ಸೂರ್ಯನ ಬಗ್ಗೆ ಮಾಹಿತಿ | Information About Sun in Kannada

ಸೂರ್ಯನ ಬಗ್ಗೆ ಮಾಹಿತಿ Information About Sun Suryana Bagge Mahiti in Kannada

ಸೂರ್ಯನ ಬಗ್ಗೆ ಮಾಹಿತಿ

Information About Sun in Kannada
Information About Sun in Kannada

ಸೂರ್ಯನ ಗುರುತ್ವಾಕರ್ಷಣೆಗೆ ಒಳಪಟ್ಟು ಸೂರ್ಯನ ಸುತ್ತ ಸುತ್ತುತ್ತಿರುವ ಗ್ರಹಗಳು, ಉಪಗ್ರಹಗಳು, ಕುಬ್ಜಗ್ರಹಗಳು, ಉಲ್ಕೆಗಳು ಮತ್ತು ಧೂಮಕೇತುಗಳ ಒಟ್ಟಾರೆ ವ್ಯವಸ್ಥೆಯನ್ನು ಸೌರಮಂಡಲ ಎಂದು ಕರೆಯುವರು.

ಸೂರ್ಯ

 • ಇದೊಂದು ನಕ್ಷತ್ರವಾಗಿದೆ.
 • ಭೂಮಿಗೆ ಅತಿ ಸಮೀಪದ ನಕ್ಷತ್ರ.
 • ಮಿಲ್ಕಿ ವೇ ಗ್ಯಾಲಾಕ್ಸಿಯಲ್ಲಿದೆ.
 • ಭೂಮಿಯ ತ್ರಿಜ್ಯಕ್ಕಿಂತ ೧೦೯ ಪಟ್ಟು ಹೆಚ್ಚಾಗಿದೆ.
 • ಭೂಮಿಯ ರಾಶಿಗಿಂತ ೩,೩೦,೦೦೦ ಹೆಚ್ಚು ಹೊಂದಿದೆ.
 • ಸೂರ್ಯನ ಭ್ರಮಣ ಅವಧಿ ೨೭ ದಿನ.
 • ಸೂರ್ಯನ ಪರಿಭ್ರಮಣ ಅವಧಿ ೨೫೦ ಮಿಲಿಯನ್ ವರ್ಷವಾಗಿದೆ.
 • ಸೂರ್ಯನ ಗರ್ಭದಲ್ಲಿ ಹೈಡ್ರೋಜನ್‌ ಅತಿ ಹೆಚ್ಚು ಪ್ರಮಾಣದಲ್ಲಿದ್ದರೆ, ಹಿಲಿಯಂ ಎರಡನೇ ಅತಿ ಹೆಚ್ಚು ಪ್ರಮಾಣದಲ್ಲಿರುವ ಅಂಶವಾಗಿದೆ.
 • ಸೂರ್ಯನ ಗರ್ಭದಲ್ಲಿ ಹೈಡ್ರೋಜನ್‌ ಮತ್ತು ಹೈಡ್ರೋಜನ್‌ ಅಣುಗಳು ಸೇರಿಕೊಂಡು ಹಿಲಿಯಂ ಅಣುಗಳ ಸೇರಿಕೊಂಡು ಹೀಲಿಯಂ ಅಣುಗಳು ಬಿಡುಗಡೆಯಾಗುತ್ತಿರುತ್ತದೆ ಇದನ್ನು ಹೈಡ್ರೋಜನ್‌ ಸಮ್ಮಿಳನ ಅನಿಯಂತ್ರಿತ ಕ್ರಿಯೆ ಎನ್ನುವರು.
 • ಇದೇ ರೀತಿಯ ಕ್ರಿಯೆಯು ಹೈಡ್ರೋಜನ್‌ ಬಾಂಬ್‌ ಗಳಲ್ಲಿ ನಡೆಯುತ್ತದೆ. ಆದ್ದರಿಂದ ಹೈಡ್ರೋಜನ್‌ ಬಾಂಬ್‌ ಇದು ಸಮ್ಮಿಳನ ಅನಿಯಂತ್ರಿತವಾಗಿದೆ.
 • ಸೂರ್ಯನ ಸುತ್ತಲೂ ಕಂಡುಬರುವ ದೃಗೋಚರ ಬಿಲ್ಲೆಯನ್ನು ತೇಜೋಮಂಡಲ ಎನ್ನುವರು.

ಸೌರಜ್ವಾಲೆಗಳು :

ತೇಜೋಮಂಡಲದಲ್ಲಿರುವ ವಸ್ತುಗಳು ಅಥವಾ ಸೂರ್ಯನ ಮೇಲ್ಮೈ ಮೇಲಿರುವ ದ್ರವ್ಯದ ಚೂರುಗಳು ಮತ್ತು ಶಕ್ತಿಯು ಸೂರ್ಯನ ಮೇಲ್ಮೈಯಿಂದ ನಿರಂತರವಾಗಿ ಹೊರಚೆಲ್ಲುವುದು ಈ ರೀತಿ ಹೊರ ಚೆಲ್ಲಿದ ದ್ರವ್ಯದ ಚೂರುಗಳನ್ನು ಮತ್ತು ಶಕ್ತಿಯು ಗುರುತ್ವಾಕರ್ಷಣೆ ಬಲದಿಂದ ಪುನಃ ಸೂರ್ಯನ ಮೇಲ್ಮೈ ಬಂದು ಬೀಳುವವು ಇವುಗಳನ್ನು ಸೌರ ಜ್ವಾಲೆಗಳೆಂದು ಕರೆಯುತ್ತೇವೆ.

