ಭಾರತದ ಅರಣ್ಯ ಸಂಪತ್ತಿನ ಬಗ್ಗೆ ಪ್ರಬಂಧ | Essay on Forest Wealth of India in Kannada

ಭಾರತದ ಅರಣ್ಯ ಸಂಪತ್ತಿನ ಬಗ್ಗೆ ಪ್ರಬಂಧ Essay on Forest Wealth of India Baratada Aranya Sampattina Bagge Prabandha in kannada

ಭಾರತದ ಅರಣ್ಯ ಸಂಪತ್ತಿನ ಬಗ್ಗೆ ಪ್ರಬಂಧ

Essay on Forest Wealth of India in Kannada
Essay on Forest Wealth of India in Kannada

ಈ ಲೇಖನಿಯಲ್ಲಿ ಭಾರತದ ಅರಣ್ಯ ಸಂಪತ್ತಿನ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.

ಪೀಠಿಕೆ

ವೃಕ್ಷ ಮತ್ತು ಇತರೆ ಸಸ್ಯ ಸಂಕುಲಗಳಿಂದ ಆವರಿಸಿದ ವಿಶಾಲ ಭೂಭಾಗವನ್ನು ಅರಣ್ಯ ಅಥವಾ ಕಾಡು ಎಂದು ಕರೆಯಲಾಗುತ್ತದೆ. ಇದು ಸಾಮಾನ್ಯವಾಗಿ ಬೆಲೆ ಬಾಳುವ ವೃಕ್ಷ ಪ್ರಧಾನ ಪ್ರದೇಶ. ಅರಣ್ಯಗಳು ನೈಸರ್ಗಿಕ ಅಥವಾ ಮಾನವ ಘೋಷಿತ ನೆಡು ತೋಪುಗಳಾಗಿರಬಹುದು.

ವಿಷಯ ವಿವರಣೆ

ಅರಣ್ಯಗಳು ಭಾರತದ ನೈಸರ್ಗಿಕ ಸಂಪನ್ಮೂಲಗಳಲ್ಲಿ ಒಂದಾಗಿವೆ. ಅವು ಪ್ರತ್ಯಕ್ಷವಾಗಿ ಮರದ ವಸ್ತುಗಳನ್ನು ಪೂರೈಸುತ್ತವೆ. ಅವು ಸೌದೆ ಚೌಬೀನೆ ಮತ್ತು ಕೈಗಾರಿಕಾ ಕಚ್ಚಾಪದಾರ್ಥಗಳಾಗಿ ಬಳಕೆಯಾಗುವವು. ಅರಣ್ಯಗಳು ಜಾನುವಾರುಗಳಿಗೆ ಬೇಕಾದ ಮೇವು ಮತ್ತು ಜನರಿಗೆ ಉದ್ಯೋಗಾವಕಾಶವನ್ನು ಕಲ್ಪಿಸುತ್ತವೆ. ಅರಣ್ಯಗಳು ಪರೋಕ್ಷವಾಗಿ ಮೇಲ್ಮೈ ಲಕ್ಷಣಗಳನ್ನು ಸಂರಕ್ಷಿಸುತ್ತವೆ. ಹರಿಯುವ ನೀರಿನ ರಭಸವನ್ನು ಮಿತಗೊಳಿಸಿ, ಪ್ರವಾಹ ಮತ್ತು ಮಣ್ಣಿನ ಸವೆತವನ್ನು ನಿಯಂತ್ರಿಸುತ್ತವೆ. ಮರುಭೂಮಿಕರಣವನ್ನು ತಡೆಯುತ್ತವೆ, ಮವಣ್ಣಿನ ಫಲವತ್ತತೆಯ ವೃದ್ದಿಗೆ ನೆರವಾಗುತ್ತವೆ. ವಾಯುಗುಣವನ್ನು ಸಮತೋಲನ ಗೊಳಿಸಲು ಮತ್ತು ಪರಿಯಾವರಣ ಸಮತೋಲನವನ್ನು ಕಾಪಾಡಲು ನೆರವಾಗುತ್ತವೆ. ಅವು ವನ್ಯ ಜೀವಿಗಳಿಗೆ ಆಶ್ರಯ ನೀಡುತ್ತವೆ.

ಅರಣ್ಯಗಳ ವಿಧಗಳು

ಭಾರತದಲ್ಲಿ ಅರಣ್ಯಗಳ ವಿಧಗಳನ್ನು ನಿರ್ಧರಿಸುವ ಅಂಶಗಳೆಂದರೆ ವಾಯುಗುಣ, ಮಣ್ಣು ಮತ್ತು ಮೇಲ್ಮೈ ಲಕ್ಷಣಗಳು. ಇವುಗಳಲ್ಲಿ ವಾಯುಗುಣ ಅತಿ ಪ್ರಮುಖವಾದ ಅಂಶವಾಗಿದೆ. ವಿಶಾಲವಾದ ಭಾರತದಲ್ಲಿ ಅನೇಕ ವಿಧದ ಅರಣ್ಯಗಳಿವೆ. ಅವುಗಳನ್ನು ೬ ಪ್ರಮುಖ ವಿಧಗಳಾಗಿ ವಿಂಗಡಿಸಬಹುದು.

