ಶಿಕ್ಷಕರ ಬಗ್ಗೆ ಪ್ರಬಂಧ | Essay On Teacher in Kannada

ಶಿಕ್ಷಕರ ಬಗ್ಗೆ ಪ್ರಬಂಧ Essay On Teacher Shikshakara Bagge Prabandha in Kannada

ಶಿಕ್ಷಕರ ಬಗ್ಗೆ ಪ್ರಬಂಧ

Essay On Teacher in Kannada
Essay On Teacher in Kannada

ಈ ಲೇಖನಿಯಲ್ಲಿ ಶಿಕ್ಷಕರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.

ಪೀಠಿಕೆ

ಶಿಕ್ಷಕ ಒಂದು ಮಗುವಿನ ಭವಿಷ್ಯದ ರಕ್ಷಕನಾಗಿರುತ್ತಾನೆ. ಶಿಕ್ಷಕರು ಮಕ್ಕಳನ್ನು ಜ್ಞಾನವಂತರನ್ನಾಗಿ ಮತ್ತು ಸುಸಂಸ್ಕೃತರನ್ನಾಗಿ ಮಾಡುವವರು. ಒಬ್ಬ ಶಿಕ್ಷಕನು ದೇವರು ನೀಡಿದ ಸುಂದರವಾದ ಕೊಡುಗೆಯಾಗಿದೆ ಏಕೆಂದರೆ ದೇವರು ಇಡೀ ಪ್ರಪಂಚದ ಸೃಷ್ಟಿಕರ್ತ ಮತ್ತು ಶಿಕ್ಷಕ ಇಡೀ ರಾಷ್ಟ್ರದ ಸೃಷ್ಟಿಕರ್ತ. ಒಬ್ಬ ಶಿಕ್ಷಕನು ವಿದ್ಯಾರ್ಥಿಯ ಜೀವನದಲ್ಲಿ ಪ್ರಮುಖ ಪಾತ್ರವನ್ನು ವಹಿಸಿರುತ್ತಾನೆ.

ವಿಷಯ ವಿವರಣೆ

ಹಿಂದಿನ ಕಾಲದಲ್ಲಿ ಶಿಕ್ಷಕರನ್ನು ಗುರುಗಳೆಂದು ಕರೆಯುತ್ತಿದ್ದರು. ಸಂಸೃತದಲ್ಲಿ ಗುರು ಎಂದರೆ ಕತ್ತಲೆಯನ್ನು ಹೋಗಲಾಡಿಸುವವನು ಎಂದರ್ಥ. ಹಾಗಾಗಿ ಗುರುವಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ. ದೇಶದ ಭವಿಷ್ಯದ ಪೀಳಿಗೆಯನ್ನು ತಮ್ಮ ಜ್ಞಾನದಿಂದ ಶ್ರೀಮಂತಗೊಳಿಸುವ ಮೂಲಕ ದೇಶದ ಅಡಿಪಾಯವನ್ನು ನಿರ್ಮಿಸುವಲ್ಲಿ ಶಿಕ್ಷಕರು ಅತ್ಯಂತ ನಿರ್ಣಾಯಕ ಪಾತ್ರವನ್ನು ವಹಿಸುತ್ತಾರೆ. ಒಬ್ಬ ಆದರ್ಶ ಶಿಕ್ಷಕ ಯಾವಾಗಲೂ ಭಾವೋದ್ರಿಕ್ತನಾಗಿರುತ್ತಾನೆ ಮತ್ತು ತನಗೆ ನಿಗದಿಪಡಿಸಿದ ವಿಷಯದ ಬಗ್ಗೆ ನವೀಕರಿಸುತ್ತಾನೆ, ಇದು ಮಕ್ಕಳನ್ನು ಪ್ರೇರೇಪಿಸಲು ಸಹಾಯ ಮಾಡುತ್ತದೆ. ಎರಡೂ ಕಡೆಯವರು ಬೆಳೆಯಲು ಮತ್ತು ಕಲಿಯಲು ಮುಂದುವರಿಯುವುದನ್ನು ಖಚಿತಪಡಿಸಿಕೊಳ್ಳಲು ವಿದ್ಯಾರ್ಥಿಗಳು ಶಿಕ್ಷಕರೊಂದಿಗೆ ಸಹಕರಿಸಬೇಕು.

