ವ್ಯವಸಾಯದ ಬಗ್ಗೆ ಮಾಹಿತಿ | Information About Agriculture in Kannada

ವ್ಯವಸಾಯದ ಬಗ್ಗೆ ಮಾಹಿತಿ

ವ್ಯವಸಾಯದ ಬಗ್ಗೆ ಮಾಹಿತಿ Information About Agriculture Vevsayada Bagge Mahiti in Kannada

Information About Agriculture in Kannada
Information About Agriculture in Kannada

ಈ ಲೇಖನಿಯಲ್ಲಿ ವ್ಯವಸಾಯದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.

ವ್ಯವಸಾಯ

ಭೂಮಿಯನ್ನು ಉಳುಮೆ ಮಾಡಿ ಬೆಳೆ ಬೆಳೆಯುವುದನ್ನು ವ್ಯವಸಾಯ ಎನ್ನುವರು. ಉದಾಹರಣೆಗೆ ಪಶುಸಂಗೋಪನೆ, ಕೋಳಿಸಾಗಣೆ, ಮೀನುಗಾರಿಕೆ ಹಾಗೂ ರೇಷ್ಮೆ ಕೃಷಿ. ಕರ್ನಾಟಕದಲ್ಲಿ ಶೇ. ೬೧.೪ ಭಾಗದಷ್ಟು ಜನರು ಗ್ರಾಮೀಣ ಪ್ರದೇಶಗಳಲ್ಲಿ ಕೃಷಿಯನ್ನು ಅವಲಂಬಿಸಿದ್ದಾರೆ. ಕರ್ನಾಟಕದ ಪುರಾತನ ಮೂಲ ವೃತ್ತಿಗಳಲ್ಲಿ ವ್ಯವಸಾಯವೂ ಒಂದು. ಇದು ಮುಖ್ಯ ಜೀವನಾಧಾರಿತ ವೃತ್ತಿ ನಮ್ಮ ರಾಜ್ಯದ ಆರ್ಥಿಕತೆಯ ಬೆನ್ನೆಲುಬಾಗಿದೆ.

ವ್ಯವಸಾಯದ ವಿಧಗಳು

ಕಾಲುವೆ, ಕೆರೆ, ಬಾವಿ, ಮೂಲಗಳಿಂದ ನೀರನ್ನು ಬಳಕೆ ಮಾಡಿ ಸಾಗುವಳಿ ಮಾಡುವ ಕೃಷಿ ಪದ್ದತಿಗೆ ನೀರಾವರಿ ಬೇಸಾಯ ಎನ್ನುವರು. ಭತ್ತ, ಕಬ್ಬು ನೀರಾವರಿ ಬೇಸಾಯದ ಪ್ರಮುಖ ಬೆಳೆಗಳು.

ಮಳೆ ಆಶ್ರಿತ ಬೆಳೆಗಳ ಸಾಗುವಳಿಗೆ ಒಣ ಅಥವಾ ಶುಷ್ಕ ಬೇಸಾಯ ಎನ್ನುವರು.

ವಿಶಾಲವಾದ ಸಾಗುವಳಿಗೆ ಭೂಮಿಯಲ್ಲಿ ಹಣ ಗಳಿಕೆಗಾಗಿ ಕೆಲವೇ ಬಹುವಾರ್ಷಿಕ ಬೆಳೆಗಳನ್ನು ಸಾಗುವಳಿ ಮಾಡುವುದೇ ನೆಡುತೋಪು ಬೇಸಾಯ ಅಥವಾ ಪ್ಲಾಂಟೇಷನ್‌ ಎನ್ನುವರು. ಉದಾಹರಣೆಗೆ ಕಾಫಿ, ಚಹ, ರಬ್ಬರ್‌, ಕೋಕೋ.

