ಸಂವಿಧಾನಾತ್ಮಕ ಸಂಸ್ಥೆಗಳ ಬಗ್ಗೆ ಮಾಹಿತಿ | Information About Constitutional Institutions in Kannada

ಸಂವಿಧಾನಾತ್ಮಕ ಸಂಸ್ಥೆಗಳ ಬಗ್ಗೆ ಮಾಹಿತಿ Information About Constitutional Institutions Samvidanatmaka Samstegala Bagge Mahiti in Kannada

ಸಂವಿಧಾನಾತ್ಮಕ ಸಂಸ್ಥೆಗಳ ಬಗ್ಗೆ ಮಾಹಿತಿ

Information About Constitutional Institutions in Kannada
Information About Constitutional Institutions in Kannada

ಈ ಲೇಖನಿಯಲ್ಲಿ ಸಂವಿಧಾನಾತ್ಮಕ ಸಂಸ್ಥೆಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮPost ನಲ್ಲಿ ನೀಡಲಾಗಿದೆ.

ಚುನಾವಣಾ ಆಯೋಗ :

ನಮ್ಮ ಸಂವಿಧಾನದ ೧೫ ನೇ ಭಾಗದದಲ್ಲಿನ ೩೨೪ ನೇ ವಿಧಿಯು ಸ್ವಂತಂತ್ರ ಮತ್ತು ನಿರ್ಭೀತ ಚುನಾವಣಾ ಆಯೋಗದ ರಚನೆಗೆ ಅವಕಾಶ ನೀಡಿದೆ. ಈ ಚುನಾವಣಾ ಆಯೋಗವು ಸಂಸತ್ತಿನ ರಾಜ್ಯ ಶಾಸನ ಸಭೆಗಳ, ರಾಷ್ಟ್ರಾಧ್ಯಕ್ಷರ ಹಾಗೂ ಉಪರಾಷ್ಟ್ರಾಧ್ಯಕ್ಷರ ಚುನಾವಣಾ ಮೇಲ್ವಿಚಾರಣೆ, ನಿರ್ದೇಶನ ಹಾಗೂ ನಿಯಂತ್ರಣ ಅಧಿಕಾರವನ್ನು ಹೊಂದಿದೆ. ಭಾರತದಲ್ಲಿ ಕೇಂದ್ರ ಹಾಗೂ ರಾಜ್ಯಗಳು ಒಂದೇ ಚುನಾವಣಾ ಅಯೋಗವನ್ನು ಹೊಂದಿದೆ. ಭಾರತದ ಚುನಾವಣಾ ಆಯೋಗವು ಸ್ಥಳೀಯ ಸರ್ಕಾರಗಳಿಗೆ ಚುನಾವಣೆ ನಡೆಸುವಂತಿಲ್ಲ. ಏಕೆಂದರೆ ಪ್ರತ್ಯೇಕ ರಾಜ್ಯ ಚುನಾವಣೆ ಆಯೋಗಗಳು ಸ್ಥಳೀಯ ಸರಕಾರಗಳಿಗೆ ಚುನಾವಣೆ ನಡೆಸುತ್ತದೆ.

ವಿಧಿ ೩೨೪ ರಚನೆ :