ಶಿಕ್ಷಕರು ಮಕ್ಕಳ ದಾರಿ ದೀಪವಾಗಿರುತ್ತಾರೆ

ಶಿಕ್ಷಕರು ಮಕ್ಕಳ ಭವಿಷ್ಯಕ್ಕೆ ದಾರಿ ದೀಪವಾಗಿರುತ್ತಾರೆ. ಶಿಕ್ಷಕನು ಮಕ್ಕಳ ಪಾಲಿನ ರಕ್ಷಕ. ಹಾಗಾಗಿ ತನ್ನ ಜ್ಞಾನವನ್ನು ತಾಳ್ಮೆಯಿಂದ, ಪ್ರೀತಿಯಿಂದ ತಮ್ಮ ಜ್ಞಾನವನ್ನು ಮಕ್ಕಳಿಗೆ ನೀಡುವ ಪ್ರಮುಖ ವ್ಯಕ್ತಿ ಎಂದರೆ ಅದು ಶಿಕ್ಷಕನಾಗಿರುತ್ತಾನೆ. ಶಿಕ್ಷಕರ ವೃತ್ತಿಯನ್ನು ಈ ಜಗತ್ತಿನಲ್ಲಿ ಅತ್ಯುತ್ತಮ ಮತ್ತು ಆದರ್ಶ ವೃತ್ತಿ ಎಂದು ಪರಿಗಣಿಸಲಾಗಿದೆ ಏಕೆಂದರೆ ಶಿಕ್ಷಕರು ನಿಸ್ವಾರ್ಥವಾಗಿ ಒಬ್ಬರ ಜೀವನವನ್ನು ರೂಪಿಸುವಲ್ಲಿ ತಮ್ಮ ಸೇವೆಯನ್ನು ನೀಡುತ್ತಾರೆ. ಶಿಕ್ಷಕರಿಗೆ ಅವರದೇ ಆದ ಸ್ಥಾನಮಾನಗಳಿವೆ ಶಿಕ್ಷಕರನ ಉತ್ಸಾಹ ಮತ್ತು ಶಕ್ತಿಯನ್ನು ಅವಲಂಬಿಸಿ ವಿದ್ಯಾರ್ಥಿಗಳು ಹೆಚ್ಚು ಅಂತರಿಕವಾಗಿ ಪ್ರಚೋದಿತರಾಗುತ್ತಾರೆ. ಶಿಕ್ಷಕರ ವೃತ್ತಿ ಜೀವನದ ದೀರ್ಘಾವಧಿಯ ಶಿಕ್ಷಣ ಮತ್ತು ವೃತ್ತಿಪರ ಅಭಿವೃದ್ದಿಗೆ ಮಾರ್ಗದರ್ಶನ ನೀಡುವ ಸಲುವಾಗಿ, ಸಾಧನೆಯೊಂದಿಗೆ ಶೈಕ್ಷಣಿಕ ಯಶಸ್ಸನ್ನು ಬೆಸೆಯುವಲ್ಲಿ ಯೋಗ್ಯವಾದ ಶಿಕ್ಷಕ ಮತ್ತು ವಿದ್ಯಾರ್ಥಿ ಸಂವಾದಗಳು ಬಹುಮುಖ್ಯವಾಗಿವೆ. ಕೆಲವು ಪುರಾವೆ ಅಧಾರಿತ ಅಂತರರಾಷ್ಟ್ರಿಯ ಚರ್ಚೆಗಳು ಅಂತಹ ಸಾಮಾನ್ಯ ತಿಳುವಳಿಕೆಯನ್ನು ದೃಢಪಡಿಸಲು ಪ್ರಯತ್ನಿಸಿವೆ. ಪ್ರತಿಯೊಬ್ಬರಿಗೂ ಮಾರ್ಗದರ್ಶಿಗಳಾಗಿದ್ದಾರೆ.

