ಭೂಮಿಯ ಉಷ್ಣಾಂಶ ವಲಯಗಳ ಬಗ್ಗೆ ಮಾಹಿತಿ | Information About Earth’s Temperature Zones in Kannada

ಭೂಮಿಯ ಉಷ್ಣಾಂಶ ವಲಯಗಳ ಬಗ್ಗೆ ಮಾಹಿತಿ Information About Earth’s Temperature Zones Bhomiya Ushnamsha Valayagala Bagge Mahiti in Kannada

ಭೂಮಿಯ ಉಷ್ಣಾಂಶ ವಲಯಗಳ ಬಗ್ಗೆ ಮಾಹಿತಿ

Information About Earth's Temperature Zones in Kannada
Information About Earth’s Temperature Zones in Kannada

ಈ ಲೇಖನಿಯಲ್ಲಿ ಭೂಮಿಯ ಉಷ್ಣಾಂಶ ವಲಯಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.

ಭೂಮಿಯ ಉಷ್ಣಾಂಶ ವಲಯಗಳು

ಭೂಮಿಯ ಮೇಲೆ ಉಷ್ಣಾಂಶದ ಹಂಚಿಕೆಯ ಮೇಲೆ ಪ್ರಭಾವ ಬೀರುವ ಅಂಶಗಳು ಈ ಕೆಳಕಂಡಂತಿವೆ.

ಭೂಮಿಯ ವಾಲುವಿಕೆ, ಭೂಮಿಯ ಆಕಾರ, ಭೂಮಿಯ ಸ್ವರೂಪಗಳಾಗಿವೆ. ಹಾಗೂ ಭೂಮಿಯ ಮೇಲೆ ಉಷ್ಣಾಂಶದ ಹಂಚಿಕೆಯ ಆಧರಿಸಿ ಅರಿಸ್ಟಾಟಲ್‌ ರವರು ಈ ಕೆಳಗಿನಂತೆ ೩ ವಲಯಗಳನ್ನು ವಿಂಗಡಿಸಿದ್ದಾರೆ.

೧. ಉಷ್ಣವಲಯ

೨. ಸಮಶೀತೋಷ್ಣವಲಯ

೩. ಶೀತ ವಲಯ

೧. ಉಷ್ಣವಲಯ

ಭೂಮಿಯ ಮೇಲೆ ೨೩ ೧/೨ ಡಿಗ್ರಿಗಳ ನಡುವೆ ಹರಡಿರುವ ಪ್ರದೇಶವನ್ನು ಉಷ್ಣವಲಯ ಎನ್ನುವರು.

ಉಷ್ಣವಲಯ ಲಕ್ಷಣಗಳು :

  • ಸಮಭಾಜಕ ವೃತ್ತದಲ್ಲಿ ವರ್ಷಪೂರ್ತಿ ಉಷ್ಣಾಂಶದ ಸಮಾನತೆ ಕಂಡುಬರುತ್ತದೆ.
  • ಸಮಭಾಜಕ ವೃತ್ತದಲ್ಲಿ ನಿಜವಾದ ಚಳಿಗಾಲ ಕಂಡುಬರುವುದಿಲ್ಲ.
  • ಉಷ್ಣವಲಯದಲ್ಲಿ ಸಮಭಾಜಕ ವೃತ್ತದಲ್ಲಿ ನಿಜವಾದ ಋಉತುಗಳು ಕಂಡುಬರುವುದಿಲ್ಲ.
  • ಉಷ್ಣವಲಯದಲ್ಲಿ ಸಮಭಾಜಕ ವೃತ್ತದಲ್ಲಿ ದಿನನಿತ್ಯ ಪರಿಸರ ಮಳೆ ಕಂಡುಬರುತ್ತದೆ.
  • ಭಾರತದಲ್ಲಿ ಎಪ್ರಿಲ್‌ ಮೇ ತಿಂಗಳಿನಲ್ಲಿ ಕಂಡುಬರುವ ಪರಿಸರಣಮಳೆಯನ್ನು ಪ್ರಿಮಾನ್ಸೂನ್‌ ಎನ್ನುವರು.

