ಬಾಲ ಕಾರ್ಮಿಕ ಪದ್ಧತಿ ಬಗ್ಗೆ ಮಾಹಿತಿ | Information about child labor practices in Kannada

ಬಾಲ ಕಾರ್ಮಿಕ ಪದ್ಧತಿ ಬಗ್ಗೆ ಮಾಹಿತಿ Information about child labor practices Bala Karmika paddhati Bagge Mahiti in Kannada

ಬಾಲ ಕಾರ್ಮಿಕ ಪದ್ಧತಿ ಬಗ್ಗೆ ಮಾಹಿತಿ

Information about child labor practices in Kannada
Information about child labor practices in Kannada

ಈ ಲೇಕನಿಯಲ್ಲಿ ಬಾಲ ಕಾರ್ಮಿಕರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗುತ್ತದೆ.

ಬಾಲ ಕಾರ್ಮಿಕರು

ಸಾಮಾನ್ಯವಾಗಿ ಅಪ್ರಾಪ್ತ ವಯಸ್ಸಿನ ಮಕ್ಕಳ ದುಡಿಮೆಯನ್ನು ಬಾಲ ಕಾರ್ಮಿಕತನ ಎಂದು ಕರೆಯಲಾಗುತ್ತದೆ. ಭಾರತದ ಸಂವಿಧಾನದ ಪ್ರಕಾರ ೧೪ ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಆರ್ಥಿಕ ಸಂಪಾದನೆಯ ಉದ್ದೇಶದಿಂದ ದುಡಿಮೆ ಮಾಡುತ್ತಿದ್ದರೆ ಮಾಡುತ್ತಿದ್ದರೆ ಅಂತವರನ್ನು ಬಾಲ ಕಾರ್ಮಿಕರು ಎಂದು ಕರೆಯಲಾಗಿದೆ. ಭಾರತದಂತಹ ಅಭಿವೃದ್ದಿ ಹೊಂದುತ್ತಿರುವ ಹಲವಾರು ದೇಶಗಳಲ್ಲಿ ಮಕ್ಕಳ ದುರ್ಬಳಕೆ ಹಾಗೂ ದುಡಿತ ಒಂದು ಸಾಮಾಜಿಕ ಸಮಸ್ಯೆಯಾಗಿದೆ.

ಬಾಲ ಕಾರ್ಮಿಕರು ಎಂದರೆ ಯಾರು ?

ಬಾಲ ಕಾರ್ಮಿಕರು ಎಂದರೆ ೧೪ ವರ್ಷದೊಳಗಿನ ಯಾವ ಮಕ್ಕಳು ಶಾಲೆ, ಓದಿನಿಂದ ಹೊರಗಿದ್ದು ಬಲವಂತವಾಗಿ ದುಡಿಮೆಯಲ್ಲಿ ತೊಡಗಿಕೊಂಡಿದ್ದಾರೋ ಅವರೆಲ್ಲರೂ ಕೂಡ ಬಾಲಕಾರ್ಮಿಕರು ಎಂದು ಕರೆಯಲಾಗುತ್ತದೆ ಅಥವಾ ಗುರುತಿಸಲಾಗುತ್ತದೆ. ಬಾಲಕಾರ್ಮಿಕರ ಸರ್ಕಾರವುಬಗ್ಗೆ ಕಾಯ್ದೆಗಳು

ಬಾಲಕಾರ್ಮಿಕರ ಬಗ್ಗೆ ಸರ್ಕಾರವು ಜಾರಿಗೊಳಿಸಿದ ಕಾಯ್ದೆಗಳು

ಬಾಲ ಕಾರ್ಮಿಕ ನಿಷೇಧ ಕಾಯ್ದೆ :

