ಬಾಲ್ಯ ವಿವಾಹದ ಬಗ್ಗೆ ಮಾಹಿತಿ | Information About Child Marriage in Kannada

ಬಾಲ್ಯ ವಿವಾಹದ ಬಗ್ಗೆ ಮಾಹಿತಿ Information about child marriage Balya Vivahad Bagge Mahiti in Kannada

ಬಾಲ್ಯ ವಿವಾಹದ ಬಗ್ಗೆ ಮಾಹಿತಿ

Information About Child Marriage in Kannada

ಈ ಲೇಖನಿಯಲ್ಲಿ ಬಾಲ್ಯ ವಿವಾಹದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನೀಡಲಾಗಿದೆ.

ಬಾಲ್ಯ ವಿವಾಹ

ಬಾಲ್ಯ ವಿವಾಹವು ನಮ್ಮ ಸಮಾಜವನ್ನು ಪರಂಪರಾಗತವಾಗಿ ಕಾಡಿದ ಒಂದು ಸಾಮಜಿಕ ಸಮಸ್ಯೆಯಾಗಿದೆ. ಹಾಗಾದರೆ ಬಾಲ್ಯವಿವಾಹ ಎಂದರೆ ಕಾನೂನಿನ ಪ್ರಕಾರ ಬಾಲ್ಯವಿವಾಹ ೧೮ ವರ್ಷದೊಳಗಿನ ಹುಡುಗಿಗೆ ಮದುವೆ ಮಾಡಿದರೆ ಅದನ್ನು ಬಾಲ್ಯವಿವಾಹ ಎಂದು ಕರಯಲಾಗುತ್ತದೆ. ಹಾಗು ೨೧ ವರ್ಷದೊಳಗಿನ ಹುಡುಗನಿಗೆ ವಿವಾಹ ಮಾಡಿದರೆ ಅದು ಬಾಲ್ಯವಿವಾಹವಾಗುತ್ತದೆ. ಬಾಲ್ಯ ವಿವಾಹವನ್ನು ೧೮ ವರ್ಷದೊಳಗಿನ ಮಕ್ಕಳಿಗೆ ಮದುವೆ ಮಾಡಿದರೆ ಅದು ಕಾನೂನು ಪ್ರಕಾರ ಅಪರಾಧ. ಯಾವುದೇ ಹೆಣ್ಣಿಗೆ ಮದುವೆ ಎಂಬ ಪದ್ದತಿಗೆ ಒಳಗಾಗಬೇಕಾದರೆ ಅವಳ ದೇಹ, ಮನಸ್ಸು ಗರ್ಭಕೋಶ, ಮಾನಸಿಕ, ಭೌದ್ದಿಕ, ಒಟ್ಟಾರೆ ಶಾರೀರಿಕ ಸಾಮಾರ್ಥ್ಯ ಬೆಳೆಯಲು ೧೮ ವರ್ಷ ಬೇಕು. ಮಾನವ ಸಮಾಜದಲ್ಲಿ ವಿವಾಹವು ಸಂತಾನೋತ್ಪತ್ತಿ ಪ್ರಕೃಯೆಯ ಪ್ರಮುಖ ಭಾಗವಾಗಿದೆ.