ಸಂವಿಧಾನದ ೩೨೪ ನೇ ವಿಧಿಯು ಚುನಾವಣಾ ಅಯೋಗದ ರಚನೆಯನ್ನು ವಿವರಿಸುತ್ತದೆ. ಚುನಾವಣಾ ಆಯೋಗವು ೧೯೫೦ ರಿಂದ ೧೯೮೯ ರ ವರೆಗೆ ಏಕ ಸದಸ್ಯ ಆಯೋಗವಾಗಿ ಕಾರ್ಯನಿರ್ವಹಿಸಿತು. ಈ ಸಂಧರ್ಭದಲ್ಲಿ ಅಯೋಗವು ಮುಖ್ಯ ಚುನಾವಣಾ ಆಯುಕ್ತರನ್ನು ಮಾತ್ರ ಹೊಂದಿತ್ತು. ಮೊದಲ ಬಾರಿಗೆ ರಾಷ್ಟ್ರಾಧ್ಯಕ್ಷರು ಅಕ್ಟೋಬರ್‌ ೧೬ / ೧೯೮೯ ರಂದು ಎಸ್‌. ಎಸ್.‌ ನೋವಾ ಮತ್ತು ವಿ. ಎಸ್.‌ ಸೀಗೇಲ್‌ ಎಂಬ ಇಬ್ಬರು ವ್ಯಕ್ತಿಗಳನ್ನು ಚುನಾವಣಾ ಆಯುಕ್ತರನ್ನಾಗಿ ನೇಮಕ ಮಾಡಿದರು. ಜನವರಿ ೧೧/ ೧೯೯೦ ರಂದು ರಾಷ್ಟ್ರಾಧ್ಯಕ್ಷರು ಹೊಸದಾಗಿ ನೇಮಕವಾಗಿದ್ದ ಇಬ್ಬರು ಆಯುಕ್ತರ ಹುದ್ದೆಗಳನ್ನು ರದ್ದುಪಡಿಸಿದರು.

ಪ್ರಧಾನಿ ಪಿ. ವಿ. ನರಸಿಂಹ ನೇತೃತ್ವದ ಕಾಂಗ್ರೇಸ್‌ ಸರ್ಕಾರ ಅಕ್ಟೋಬರ್‌ ೧/ ೧೯೯೩ ರಂದು ತ್ರಿಸದಸ್ಯ ಚುನಾವಣಾ ಆಯೋಗ ರಚಿಸಿತು. ಚುನಾವಣಾ ಆಯೋಗವು ಮುಖ್ಯ ಆಯುಕ್ತರು ಹಾಗೂ ರಾಷ್ಟ್ರಾಧ್ಯಕ್ಷರು ಕಾಲಕಾಲಕ್ಕೆ ನಿಗದಿಪಡಿಸಬಹುದಾದ ಇತರ ಚುನಾವಣಾ ಆಯುಕ್ತರಗಳನ್ನು ಹೊಂದಿರುತ್ತದೆ.

ಅಧಿಕಾರವಧಿ :

ಚುನಾವಣಾ ಅಯೋಗದ ಸದಸ್ಯರ ಅವಧಿ ೬ ವರ್ಷ ಆದರೆ ಅವಧಿ ಮುಗಿಯುವುದಕ್ಕೆ ಮೊದಲು ೬೩ ವರ್ಷಗಳು ತುಂಬಿದರೆ ಹುದ್ದೆಯಿಂದ ನಿವೃತ್ತಿಯಾಗಬೇಕಾಗುತ್ತದೆ.

ಸೇವಾ ನಿಯಮಗಳು :

ಚುನಾವಣಾ ಆಯೋಗದ ಸದಸ್ಯರು ಹಾಗೂ ಪ್ರಾದೇಶಿಕ ಆಯುಕ್ತರ ಸೇವಾ ನಿಯಮಗಳನ್ನು ಸಂಸತ್ತು ನಿರ್ಧರಿಸುತ್ತವೆ.

ವೇತನ :

ಚುನಾವಣಾ ಆಯೋಗದ ಸದಸ್ಯರಿಗೆ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರ ಸ್ಥಾನಮಾನವನ್ನು ನೀಡಲಾಗಿದೆ. ಆದ್ದರಿಂದ ಆಯೋಗದ ಸದಸ್ಯರು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಿಗೆ ದೊರೆಯುವ ವೇತನ ಪಿಂಚಣಿ ಮತ್ತು ಇತರೆ ಸೌಲಭ್ಯಗಳನ್ನು ಭಾರತ ಸಂಚಿತ ನಿಧಿಯಿಂದ ಪಡೆಯುತ್ತಾರೆ.

ಪದಚ್ಯುತಿ :

ಚುನಾವಣಾ ಆಯೋಗದ ಮುಖ್ಯ ಆಯುಕ್ತರನ್ನು ಪದಚ್ಯುತಿಗೊಳಿಸಲು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರನ್ನು ಪದಚ್ಯುತಿಗೊಳಿಸುವ ಆಧಾರ ಮತ್ತು ವಿಧಾನವನ್ನು ಅನುಸರಿಸಬೇಕು.

