ಪ್ಲಾಸಿ ಕದನದ ಬಗ್ಗೆ ಮಾಹಿತಿ | Information About The Battle of Plassey in Kannada

ಪ್ಲಾಸಿ ಕದನದ ಬಗ್ಗೆ ಮಾಹಿತಿ Information About The Battle of Plassey Plasi Kadanada Bagge Mahiti in Kannada

ಪ್ಲಾಸಿ ಕದನದ ಬಗ್ಗೆ ಮಾಹಿತಿ

Information About  The Battle of Plassey in Kannada
Information About The Battle of Plassey in Kannada

ಈ ಲೇಖನಿಯಲ್ಲಿ ಪ್ಲಾಸಿ ಕದನದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗದೆ.

ಪ್ಲಾಸಿ ಕದನದ ಬಗ್ಗೆ ಮಾಹಿತಿ

ಬ್ರಿಟಿಷರು ಬಂಗಾಳದ ಮೂಲಕವೇ ತಮ್ಮ ಅಧಿಪತ್ಯವನ್ನು ಸ್ಥಾಪಿಸಿದರು. ಬಂಗಾಳ ಭಾರತದಲ್ಲಿಯೇ ಶ್ರೀಮಂತ ಪ್ರಾಂತ್ಯವಾಗಿತ್ತು. ಆದ್ದರಿಂದಲೇ ಬಂಗಾಳವನ್ನು ಸೋನಾರ ಬಾಂಗ್ಲಾ ಎನ್ನುತ್ತಿದ್ದರು. ಬಿಹಾರ್‌, ಜಾರ್ಖಾಂಡ, ಓರಿಸ್ಸಾ, ಪ ಬಂಗಾಳ, ಬಾಂಗ್ಲಾದೇಶ ಇವು ಬಂಗಾಳ ಪ್ರಾಂತ್ಯದ ಪ್ರದೇಶಗಳಾಗಿದ್ದವು. ಬಂಗಾಳದ ರಾಜಧಾನಿ ಮುರ್ಸಿದಾಬಾದ್‌ ಆಗಿತ್ತು. ಕ್ರಿ. ಶಕ ೧೭೦೭ ರಲ್ಲಿ ಔರಂಗಜೇಬ ಸತ್ತ ನಂತರ ಬಹುತೇಕ ಮೊಗಲ್‌ ಪ್ರಾಂತ್ಯಗಳು ಸ್ವತಂತ್ರವಾಗತೊಡಗಿದವು. ಕ್ರಿ. ಶಕ ೧೭೧೭ ರಲ್ಲಿ ಮುರ್ಸಿದ್‌ ಖುಲಿ ಖಾನ್‌ ಬಂಗಾಳದ ನವಾಬ ಸಂತತಿಗೆ ನಾಂದಿ ಹಾಡಿದನು. ಇವನ ನಂತರ ಇವನ ಅಳಿಯ ಶುಜ್‌ – ಉದ್ದಿನ್‌ – ಖಾನ್‌ ನಂತರ ಇವನ ಮಗ ಸರ್ಪರಾಜ್‌ಖಾನ್‌ ಬಂಗಾಳವನ್ನು ಆಳಿದರು. ಕ್ರಿ. ಶಕ ೧೭೪೦ ರಲ್ಲಿ ಸರ್ಪರಾಜನ್‌ ಖಾನ್‌ ನನ್ನು ಕೊಂದು ಹಾಕಿದ ಅಲಿವರ್ಧಿಖಾನ್‌ ಬಂಗಾಳದ ನವಾಬನಾದನು.

ಪ್ಲಾಸಿ ಕದನಕ್ಕೆ ಕಾರಣಗಳು

ರಾಜಕೀಯ ಕಾರಣ :

ಉತ್ಸಹಿ, ಸ್ವಾತಂತ್ರ್ಯ ಪ್ರೇಮಿಯಾದ ಸಿರಾಜ್‌ – ಉದ್ – ದೌಲ್ ನಿಗೆ ದೊಡ್ಡಮ್ಮನಾದ ಢಾಕಾದ ಗಸ್ತಿಬೇಗಂ ಇನ್ನೋರ್ವ ದೊಡ್ಡಮ್ಮನಮಗ ಪೂರ್ನಿಯಾದ ಸುಬೇಧದಾರ್‌ ಶೌಕತ್‌ ಜಂಗ್‌ ವಿರೋಧಿಗಳಾಗಿದ್ದರು. ಅಲ್ಲದೆ ಅವರಿಗೆ ಉಚ್ಚಾಟಿತ ದಿವಾನ್‌ ರಾಜವಲ್ಲಭನ ಬೆಂಬಲವೂ ಇತ್ತು. ಸಿರಾಜ್‌ – ಉದ್ದ ದೌಲ್ ನ ವೈರಿಯಾದ ಶೌಕತ್‌ ಜಂಗ್‌ನನ್ನು ಅಧಿಕಾರಕ್ಕೆ ತರಲು ಬ್ರಿಟಿಷರು ಹವಣಿಸುತ್ತಿದ್ದರು. ಅಲ್ಲದೇ ರಾಜದ್ರೋಹಿಗಳಾದ ಇವರೆಲ್ಲರೂ ಬ್ರಿಟಿಷರು ಆಶ್ರಯ ನೀಡಿದ್ದರು.