ಪರಿಸರಣ ಮಳೆಯನ್ನು ಭಾರತದ ಬೇರೆ ಬೇರೆ ರಾಜ್ಯಗಳಲ್ಲಿ ಈ ಕೆಳಕಂಡ ಹೆಸರುಗಳಿಂದ ಕರೆಯುತ್ತಾರೆ :

ರಾಜ್ಯಗಳುಹೆಸರುಗಳು
ಕೇರಳ, ಮಹರಾಷ್ಟ್ರಮಾವಿನ ಹೋಯ್ಲು
ಕರ್ನಾಟಕಕಾಫಿ ಮಳೆ, ಚೋರಿ
ಪಶ್ಚಿಮ ಬಂಗಾಳಕಾಲಬೈಸಾಕಿ
ಅಸ್ಸಾಂಚಹಾಮಳೆ
ಅರುಣಾಚಲ ಪ್ರದೇಶಬೋಡೋಲಿಸಿಲಾ
ಪರಿಸರಣ ಮಳೆಯನ್ನು ಭಾರತದ ಬೇರೆ ಬೇರೆ ರಾಜ್ಯಗಳಲ್ಲಿ ಕರೆಯುವಂತ ಹೆಸರುಗಳು
  • ಹಗಲಿನ ಅವಧಿಯಲ್ಲಿ ಶುಭ್ರವಾದ ಆಕಾಶ, ಮದ್ಯಾಹ್ನನದ ಅವಧಿಯಲ್ಲಿ ಆವಿಯಾಗುವಿಕೆ – ಘನಿಕರಣ – ಮೋಡಗಳ ರಚನೆ, ೩ – ೪ ಗಂಟೆ ಅವಧಿಯಲ್ಲಿ ಮಳೆ ಮತ್ತು ಸಾಯಂಕಾಲ ಶುಭ್ರವಾದ ಆಕಾಶ ಈ ರೀತಿಯ ಹವಾಮಾನ ಸಮಭಾಜಕ ವೃತ್ತದಲ್ಲಿ ರಾತ್ರಿ ಮತ್ತು ಹಗಲಿನ ಉಷ್ಣಾಂಶದಲ್ಲಿ ಅಷ್ಟೋಂದು ವ್ಯತ್ಯಾಸ ಕಂಡುಬರುವುದು.
  • ಸಮಭಾಜಕ ವೃತ್ತದಲ್ಲಿ ಆಯಾ ಭೂ ಖಂಡಗಳ ಪಧ್ಚಿಮದಲ್ಲಿ ಪ್ರಮುಖವಾಗಿ ಮರುಭೂಮಿಗಳು ಕಂಡುಬರುತ್ತವೆ. ಕಾರಣ ವಾಣಿಜ್ಯ ಮಾರುತಗಳು ಬೀಸುವ ದಿಕ್ಕು.
  • ಉಷ್ಣವಲಯದಲ್ಲಿ ಸಮಭಾಜಕ ವೃತ್ತದಲ್ಲಿ ನಿತ್ಯಹರಿದ್ವರ್ಣ ಕಾಡುಗಳು ಕಂಡುಬರುತ್ತವೆ.

ನಿತ್ಯ ಹರಿಧ್ವರ್ಣ ಕಾಡುಗಳ ಲಕ್ಷಣಗಳು :

ಇವು ವಾರ್ಷಿಕವಾಗಿ ೨೭ ಡಿಗ್ರಿ C ಕ್ಕಿಂತ ಹೆಚ್ಚು ಉಷ್ಣಾಂಶ ಮತ್ತು ೨೦೦ cm ಕ್ಕಿಂತ ಹೆಚ್ಚು ಮಳೆ ಆಗುವ ಪ್ರದೇಸದಲ್ಲಿ ಕಂಡುಬರುತ್ತವೆ.

ಇವು ವರ್ಷ ಪೂರ್ತಿ ಹಚ್ಚ ಹಸಿರಾಗಿರುತ್ತವೆ. ಸೂರ್ಯನ ರಶ್ಮಿಯು ನೆಲಕ್ಕೆ ತಾಗದಷ್ಟು ದಟ್ಟವಾಗಿರುತ್ತವೆ.

ಇವುಗಳಲ್ಲಿ ಮರಗಳು ೪೦ – ೬೦ ಮೀಟರ್‌ ಎತ್ತರದ ವರೆಗೆ ಬೆಳೆಯುತ್ತವೆ. ಹಾಗೆ ಮರಗಳು ಮೆಟ್ಟಿಲುಗಳ ರೂಪದಲ್ಲಿ ಕಂಡು ಬರುತ್ತವೆ.