ಉಷ್ಣ ವಲಯದ ನಿತ್ಯ ಹರಿದ್ವರ್ಣದ ಕಾಡುಗಳು :

ಈ ವಿಧದ ಅರಣ್ಯಗಳು ೨೫೦ ಸೆಂ. ಮೀ. ಗಳಿಗಿಂತ ಹೆಚ್ಚು ವಾರ್ಷಿಕ ಮಳೆಯಾಗುವ ಭಾಗಗಳಲ್ಲಿ ಕಂಡುಬರುತ್ತವೆ. ಅವು ಪ್ರಮುಖವಾಗಿ ಪಶ್ಚಿಮ ಘಟ್ಟಗಳ ಪಶ್ಚಿಮ ಭಾಗ ಹಾಗೂ ಈಶಾನ್ಯ ರಾಜ್ಯಗಳಾದ ಅಸ್ಸಾಂ, ನಾಗಲ್ಯಾಂಡ್‌, ಮೆಘಾಲಯ, ತ್ರಿಪುರ, ಮಣಿಪುರಗಳ ಬೆಟ್ಟಗಳು ಮತ್ತು ಅಂಡಮಾನ್‌ – ನಿಕೋಬಾರ್‌ ದ್ವೀಪಗಳಲ್ಲಿ ಹಂಚಿಕೆಯಾಗಿವೆ. ಈ ಕಾಡುಗಳು ದಟ್ಟವಾಗಿವೆ. ಮತ್ತು ಇಲ್ಲಿ ಮರಗಳು ಎತ್ತರಕ್ಕೆ ಬೆಳೆಯುತ್ತವೆ. ಮರಗಿಡಗಳು ಯಾವುದೇ ಒಂದೇ ಅವಧಿಯಲ್ಲಿ ಎಲೆಗಳನ್ನು ಉದುರಿಸುವುದಿಲ್ಲ. ಹೀಗಾಗಿ ಅವು ಸದಾ ಹಸಿರಾಗುತ್ತವೆ. ತೇಗ, ಬೀಟೆ, ಎಬೋನಿ, ಮಹಾಗನಿ, ಗುರ್ಜಾನ್‌ ಮತ್ತು ಚಂಪ ಇಲ್ಲಿ ಬೆಳೆಯುವ ಪ್ರಮುಖ ಮರಗಳಾಗಿವೆ.

ಉಷ್ಣವಲಯದ ಎಲೆ ಉದುರಿಸುವ ಕಾಡುಗಳು :

ಇವುಗಳನ್ನು ಪರ್ಣಪಾತಿ ಅರಣ್ಯ ಎಂತಲೂ ಕರೆಯುತ್ತಾರೆ. ಇವು ವರ್ಷದಲ್ಲಿ ೧೦೦ – ೨೦೦ ಸೆಂ. ಮೀ ಮಳೆಯಾಗುವ ಭಾಗಗಳಲ್ಲಿ ಕಂಡುಬರುತ್ತದೆ. ದೇಶದ ವಿಶಾಲವಾದ ಪ್ರದೇಶದಲ್ಲಿ ಹಂಚಿಕೆಯಾಗಿದೆ. ಮುಖ್ಯವಾಗಿ ಪಶ್ಚಿಮ ಘಟ್ಟಗಳ ಪೂರ್ವ ಇಳಿಜಾರು ಭಾಗಗಳನ್ನೋಳಗೊಂಡ ಮಹಾರಾಷ್ಟ್ರ, ಕರ್ನಾಟಕ, ಕೇರಳ ಮತ್ತು ತಮಿಳುನಾಡು ರಾಜ್ಯಗಳು ಹಾಗೂ ಛೋಟಾನಾಗಪುರ ಪ್ರಸ್ಥಭೂಮಿ, ಹಿಮಾಲಯದ ಪಾದ ಭಾಗಗಳು, ಒಡಿಶಾ ಮತ್ತು ಪಶ್ಚಿಮ ಬಂಗಾಳಗಳ ಕೆಲಭಾಗಗಳಲ್ಲಿ ಹಂಚಿಕೆಯಾಗಿದೆ.