ಸ್ವದೇಶಿ ಉಪಯೋಗಕ್ಕಲ್ಲದೆ ವಿದೇಶಿ ಮಾರುಕಟ್ಟೆಯನ್ನು ಗಮನದಲ್ಲಿಟ್ಟುಕೊಂಡು ಮಾಡುವ ಸಾಗುವಳಿಯೇ ವಾಣಿಜ್ಯ ಬೇಸಾಯ ಎನ್ನುವರು. ಉದಾಹರಣೆ ತಂಬಾಕು, ಹತ್ತಿ, ಸೆಣಬು.

ಮಾರಾಟಕ್ಕಲ್ಲದೆ ರೈತರ ಜೀವನೋಪಾಯಕ್ಕಾಗಿ ಬೆಳೆ ಬೆಳೆಯುವ ಕೃಷಿ ಪದ್ದತಿಗೆ ಜೀವನಾಧಾರ ಬೇಸಾಯ ಎನ್ನುವರು. ಇದು ಪುರಾತನ ಮಾದರಿ ಬೇಸಾಯವಾಗಿದೆ.

ಬೆಳೆ ಬೆಳೆಯುವುದರ ಜೊತೆಯಲ್ಲೇ ಪಶುಸಂಗೋಪನೆ, ರೇಷ್ಮೇ ಕೃಷಿ, ಕುರಿ ಸಾಗಣೆ, ಕೋಳಿಸಾಗಣೆ, ಜೇನುಸಾಗಣೆ, ಮೀನುಗಾರಿಕೆ, ಮುಂತಾದ ಉಪ ಕಸಬುಗಳನ್ನು ನಿರ್ವಹಿಸುವುದನ್ನು ಮಿಶ್ರ ಬೇಸಾಯ ಎನ್ನುವರು.

ಆಹಾರ ಬೆಳೆಗಳು ಭತ್ತ, ರಾಗಿ, ಮೆಕ್ಕೆ ಜೋಳ, ದ್ವಿದಳ ಧಾನ್ಯ, ತೃಣದಾನ್ಯಗಳು
ವಾಣಿಜ್ಯ ಬೆಳೆಗಳುಹತ್ತಿ, ತಂಬಾಕು, ಕಬ್ಬು, ಹಿಪ್ಪನೆರಳೆ
ಎಣ್ಣೆ ಕಾಳುಗಳ ಬೆಳೆಗಳುಶೇಂಗಾ, ಎಳ್ಳು, ಹುಚ್ಚೇಳ್ಳು, ಸೂರ್ಯಕಾಂತಿ.
ನೆಡುತೋಪು ಬೆಳೆಗಳುಕಾಫಿ, ತೆಂಗು, ಅಡಕೆ, ರಬ್ಬರ್‌, ಬಾಳೆ
ಆಹಾರ ಬೆಳೆಗಳು

ಆಹಾರದ ಬೆಳೆಗಳು

ಭತ್ತ :

ಇದು ಪೊಯೆಸಿ ಹುಲ್ಲಿನ ವರ್ಗದ ಸಸ್ಯವಾಗಿದೆ.

ಇದರ ವೈಜ್ಞಾನಿಕ ಹೆಸರು – ಓರೈಸಾ ಸಟೈವಾ

ಇದರ ಸಾಗುವಳಿಯಲ್ಲಿ – ಶೇ. ೨೮. ೨ ಭಾಗ ( ಪ್ರದೇಶ )

ಇದು ಉಷ್ಣವಲಯದ ಬೆಳೆಯಾಗಿದೆ. ಇದರ ಬೇಸಾಯಕ್ಕೆ ಹೆಚ್ಚು ಮಳೆ ಮತ್ತು ಉಷ್ಣಾಂಶ ಬೇಕಾಗಿರುತ್ತದೆ.

ಸುಮಾರು ಶೇ. ೭೦ ಭಾಗದಷ್ಟು ಫಸಲನ್ನು ಜೂನ್‌ – ಆಗಸ್ಟ ತಿಂಗಳುಗಳಲ್ಲಿ ನಾಟಿ ಮಾಡಿ ನವೆಂಬರ್‌ ಡಿಸೆಂಬರ್‌ ತಿಂಗಳಲ್ಲಿ ಕಟಾವು ಮಾಡುವರು. ಇದನ್ನು ಹೈನು ಬೆಳೆ ಎನ್ನುವರು.