ಅಧಿಕಾರ ಮತ್ತು ಕಾರ್ಯಗಳು :

ಮತದಾರರ ಪಟ್ಟಿಗಳ ಸಿದ್ದತೆ ಹಾಗೂ ಪರಿಷ್ಕರಣೆಗಳ ಪರಿಶೀಲನೆ ಮತ್ತು ನಿರ್ದೇಶನ ಮಾಡುವರು. ಸಂಸತ್ತು ರಾಜ್ಯಶಾಸಕಾಂಗ, ರಾಷ್ಟ್ರಾಧ್ಯಕ್ಷರರು ಮತ್ತು ಉಪರಾಷ್ಟ್ರಾಧ್ಯಕ್ಷರ ಸ್ಥಾನಗಳಿಗೆ ಚುನಾವಣೆಗಳನ್ನು ನಡೆಸುವುದು. ರಾಜಕೀಯ ಪಕ್ಷಗಳಿಗೆ ಮಾನ್ಯತೆ ನೀಡುವುದು.

ಕೇಂದ್ರ ಲೋಕಸೇವಾ ಆಯೋಗ

ವಿಧಿ ೩೧೫ ರಚನೆ :

ಸಂವಿಧಾನದ ೩೧೫ ನೇ ವಿಧಿಯು ಕೇಂದ್ರ ಲೋಕ ಸೇವಾ ಆಯೋಗದ ರಚನೆಗೆ ಅವಕಾಶ ನೀಡಿದೆ.

ಸದಸ್ಯರ ಸಂಖ್ಯೆ :

ಈ ಆಯೋಗದ ಸದಸ್ಯರ ಸಂಖ್ಯೆಯನ್ನು ರಾಷ್ಟ್ರಾಧ್ಯಕ್ಷರು ನಿಧರ್ರಿಸುತ್ತಾರೆ. ಕೇಂದ್ರ ಲೋಕಸೇವಾ ಆಯೋಗವು ಸಾಮಾನ್ಯವಾಗಿ ಅಧ್ಯಕ್ಷರನ್ನು ಒಳಗೊಂಡಂತೆ ೧೧ ಮಂದಿ ಸದಸ್ಯರನ್ನು ಹೊಂದಿರುತ್ತದೆ.

ನೇಮಕಾತಿ :

ಆಯೋಗವು ಅಧ್ಯಕ್ಷರು ಹಾಗೂ ಸದಸ್ಯರುಗಳನ್ನು ಸಚಿವ ಸಂಪುಟದ ಸಲಹೆಯ ಮೇರೆಗೆ ರಾಷ್ಟ್ರಾಧ್ಯಕ್ಷರು ನೇಮಿಸುತ್ತಾರೆ.

ಅರ್ಹತೆಗಳು :

ಆಯೋಗದ ಅರ್ಧದಷ್ಟು ಸದಸ್ಯರು ಕೇಂದ್ರ ಅಥವಾ ರಾಜ್ಯ ಸರ್ಕಾರದಲ್ಲಿ ಕನಿಷ್ಟ ೧೦ ವರ್ಷಗಳ ಕಾಲ ಸೇವೆ ಸಲ್ಲಿಸಿರಬೇಕು. ಸಂವಿಧಾನವು ಆಯೋಗದ ಅಧ್ಯಕ್ಷರು ಸದಸ್ಯರು ಸೇವಾ ನಿಯಮಗಳನ್ನು ನಿರ್ಧರಿಸುವ ಅಧಿಕಾರವನ್ನು ರಾಷ್ಟ್ರಾಧ್ಯಕ್ಷರಿಗೆ ನೀಡಿದೆ. ಕೇಂದ್ರ ಲೋಕ ಸೇವಾ ಆಯೋಗದ ಅಧ್ಯಕ್ಷರ ಹುದ್ದೆ ತೆರವಾದಾಗ ಮತ್ತು ಗೃರು ಹಾಜರಿ ಅಥವಾ ಇತರೆ ಕಾರಣಗಳಿಂದಾಗಿ ಅಧ್ಯಕ್ಷರು ತಮ್ಮ ಕಾರ್ಯಗಳನ್ನು ನಿರ್ವಹಿಸಲು ಸಾಧ್ಯವಾಗದಿದ್ದರೆ ರಾಷ್ಟ್ರಾಧ್ಯಕ್ಷರಿಗೆ ನೀಡಿದೆ.