ಸೌರ ಚಾಚಿಕೆ :

ಸೂರ್ಯನ ಗುರುತ್ವಾಕರ್ಷಣೆ ಬಲವನ್ನು ತಪ್ಪಿಸಿಕೊಂಡು ವಸ್ತುಗಳು ಕೆಲವು ಅವಧಿಯ ವರೆಗೆ ಬಾಹ್ಯಾಕಾಶದಲ್ಲಿಯೇ ಚಾಚಿಕೊಂಡಿರುತ್ತದೆ. ಈ ರೀತಿ ಚಾಚಿಕೊಂಡಿರುವ ದ್ರವ್ಯದ ಚೂರುಗಳು ಸೂರ್ಯನ ಗುರುತ್ವಾಕರ್ಷಣೆ ಬಲದಿಂದ ಸೂರ್ಯನ ಮೇಲ್ಮೈ ಮೇಲೆ ಬೀಳುವವು ಇವುಗಳನ್ನು ಸೌರ ಚಾಚಿಕೆ ಎನ್ನುವರು.

ಸೌರ ಮಾರುತಗಳು :

ಸೂರ್ಯನ ಗುರುತ್ವಾಕರ್ಷಣೆ ಬಲದಿಂದ ಸೂರ್ಯನ ಮೇಲ್ಮೈ ಮೇಲಿರುವ ದ್ರವ್ಯದ ಚೂರುಗಳು ಮತ್ತು ಶಕ್ತಿಯ ಸಂಪೂರ್ಣವಾಗಿ ತಪ್ಪಿಸಿಕೊಂಡು ಅಂತರ ಗ್ರಹದೆಡೆಗೆ ಚಲಿಸುತ್ತವೆ. ಇವುಗಳನ್ನು ಸೌರಮಾರುತಗಳೆಂದು ಕರೆಯುತ್ತಾರೆ.

ಸೌರ ಕಲೆಗಳು :

ಸೂರ್ಯನ ಮೇಲ್ಮೈ ಮೇಲೆ ಸುತ್ತಲಿನ ಪ್ರದೇಶಕ್ಕೆ ಹೋಲಿಸಿದರೆ ಮಧ್ಯದ ಪ್ರದೇಶಗಳಲ್ಲಿ ಸರಿ ಸುಮಾರು ೨೦೦೦ ಡಿಗ್ರಿ C – ೨೫೦೦ ಡಿಗ್ರಿ C ಗಳಷ್ಟು ಉಷ್ಣಾಂಶವು ಕಡಿಮೆ ಇರುತ್ತದೆ. ಇದರಿಂದ ಮಧ್ಯದ ಪ್ರದೇಶವು ಸುತ್ತಲಿನ ಪ್ರದೇಶಕ್ಕೆ ಹೋಲಿಸಿದರೆ ಕಪ್ಪಾಗಿ ಕಂಡುಬರುವುದು, ಈ ರೀತಿ ಕಾಣುವುದನ್ನು ಸೌರಕಲೆಗಳು ಎಂದು ಕರೆಯುವರು.

ಧ್ರುವ ಪ್ರಭೆ / ARORA :

ಸೂರ್ಯನ ಗುರುತ್ವಾಕರ್ಷಣೆ ಬಲದಿಂದ ವಿಮೋಚನೆಗೊಂಡು ಭೂಮಿಯ ಕಡೆಗೆ ಸೌರಮಾರುತಗಳ ರೂಪದಲ್ಲಿ ಬರುವ ವಿದ್ಯುದಾಂಶ ಕಣಗಳು ಭೂಮಿಯ ಉತ್ತರ ಮತ್ತು ದಕ್ಷಿಣ ಧ್ರುವಗಳಲ್ಲಿ ವಾಯುಮಂಡಲವನ್ನು ಪ್ರವೇಶಿಸುವಾಗ ವಾಯುವಿನ ಅಣುಗಳೊಂದಿಗೆ ಘರ್ಷಣೆ ಹೊಂದಿ ಎರಡೂ ಧ್ರುವ ಪ್ರದೇಶಗಳಲ್ಲಿ ವರ್ಣಮಯವಾದ ಬೆಳಕನ್ನು ಉಂಟುಮಾಡುತ್ತದೆ. ಇದನ್ನು Arora / ಧ್ರುವ ಪ್ರಭೆ ಎನ್ನುವರು.

ಉತ್ತರದಲ್ಲಿ ಉಂಟಾಗುವುದನ್ನು – Arora Borylises

ದಕ್ಷಿಣದಲ್ಲಿ ಧ್ರುವದಲ್ಲಿ ಉಂಟಾಗುವುದನ್ನು – Arora Astrelises

FAQ

ಭೂಮಿಗೆ ಅತಿ ಸಮೀಪದ ಗ್ರಹ ಯಾವುದು ?

ಸೂರ್ಯ

ಸೂರ್ಯನ ಭ್ರಮಣ ಅವಧಿ ಎಷ್ಟು ?

೨೭ ದಿನ

ಇತರೆ ವಿಷಯಗಳು :

ಭೂಮಿಯ ಚಲನೆಗಳ ಬಗ್ಗೆ ಮಾಹಿತಿ

ರೈತ ದೇಶದ ಬೆನ್ನೆಲುಬು ಪ್ರಬಂಧ

Leave a Reply

Your email address will not be published. Required fields are marked *