ಬೇಸಿಗೆಯಲ್ಲೂ ನೀರಾವರಿ ಸೌಲಭ್ಯ ದೊರೆಯುವ ಪ್ರದೇಶಗಳಲ್ಲಿ ಭತ್ತ ಬೆಳೆಯುವರು. ಇದನ್ನು ಖಾರಿಫ್‌ ಬೆಳೆ ಎನ್ನುವರು. ( ಫೆಬ್ರವರಿ – ಜೂನ್ )‌

ಭತ್ತವನ್ನು ಮಲೆನಾಡು ಪ್ರದೇಶದಲ್ಲಿ ಚೆಲ್ಲುವ ವಿಧಾನ ಮತ್ತು ಮೈದಾನಗಳಲ್ಲಿ ನಾಟಿ ಮಾಡುವ ವಿಧಾನಗಳಿಂದ ಬೆಳೆಯುವರು.

ಭತ್ತವನ್ನು ಮಲೆನಾಡು ಪ್ರದೇಶದಲ್ಲಿ ಚೆಲ್ಲುವ ವಿಧಾನ ಮತ್ತು ಮೈದಾನಗಳಲ್ಲಿ ನಾಟಿ ಮಾಡುವ ವಿಧಾನಗಳಿಂದ ಬೆಳೆಯುವರು.

ಭತ್ತವನ್ನು ಉತ್ಪಾದನೆಯಲ್ಲಿ ರಾಯಚೂರು ಪ್ರಥಮ ಸ್ಥಾನದಲ್ಲಿದೆ. ನಂತರ ದಾವಣಗೆರೆ, ಮೈಸೂರು, ಶಿವಮೊಗ್ಗ, ಮಂಡ್ಯ, ಕೊಪ್ಪಳ, ಉತ್ತರಕನ್ನಡ ಜಿಲ್ಲೆಗಳಾಗಿವೆ.

ಭತ್ತವು ನೀರಾವರಿಯಲ್ಲಿ ಬೆಳೆಯುವ ಉತ್ತಮ ಗುಣಮಟ್ಟ ಹಾಗೂ ಇಳುವರಿಯೂ ಹೆಚ್ಚಾಗಿರುವ ಬೆಳೆಯಾಗಿದೆ.

ಕ್ಷೇತ್ರ ಮತ್ತು ಉತ್ಪಾದನೆಯಲ್ಲಿ ಕರ್ನಾಟಕವು ಪ್ರಥಮ ಸ್ಥಾನದಲ್ಲಿದೆ.

ಭತ್ತ ಸಂಶೋಧನಾ ಕೇಂದ್ರವು ಒರಿಸ್ಸಾದ ಕಟಕ್ದಲ್ಲಿದೆ.

ಜೋಳ :

ಭತ್ತದ ನಂತರ ಜೋಳವು ಕರ್ನಾಟಕದ ೨ ನೇಯ ಸ್ಥಾನದ ಬೆಳೆಯಾಗಿದೆ.

ಒಟ್ಟು ಸಾಗುವಳಿ ಭೂಮಿಯಲ್ಲಿ ಶೇ. ೨೬ ಭಾಗ ಜೋಳದ ಉತ್ಪಾದನೆಯಲ್ಲಿ ೨ ನೇ ಸ್ಥಾನದಲ್ಲಿದೆ.

ಇದು ಉತ್ತರ ಕರ್ನಾಟಕದ ಜನರ ಪ್ರಮುಖ ಆಹಾರ ಬೆಳೆಯಾಗಿದೆ. ದಕ್ಷಿಣ ಕರ್ನಾಟಕದಲ್ಲಿ ಜೋಳವನ್ನು ಜಾನುವಾರುಗಳ ಮೇವಿಗಾಗಿ ಬೆಳೆಯುವರು.