ನವಾಬನ ಅಧಿಕಾರ ಒಪ್ಪದೇ ಇರುವುದು :

ಕ್ರಿ. ಶಕ ೧೭೫೬ ರಲ್ಲಿ ಸಿರಾಜ್‌ – ಉದ್‌ – ದೌಲ್‌ ಬಂಗಾಳದ ನವಾಬನಾಗಿ ಅಧಿಕಾರವಹಿಸಿಕೊಂಡಾಗ ಬ್ರಿಟಿಷರು ಬೆಲೆ ಬಾಳುವ ಉಡುಗೊರೆಯನ್ನು ನೀಡಲಿಲ್ಲ. ಇದು ನವಾಬನ ಕೋಪಕ್ಕೆ ಕಾರಣವಾಯಿತು.

ಆರ್ಥಿಕ ಕಾರಣ :

ಕ್ರಿ. ಶಕ ೧೭೧೭ ರಲ್ಲಿ ಮೊಗಲ್‌ ದೊರೆ ಫರುಕ್ಸಿಯಾರ್ ನು ಬ್ರಿಟಿಷರಿಗೆ ಬಂಗಾಳದಲ್ಲಿ ಸುಂಕ ರಹಿತ ವ್ಯಾಪಾರ ಮಾಡಲು ಅನುಮತಿ ನೀಡಿದ್ದನು. ಇದರಿಂದಾಗಿ ಬ್ರಿಟಿಷರಿಗೆ ದಸ್ತಕಗಳು ದೊರೆತ್ತಿದ್ದವು. ಈ ದಸ್ತಕಗಳ ದುರಪಯೋಗವಾಗಿ ಬಂಗಾಳಕ್ಕೆ ಅಪಾರ ನಷ್ಟವಾಗುತ್ತಿತ್ತು. ಅವ್ಯವಹಾರದಲ್ಲಿ ತೊಡಗಿದವರಿಗೆ ನವಾಬ್‌ ಶಿಕ್ಷಿಸಲು ಮುಂದಾದಾಗ ಅವರಿಗೆ ಬ್ರಿಟಿಷರು ಆಶ್ರಯ ನೀಡಿದರು ಇದರಿಂದ ನವಾಬ ಕೋಪಗೊಳ್ಳುವಂತಾಯಿತು.

ಕಲ್ಕತ್ತಾ ಸುತ್ತ ಕೋಟೆಯನ್ನು ಭದ್ರಪಡಿಸಿದ್ದು :

ಕ್ರಿ. ಶಕ ೧೭೫೬ ರಲ್ಲಿ ಯೂರೋಪಿನಲ್ಲಿ ಆರಂಭವಾದ ಸಪ್ತ ವಾರ್ಷಿಕ ಯುದ್ದದಿಂದ ಫ್ರೆಂಚರ ಭೀತಿಯಿಂದ ಬ್ರಿಟಿಷರು ಕಲ್ಕತ್ತಾ ಕೋಟೆಯನ್ನು ಭದ್ರಪಡಿಸಿದರು. ಇದರಿಂದ ನವಾಬ ಕೆರಳಿದನು.

ಫ್ರೆಂಚರಿಗೆ ಆಶ್ರಯ :

ಕ್ರಿ. ಶಕ ೧೭೫೭ ರಲ್ಲಿ ಬ್ರಿಟಿಷರು ಫ್ರೆಂಚರ ನೆಲೆಯಾದ ಚಂದ್ರನಾಗೋರನ್ನು ಆಕ್ರಮಿಸಿ ವಶಪಡಿಸಿಕೊಂಡರು. ಆಗ ನಿರಾಶ್ರಿತರಾದ ಫ್ರೆಂಚರಿಗೆ ಸಿರಾಜ್‌ – ಉದ್‌ – ದೌಲ್‌ ಆಶ್ರಯ ನೀಡಿದ್ದನು. ಇದು ಬ್ರಿಟಿಷರ ಕೋಪಕ್ಕೆ ಕಾರಣವಾಯಿತು.

