ಭಾರತದ ವಾಯುಗುಣದ ಬಗ್ಗೆ ಮಾಹಿತಿ | Information About Air Quality in India in Kannada

ಭಾರತದ ವಾಯುಗುಣದ ಬಗ್ಗೆ ಮಾಹಿತಿ Information About Air Quality in India Bharatada Vayugunada Bagge Mahiti in Kannada

ಭಾರತದ ವಾಯುಗುಣದ ಬಗ್ಗೆ ಮಾಹಿತಿ

Information About Air Quality in India in Kannada

ಈ ಲೇಖನಿಯಲ್ಲಿ ಭಾರತದ ವಾಯುಗುಣದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.

ಭಾರತದ ವಾಯುಗುಣ

ಭಾರತದಲ್ಲಿ ಉಷ್ಣವಲಯದ ಮಾನ್ಸೂನ್‌ ಮಾದರಿ ವಾಯುಗಣವಿದೆ. ಏಕೆಂದರೆ ದೇಶದ ಹೆಚ್ಚು ಭಾಗವು ಉಷ್ಣವಲಯದಲ್ಲಿದೆ ಮತ್ತು ವಾಯುಗುಣವು ಹೆಚ್ಚಾಗಿ ಮಾನ್ಸೂನ್‌ ಮಾರುತಕ್ಕೆ ಒಳಪಟ್ಟಿದೆ. ಭಾರತದ ವಾಯುಗುಣದ ಮೇಲೆ ಪ್ರಭಾವ ಬೀರುವ ಪ್ರಮುಖ ಅಂಶಗಳೆಂದರೆ ಸ್ಥಾನ, ಜಲರಾಶಿಗಳು, ಮೇಲ್ಮೈ ಲಕ್ಷ ಮತ್ತು ಮಾನ್ಸೂನ್‌ ಮಾರುತಗಳು. ಹೀಗಾಗಿ ದೇಶದ ವಾಯುಗುಣವು ಪ್ರದೇಶದಿಂದ ಪ್ರದೇಶಕ್ಕೆ ಹಾಗೂ ಕಾಲದಿಂದ ಕಾಲಕ್ಕೆ ಬದಲಾಗುತ್ತದೆ.

ವಾಯುಗುಣದ ಋತುಕಾಲಗಳು

ಭಾರತದಲ್ಲಿ ಒಂದು ವರ್ಷದ ವಾಯುಗುಣವನ್ನು ೪ ಋತುಗಳಾಗಿ ವಿಂಗಡಿಸಲಾಗಿದೆ.

ಚಳಿಗಾಲ :

ಈ ಋತುಕಾಲದಲ್ಲಿ ಸೂರ್ಯನ ಲಂಬ ಕಿರಣಗಳು ದಕ್ಷಿಣ ಗೋಳಾರ್ಧದಲ್ಲಿ ಪ್ರಕಾಶಿಸುತ್ತವೆ. ಭಾರತದಲ್ಲಿ ಓರೆ ಕಿರಣಗಳಿರುತ್ತವೆ. ಹೀಗಾಗಿ ಭಾರತದಲ್ಲಿ ಕಡಿಮೆ ಉಷ್ಣಾಂಶ, ಕಡಿಮೆ ಆರ್ಧತೆ ಮತ್ತು ಆಕಾಶವು ಮೋಡ ರಹಿತವಾಗಿರುತ್ತದೆ. ದೇಶದ ಉತ್ತರದಲ್ಲಿ ತಂಪಾದ ಮತ್ತು ದಕ್ಷಿಂದಲ್ಲಿ ಬೆಚ್ಚನೆಯ ಪರಿಸ್ಥಿತಿಯಿರುತ್ತದೆ. ಜನವರಿಯಲ್ಲಿ ಅತಿಯಾದ ಚಳಿ ವಾತವರಣವು ಇರುತ್ತದೆ.

ಬೇಸಿಗೆ ಕಾಲ :

ಈ ಅವಧಿಯಲ್ಲಿ ಸೂರ್ಯನ ಲಂಬ ಕಿರಣಗಳು ಉತ್ತರ ಗೋಳಾರ್ಧದಲ್ಲಿ ಬೀಳುವುದು. ಹೀಗಾಗಿ ಭಾರತದಲ್ಲಿ ಉಷ್ಣಾಂಶವು ಹೆಚ್ಚು ಗವಾಗುಣವು ಅತಿಶಾಖ, ಶುಷ್ಕ ಮತ್ತು ಸೆಖೆಯಿಂದ ಕೂಡಿರುತ್ತದೆ. ರಾಜಸ್ಥಾನದ ಗಂಗಾನಗರದಲ್ಲಿ ಅತಿ ಹೆಚ್ಚು ಉಷ್ಣಾಂಶವು ದಾಖಲಾಗುತ್ತದೆ. ದೇಶದ ಕೆಲವು ಭಾಗಗಳಲ್ಲಿ ಪರಸರಣ ಮಳೆಯು ಬೀಳುತ್ತದೆ. ಭಾರತದ ವಾರ್ಷಿಕ ಮಳೆ ಹಂಚಿಕೆಯಲ್ಲಿ ೧೦% ಭಾಗವು ಬೇಸಿಗೆಯಲ್ಲಿ ಬೀಳುವುದು.