ಇದು ಹುಲ್ಲಿನ ಜಾತಿಗೆ ಸಸ್ಯವರ್ಗ.

ಇದು ಉಷ್ಣವಲಯ ಬೆಳೆಯಾಗಿದ್ದು ಬೇಸಾಯಕ್ಕೆ ಸಾಧಾರಣ ಮಳೆ, ಒಣ ಹವೆ, ಕಪ್ಪು, ಕೆಂಪು ಮತ್ತು ಮೆಕ್ಕಳು ಮಿಶ್ರಿತ ಮಣ್ಣು ಇದ್ದರೆ ಸಾಕು.

ಜೋಳದ ಉತ್ಪಾದನೆಯಲ್ಲಿ ವಿಜಯಪುರ ಜಿಲ್ಲೆಯು ರಾಜ್ಯದಲ್ಲೇ ಪ್ರಥಮ.

ನಂತರ ಚಿತ್ರದುರ್ಗ, ಶಿವಮೊಗ್ಗ, ಚಾಮರಾಜನಗರ, ಹಾಸನ, ತುಮಕೂರು.

ರಾಗಿ :

ಇದು ಉತ್ತಮ ಪೋಷಕಾಂಶ ಹೊಂದಿರುವ ಆಹಾರದ ಬೆಳೆಯಾಗಿದೆ.

ಇದರ ವೈಜ್ಞಾನಿಕ ಹೆಸರು – ಯೆಲಿಯುಸಿನ್‌ ಕೋರಾಕಾನ.

ಕರ್ನಾಟಕದಲ್ಲಿ ಭತ್ತ ಮತ್ತು ಜೋಳಗಳ ನಂತರ ರಾಗಿಯು ಮೂರನೆಯ ಮುಖ್ಯ ಆಹಾರ ಧಾನ್ಯವಾಗಿದೆ.

ಇದು ಹೆಚ್ಚು ಕಾಲ ಸಂಗ್ರಹಿಸಬಹುದಾದ ಧಾನ್ಯ.

ಇದು ಉಷ್ಣವಲಯದ ಬೆಳೆ. ಅಧಿಕ ಉಷ್ಣಾಂಶ ಸಾಧಾರಣ ಮಳೆ, ಕೆಂಪು ಮಣ್ಣು, ಮೆಕ್ಕಲು ಮಣ್ಣು ಇದಕ್ಕೆ ಯೋಗ್ಯವಾಗಿದೆ.

ರಾಗಿಯ ಉತ್ಪಾದನೆಯಲ್ಲಿ ಭಾರತದಲ್ಲಿ ಕರ್ನಾಟಕವು ಮೊದಲ ಸ್ಥಾನದಲ್ಲಿದೆ.

ರಾಗಿಯು ಹಳೆಯ ಮೈಸೂರು ಪ್ರಾಂತ್ಯದ ಸಾಂಪ್ರದಾಯಿಕ ಬೆಳೆಯಾಗಿದೆ.

ಉತ್ತರ ಕರ್ನಾಟಕ ದಲ್ಲಿ ಜೋಳದ ಪ್ರಧಾನ್ಯತೆಯಿದ್ದರೆ ದಕ್ಷಿಣ ಕರ್ನಾಟಕದಲ್ಲಿ ರಾಗಿಯೇ ಪ್ರಧಾನವಾಗಿದೆ.

ಕರ್ನಾಟಕದಲ್ಲಿ ತುಮಕೂರು ಅತೀ ಹೆಚ್ಚು ರಾಗಿ ಉತ್ಪಾದಿಸುವ ಜಿಲ್ಲೆ. ಅನಂತರ ಸ್ಥಾನದಲ್ಲಿ ರಾಮನಗರ, ಹಾಸನ, ಮಂಡ್ಯ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಾಗಿವೆ.