ಇವುಗಳನ್ನು ಮಳೆಕಾಡು ಎನ್ನುತ್ತಾರೆ. ಚಿಕ್ಕ ಪ್ರದೇಶಗಳಲ್ಲಿ ನೂರಾರು ಜಾತಿಯ ಮರ – ಗಿಡಗಳು ಕಂಡುಬರುತ್ತವೆ.

ಇಲ್ಲಿ ಕಂಡುಬರುವ ಪ್ರಮುಖ ಮರಗಳೆಂದರೆ ಎಬೋನಿ, ರಬ್ಬರ್‌, ಸಿಂಚೋನಾ, ಮೆಹಾಗನಿ ಇನ್ನುಮುಂತಾದವುಗಳು.

ಉಷ್ಣವಲಯದಲ್ಲಿ ಸ್ಥಳಾಂತರ ಬೇಸಾಯವು ಕಂಡು ಬರುತ್ತದೆ.

ಸ್ಥಳಾಂತರ ಬೇಸಾಯ ಲಕ್ಷಣಗಳು :

ಇದೊಂದು ಜೀವನಾದಾರ ಬೇಸಾಯ.

ಕುಟುಂಬದ ಸದಸ್ಯರೇ ಕಾರ್ಮಿಕರಾಗಿರುತ್ತಾರೆ.

ಸಾಟಿ ಪದ್ದತಿ ಜಾರಿಯಲ್ಲಿದೆ.

ಸಾಂಪ್ರಾದಾಯಿಕ ಪದ್ದತಿ ಜಾರಿಯಲ್ಲಿದೆ.

ಕೀಟನಾಶಕಗಳ ಬಳಕೆ ಇಲ್ಲ.

ರಾಸಾಯನಿಕ ಗೊಬ್ಬರಗಳ ಬಳಕೆ ಇಲ್ಲ.

  • ಉಷ್ಣವಲಯದಲ್ಲಿ ಥರ್ಮಲ್‌ ಇಕ್ವೇಟರ್‌ ಕಂಡುಬರುತ್ತದೆ.

ಉಷ್ಣವಲಯದಲ್ಲಿ ಕಂಡುಬರುವ ಹುಲ್ಲುಗಾವಲುಗಳು :

ಗೋಳಾರ್ಧಹುಲ್ಲುಗಾವಲುಗಳುದೇಶಖಂಡ
ಉತ್ತರಗೋಳಾರ್ಧಲ್ಯಾನೋಸ್ವೆನಿಜುವೆಲಾ ಕೊಲಂಬಿಯಾದಕ್ಷಿಣ ಅಮೇರಿಕಾ
ದಕ್ಷಿಣ ಗೋಳಾರ್ಧಕಾಂಪೋಸ್ಬ್ರೆಜಿಲ್ದಕ್ಷಿಣ ಅಮೇರಿಕ
ಎರಡು ಗೋಳಾರ್ಧಸುಡಾನ್‌ / ಸವನ್ನಾಮಧ್ಯ ಆಫ್ರಿಕಾ
ಉಷ್ಣವಲಯದಲ್ಲಿ ಕಂಡುಬರುವ ಹುಲ್ಲುಗಾವಲುಗಳು

ಸಮಶೀತೋಷ್ಣ ವಲಯ

ಭೂಮಿಯ ಮೇಲೆ ೨೩/ ೧/೨ – ೬೬ ೧/೨ ಅಕ್ಷಾಂಶಗಳ ನಡುವಿನ ವಿಶಾಲವಾಗಿ ಹರಡಿರುವ ಪ್ರದೇಶವನ್ನು ಸಮಶೀತೋಷ್ಣ ವಲಯ ಎನ್ನುತ್ತೇವೆ.

ಸಮಶೀತೋಷ್ಣ ವಲಯದ ಲಕ್ಷಣಗಳು :

ಈ ವಲಯವು ಉಷ್ಣವಲಯಕ್ಕೆ ಹೋಲಿಸಿದರೆ ಕಡಿಮೆ ಉಷ್ಣಾಂಶ ಮತ್ತು ಶೀತ ವಲಯಕ್ಕೆ ಹೋಲಿಸಿದರೆ ಕಡಿಮೆ ಶೀತವನ್ನು ಹೊಂದಿರುತ್ತದೆ.