ಅಧಿಕಾರವಧಿ :

ಕೇಂದ್ರ ಲೋಕಸೇವಾ ಅಯೋಗದ ಸದಸ್ಯರು ೬ ವರ್ಷಗಳ ಕಾಲ ಅಥವಾ ೬೫ ವರ್ಷಗಳು ತುಂಬುವವರೆಗೆ ಅನ್ವಯವಾಗುತ್ತದೆ.

ವೇತನ :

ಕೇಂದ್ರ ಲೋಕಸೇವಾ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರ ವೇತನವನ್ನು ಕಾಲಕಾಲಕ್ಕೆ ಸಂಸತ್ತು ನಿರ್ಧರಿಸುತ್ತದೆ. ಇವರ ವೇತನದ ಪಿಂಚಣಿ ಹಾಗೂ ಇತರೆ ಭತ್ಯಗಳನ್ನು ಭಾರತದ ಸಂಚಿತ ನಿಧಿಯಿಂದ ನೀಡಲಾಗುತ್ತದೆ.

ಪದಚ್ಯುತಿ :

ಆಯೋಗದ ಅಧ್ಯಕ್ಷ ಮತ್ತು ಸದಸ್ಯರು ದಿವಾಳಿಕೋರರಾಗಿದ್ದಾರೆಂದು ತೀರ್ಮಾನಿಸಲ್ಪಟ್ಟರೆ ಅಥವಾ ತಮ್ಮ ಅಧಿಕಾರದ ಅವಧಿಯಲ್ಲಿ ವೇತನ ಪಡೆಯುವ ಬೇರೆ ಹುದ್ದೆಯಲ್ಲಿದ್ದರೆ ಅಥವಾ ಸೇವೆಯಲ್ಲಿ ಮುಂದುವರೆಯಲು ಅಸಮರ್ಥರು ಎಂಬ ಅಭಿಪ್ರಾಯಪಟ್ಟರೆ ರಾಷ್ಟ್ರಾಧ್ಯಕ್ಷರು ಇವರನ್ನು ಪದಚ್ಯುತಿಗೊಳಿಸಬಹುದು.

ರಾಜೀನಾಮೆ :

ಇವರು ತಮ್ಮ ರಾಜೀನಾಮೆಯನ್ನು ರಾಷ್ಟ್ರಪತಿಗಳಿಗೆ ಸಲ್ಲಿಸುತ್ತಾರೆ.

ರಾಜ್ಯ ಲೋಕಸೇವಾ ಆಯೋಗ

ವಿಧಿ ೩೧೫ ರಚನೆ :

ಸಂವಿಧಾನದ ೩೧೫ ನೇ ವಿಧಿಯನ್ವಯ ಪ್ರತಿಯೊಂದು ರಾಜ್ಯಕ್ಕೆ ತನ್ನದೇ ಅದ ಲೋಕಸೇವಾ ಆಯೋಗವನ್ನು ರಚಿಸಿಕೊಳ್ಳಲು ಅವಕಾಶ ನೀಡಿದೆ.

ಸದಸ್ಯರ ಸಂಖ್ಯೆ :

ರಾಜ್ಯ ಲೋಕಸೇವಾ ಆಯೋಗವು ಒಬ್ಬ ಅಧ್ಯಕ್ಷ ಮತ್ತು ಇತರೆ ಸದಸ್ಯರುಗಳನ್ನು ಒಳಗೊಂಡುರುತ್ತದೆ. ಆಯೋಗದ ಸದಸ್ಯರ ಸಂಖ್ಯೆ ಮತ್ತು ಸೇವಾ ನಿಯಮಗಳನ್ನು ರಾಜ್ಯಪಾರು ನಿರ್ಧರಿಸುತ್ತಾರೆ.