ವಾಣಿಜ್ಯ ಬೆಳೆಗಳು

ಕಬ್ಬು :

ಇದು ಕರ್ನಾಟಕದ ಪ್ರಮುಖ ವಾಣಿಜ್ಯ ಹಾಗೂ ಕೈಗಾರಿಕಾ ಬೆಳೆಯಾಗಿದೆ. ಇದರ ವೈಜ್ಞಾನಿಕ ಹೆಸರು ಸಖ್ಯರಮ್‌ ಆಫಿಸಿನೇರಮ್‌

ಇದು ಉಷ್ಣವಲಯದ ಬೆಳೆಯಾಗಿದೆ.

ಕರ್ನಾಟಕವು ಕಬ್ಬು ಉತ್ಪಾದನೆಯಲ್ಲಿ ಭಾರತದಲ್ಲಿ ನಾಲ್ಕನೆ ಸ್ಥಾನದಲ್ಲಿರುವ ರಾಜ್ಯವಾಗಿದೆ.

ಕಬ್ಬಿನ ಬೇಸಾಯಕ್ಕೆ ಮರಳು ಮಿಶ್ರಿತ ಮೆಕ್ಕಲು ಮಣ್ಣು ಕೆಂಪು ಮಣ್ಣು ಉತ್ತಮವಾಗಿರುತ್ತದೆ.

ಅಧಿಕ ಉಷ್ಣಾಂಶ ಮತ್ತು ಅಧಿಕ ಮಳೆಯಾಗುವ ಪ್ರದೇಶದಲ್ಲಿ ಬೆಳೆಯುವರು.

ಇದು ಸಹ ಹುಲ್ಲಿನ ಜಾತಿಯ ಸಸ್ಯವಾಗಿದ್ದು. ಇದು ಸುಮಾರು ೩ ಮೀಟರ್‌ ಎತ್ತರದವರೆಗೆ ಬೆಳೆಯುತ್ತದೆ.

ಇದು ಬಹುವಾರ್ಷಿಕ ಬೆಳೆಯಾಗಿದೆ.

ಬೆಳಗಾವಿಯು ರಾಜ್ಯದಲ್ಲಿಯೇ ಅತಿ ಹೆಚ್ಚು ಕಬ್ಬು ಉತ್ಪಾದಿಸುವ ಜಿಲ್ಲೆಯಾಗಿದೆ. ೨ ನೇ ಸ್ಥಾನ ಬಾಗಲಕೋಟೆಯಾಗಿದೆ.

ಸ್ವಾತಂತ್ರ್ಯ ಪೂರ್ವದಿಂದಲೂ ಕಬ್ಬು ಬೆಳೆಯಲು ಮಂಡ್ಯದ ಜಿಲ್ಲೆ ಹೆಸರುವಾಸಿಯಾಗಿತ್ತು.

ಹತ್ತಿ :

ನಾರಿನ ಬೆಳೆಯಾಗಿದೆ. ಹತ್ತಿಯು, ಬಟ್ಟೆ ಕೈಗಾರಿಕೆಯ ಕಚ್ಚಾ ವಸ್ತುವಾಗಿದೆ.

ಇದು ಉಷ್ಣವಲಯ ಮತ್ತು ಉಪ ಉಷ್ಣವಲಯಗಳ ವಾಣಿಜ್ಯ ಬೆಳೆಯಾಗಿದೆ.

ಸಾಧಾರಣ ಮಳೆ, ಹೆಚ್ಚು ಉಷ್ಣಾಂಶ ಹಾಗೂ ಕಪ್ಪು ಮಣ್ಣು ಈ ಬೆಳೆಗೆ ಸೂಕ್ತ.

ಉದ್ದ, ಮಾಧ್ಯಮ, ತುಂಡು ಎಳೆಯ ಹತ್ತಿಯನ್ನು ಕಾಣಬಹುದಾಗಿದೆ.

ಕರ್ನಾಟಕದಲ್ಲಿ ಹೆಚ್ಚಾಗಿ ಮಧ್ಯಮ ಮತ್ತು ತುಂಡು ಎಳೆಯ ಹತ್ತಿಯನ್ನು ಬೆಳೆಯುವರು.