  • ಈ ಕಾಯ್ದೆಯು ೧೯೮೬ ರಲ್ಲಿ ಜಾರಿಗೆ ಬಂದಿತು. ಈ ಕಾಯ್ದೆಯ ಪ್ರಕಾರ ೧೪ ವರ್ಷದೊಳಗಿನ ಯಾವುದೇ ಮಕ್ಕಳನ್ನು ಯಾವುದೇ ಕಾರಣಕ್ಕೂ ಯಾವುದೇ ಕ್ಷೇತ್ರದಲ್ಲಿ, ಎಲ್ಲಿಯೂ ಕೂಡ ಡುಡಿಸುವಂತಿಲ್ಲ. ದುಡಿಮೆಗೆ ಇಟ್ಟುಕೊಳ್ಳುವಂತಿಲ್ಲ. ಈ ಕಾಯ್ದೆಯ ವಿರಿದ್ದವಾಗಿ ನಡೆದುಕೊಂಡರೆ ೨ ವರ್ಷದ ವರೆಗೆ ಜೈಲು ಶಿಕ್ಷೆ ಮತ್ತು ದಂಡವನ್ನು ಕೂಡ ವಿಧಿಸುವುದಾಗಿದೆ.
  • ಯಾವುದೇ ಕುಟುಂಬದವರು ಕೂಡ ಅವರ ಹೊಲ, ಗದ್ದೆ, ವ್ಯಾಪಾರಗಳು ಅವರ ೧೪ ವರ್ಷದೊಳಗಿನ ಅವರ ಸ್ವಂತ ಮಕ್ಕಳನ್ನು ಕೂಡ ಶಾಲಾ ಅವಧಿಯಲ್ಲಿ ಕೆಲಸಕ್ಕೆ ಇಟ್ಟುಕೊಳ್ಳುವಂತಿಲ್ಲ. ಒಂದು ವೇಳೆ ಇಟ್ಟುಕೊಂಡರೆ ಮಕ್ಕಳ ತಂದೆ, ತಾಯಿ ಅಥವಾ ಪೋಷಕರು ಕುಟುಂಬಸ್ಥರೇ ಮಾಲೀಕರಾಗಿ ಅಪರಾಧಿಗಳಾಗುತ್ತಾರೆ. ಅವರಿಗೂ ಕೂಡ ಶಿಕ್ಷೆ ಮತ್ತು ದಂಡವನ್ನು ವಿಧಿಸಲಾಗುತ್ತದೆ.
  • ಈ ಕಾಯ್ದೆಯು ೧೫ ರಿಂದ ೧೮ ವರ್ಷದೊಳಗಿನ ಮಕ್ಕಳನ್ನು ಹದಿಹರೆಯದವರು ಎಂದು ಹೇಳುತ್ತದೆ. ಜೊತೆಗೆ ೧೫ ರಿಂದ ೧೮ ವರ್ಷದೊಳಗಿನ ಯಾವುದೇ ಮಕ್ಕಲನ್ನು ಅಪಾಯಕಾರಿ ಕ್ಷೇತ್ರದಲ್ಲಿ ದುಡಿಸುವಂತಿಲ್ಲ. ಒಂದು ವೇಳೆ ದುಡಿಸಿದರೆ ಎರಡು ವರ್ಷ ಜೈಲು ಶಿಕ್ಷೆ ಮತ್ತು ದಂಡವನ್ನು ವಿಧಿಸಲಾಗುತ್ತದೆ.

ಬಾಲಕಾರ್ಮಿಕತೆಗೆ ಕಾರಣಗಳು

  • ಮಕ್ಕಳ ಹಕ್ಕುಗಳನ್ನು ಗೌರವಿಸಲು, ಅವುಗಳನ್ನು ರಕ್ಷಣೆ ಮಾಡಲು ಅಗತ್ಯವಾಗಿ ಬೇಕಾದ ಸಾಮಾಜಿಕ ಪರಿಸರವಿಲ್ಲದಿರುವುದು.
  • ಮಕ್ಕಳ ದುಡಿಮೆ, ಬಾಲ್ಯ ವಿವಾಹ, ಮಕ್ಕಳ ಸಾಗಾಣಿಕೆ ಮತ್ತು ಮಾರಾಟಕ್ಕೆ ಪ್ರಮುಖವಾದ ಕಾರಣವಾಗಿದೆ. ಕಡಿಮೆ ಕೂಲಿಗೆ ಹೆಚ್ಚು ದುಡಿಮೆಯನ್ನು ಬಯಸುವ ಮಾಲಿಕರ ವರ್ಗಕ್ಕೆ ಸ್ವಾರ್ಥ ಲಾಭಕೋರತನಕ್ಕೆ ಮಕ್ಕಳು ಬಲಿಯಾಗುತ್ತಾರೆ.
  • ಉಚಿತ ಮತ್ತು ಕಡ್ಡಾಯ ಶಿಕ್ಷಣದ ಹಕ್ಕು ಇರುವುದು ೧೦ ನೇ ತರಗತಿಯವರೆಗೆ ಮಾತ್ರ, ನಂತರ ಕೆಲವರು ಬಡತನದಿಂದ ಅನಿವಾರ್ಯವಾಗಿ ದುಡಿತಕ್ಕೆ ಒಳಗಾಗುತ್ತಾರೆ.
  • ಕುಟುಂಬದ ಆರ್ಥಿಕ ಸ್ಥಿತಿ ಹದಗೆಟ್ಟಿರುವುದು, ಕನಿಷ್ಟ ಕೂಲಿ, ಭೂ ಸುಧಾರಣೆ ಕಾಯ್ದೆಯ ಅನುಷ್ಟಾನದ ಕೊರತೆಗಳು ಸಹ ಇದಕ್ಕೆ ಮುಖ್ಯವಾಗಿ ಕಾರಣಗಳಾಗಿವೆ.