ಈ ಅರಣ್ಯಗಳ ಮರಗಳು ವಸಂತಋತು ಮತ್ತು ಬೇಸಿಗೆಯ ಆರಂಭದಲ್ಲಿ ತಮ್ಮ ಎಲೆಗಳನ್ನು ಉದುರಿಸುತ್ತವೆ. ಹೀಗಾಗಿ ಇವುಗಳನ್ನು ಮಾನ್ಸೂನ್‌ ಕಾಡುಗಳು ಎಂತಲೂ ಕರೆಯಲಾಗಿದೆ. ಇಲ್ಲಿ ಬೆಳೆಯುವ ಪ್ರಮುಖ ಮರಗಳೆಂದರೆ ತೇಗ, ಸಲೆ, ಶ್ರೀಗಂಧ, ಕೆಂದಾಳ, ತಪಸಿಮರ, ಮತ್ತಿ, ದೊಡ್ಡಬಾಗೆ, ಮಾವು, ಬೇವು, ಹುಣಸೆ ಇನ್ನು ಮುಂತಾದವುಗಳು.

ಕುರುಚಲು ಸಸ್ಯ ಮತ್ತು ಹುಲ್ಲುಗಾವಲು :

ಇಂತಹ ಸಸ್ಯ ವರ್ಗವು ೬೦ – ೧೦೦ ಸೆಂ. ಮೀ. ವಾರ್ಷಿಕ ಮಳೆ ಬೀಳುವ ಭಾಗಗಳಲ್ಲಿ ಕಂಡುಬರುತ್ತವೆ. ಕುರುಚಲು ಗಿಡ ಮರ ಮತ್ತು ಕುಬ್ಜ ಒರಟಾದ ಹುಲ್ಲು, ಮುಳ್ಳಿನ ಮರ ಗಿಡಗಳು ಅಲ್ಲಲ್ಲಿ ಚದುರಿದಂತೆ ಬೆಲೆಯುತ್ತವೆ. ಅವು ಕಚ್‌ ಮತ್ತು ಥಾರ್‌ ಮರುಭೂಮಿಯ ಅಂಚಿನ ಭಾಗಗಳಲ್ಲಿ ಕಂಡುಬರುತ್ತವೆ. ಹುಲ್ಲುಗಾವಲು ಪ್ರಮುಖವಾಗಿ ರಾಜಸ್ತಾನದ ಪೂರ್ವಭಾಗ, ಪಂಜಾಬ್‌, ಪಶ್ಚಿಮ ಘಟ್ಟಗಳ ಕೆಲಭಾಗ ಮತ್ತು ಕಾರ್ಡಮನ್‌ ಬೆಟ್ಟಗಳಲ್ಲಿ ಕಂಡುಬರುತ್ತದೆ.

ಮರುಭೂಮಿ ಸಸ್ಯವರ್ಗ :

ಇದು ೧೦ – ೫೦ ಸೆಂ. ಮೀ. ವಾರ್ಷಿಕ ಮಳೆಯಾಗುವ ಭಾಗಗಳಲ್ಲಿ ಕಂಡುಬರುತ್ತದೆ. ಉದಾ – ಥಾರ್‌ ಮರುಭೂಮಿ. ಇದರಲ್ಲಿ ರಾಜಸ್ತಾನ್‌, ಪಂಜಾಬ್‌ ಮತ್ತು ಹರಿಯಾಣಗಳ ಕೆಲ ಭಾಗಗಳು ಮತ್ತು ದಖನ್‌ ಪ್ರಸ್ಥಭೂಮಿಗಳು ಸೇರುತ್ತವೆ. ಮಳೆಯ ಕೊರತೆಯಿಂದಾಗಿ ಈ ಭಾಗಗಳಲ್ಲಿ ಅಲ್ಲಲ್ಲಿ ಚದುರಿದಂತೆ ಮರಗಳು ಮುಳ್ಳಿನ ಗಿಡಗಂಟಿಗಳು ಬೆಳೆಯುತ್ತವೆ. ಕಗ್ಗಲಿ, ಗೊಬ್ಬಳಿ, ಕಳ್ಳಿ, ಖರ್ಜೂರ, ತಾಳೆ ಮರಗಳು ಇಲ್ಲಿ ಕಂಡುಬರುತ್ತವೆ.

ಪರ್ವತ ಕಾಡುಗಳು :

ಪರ್ವತಗಳ ಇಳಿಜಾರುಗಳಲ್ಲಿ ಬೆಳೆಯುವ ಸಸ್ಯ ಮತ್ತು ಮರಗಳನ್ನು ಪರ್ವತ ಕಾಡುಗಳು ಎನ್ನುವರು. ಅವು ಭಾರತದಲ್ಲಿ ಹಿಮಾಲಯ ಪರ್ವತಗಳು ಹಾಗು ಸ್ವಲ್ಪಮಟ್ಟಿಗೆ ನೀಲಗಿರಿ ಬೆಟ್ಟಗಳಲ್ಲಿ ಕಂಡುಬರುತ್ತವೆ. ಇಲ್ಲಿ ಬೆಳೆಯುವ ಪ್ರಮುಖ ಮರಗಳೆಂದರೆ ಓಕ್, ಚೆಸ್ಟನಟ್‌, ಆಶ್‌, ಬೀಚ್‌, ಫೈನ್‌, ಸಡಾರ್‌, ಸ್ಪ್ರೂಸ್‌, ಫರ್‌ ಮತ್ತು ವಾಲ್ ನೆಟ್‌ ಇನ್ನು ಮುಂತಾದವುಗಳು.