ನೇಮಕಾತಿ :

ರಾಜ್ಯಪಾಲರು ರಾಜ್ಯ ಮಂತ್ರಿ ಮಂಡಲದ ಸಲಹೆಯ ಮೇರೆಗೆ ರಾಜ್ಯ ಲೋಕಸೇವಾ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಿಸುತ್ತಾರೆ. ಆಯೋಗದ ಅರ್ಧದಷ್ಟು ಸದಸ್ಯರನ್ನು ನೇಮಿಸುತ್ತಾರೆ. ಆಯೋಗದ ಅರ್ಧದಷ್ಟು ಸದಸ್ಯರು ರಾಜ್ಯ ಸರ್ಕಾರದಲ್ಲಿ ಕನಿಷ್ಟ ೧೦ ವರ್ಷಗಳ ಕಾಲ ಸೇವೆ ಸಲ್ಲಿಸಿರಬೇಕು.

ಅಧಿಕಾರ ಅವಧಿ :

ರಾಜ್ಯ ಲೋಕಸೇವಾ ಅಯೋಗದ ೬ ವರ್ಷಗಳ ಕಾಲ ಅಥವಾ ೬೨ ವರ್ಷಗಳು ತುಂಬುವವರೆಗೆ ಅಧಿಕಾರದಲ್ಲಿರುತ್ತಾರೆ. ಯಾವುದು ಮೊದಲು ಮೊದಲು ಅದು ಅನ್ವಯವಾಗುತ್ತದೆ.

ರಾಜೀನಾಮೆ :

ಇವರು ತಮ್ಮ ರಾಜೀನಾಮೆಯನ್ನು ರಾಜ್ಯಪಾಲರಿಗೆ ಸಲ್ಲಿಸುತ್ತಾರೆ.

ಪದಚ್ಯುತಿ :

ರಾಜ್ಯ ಲೋಕಸೇವಾ ಆಯೋಗದ ಆದ್ಯಕ್ಷರು ಅಥವಾ ಸದಸ್ಯ ದುರ್ನಡನೆತೆಯ ಬಗ್ಗೆ ಸುಪ್ರೀಂಕೋರ್ಟ್‌ ವಿಚಾರಣೆ ನಡೆಸಿ ಅಪಾದನೆಗೆ ಒಳಗಾಗಿರುವವರನ್ನು ಪದಚ್ಯುತಿಗೊಳಿಸಬೇಕೆಂದು ವರದಿ ಸಲ್ಲಿಸಿದರೆ ರಾಷ್ಟ್ರಾಧ್ಯಕ್ಷರು ಕ್ರಮ ಕೈಗೊಳ್ಳುತ್ತಾರೆ.

ವೇತನ :

ಆಯೋಗದ ಅಧ್ಯಕ್ಷರು ಮತ್ತು ಸದಸ್ಯರ ವೇತನವನ್ನು ಕಾಲಕಾಲಕ್ಕೆ ಶಾಸಕಾಂಗವು ನಿರ್ಧರಿಸುತ್ತದೆ. ಇವನ ವೇತನ ಪಿಂಚಣಿ ಹಾಗೂ ಇತರೆ ಸೌಲಭ್ಯಗಳನ್ನು ರಾಜ್ಯದ ಸಂಚಿತ ನಿಧಿಯಿಂದ ನೀಡಲಾಗುತ್ತದೆ.

ಚುನಾವಣ ಆಯೋಗದ ಬಗ್ಗೆ ತಿಳಿಸುವ ವಿಧಿ ಯಾವುದು ?

೩೨೪ ನೇ ವಿಧಿ

ಕೇಂದ್ರ ಲೋಕಸೇವಾ ಆಯೋಗದ ರಚನೆಯ ಬಗ್ಗೆ ತಿಳಿಸುವ ವಿಧಿ ಯಾವುದು ?

೩೧೫

ಇತರೆ ವಿಷಯಗಳು :

ಸಮಾಜ ಸುಧಾರಕರ ಬಗ್ಗೆ ಮಾಹಿತಿ

ಉದ್ಯಮಗಾರಿಕೆಯ ಬಗ್ಗೆ ಮಾಹಿತಿ

Leave a Reply

Your email address will not be published. Required fields are marked *