ಬಾಲ್ಯ ವಿವಾಹಕ್ಕೆ ಕಾರಣಗಳು

  • ಬಾಲ್ಯವಿವಾಹಕ್ಕೆ ಪ್ರಮುಖವಾದ ಕಾರಣ ಲಿಂಗ ತಾರತಮ್ಯ ಹೆಣ್ಣು ಬೇರೆಯವರ ಮನೆಗೆ ಹೋಗುವವಳು ಅವಳನ್ನು ಬೇಗ ಮದುವೆ ಮಾಡಿ ಕಳುಹಿಸಬೇಕು ಎಂಬ ನಂಬಿಕೆ ಆಳವಾಗಿ ಉಳಿದಿರುವುದು ಮುಖ್ಯವಾಗಿ ಕಾರಣವಾಗಿದೆ.
  • ಹೆಣ್ಣು ಮತ್ತು ಗಂಡು ಮಕ್ಕಳ ನಡುವಿನ ಭೇಧ ಭಾವ ಇಂದು ಹೆಚ್ಚು ಬಾಲ್ಯವಿವಾಹಕ್ಕೆ ಕಾರಣವಾಗಿದೆ.
  • ಇದಕ್ಕೆ ಇನ್ನು ಮುಖ್ಯಕಾರಣವೆಂದರೆ ಶಿಕ್ಷಣ ಇಲ್ಲದಿರುವುದು. ಚಿಕ್ಕ ವಯಸ್ಸಿನಲ್ಲೇ ಶಾಲೆಗೆ ಹೋಗದೆ ದುಡಿಮೆಗೆ ಹೋಗಿ ತಮ್ಮ ಮುಂದಿನ ಭವಿಷ್ಯವನ್ನೇ ಹಾಳು ಮಾಡಿಕೊಳ್ಳುತ್ತಾರೆ.
  • ಕಾನೂನಿನ ಕನಿಷ್ಟ ಮಟ್ಟದ ಅನುಷ್ಟಾನ ಮತ್ತು ಬಳಕೆಯ ಕೊರತೆ ಮತ್ತು ಶಿಕ್ಷಣ ವ್ಯವಸ್ಥೆಯಲ್ಲಿ ಕಾನೂನುಗಳ ಅನುಷ್ಟಾನದ ಕೊರತೆ.
  • ಮಕ್ಕಳ ಹಕ್ಕುಗಳ ಮತ್ತು ಮಕ್ಕಳ ಅಭಿವೃದ್ದಿ ಕಾರ್ಯಕ್ರಮಗಳ ದೋಷಪೂರಿತವಾದ ಅನುಷ್ಟಾನದಿಂದಾಗಿ ಬಾಲ್ಯ ವಿವಾಹವು ಹೆಚ್ಚಾಗುತ್ತಿದೆ.

ಬಾಲ್ಯ ವಿವಾಹದಿಂದಾಗುವ ದುಷ್ಪರಿಣಾಮಗಳು

  • ವಯಸ್ಸಿಗೆ ಮೀರಿದ ಜವಾಬ್ದಾರಿ ಮೀರಿಸಿದಂತಾಗುತ್ತದೆ.
  • ಅಪ್ರಾಪ್ತ ವಯಸ್ಸಿನಲ್ಲಿ ಗರ್ಭಿಣಿಯಾಗುವುದರಿಂದ ಗರ್ಭಕೋಶದ ಬೆಳವಣಿಗೆ ಪೂರ್ಣಗೊಳ್ಳದೆ ಗರ್ಭಪಾತ, ಗರ್ಭ ಚೀಲಕ್ಕೆ ಪೆಟ್ಟು ಬೀಳುವುದರಿಂದ ಹೇಗೆ ಸಮಯದಲ್ಲಿ ಅಕಾಲಿಕ ಮರಣಕ್ಕೆ ತುತ್ತಾಗುವ ಸಾಧ್ಯತೆಯು ಇರುತ್ತದೆ.
  • ವಿಕಲಾಂಗ ಮಕ್ಕಳು ಜನಿಸುವ ಸಾಧ್ಯತೆಯು ಇರುತ್ತದೆ.
  • ಲೈಂಗಿಕ ಕಾಯಿಲೆಗಳಾದ H I V, AIDS ಇಂತಹ ಕಾಯಿಲೆಗಳಿಗೆ ತುತ್ತಾಗಬೇಕಾಗುತ್ತದೆ.
  • ಬಾಲ್ಯಾವಕಾಶದಿಂದ ವಂಚಿತರಾಗುವುದು.
  • ಬಾಲ್ಯ ವಿವಾಹಕ್ಕೆ ಒಳಗಾದ ಮಕ್ಕಳು ಮಾನಸಿಕ ದೌರ್ಬಲ್ಯತೆಗೆ ಒಳಗಾಗುತ್ತಾರೆ.
  • ಮಕ್ಕಳ ಹಕ್ಕುಗಳನ್ನು ಉಲ್ಲಂಘಿಸಿದಂತಾಗುತ್ತದೆ.

