ಕಾಳಜಿಯ ಜೊತೆಗೆ ಜನರಗೆ ಪರಿಸರದ ಮಹತ್ವ ಸಾರುವ ಉದ್ದೇಶದಿಂದ ವಿಶ್ವಸಂಸ್ಥೆಯು ಇದನ್ನು ಸ್ಥಾಪಿಸಿತು.

ಪರಿಸರ ಸಂರಕ್ಷಣೆಯ ಪ್ರಯೋಜನಗಳು

  • ಪರಿಸರ ಸಂರಕ್ಷಣೆಯಿಂದಾಗಿ ಪರಿಸರವು ನಮಗೆ ಮತ್ತು ಇತರ ಜೀವಿಗಳು ಸಾವಿರಾರು ವರ್ಷಗಳಿಂದ ಅಭಿವೃದ್ಧಿ ಹೊಂದಲು ಮತ್ತು ಬೆಳೆಯಲು ಸಹಾಯ ಮಾಡಿದೆ.
  • ಪರಿಸರವು ನಮಗೆ ಫಲವತ್ತಾದ ಭೂಮಿ, ನೀರು, ಗಾಳಿ, ಜಾನುವಾರುಗಳು ಮತ್ತು ಬದುಕಲು ಅಗತ್ಯವಾದ ಅನೇಕ ವಸ್ತುಗಳನ್ನು ಒದಗಿಸುತ್ತದೆ.
  • ಜೀವಿಗಳು ಮತ್ತು ಪರಿಸರದ ನಡುವಿನ ನೈಸರ್ಗಿಕ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
  • ಪರಿಸರವು ನಮಗೆ ಅಸಂಖ್ಯಾತ ಪ್ರಯೋಜನಗಳನ್ನು ನೀಡುತ್ತದೆ, ಅದು ನಮ್ಮ ಇಡೀ ಜೀವನವನ್ನು ಮರುಪಾವತಿಸಲು ಸಾಧ್ಯವಿಲ್ಲ.
  • ಕಾಡು ಮತ್ತು ಮರಗಳು ಗಾಳಿಯನ್ನು ಶೋಧಿಸುತ್ತವೆ ಮತ್ತು ಹಾನಿಕಾರಕ ಅನಿಲಗಳನ್ನು ಹೀರಿಕೊಳ್ಳುತ್ತವೆ.
  • ಸಸ್ಯಗಳು ನೀರನ್ನು ಶುದ್ಧೀಕರಿಸುತ್ತವೆ, ಪ್ರವಾಹದ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ ಮತ್ತು ನೈಸರ್ಗಿಕ ಸಮತೋಲನವನ್ನು ಕಾಪಾಡಿಕೊಳ್ಳುತ್ತದೆ.