ಕಪ್ಪು ಕೋಣೆಯ ದುರಂತ :

ಕಲ್ಕತ್ತಾದಲ್ಲಿ ನವಾಬನ ವೈರಿಯಾದ ರಾಜವಲ್ಲಭನ ಪರಿವಾರಕ್ಕೆ ಬ್ರಿಟಿಷರು ಆಶ್ರಯ ನೀಡಿದ್ದರು. ಪರಿವಾರಕ್ಕೆ ಬ್ರಿಟಿಷರು ಆಶ್ರಯ ನೀಡಿದ್ದರು. ರಾಜವಲ್ಲಭನನ್ನು ತನಗೆ ಒಪ್ಪಿಸುವಂತೆ ಬ್ರಿಟಿಷಿಗೆ ಆದೇಶ ನೀಡಿದಾಗ ಬ್ರಿಟಿಷರು ತಿರಸ್ಕರಿಸಿದರು. ಇದರಿಂದ ಕೋಪಗೊಂಡ ಸಿರಾಜ್‌ – ಉದ್‌ – ದೌಲ್‌ ೧೭೫೬ ಜೂನ್‌ ೧೬ ರಂದು ಕಾಸಿಂಬಜಾರ್‌ನ್ನು ಆಕ್ರಮಿಸಿ ವಶಪಡಿ ಕೊಂಡನು.

ಒಪ್ಪಂದದ ಕರಾರುಗಳು :

ಬ್ರಿಟಿಷರಿಗೆ ಹಿಂದೆ ಇದ್ದ ವ್ಯಾಪಾರಿ ಸವಲತ್ತುಗಳನ್ನು ನೀಡುವುದು. ಕೋಟೆ ಕಟ್ಟುವುದಕ್ಕೆ ಅನುಮತಿ ನೀಡುವುದು. ಯುದ್ದ ಕೋಟೆ ಕಟ್ಟುವುದಕ್ಕೆ ಅನುಮತಿ ನೀಡುವುದು. ಯುದ್ದ ವೆಚ್ಚವನ್ನು ನಾಬನೇ ತುಂಬಿಕೊಡುವುದು.

ರಾಜಕೀಯ ಒಳಸಂಚು :

ಅಲಿನಗರ ಒಪ್ಪಂದ ನಂತರ ಬ್ರಿಟಿಷರು ಒಳಸಂಚು ನಡೆಸಿದರು. ಸಿರಾಜ್‌ ಉದ್‌ – ದೌಲ್‌ ನಿಂದ ಅತೃಪ್ತರಾದ

೧. ಮೀರ್‌ ಜಾಫರ್‌ ( ನವಾಬನ ಸೇನೆಯ ಮುಖ್ಯಸ್ಥ )

೨. ರಾಯ್‌ದುರ್ಲಾಭ ( ಖಜಾನೆಯ ಅಧಿಕಾರ )

೩. ಜಗತ್‌ ಸೇಠ್‌ ( ಪ್ರಮುಖ ಬ್ಯಾಂಕರ್‌ ) ಅಲ್ಲದೇ ಗಸ್ತಿಬೇಗಂ, ಶೌಕತ್ಜಂಗ್‌, ರಾಜವಲ್ಲಭರನ್ನೋಳಗೊಂಡ ಒಂದು ಗುಂಪು ಸಿದ್ದವಾಯಿತು. ಈ ಗುಂಪಿನ ನಾಯಕನಾದ ಮೀರ್‌ ಜಾಫರ್‌ ನೊಂದಿಗೆ ಬ್ರಿಟಿಷರು ಒಳ ಒಪ್ಪಂದ ಮಾಡಿಕೊಂಡರು.

ಒಪ್ಪಂದದ ಕರಾರುಗಳು

  • ಸಿರಾಜ್‌ – ಉದ್‌ – ದೌಲ್‌ ನೊಂದಿಗೆ ಮಾಡುವ ಯುದ್ದದಲ್ಲಿ ಇವರು ತಟಸ್ಥವಾಗಿರುವುದು.
  • ಯುದ್ದದಲ್ಲಿ ಗೆದ್ದರೆ ಮೀರ್‌ ಜಾಫರ್‌ ನನ್ನು ಬಂಗಾಳದ ನವಾಬನ್ನಾಗಿಸುವುದು.
  • ಯುದ್ದ ವೆಚ್ಚವನ್ನು ಮೀರ್‌ ಜಾಫರ್‌ ನನ್ನು ಬಂಗಾಳದ ನವಾಬನನ್ನಾಗಿಸುವುದು.
  • ಯುದ್ದ ವೆಚ್ಚವನ್ನು ಮೀರ್ ಜಾಫರನೇ ತುಂಬಿಕೊಡುವುದು.