ಬಾಲ್ಯ ವಿವಾಹಕ್ಕೆ ಪರಿಹಾರ ಕ್ರಮಗಳು

  • ೧೮ ವರ್ಷದ ತನಕ ಯಾವ ಮಕ್ಕಳು ಶಾಲೆ, ಕಾಲೇಜು ಬಿಡದಿರುವಂತೆ ಶೈಕ್ಷಣಿಕ ಅಭಿವೃದ್ದಿ ಕಾರ್ಯಕ್ರಮಗಳ ಅನುಷ್ಟಾನ, ಅಂದರೆ ಸಂಪೂರ್ಣವಾಗಿ ಎಲ್ಲಾ ಮಕ್ಕಳು ಶಾಲೆಗೆ ದಾಖಲಾಗಿರಬೇಕು.
  • ಶಾಲೆಯಲ್ಲಿ ಮಕ್ಕಳ ದಾಖಲಾತಿಯನ್ನು ಪಡೆಯುವಾಗ ಜನನ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಪಡೆಯಬೇಕು
  • ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹವನ್ನು ನೀಡಬೇಕು. ಬಾಲಕಿಯರ ಬಲವರ್ಧನೆ ಮತ್ತು ಸಬಲೀಕರನದ ಆದ್ಯತೆಯನ್ನು ನೀಡಬೇಕು.
  • ಎಲ್ಲೇ ಬಾಲ್ಯ ವಿವಾಹ ನಡೆದರು ತಪ್ಪದೆ ದೂರನ್ನು ಸಲ್ಲಿಸಬೇಕು.

ಬಾಲ್ಯವಿವಾಹ ನಿಷೇಧ ಕಾಯ್ದೆ

ಭಾರತದಲ್ಲಿ ಎಲ್ಲಾ ರಾಜ್ಯಗಳಿಗೂ ಈ ಕಾಯ್ದೆಯೂ ಅನ್ವಯಿಸುತ್ತದೆ. ಮೊದಲು ೧೯೮೬ ರಲ್ಲಿ ಜಾರಿಗೆ ಬಂದಿದೆ. ಕೆಲವು ತಿದ್ದುಪಡಿಯ ಮೂಲಕ ೨೦೦೬ ರಲ್ಲಿ ಬಾಲ್ಯ ವಿವಾಹ ನಿಷೇಧ ಕಾಯ್ದೆಯು ಜಾರಿಗೆ ಬಂದಿದೆ.

FAQ

ಬಾಲ್ಯ ವಿವಾಹ ನಿಷೇಧ ಕಾಯ್ದೆಯು ಮೊದಲು ಯಾವಾಗ ಜಾರಿಗೆ ಬಂದಿತು ?

೧೯೮೬ ರಲ್ಲಿ ಜಾರಿಗೆ ಬಂದಿತು.

ಬಾಲ್ಯ ವಿವಾಹದಿಂದಾಗುವ ದುಷ್ಪರಿಣಾಮಗಳನ್ನು ತಿಳಿಸಿ ?

ಬಾಲ್ಯ ವಿವಾಹಕ್ಕೆ ಒಳಗಾದ ಮಕ್ಕಳು ಮಾನಸಿಕ ದೌರ್ಬಲ್ಯತೆಗೆ ಒಳಗಾಗುತ್ತಾರೆ, ಬಾಲ್ಯಾವಕಾಶದಿಂದ ವಂಚಿತರಾಗುವುದು.

ಇತರೆ ವಿಷಯಗಳು :

ಸಂವಿಧಾನದ ರಚನೆಯ ಬಗ್ಗೆ ಮಾಹಿತಿ

ಗಣರಾಜ್ಯೋತ್ಸವ ದಿನಾಚರಣೆ ಭಾಷಣ

Leave a Reply

Your email address will not be published. Required fields are marked *