ಉದ್ಯಮಗಾರಿಕೆಯ ಬಗ್ಗೆ ಮಾಹಿತಿ Information About Entrepreneurship Udyamegarikeya Bagge Mahiti in Kannada
ಉದ್ಯಮಗಾರಿಕೆಯ ಬಗ್ಗೆ ಮಾಹಿತಿ
ಈ ಲೇಖನಿಯಲ್ಲಿ ಉದ್ಯಮಗಾರಿಕೆಯ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.
ಪೀಠಿಕೆ
ಇಂದಿನ ಆರ್ಥಿಕ ಮಾರುಕಟ್ಟೆಯ ಮುಂಚೂಣಿಯಲ್ಲಿ ಉದ್ಯಮಗಾರಿಕೆ ಪ್ರಮುಖ ಪಾತ್ರ ವಹಿಸುತ್ತದೆ. ಇದು ಪ್ರಮುಖ ಆರ್ಥಿಕ ಚಟುವಟಿಕೆಗಳಾದ ಭೂಮಿ, ದುಡಿಮೆ, ಬಂಡವಾಳ ಮತ್ತು ಸಂಘಟನೆಗಳಲ್ಲಿ ಒಂದಾಗಿದೆ. ಒಂದು ದೇಶದ ವ್ಯಾಪಾರ ಪರಿಸ್ಥಿತಿ ಮತ್ತು ಕೈಗಾರಿಕಾ ಕ್ಷೇತ್ರದ ಬದಾವಣೆಗಳಲ್ಲಿ ಪ್ರಭಲವಾದ ಅಂಶವಾಗಿದೆ.
ವಿಷಯ ವಿವರಣೆ
ಉದ್ಯಮಿ ಎಂಬ ಪದವು ಪ್ರೆಂಚ್ ಪದ ಎಂಟ್ರಪ್ರೆಂಡೆ ಯಿಂದ ಬಂದಿದೆ. ಅಂದರೆ ಒಂದು ಚಟುವಟಿಕೆಯನ್ನು ಕೈಗೆತ್ತಿಕೊಳ್ಳವವ ಎಂದಾಗಿದೆ. ಉದ್ಯಮಿಯು ಹೊಸ ಕಲ್ಪನೆಯನ್ನು ವ್ಯವಹಾರದಲ್ಲಿ ರೂಢಿಗೆ ತರುವವನಾಗಿದ್ದು, ಇವನಲ್ಲಿ ವ್ಯವಹಾರ ನಿರ್ವಹಿಸಲು ಆಡಳಿತ ನಿರ್ವಹಣೆಯ ಕೌಶಲ್ಯ ಮತ್ತು ತಂಡವನ್ನು ನಿರ್ಮಿಸಲು ಸಾಮಾರ್ಥ್ಯ ಮತ್ತು ಮುಂದಾಳತ್ವದ ಗುಣಗಳು ಇರುತ್ತವೆ.