ಮಕ್ಕಳಲ್ಲಿ ಜ್ಞಾನ ಹೆಚ್ಚಿಸುವುದಕ್ಕೆ ಮೌಲ್ಯಮಾಪನ ಮಾಡುವುದು ಸೂಕ್ತ. ಶಿಕ್ಷಕರು ವಿದ್ಯಾರ್ಥಿಗಳಿಗೆ ಉತ್ಸಾಹವನ್ನು ಹೆಚ್ಚಿನ ಮಟ್ಟದಲ್ಲಿ ತಯಾರಿ ಮಾಡಬೇಕು. ವಿದ್ಯಾರ್ಥಿ-ಶಿಕ್ಷಕರ ಸಂಬಂಧಗಳೊಂದಿಗೆ ಶಾಲೆಯಲ್ಲಿ ವಿದ್ಯಾರ್ಥಿ ಪ್ರೇರಣೆ ಮತ್ತು ವರ್ತನೆಗಳು ನಿಕಟ ಸಂಬಂಧ ಹೊಂದಿದೆಯೆಂದು ಸಂಶೋಧನೆ ತೋರಿಸುತ್ತದೆ. ವಿದ್ಯಾರ್ಥಿಯ ಸಾಧನೆಯನ್ನು ಪೋಷಿಸುವ ಪರಿಣಾಮಕಾರಿ ಕಲಿಕೆಯ ಪರಿಸರವನ್ನು ಸೃಷ್ಟಿಸುವ ಅವರ ಸಾಮರ್ಥವು ಅವರ ವಿದ್ಯಾರ್ಥಿಗಳೊಂದಿಗೆ ಅವರು ರಚಿಸುವ ಸಂಬಂಧದ ಮೇಲೆ ಅವಲಂಬಿತವಾಗಿರುತ್ತದೆ. ಇದು ವಿಷಯ ವಸ್ತುಗಳ ಕಲಿಕೆ ಫಲಿತಾಂಶ ಕಲಿಕೆ ಫಲಿತಾಂಶ ಅಥವಾ ಸ್ಮರಣಶಕ್ತಿಯನ್ನು ನಿಶ್ಚಿತವಾಗಿ ಸುಧಾರಿಸುವುದು ಇದು ಶಿಕ್ಷಕನ ಸಾಮರ್ಥ್ಯವಾಗುವುದು. ಶಿಕ್ಷಕರು ಪ್ರತಿಯೊಬ್ಬರ ಬಾರಿ ದೀಪವಾಗಿ ತಮ್ಮ ಜ್ಞಾನವನ್ನು ಹಂಚುತ್ತಾರೆ.

ಉಪಸಂಹಾರ

ಶಿಕ್ಷಕರ ಬಗ್ಗೆ ವಿಧ್ಯಾರ್ಥಿಗಳಿಗೆ ಗೌರವದ ಮನೋಭಾವನೆಯು ಇರಬೇಕು. ಪ್ರತಿಯೊಬ್ಬರ ಜೀವನದಲ್ಲೂ ಗುರುವಿನ ಪಾತ್ರ ಅತೀ ಮುಖ್ಯವಾದುದು. ಶಿಕ್ಷಕರಲ್ಲಿ ವಿದ್ಯಾರ್ಥಿಗಳನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೊಗುವ ಸಾಮಾರ್ಥ್ಯವನ್ನು ಹೊಂದಿದ್ದಾರೆ. ಮನುಷ್ಯ ಎಷ್ಟೇ ದೊಡ್ಡವನಾಗಿದ್ದರೂ, ಕಲಿಸಿದ ಗುರುಗಳನ್ನು ಯಾವತ್ತಿಗೂ ಮರೆಯಬಾರದು ಮತ್ತು ಅವರಿಗೆ ಅಗೌರವವನ್ನು ತೋರರಬಾರದು.

FAQ

ಶಿಕ್ಷಕರ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?

ಸೆಪ್ಟೆಂಬರ್‌ ೫ ರಂದು ಆಚರಿಸಲಾಗುತ್ತದೆ.

ಯಾರ ಜನ್ಮ ದಿನದ ಅಂಗವಾಗಿ ಶಿಕ್ಷಕರ ದಿನವನ್ನುಆಚರಿಸುತ್ತಾರೆ ?

ರಾಧಕೃಷ್ಣನ್ ಅವರ ಜನ್ಮ ದಿನದ ಅಂಗವಾಗಿ ಶಿಕ್ಷಕರ ದಿನವನ್ನುಆಚರಿಸುತ್ತಾರೆ.

ಇತರೆ ವಿಷಯಗಳು :

ಮಹಿಳಾ ದೌರ್ಜನ್ಯ ಮತ್ತು ಕಾನೂನು ಬಗ್ಗೆ ಪ್ರಬಂಧ

ರಾಷ್ಟ್ರೀಯ ಯುವ ದಿನದ ಬಗ್ಗೆ ಮಾಹಿತಿ

Leave a Reply

Your email address will not be published. Required fields are marked *