ಹತ್ತಿಯನ್ನು ಕರ್ನಾಟಕದಲ್ಲಿ ಆಗಸ್ಟ್‌ – ಸೆಪ್ಟೆಂಬರ್‌ ತಿಂಗಳಿನಲ್ಲಿ ಬಿತ್ತಿನೆ ಮಾಡುವರು. ಇದನ್ನು ಮಳೆ ಆಶ್ರಯದಲ್ಲಿ ಬೆಳೆಯುವುದೇ ಹೆಚ್ಚು.

ಹಾವೇರಿ ಜಿಲ್ಲೆ ಹತ್ತಿ ಉತ್ಪಾದನೆಯಲ್ಲಿ ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದೆ.

ಧಾರವಾಡ ಜಿಲ್ಲೆ ೨ ನೇ ಸ್ಥಾನ ಹೊಂದಿದೆ.

ಹತ್ತಿಯ ವೈಜ್ಞಾನಿಕ ಹೆಸರು – ಗ್ಯಾಸ್ಪಿಯಂ

ಹತ್ತಿಯ ಸಂಶೋಧನಾ ಕೇಂದ್ರ – ನಾಗ್ಪೂರ

ತಂಬಾಕು :

ಇದು ನಿಕೋಷಿಯಾನ್‌ ವರ್ಗಕ್ಕೆ ಸೇರಿದ ಸಸ್ಯವಾಗಿದೆ.

ಇದರಲ್ಲಿ ನಿಕೋಟಿನ್‌ ಎಂಬ ಮಾದಕ ವಸ್ತುವಿದೆ.

ತಂಬಾಕನ್ನು ಧೂಮಪಾನ ಅಂದರೆ ಬೀಡಿ, ಸಿಗರೇಟು, ಸಿಗಾರ್‌, ನಶ ಇತ್ಯಾದಿ ತಯಾರಿಕೆಯಲ್ಲಿ ಬಳಸುವರು.

ಪೋರ್ಚುಗೀಸರು ೧೭ ನೇ ಶತಮಾನದಲ್ಲಿ ತಂಬಾಕನ್ನು ಭಾರತಕ್ಕೆ ಪರಿಚಯಿಸಿದರು.

ಸಾಧಾರಣ ಮಳೆ ಮತ್ತು ಹೆಚ್ಚು ಉಷ್ಣಾಂಶವುಳ್ಳ ಮರಳು ಮಿಶ್ರಿತ ಮಣ್ಣಿನ ಪ್ರದೇಶಗಳಲ್ಲಿ ಇದನ್ನು ಬೆಳೆಯುವರು.

ವರ್ಜೀನಿಯಾ ತಂಬಾಕು ಬೆಳೆಯಲಾಗುತ್ತದೆ.

ಕರ್ನಾಟಕ ಭಾರತದ ಪ್ರಮುಖ ತಂಬಾಕು ಉತ್ಪಾದಿಸುವ ರಾಜ್ಯಗಳಲ್ಲಿ ೪ ನೇ ಸ್ಥಾನದಲ್ಲಿದೆ.

ಬೆಳಗಾವಿ ಜಲ್ಲೆಯ ನಿಪ್ಪಾಣಿಯು ದೇಶದಲ್ಲಿ ಬೀಡಿ ತಯಾರಿಕಾ ತಂಬಾಕು ಮಾರುಕಟ್ಟೆಗೆ ಅತ್ಯಂತ ಪ್ರಸಿದ್ದವಾಗಿದೆ.

ಕರ್ನಾಟಕದಲ್ಲಿ ಬೆಳೆಯುವ ತಂಬಾಕು ವಿಶ್ವದರ್ಜೇಯಾಗಿದ್ದು, ಉತ್ಪಾದನೆಯ ಬಹುಪಾಲು ರಫ್ತಾಗುವುದು.