ಈ ವಲಯದಲ್ಲಿ ಈ ಕೆಳಗಿನ ೩ ವಿಶಿಷ್ಟ ಮಾದರಿಯ ವೈಯೋಗುಣ ಕಂಡುಬರುತ್ತವೆ.

೧. ಕರಾವಳಿ ತೀರ ಮಾದರಿ ವಾಯುಗುಣ :

ಕರಾವಳಿ ತೀರ ಮಾದರಿ ವಾಯುಗುಣದಲ್ಲಿ ಚಳಿಗಾಲದಲ್ಲಿ ಹೆಚ್ಚು ಚಳಿ ಮತ್ತು ಬೇಸಿಗೆಯಲ್ಲಿ ಹೆಚ್ಚು ಬಿಸಿಲು ಕಂಡುಬರುವುದಿಲ್ಲ. ಈ ವಲಯದಲ್ಲಿ ಉತ್ತರ ಅಮೇರಿಕಾ ಖಂಡದ ಪಶ್ಚಿಮ ಕರಾವಳಿಯಲ್ಲಿ, ಯುರೋಪ ಖಂಡದ ಪಶ್ಚಿಮ ಕರಾವಳಿಯಲ್ಲಿ, ದಕ್ಷಿಣ ಅಮೇರಿಕ ಖಂಡದ ಪಶ್ಚಿಮ ಕರಾವಳಿಯಲ್ಲಿ ಕರಾವಳಿ ತೀರ ಮಾದರಿ ವಾಯುಗುಣವು ಪ್ರಮುಖವಾಗಿ ಕಂಡುಬರುತ್ತದೆ.

೨. ಖಂಡಾಂತರ ಮಾದರಿ ವಾಯುಗುಣ :

೨. ಖಂಡಾಂತರ ಮಾದರಿ ವಾಯುಗುಣದಲ್ಲಿ ಚಳಿಗಾಲದಲ್ಲಿ ಹೆಚ್ಚು ಚಳಿ ಮತ್ತು ಬೇಸಿಗೆಯಲ್ಲಿ ಅತಿ ಹೆಚ್ಚು ಬಿಸಿಲು ಕಂಡುಬರುತ್ತದೆ. ಖಂಡಾಂತರ ಮಾದರಿ ವಾಯುಗುಣದ ವಾರ್ಷಿಕ ಸರಾಸರಿ ಉಷ್ಣಾಂಶವು ಕರಾವಳಿ ತೀರ ಮಾದರಿ ವಾಯುಗುಣದ ವಾರ್ಷಿಕ ಸರಾಸರಿ ಉಷ್ಣಾಂಶಕ್ಕೆ ಹೋಲಿಸಿದರೆ ಹೆಚ್ಚು ಇರುವುದು. ಕಾರಣ ಭೂ ಭಾಗ ಮತ್ತು ಜಲಭಾಗಗಳ ನಡುವಿನ ಉಷ್ಣಾಂಶದ ಹಂಚಿಕೆಯ ವ್ಯತ್ಯಾಸ.

೩.ಮೆಡಿಟರೇನಿಯನ್‌ ಮಾದರಿ ವಾಯುಗುಣ :

ಮೆಡಿಟರೇನಿಯನ್‌ ಮಾದರಿ ವಾಯುಗುಣ ಲಕ್ಷಣಗಳು :

ಚಳಿಗಾಲದಲ್ಲಿ ಮಳೆ ಕಂಡುಬರುವುದು.

ತೇವಾಂಶಭರಿತ ಚಳಿಗಾಲ.

ಒಣ ಶುಷ್ಕ ಬೇಸಿಗೆ.

ಸಮಶೀತೋಷ್ಣ ವಲಯದಲ್ಲಿ ಎಲೆ ಉದಿರಿಸುವ ಕಾಡುಗಳು ಮತ್ತು ಸೂಚಿಪರ್ಣ ಕಾಡುಗಳು ಕಂಡುಬರುತ್ತವೆ.