ಬಾಲ ಕಾರ್ಮಿಕ ಪದ್ದತಿಯ ದುಷ್ಪರಿಣಾಮಗಳು

  • ಬಾಲ ಕಾರ್ಮಿಕತೆಯು ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಯ ಮೇಲೆ ಅತ್ಯಂತ ಗಂಭೀರವಾದ ಪರಿಣಾಮವನ್ನು ಉಂಟು ಮಾಡುತ್ತದೆ. ಬಾಲ ಕಾರ್ಮಿಕರಾಗಿ ದುಡಿಯುವ ಮಕ್ಕಳು ಯುವಕರದಾಗ ಆರೋಗ್ಯದ ಸಮಸ್ಯೆಗಳು ಸಂಭವಿಸುವ ಸಾಧ್ಯತೆಯು ಇದೆ.
  • ಇದರಿಂದ ಕಲಿಕೆಯ ವಯಸ್ಸಿನಲ್ಲಿ ಶಿಕ್ಷಣದಿಂದ ವಂಚಿತರಾಗಿ ಅನಕ್ಷರಾಗುತ್ತಾರೆ. ಇದು ಅವರ ಹಕ್ಕುಗಳನ್ನು, ಸ್ವಾತಂತ್ರವನ್ನು ಕಳೆದುಕೊಳ್ಳುತ್ತಾರೆ.
  • ಮಕ್ಕಳ ದುಡಿಮೆಯು ಕುಟುಂಬದ ಆರ್ಥಿಕ, ಸಾಮಜಿಕ ಚಲನೆಯು ಕ್ಷಣಿಕವಾಗಿ ನೆರವಾಗುತ್ತದೆ. ಆದರೆ ಮುಂದಿನ ದಿನದಲ್ಲಿ ಯಾವುದೇ ರೀತಿಯಿಂದಲೂ ಒಂದು ಸ್ಥಿರವಾದ ಕೆಲಸವಿಲ್ಲದೆ ಕಷ್ಟವನ್ನು ಅನುಭವಿಸಬೇಕಾಗುವಂತ ಸ್ಥಿತಿಗೆ ತಲುಪಬೇಕಾಗುತ್ತದೆ.
  • ಇದರಿಂದಾಗಿ ಹಲವಾರು ಸಾಮಾಜಿಕ ಸಮಸ್ಯೆಗಳಾದ ಬಾಲ್ಯ ವಿವಾಹ, ಮಕ್ಕಳ ಮಾರಾಟ ಮತ್ತು ಸಾಗಾಣಿಕೆ ಮಾಡುವುದು, ಹಾಗೂ ಸಮಾಜ ವಿರೋಧಿ ಚಟುವಟಿಕೆಗೆ ಅವಕಾಶ ಮಾಡಿಕೊಡುತ್ತವೆ.

ಬಾಲ ಕಾರ್ಮಿಕ ಪದ್ದತಿಯ ನಿರ್ಮೂಲನ ಕ್ರಮಗಳು

  • ಬಾಲ ಕಾರ್ಮಿಕ ಪದ್ದತಿ ನಿರ್ಮೂಲನೆಗೆ ಈ ಕೆಳಕಂಡ ಪರಿಹಾರ ಕ್ರಮಗಳನ್ನು ತಿಳಯಬಹುದು.
  • ಎಲ್ಲಾ ಸಂದರ್ಭಗಳಲ್ಲಿ ಲಿಂಗ ಸಮಾನತೆಯನ್ನು ಕಾಅಡುವುದು ಮತ್ತು ತರುವುದು.
  • ಅಸಹಾಯಕ ಕುಟುಂಬಗಳು ಬದುಕಿಗೆ ವಲಸೆ ಹೋಗುವುದನ್ನು ತಡೆಗಟ್ಟುವುದು.
  • ಬಾಲ್ಯವಿವಾಹ, ಮಕ್ಕಳ ಸಾಗಾಣಿಕೆ ಅಥವಾ ಮಾರಾಟ ತಡೆ ಕುರಿತು ಅರಿವನ್ನು ಹೆಚ್ಚಿಸುವುವುದು.
  • ಮಕ್ಕಳ ರಕ್ಷಣಾತ್ಮಕ ಹಕ್ಕುಗಳನ್ನು ಪಂಚಾಯತಿಗಳು ಜವಾಬ್ದಾರಿಯಿಂದ ನಿರ್ವಹಿಸುವುದು.

FAQ

ಬಾಲ ಕಾರ್ಮಿಕ ನಿಷೇಧ ಕಾಯ್ದೆಯನ್ನು ಯಾವಾಗ ಜಾರಿಗೆ ತಂದರು ?

೧೯೮೬

ಬಾಲ ಕಾರ್ಮಿಕ ಪದ್ದತಿಯು ಯಾವ ವರ್ಷದ ಮಕ್ಕಳ ವರೆಗೆ ಅನ್ವಯಿಸುತ್ತದೆ ?

೧೪ ವರ್ಷದೊಳಗಿನ ಮಕ್ಕಳು

ಇತರೆ ವಿಷಯಗಳು :

ಗಣರಾಜ್ಯೋತ್ಸವ ದಿನಾಚರಣೆ ಭಾಷಣ

ಸಂಕ್ರಾಂತಿ ಹಬ್ಬದ ಬಗ್ಗೆ ಮಾಹಿತಿ 

Leave a Reply

Your email address will not be published. Required fields are marked *