ಉದ್ಯಮಿಯ ಯಾವುದಾದರೂ ಒಂದು ಪ್ರತಿಫಲ ಕೊಡುವ ಉದ್ದಿಮೆಯನ್ನು ಸ್ಥಾಪಿಸುವ ಅವಕಾಶಕ್ಕೆ ಕೈಹಾಕುತ್ತಾನೆ. ವ್ಯವಹಾರದ ವಿಧಾನದಲ್ಲಿ ಯಾವುದನ್ನು ಪ್ರಾರಂಭಿಸುತ್ತಾನೆ ಹಾಗೂ ಪ್ರತಿಸ್ಪಂದನೆ ನಿರ್ಣಯಿಸುತ್ತಾನೆ. ಉದ್ಯಮಿಗಳು ಹೊಸ ವಸ್ತುಗಳ ಊಹೆಮಾಡಿಕೊಂಡು ಅವುಗಳ ಮಾರಕಟ್ಟೆ ಮತ್ತು ತಾಂತ್ರಿಕತೆಗಳ ಮತ್ತು ಬದಲಾವಣೆಗಳ ಬಗ್ಗೆ ಕಲ್ಪನೆ ಮಾಡಿಕೊಡುತ್ತಾರೆ. ಒಟ್ಟಾರೆ ಹೇಳುವುದಾದರೆ ಉದ್ಯಮಿಯು ಅವಕಾಶಗಳನ್ನು ಅವಲೋಕಸಿ ಆ ಅವಕಾಶಗಳನ್ನು ಸ್ವಪ್ರಯೋಜನೆಗಳಿಗಾಗಿ ಉಪಯೋಗಿಸಿಕೊಂಡು ಅವುಗಳನ್ನು ಸದಾವಕಾಶಗಳಿಂದ ಕ್ರಮವಾಗಿ ಸಂಘಟನೆ ಮಾಡುತ್ತಾನೆ. ಉದಾಹರಣೆಗೆ ಗಣಕಯಂತ್ರಗಳು, ಮೊಬೈಲ್ ದೂರವಾಣಿಗಳು, ಬಟ್ಟೆ ಒಗೆಯುವ ಯಂತ್ರಗಳು. ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡುಗಳು, ಕೋರಿಯರ್ ಸೇವೆ ಮತ್ತು ತತಕ್ಷಣದಲ್ಲಿ ತಯಾರಿಸಬಹುದಾದ ಆಹಾರ ಪದಾರ್ಥಗಳು ಉದ್ಯಮಿಗಳ ಕಲ್ಪನೆಗಳಲ್ಲಿ ರೂಢಿಗೆ ಬಂದಿರುವುದಕ್ಕೆ ಉದಾಹರಣೆಗಳಾಗಿವೆ.
ಉದ್ಯಮಗಾರಿಕೆ
ಒಬ್ಬ ಉದ್ಯಮಿಯು ತನ್ನ ಉದ್ದಿಮೆಯನ್ನು ಸ್ಥಾಪಿಸಲು ಕೈಗೊಳ್ಳುವ ಕ್ರಿಯೆಯನ್ನು ಉದ್ಯಮಗಾರಿಕೆ ಎನ್ನುತ್ತೇವೆ. ಉದ್ಯಮಗಾರಿಕೆಯು ಒಂದು ಸೃಜನಾತ್ಮಕ ಚಟುವಟಿಕೆಯಾಗಿದೆ. ಇದು ಏನೂ ಇಲ್ಲದುದನ್ನು ಏನಾದರೊಂದಾಗಿ ಸೃಜಿಸುವ ಸಾಮಾರ್ಥ್ಯವಾಗಿದೆ. ಇದು ಬೇರೆಯವರಿಂದ ಕಷ್ಟಸಾಧ್ಯವಾದ ಗೊಂದಲಮಯ, ವಿರೋಧಾತ್ಮಕ ಮತ್ತು ಅಸ್ತವ್ಯಸ್ತತೆಯಿಂದ ಕೂಡಿದ ಒಂದು ಅವಕಾಶವನ್ನುಗರುತಿಸಿ ಅದನ್ನು ಕಾರ್ಯರೂಪಕ್ಕೆ ತರುವುದೇ ಆಗಿದೆ. ಉದ್ಯಮಗಾರಿಕೆಯು ಅವಕಾಶಗಳನ್ನು