ಎಲೆ ಉದಿರಿಸುವ ಕಾಡುಗಳು ಸೂಚಿಪರ್ಣ ಕಾಡುಗಳು
೨೦ – ೪೫ ಡಿಗ್ರಿ ಅಕ್ಷಾಂಶಗಳ ನಡುವೆ ೨ ಗೋಳಾರ್ಧದಲ್ಲಿ ಕಂಡುಬರುತ್ತವೆ.೪೫ – ೬೬ ಡಿಗ್ರಿ ಅಕ್ಷಾಂಶಗಳ ನಡುವೆ ಉತ್ತರ ಗೋಳಾರ್ಧದಲ್ಲಿ ಮಾತ್ರ ಕಂಡುಬರುತ್ತೆ.
ಇವು ೬- ೮ ವಾರಗಳ ವರೆಗೆ ಎಲೆಗಳನ್ನು ಉದಿರಿಸುತ್ತದೆ. ಎಲೆಗಳನ್ನು ಉದಿರಿಸುವುದಿಲ್ಲ.
ಸೂಚಿಪರ್ಣ ಕಾಡುಗಳಿಗೆ ಹೋಲಿಸಿದರೆ ದಪ್ಪವಾದ ಮತ್ತು ಅಗಲವಾದ ಎಲೆಗಳನ್ನು ಹೊಂದಿರುತ್ತವೆ.ಚಿಕ್ಕ ಚಿಕ್ಕ ಇಕ್ಕಟ್ಟಾದ ಸೂಜಿಯಾಕಾರದ ಎಲೆಗಳನ್ನು ಹೊಂದಿರುತ್ತದೆ.
ಆಳವಾದ ಬೇರುಗಳನ್ನು ಹೊಂದಿರುತ್ತವೆ.ಆಳವಾದ ಬೇರುಗಳನ್ನು ಹೊಂದಿರುತ್ತವೆ.
ಸೂಚಿಪರ್ಣ ಕಾಡುಗಳಿಗೆ ಹೋಲಿಸಿದರೆ ಕಡಿಮೆ ದಪ್ಪವಾದ ತೊಗಟೆಯನ್ನು ಹೊಂದಿರುತ್ತವೆ.ಎಲೆ ಉದಿರಿಸುವ ಕಾಡುಗಳಿಗೆ ಹೋಲಿಸಿದರೆ ಹೆಚ್ಚು ದಪ್ಪವಾದ ತೊಗಟೆಯನ್ನು ಹೊಂದಿರುತ್ತದೆ.
ಅರ್ಜುನ್‌, ಸ್ಯಾಂಡಲ್ ವುಡ್‌, ಟೀಕ್‌ ಮರಗಳು ಕಂಡುಬರುತ್ತವೆ.ಬ್ಲು ಚಿನಾರ್, ಪಿನೆ, ಇನ್ನು ಮುಂತಾದವುಗಳು.
ಸಮಶೀತೋಷ್ಣ ವಲಯದಲ್ಲಿ ಎಲೆ ಉದಿರಿಸುವ ಕಾಡುಗಳು ಮತ್ತು ಸೂಚಿಪರ್ಣ ಕಾಡುಗಳು ಕಂಡುಬರುತ್ತವೆ.

ಶೀತವಲಯ

ಭೂಮಿಯ ಮೇಲೆ ೬೬ ೧/೨ ಡಿಗ್ರಿ ಅಕ್ಷಾಂಶಗಳಿಂದ ೯೦ ಡಿಗ್ರಿ ಅಕ್ಷಾಂಶಗಳ ನಡುವಿನ ವಿಶಾಲವಾಗಿ ಹರಡಿರುವ ಪ್ರದೇಶವೇ ಶೀತವಲಯ ಎನ್ನುವರು.

ಶೀತವಲಯದ ಲಕ್ಷಣಗಳು :

  • ಶೀತವಲಯ ಪ್ರದೇಶಗಳನ್ನು ಮಧ್ಯರಾತ್ರಿಯ ಸೂರ್ಯೋದಯದ ನಾಡುಗಳು ಎನ್ನುವರು.
  • ನಾರ್ವೆ ದೇಶವನ್ನು ಮಧ್ಯರಾತ್ರಿಯ ಸೂರ್ಯೋದಯ ನಾಡು ಎನ್ನುವರು.
  • ಉತ್ತರ ಶೀತವಲಯದಲ್ಲಿ Eskimo ಎಂಬ ಪ್ರಮುಖ ಬುಡಕಟ್ಟು ಜನಾಂಗದವರು ಕಂಡುಬರುತ್ತಾರೆ.
  • Eskimo ಎಂಬ ಬುಡಕಟ್ಟು ಜನಾಂಗವು ತಾವು ವಾಸಿಸುವುದಕ್ಕೆ ಕಟ್ಟಿಕೊಳ್ಳುವ ಮನೆಯನ್ನು “ಇಗ್ಲೋ” ಎನ್ನುವರು.