ತಂಬಾಕು ಸಂಶೋಧನಾ ಕೇಂದ್ರ – ರಾಜಮಂಡ್ರಿ ( ಆಂಧ್ರಪ್ರದೇಶ )

ಕಾಫಿ :

ಕಾಫಿಯ ವೈಜ್ಞಾನಿಕ ಹೆಸರು – ರುಬಿಯೇಸಿ ಕೇಪಿನ್‌

ಕಾಫಿಯು ಕರ್ನಾಟಕದ ಪ್ರಸಿದ್ದ ನೆಡುತೋಟದ ಹಾಗೂ ಪಾನೀಯ ಬೆಳೆ.

ಕರ್ನಾಟಕವು ಭಾರತದಲ್ಲಿಯೇ ಕಾಫಿಯ ಉತ್ಪಾದನೆಯಲ್ಲಿ ಮೊದಲ ಸ್ಥಾನದಲ್ಲಿದೆ.

ಕ್ರಿ. ಶಕ ೧೬೭೦ ರ ಸುಮಾರಿಗೆ ಬಾಬಾಬುಡನ್‌ ಎಂಬ ಮುಸ್ಲಿಂ ಸಂತನು ಚಿಕ್ಕಮಗಳೂರಿನ ಬೆಟ್ಟಗಳ ಸಾಲಿನಲ್ಲಿ ಕಾಫಿ ಸಸಿಗಳನ್ನು ಬೆಳೆಸಿದನು. ಆದ್ದರಿಂದ ಇದನ್ನು ಬಾಬಾ ಬುಡನ್‌ ಗಿರಿ ಎನ್ನುವರು. ಆದರೆ ಇದರ ಕ್ರಮಬದ್ದವಾದ ಬೇಸಾಯವು ೧೮೨೬ ರಲ್ಲಿ ಪ್ರಾರಂಭವಾಯಿತು.

ಕರ್ನಾಟಕವು ಅರೇಬಿಕಾ ಹಾಗೂ ರೋಬುಸ್ಟ ಎಂಬ ಎರಡು ಪ್ರಬೇಧದ ಕಾಫಿಯನ್ನು ಉತ್ಪಾದಿಸುತ್ತಿದೆ.

ಇದರಲ್ಲಿ ಅರೇಬಿಕಾ ಶ್ರೇಷ್ಟ ದರ್ಜೆಯದಾಗಿದ್ದು ವಿಶ್ವದ ಮಾರುಕಟ್ಟೆಯಲ್ಲಿ ತುಂಬಾ ಬೇಡಿಕೆಯಿದೆ.

ಕಾಫಿಯು ಉಷ್ಣವಲಯದ ಅಧಿಕ ಮಳೆ ಪಡೆಯುವ ಬೆಟ್ಟಗಳ ಇಳಿಜಾರುಗಳಲ್ಲಿ ಬೆಳೆಯುವ ಬೆಳೆಯಾಗಿದೆ. ಜೇಡಿ ಮಿಶ್ರಿತ ಮಣ್ಣು ಕಾಫಿ ಬೆಳೆಗೆ ಸೂಕ್ತವಾಗಿದೆ.

FAQ

ವ್ಯವಸಾಯ ಎಂದರೇನು ?

ಭೂಮಿಯನ್ನು ಉಳುಮೆ ಮಾಡಿ ಬೆಳೆ ಬೆಳೆಯುವುದನ್ನು ವ್ಯವಸಾಯ ಎನ್ನುವರು.

ಕಾಫಿಯ ವೈಜ್ಞಾನಿಕ ಹೆಸರು ಏನು ?

ಕಾಫಿಯ ವೈಜ್ಞಾನಿಕ ಹೆಸರು ರುಬಿಯೇಸಿ ಕೇಪಿನ್‌

ಇತರೆ ವಿಷಯಗಳು :

ಕರ್ನಾಟಕದ ಐತಿಹಾಸಿಕ ಸ್ಥಳಗಳ ಬಗ್ಗೆ ಮಾಹಿತಿ 

ಪ್ಲಾಸಿ ಕದನದ ಬಗ್ಗೆ ಮಾಹಿತಿ

Leave a Reply

Your email address will not be published. Required fields are marked *