ಅನ್ವೇಷಿಸಿ ಅಥವಾ ಹುಡುಕಿ, ನಷ್ಟಗಳನ್ನು ಲೆಕ್ಕಾಚಾರ ಹಾಕಿ ಅದರಿಂದ ಲಾಭಪಡೆಯಲು ಒಂದು ಸಾಹಸಕಾರ್ಯವನ್ನು ಸ್ಥಾಪಿಸುವುದೇ ಆಗಿದೆ. ಉದ್ಯಮಗಾರಿಕೆ ಒಂದು ಕಾರ್ಯವಿಧಾನವಾಗಿದೆ. ಇದು ಕೆಲವು ಅಪರೂಪದ ಸಂಘಟನೆಗಳ ಸಂಯೋಜನೆಯಲ್ಲಿ ಉದ್ದೇಶ ಹೊಂದಿರುವ ಮತ್ತು ಸಂಘಟಿತವಾದ ಬದಲಾವಣೆಗಳಿಗಾಗಿ ಒಂದು ತತ್ವಜ್ಞಾನವಾಗಿದೆ. ಇದು ಒಬ್ಬ ಮನುಷ್ಯನು ಯೋಜಿಸುವ ಮತ್ತು ತಾಂತ್ರಿಕ ಪ್ರವೃತ್ತಿಸುವ ಕಾರ್ಯವಾಗಿದ್ದು, ವ್ಯಾಪಾರ ಸಂಸ್ಥೆಯಲ್ಲಾಗಲಿ, ಸರ್ಕಾರದಲ್ಲಾಗಲಿ, ವಿದ್ಯಾಭ್ಯಾಸ ಕ್ಷೇತ್ರದಲ್ಲಾಗಲಿ ವಿಜ್ಞಾನ ಮತ್ತು ತಾಂತ್ರಿಕತೆಯಲ್ಲಾಗಲಿ, ಬಡತನ ನಿವಾರಣೆಯಲ್ಲಾಗಲೀ ಅಥವಾ ಯಾವುದೇ ಇತರೆ ಕೆಲಸಗಳಲ್ಲಾಗಲಿ ಕಂಡು ಬರುತ್ತದೆ.
ಉದ್ಯಮಿಯ ಕಾರ್ಯಗಳು
- ಸೃಜನಾತ್ಮಕ
- ಕ್ರಿಯಾತ್ಮಕ
- ತಂಡವನ್ನು ಕಟ್ಟುವುದು.
- ಸಮಸ್ಯೆಯ ಪರಿಹಾರ
- ನಷ್ಟಭರಿತಕ್ಕೆ ಸಿದ್ದ
- ವಚನ ಬದ್ದತೆ
- ಹೊಸ ಪದ್ದತಿಯನ್ನು ರೂಢಿಗೆ ತರುವುದು.
- ನಾಯಕತ್ವ
- ಪ್ರಚೋದನೆಯ ಸಾಧನೆ
- ಗುರಿಮುಟ್ಟುವಿಕೆ
- ನಿರ್ಧಾರಗಳನ್ನು ಕೈಗೆತ್ತಿಕೊಳ್ಳುವುದು.
- ಆತ್ಮ ವಿಶ್ವಾಸ
ಉದ್ಯಮಿಯ ಕಾರ್ಯಗಳು
- ಉದ್ಯಮಿಯು ವ್ಯಾಪಾರ ಚಟುವಟಿಕೆಗಳನ್ನು ಅನೇಕ ಯೋಜನೆಗಳ ಮೂಲಕ ಪ್ರಾರಂಭಿಸುತ್ತಾನೆ.
- ಉದ್ಯಮಿಯು ಉತ್ಪಾದನಾಂಗಗಳನ್ನು ಸಂಯೋಜಿಸುತ್ತಾನೆ.
- ಉದ್ಯಮಗಾರನು ಉತ್ಪಾದಿಸುವ ವಸ್ತುಗಳ ಬಗ್ಗೆ, ತಾಂತ್ರಿಕತೆ ಬಗ್ಗೆ, ಮಾರುಕಟ್ಟೆ ಮತ್ತು ಉದ್ಯೋಗ ಮುಂತಾದವುಗಳ ಬಗ್ಗೆ ನಿರ್ಧಾರ ಕೈಗೊಳ್ಳುತ್ತಾರೆ.
- ಉದ್ಯಮಿಯು ಎಲ್ಲ ಅಂಶಗಳನ್ನು ಸಮಂಜಸವಾಗಿ ಸಂಯೋಜಿಸುತ್ತಾನೆ.