ಮ್ಯಾಂಗ್ರೋವ್‌ ಕಾಡುಗಳು :

ಇಂತಹ ಕಾಡುಗಳು ಅಧಿಕ ಮಳೆ ಬೀಳುವ ಜವುಗು ಪ್ರದೇಶ, ನದಿಮುಖಜ ಭೂಮಿ ಮತ್ತು ಉಬ್ಬರವಿಳಿತಗಳುಳ್ಳ ಸಮುದ್ರ ತೀರಗಳಲ್ಲಿ ಕಂಡುಬರುತ್ತದೆ. ಭಾರತದಲ್ಲಿ ಪೂರ್ವ ಕರಾವಳಿಯ ನದಿಮುಖಜ ಭೂಮಿಗಳಲ್ಲಿ ಹೆಚ್ಚು ಕಂಡುಬರುತ್ತವೆ. ಸ್ವಲ್ಪಮಟ್ಟಿಗೆ ಅಲ್ಲಲ್ಲಿ ಚದುರಿದಂತೆ ಪಶ್ಚಿಮ ಕರಾವಳಿಯಲ್ಲಿ ಕಂಡು ಬರುವವು. ಇಲ್ಲಿ ಬೆಲೆಯು ಪ್ರಮುಖ ಮರಗಳು ಸುಂದರಿ, ಬೆತ್ತ, ಜರಿಗಿಡ, ತಾಳೆ, ಕೆಂದಾಳೆ, ಕೇದಿಗೆ ಮುಂತಾದವು. ವಿಶೇಷವೆಂದರೆ ಸಮುದ್ರದ ಕಡೆಗೆ ಬಾಗಿರುವ ಕೊಂಬೆಗಳಿಂದ ಬೆಳೆದಿರುವ ಬಿಳಿಲುಗಳು ಮರಗಳಿಗೆ ಆಧಾರವಾಗಿರುತ್ತವೆ. ಬಿಳಿಲುಗಳು. ಸಮದ್ರದ ನೀರಿನಲ್ಲಿ ಮುಳುಗಿರುತ್ತದೆ.

ಉಪಸಂಹಾರ

ಅರಣ್ಯಗಳು ಭಾರದ ರಾಷ್ಟ್ರೀಯ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ದುರ್ದೈವದ ಸಂಗತಿ ಎಂದರೆ ಇತ್ತೀಚಿನ ವರ್ಷಗಳಲ್ಲಿ ಅರಣ್ಯಗಳ ಕ್ಷೇತ್ರವು ಕಡಿಮೆಯಾಗುತ್ತಿದೆ. ಇದನ್ನು ಗಮನರ್ಹವಾಗಿ ತೆಗೆದುಕೊಂಡು ಅರಣ್ಯವನ್ನು ರಕ್ಷಿಸುವುದು ಮುಖ್ಯವಾಗಿದೆ. ಅರಣ್ಯವಿಲ್ಲದೆ ಜೀವಸಂಕುಲವಿಲ್ಲ.

FAQ

ಅರಣ್ಯಗಳ ವಿದಗಳನ್ನು ತಿಳಿಸಿ ?

ಉಷ್ಣ ವಲಯದ ನಿತ್ಯ ಹರಿದ್ವರ್ಣದ ಕಾಡುಗಳು, ಉಷ್ಣವಲಯದ ಎಲೆ ಉದುರಿಸುವ ಕಾಡುಗಳು, ಕುರುಚಲು ಸಸ್ಯ ಮತ್ತು ಹುಲ್ಲುಗಾವಲು, ಪರ್ವತ ಕಾಡುಗಳು, ಮ್ಯಾಂಗ್ರೋವ್‌ ಕಾಡುಗಳು.

ವಿಶ್ವ ಅರಣ್ಯ ದಿನವನ್ನು ಯಾವಾಗ ಆಚರಿಸುತ್ತಾರೆ ?

ಮಾರ್ಚ್‌ ೨೧

ಇತರೆ ವಿಷಯಗಳು :

ನಮ್ಮ ರಕ್ಷಣಾ ಪಡೆಗಳ ಬಗ್ಗೆ ಮಾಹಿತಿ

ಬಾಲ ಕಾರ್ಮಿಕ ಪದ್ಧತಿ ಬಗ್ಗೆ ಮಾಹಿತಿ

Leave a Reply

Your email address will not be published. Required fields are marked *