ಪರಿಸರ ಸಂರಕ್ಷಣೆಯ ಕ್ರಮಗಳು

  • ಪರಿಸರ ಸಂರಕ್ಷಣೆಗಾಗಿ ಹಲವಾರು ಕಠಿಣವಾದ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಪರಿಸರದ ಹಿತದೃಷ್ಟಿಯಿಂದ ನಾವು ಪರಿಸರ ರಕ್ಷಕರಾಗಬೇಕು. ಪ್ಲಾಸ್ಟಿಕ್ ಬದಲಿಗೆ ಜೈವಿಕ ವಿಘಟನೀಯ ಕ್ಯಾರಿ ಬ್ಯಾಗ್‌ಗಳನ್ನು ಬಳಸುವುದು ಕೂಡ ಪರಿಸರ ಸಂರಕ್ಷಣೆಯ ಪ್ರಮುಖ ವಿಧಾನವಾಗಿದೆ.
  • ಸಾರ್ವಜನಿಕವಾಗಿರುವ ಮತ್ತು ಮಾರುಕಟ್ಟೆಗಳಂತಹ ಸ್ಥಳಗಳಲ್ಲಿ ಪ್ಲಾಸ್ಟಿಕ್ ಚೀಲಗಳು, ಬಾಟಲಿಗಳು, ಆಹಾರ ಪೊಟ್ಟಣಗಳು ಇನ್ನು ಮುಂತಾದವುಗಳನ್ನು ಬಳಸುವುದನ್ನು ಕಡಿಮೆ ಮಾಡಬೇಕು.
  • ನಮ್ಮಿಂದ ಎಷ್ಟು ಸಾಧ್ಯವೊ ಅಷ್ಟು ನಮ್ಮ ಪರಿಸರವನ್ನು ಸುಂದರವಾಗಿ ಇಟ್ಟುಕೊಳ್ಳಬೇಕು. ಜೀವಕ್ಕೆ ಅಗತ್ಯವಾದ ಆಮ್ಲಜನಕವನ್ನು ಹೊರಸೂಸುತ್ತದೆ.
  • ಪರಿಸರ ಸಂರಕ್ಷಣೆಗೆ ಸಹಾಯಕವಾಗುವ ಕೆಲವೊಂದು ಕಠಿಣ ಕ್ರಮಗಳನ್ನು ಕಾನೂನುಗಳಾಗಿಸುವುದು.
  • ಸುತ್ತಮುತ್ತಲು ಹಸಿರು ಹೆಚ್ಚುವಂತೆ ಗಿಡಗಳನ್ನು ನೆಟ್ಟು ಬೆಳೆಸಬೇಕು, ಮರಗಳನ್ನು ಕತ್ತರಿಸುವುದನ್ನು ನಿಲ್ಲಿಸಬೇಕು.
  • ಅತಿಯಾಗಿ ಹೊಗೆ ಬರುವ ವಾಹನ ಗಳನ್ನು ಬಳಸದಿರುವುದು.
  • ಕಡ್ಡಾಯವಾಗಿ ಪರಿಸರ ಶಿಕ್ಷಣ ಕೊಡಬೇಕು. ಪರಿಸರ ಕಾರ್ಯದಲ್ಲಿ ತೊಡಗಬೇಕು.

ಉಪಸಂಹಾರ

ಪರಿಸರಕ್ಕೆ ಯಾವುದೇ ತೊಂದರೆಯಾಗುವಂತ ವಸ್ತುಗಳನ್ನು ಬಳಸಬಾರದು. ಮನುಷ್ಯನು ಯಾವಾಗಲು ತನ್ನ ಚಟುವಟಿಕೆಗಳ ಬಗ್ಗೆ ಜಾಗೃತನಾಗಿರಬೇಕು. ಮತ್ತು ನಮ್ಮ ಸುತ್ತ ಮುತ್ತಲಿನ ಪ್ರದೇಶವನ್ನುಆರೋಗ್ಯವಾಗಿಡಲು ಪ್ರಯತ್ನಿಸಬೇಕು. ಈ ಪರಿಸರದ ವಿಷಯದಲ್ಲಿ ಸಾಲುಮರದ ತಿಮ್ಮಕ್ಕನವರು ಮಾದರಿಯಾಗಿದ್ದಾರೆ. ಪರಿಸರ ಸಂರಕ್ಷಣೆಯೇ ಜೀವಿಗಳ ರಕ್ಷಣೆ. ಪರಿಸರ ನಾಶ ವಿಶ್ವನಾಶದ ಮೂಲವಾಗಿದೆ. ಅದಕ್ಕಾಗಿ ನಮ್ಮ ಪರಿಸರವನ್ನು ಸಂರಕ್ಷಿಸಿದರೆ ನಮ್ಮನ್ನು ನಾವೇ ರಕ್ಷಿಸಿಕೊಂಡಂತೆ.

FAQ

ವಿಶ್ವ ಪರಿಸರ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?

ಜೂನ್‌ ೫

ಪರಿಸರ ಸಂರಕ್ಷಣೆಯ ಬಗ್ಗೆ ತಿಳಿಸುವ ವಿಧಿ ಯಾವುದು ?

೪೮ (ಎ)

ಇತರೆ ವಿಷಯಗಳು :

ಮಹಿಳಾ ದೌರ್ಜನ್ಯ ಮತ್ತು ಕಾನೂನು ಬಗ್ಗೆ ಪ್ರಬಂಧ

Leave a Reply

Your email address will not be published. Required fields are marked *