- ಉದ್ಯಮಿಯು ಹೊಸ ಹೊಸ ವಿಧಾನಗಳನ್ನು ರೂಢಿಗೆ ತರುತ್ತಾನೆ.
- ಉದ್ಯಮಿಯು ತನ್ನ ಉದ್ಯಮದ ಹಣಕಾಸಿನ ಆಯವ್ಯಯವನ್ನು ನಿಭಾಯಿಸುತ್ತಾನೆ.
- ಉದ್ಯಮಿಯು ಕಷ್ಟನಷ್ಟಗಳನ್ನು ಮತ್ತು ಅನಿಶ್ಚತೆಗಳನ್ನು ಎದುರಿಸುತ್ತಾನೆ.
- ಉದ್ಯಮಿಯು ವ್ಯಾಪಾರದ ಮಾರ್ಗಗಳನ್ನು ತಿಳಿಸಿ ಅದು ಸರಿಯಾದ ರೀತಿಯಲ್ಲಿ ಕಾರ್ಯಗತಗೊಳ್ಳುವಂತೆ ಮಾರ್ಗದರ್ಶನ ನೀಡುತ್ತಾನೆ.
ಉಪಸಂಹಾರ
ಉದ್ಯಮಿಗಳು ವ್ಯಾಪಾರದ ಧುರೀಣರಾಗಿದ್ದು ವಿವಿಧ ಅನಿಸಿಕೆಗಳನ್ನು ಗಮನಿಸಿ ಅವುಗಳನ್ನು ಕಾರ್ಯ ರೂಪಕ್ಕೆ ತಂದು ಆರ್ಥಿಕ ಪ್ರಗತಿ ಮತ್ತು ಅಭಿವೃದ್ದಿಯನ್ನು ಕೈಗೊಳ್ಳುತ್ತಾರೆ. ಭಾರತದ ಆರ್ಥಿಕ ಪ್ರಗತಿಯಲ್ಲಿ ಉದ್ಯಮಿಗಳ ಪಾತ್ರ ಬಹುಮುಖ್ಯವಾಗಿದೆ. ಇವರು ಕೈಗಾರಿಕಾ ಕೇತ್ರದ ಪರಿವರ್ತನೆಯೇ ಅಲ್ಲದೆ ವ್ಯವಸಾಯ ಮತ್ತು ಸೇವಾಕ್ಷೇತ್ರಗಳ ಅಭಿವೃದ್ದಿಯಲ್ಲೂ ಮುಖ್ಯ ಪಾತ್ರ ವಹಿಸುತ್ತಾರೆ.
FAQ
ಉದ್ಯಮಗಾರಿಕೆಯ ಲಕ್ಷಣಗಳನ್ನು ತಿಳಿಸಿ ?
ಸೃಜನಾತ್ಮಕ, ಕ್ರೀಯಾತ್ಮಕ, ವಚನ ಬದ್ದತೆ, ನಾಯಕತ್ವ, ಆತ್ಮವಿಶ್ವಾಸ ಇನ್ನು ಮುಂತಾದವುಗಳು.
ಉದ್ಯಮೆಗಾರಿಕೆಯ ಕಾರ್ಯಗಳು ಯಾವುವು ?
ಉದ್ಯಮಿಯು ಎಲ್ಲ ಅಂಶಗಳನ್ನು ಸಮಂಜಸವಾಗಿ ಸಂಯೋಜಿಸುತ್ತಾನೆ, ಉದ್ಯಮಿಯು ಹೊಸ ಹೊಸ ವಿಧಾನಗಳನ್ನು ರೂಢಿಗೆ ತರುತ್ತಾನೆ.
ಇತರೆ ವಿಷಯಗಳು :
ಬಾಲ ಕಾರ್ಮಿಕ ಪದ್ಧತಿ ಬಗ್ಗೆ ಮಾಹಿತಿ
ನಮ್ಮ ರಕ್ಷಣಾ ಪಡೆಗಳ ಬಗ್ಗೆ ಮಾಹಿತಿ