ಮಳೆಗಾಲ :

ಇದನ್ನು “ನೈಋತ್ಯ ಮಾನ್ಸೂನ್‌ ಮಾರುತಗಳ ಕಾಲ” ಎಂತಲೂ ಕರೆಯಲಾಗಿದೆ. ಬೇಸಿಗೆಯ ಅಂತ್ಯಾವಧಿಯಿಂದ ಉಷ್ಣಾಂಶವು ಹೆಚ್ಚಾಗುವುದರಿಂದ ಭಾರತದ ಮಧ್ಯಭಾಗದಲ್ಲಿ ಕಡಿಮೆ ಒತ್ತಡ ಪ್ರದೇಶವು ನಿರ್ಮಾಣವಾಗುತ್ತದೆ. ಇದಕ್ಕೆ ಪ್ರತಿಯಾಗಿ ಹಿಂದೂಸಾಗರದಲ್ಲಿ ಅಧಿಕ ಒತ್ತಡವಿರುತ್ತದೆ. ಆದ್ದರಿಂದ ತೇವಾಂಶಭರಿತ ಮಾರುತಗಳು ನೈರುತ್ಯದಿಂದ ಭಾರತದೆಡೆಗೆ ಬೀಸುತ್ತದೆ. ಬಂಗಾಳಕೊಲ್ಲಿಯ ಶಾಖೆಯ ಮೆಘಾಲಯ ಮತ್ತು ಅಸ್ಸಾಂನ ಬೆಟ್ಟಗಳಿಂದ ತಡೆಯಲ್ಪಡುವುದರಿಂದ ಅಧಿಕ ಮಳೆ ಬೀಳುತ್ತದೆ. ಮೇಘಾಲಯದ “ಮೌಸಿನ್‌ರಾಮ್” ನಲ್ಲಿ ಭಾರತದಲ್ಲೇ ಅತಿ ಹೆಚ್ಚು ಮಳೆ ಬೀಳುತ್ತದೆ.

ಮಾನ್ಸೂನ್‌ ಮಾರುತಗಳ ನಿರ್ಗಮನ ಕಾಲ :

ಅಕ್ಟೋಬರ್‌ ತಿಂಗಳ ಆರಂಭದಲ್ಲಿ ಉಷ್ಣಾಂಶವು ಕಡಿಮೆಯಾಗುವುದರಿಂದ ಭೂ ಭಾಗದಲ್ಲಿ ಕಡಿಮೆ ಒತ್ತಡ ಪ್ರದೇಶವು ಕ್ರಮೇಣ ಕ್ಷೀಣಗೊಂಡು ಅಲ್ಲಿ ಅಧಿಕ ಒತ್ತಡ ಪ್ರದೇಶವು ನಿರ್ಮಾಣಗೊಳ್ಳುವುದು. ಬಂಗಾಳಕೊಳ್ಳಿಯಲ್ಲಿ ಕಡಿಮೆ ಒತ್ತಡ ಪ್ರದೇಶವು ನಿರ್ಮಾಣವಾಗುವುದು. ಪರಿಣಾಮವಾಗಿ ನೈಋತ್ಯ ಮಾನ್ಸೂನ್‌ ಮಾರುತಗಳು ಹಿಂದಿರುಗುತ್ತವೆ. ಅವು ಈಶಾನ್ಯದಿಂದ ನೈಋತ್ಯದ ಕಡೆಗೆ ಬೀಸುವವು. ಹೀಗಾಗಿ ಈ ಅವಧಿಯನ್ನು ಈಶಾನ್ಯ ಮಾನ್ಸೂನ್‌ ಮಾರುತಗಳ ಕಾಲ ಎಂದು ಕರೆಯಲಾಗಿದೆ.

FAQ

ಭಾರತದಲ್ಲಿ ಅತಿ ಹೆಚ್ಚು ಮಳೆ ಬೀಳುವ ಪ್ರದೇಶ ಯಾವುದು ?

ಮೇಘಾಲಯದ “ಮೌಸಿನ್‌ರಾಮ್”.

ಕರ್ನಾಟಕದ ಚಿರಾಪುಂಜಿ ಯಾವುದು ?

ಆಗುಂಬೆ.

ಇತರೆ ವಿಷಯಗಳು :

ಮಂದಗಾಮಿ ಯುಗದ ಬಗ್ಗೆ ಮಾಹಿತಿ

ಬಾಲ್ಯ ವಿವಾಹದ ಬಗ್ಗೆ ಮಾಹಿತಿ

Leave a Reply

Your email address will not be published. Required fields are marked *