ಇಗ್ಲೋ ಮನೆಯ ಲಕ್ಷಣಗಳು : ( Snow House )

ಹಿಮದಿಂದ ಕಟ್ಟಿರುತ್ತಾರೆ.

ಮನೆಗಳ ಬಾಗಿಲುಗಳನ್ನು ಸಮಭಾಜಕ ವೃತ್ತದ ಕಡೆ ಮಾಡಿರುತ್ತಾರೆ.

ನೆಲಕ್ಕೆ ಮತ್ತು ಗೋಡೆಗಳಿಗೆ ಪ್ರಾಣಿಗಳ ಚರ್ಮವನ್ನು ಅಂಟಿಸುತ್ತಾರೆ.

ಚಿಕ್ಕ ಬಾಗಿಲುಗಳನ್ನು ಹೊಂದಿದ್ದು ಕಿಟಕಿಗಳನ್ನು ಹೊಂದಿರಿವುದಿಲ್ಲ.

  • ಶೀತ ವಲಯದಲ್ಲಿ ಟೈಗಾ ಮತ್ತು ತಂಡ್ರಾ ಮಾದರಿ ಕಾಡುಗಳು ಕಾಂಡುಬರುತ್ತವೆ. ತಂಡ್ರಾ ಪ್ರದೇಶವನ್ನು ಋತುಗಳು ಕಂಡುಬರದೆ ಇರುವ ಪ್ರದೇಶ ಎಂದು ಕರೆಯುತ್ತಾರೆ.
  • ಈ ವಲಯದಲ್ಲಿ ಹಿಮಕರಡಿ, ಸೀಲ್‌ ಎಂಬ ಪ್ರಾಣಿ ಮತ್ತು ಪೆಂಗ್ವೀನ್‌ ಎಂಬ ವಿಶಿಷ್ಟ ಪಕ್ಷಿ ಕಂಡುಬರುತ್ತದೆ.
  • ತಂಡ್ರಾ ಪ್ರದೇಶದಲ್ಲಿ ಚಳಿಗಾಲ ಮಾತ್ರ ಕಂಡುಬರುತ್ತದೆ.

FAQ

ಇಗ್ಲೋ ಮನೆಯು ಯಾವ ವಲಯದಲ್ಲಿ ಕಂಡುಬರುತ್ತದೆ ?

ಶೀತವಲಯದಲ್ಲಿ ಕಂಡುಬರುತ್ತದೆ.

ಪರಿಸರಣ ಮಳೆಯನ್ನು ಕರ್ನಾಟಕದಲ್ಲಿ ಎನೆಂದು ಕರೆಯುತ್ತಾರೆ ?

ಕಾಫಿ ಮಳೆ

ಎಲೆ ಉದಿರಿಸುವ ಕಾಡುಗಳ ಒಂದು ಲಕ್ಷಣವನ್ನು ತಿಳಿಸಿ ?

ಸೂಚಿಪರ್ಣ ಕಾಡುಗಳಿಗೆ ಹೋಲಿಸಿದರೆ ದಪ್ಪವಾದ ಮತ್ತು ಅಗಲವಾದ ಎಲೆಗಳನ್ನು ಹೊಂದಿರುತ್ತವೆ.

ಸೂಚಿಪರ್ಣ ಕಾಡುಗಳ ಒಂದು ಲಕ್ಷಣವನ್ನು ತಿಳಿಸಿ ?

ಎಲೆಗಳನ್ನು ಉದಿರಿಸುವುದಿಲ್ಲ.

ಇತರೆ ವಿಷಯಗಳು :

ಭಾರತದ ಅರಣ್ಯ ಸಂಪತ್ತಿನ ಬಗ್ಗೆ ಪ್ರಬಂಧ

ಭಾರತದ ವಾಯುಗುಣದ ಬಗ್ಗೆ ಮಾಹಿತಿ

Leave a Reply

Your email address will not be published. Required fields are marked *