ಪ್ಲಾಸಿ ಕದನ ( ಕ್ರಿ. ಶಕ ಜೂನ್‌ ೨೩ )

ಅಲಿನಗರ ಒಪ್ಪಂದದ ಕರಾರುಗಳನ್ನು ಪಾಲಿಸುತ್ತಿಲ್ಲ ಎಂಬ ನೆಪ ಹೇಳಿದ ಬ್ರಿಟಿಷರು ಬಂಗಾಳದ ನವಾಬನ ಮೇಲೆ ಯುದ್ದ ಸಾರಿದರು. ಕ್ರಿ. ಶಕ ೧೭೫೭ ಜೂನ್‌ ೨೩ ರಂದು ಪಶ್ಚಿಮಬಂಗಾಳದ ರಾಜ್ಯದ ಪ್ಲಾಸಿ ಎಂಬಲ್ಲಿ ಸಿರಾಜ್‌ – ಉದ್‌ – ದೌಲ್‌ ಮತ್ತು ರಾಬರ್ಟ್‌ ಕ್ಲೈವ್‌ ಯುದ್ದ ನಡೆಯಿತು. ಇದೇ ಪ್ಲಾಸಿ ಕದನ. ಈ ಕದನದಲ್ಲಿ ಮೀರ್‌ ಜಾಫರ್‌ ಮತ್ತು ರಾಯದುರ್ಲಾಭ ತಟಸರಾಗಿದ್ದರು. ಆದರೂ ಮೀರ್‌ ಮದನ್‌ ಮತ್ತು ಮೋಹನ್‌ ಲಾಲ್‌ ನೇತೃತ್ವದ ಸೈನ್ಯ ಹೋರಟ ಮಾಡಿದಾಗ ಗಾಬರಿಗೊಂಡ ರಾಬರ್ಟ್‌ ಕ್ಲೈವ್‌ ಸೇನೆಯನ್ನು ಹಿಂದಕ್ಕೆ ಕರೆಯಿಸಿಕೊಂಡು ರಾತ್ರಿ ಮೋಸದಿಂದ ಯುದ್ದ ಮಾಡಿದನು. ಆಗ ಮೀರ್‌ ಮದನ್‌ ಗುಂಡೇಟಿಗೆ ಬಲಿಯಾದಾಗ ನವಾಬನ ಸೇನೆ ಚೆಲ್ಲಾಪಿಲ್ಲಿಯಾಗಿ ಸಿರಾಜ್‌ – ಉದ್‌ – ದೌಲ್‌ ನ ಕೊಲೆ ಮಾಡಲಾಯಿತು.

ಪ್ಲಾಸಿ ಕದನದ ಪರಿಣಾಮಗಳು

  • ಈ ಯುದ್ದದ ನಂತರ ಮೀರ್‌ ಜಾಫರ್‌ ಬಂಗಾಳದ ನವಾಬನಾದನು.
  • ಇದಕ್ಕೆ ಪ್ರತಿಯಾಗಿ ಮೀರ್‌ ಜಾಫರ್‌ ೨೪ ಷರಗಣಗಳ ಜಮೀನ್ದಾರಿಕೆಯ ಹಕ್ಕನ್ನು ಬ್ರಿಟಿಷರಿಗೆ ಕೊಟ್ಟನು.
  • ಈ ಯುದ್ದದಿಂದ ದೊರೆತ ಸಂಪತ್ತನ್ನು ಬಳಸಿ ಕೊಂಡ ಬ್ರಿಟಿಷರು ೩ ನೇ ಕರ್ನಾಟಿಕ್‌ ಯುದ್ದದಲ್ಲಿ ಫ್ರೆಂಚರನ್ನು ಸೆದೆಬಡೆದರು.
  • ಈ ಯುದ್ದದಿಂದ ಭಾರತದ ಸೈನಿಕರ ದೌರ್ಬಲ್ಯ ಜಗಜ್ಜಾಹಿರವಾಯಿತು.

FAQ

ಪ್ಲಾಸಿ ಕದನವು ಯಾವಾಗ ಆಯಿತು ?

೧೭೫೭

ಪ್ಲಾಸಿ ಕದನವು ಎಲ್ಲಿ ನಡೆಯಿತು ?

ಪಶ್ಚಿಮ ಬಂಗಾಳ ರಾಜ್ಯದ ಪ್ಲಾಸಿ ಎಂಬಲ್ಲಿ ಈ ಕದನವು ನಡೆಯಿತು.

ಇತರೆ ವಿಷಯಗಳು :

ವಿಶ್ವದ ಪ್ರಮುಖ ಕದನಗಳ ಬಗ್ಗೆ ಮಾಹಿತಿ

ರೈತ ದೇಶದ ಬೆನ್ನೆಲುಬು ಪ್ರಬಂಧ

Leave a Reply

Your email address will not be published. Required fields are marked *