ನಮ್ಮ ರಕ್ಷಣಾ ಪಡೆಗಳ ಬಗ್ಗೆ ಮಾಹಿತಿ | Information About Our Defense Forces in Kannada

ನಮ್ಮ ರಕ್ಷಣಾ ಪಡೆಗಳ ಬಗ್ಗೆ ಮಾಹಿತಿ Information About Our Defense Forces Namma Rakshana Pwegala Bagge Mahiti in Kannada

ನಮ್ಮ ರಕ್ಷಣಾ ಪಡೆಗಳ ಬಗ್ಗೆ ಮಾಹಿತಿ

 Information About Our Defense Forces in Kannada
Information About Our Defense Forces in Kannada

ಈ ಲೇಖನಿಯಲ್ಲಿ ನಮ್ಮ ರಕ್ಷಣಾ ಪಡೆಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗುತ್ತದೆ.

ನಮ್ಮ ರಕ್ಷಣಾ ಪಡೆಗಳು

ದೇಶವನ್ನು ಪರಕೀಯರ ಆಕ್ರಮಣಗಳಿಂದ ರಕ್ಷಿಸುವುದು ರಾಷ್ಟ್ರದ ಪ್ರಥಮ ಕರ್ತವ್ಯ. ಈ ಕಾರ್ಯವನ್ನು ರಕ್ಷಣಾ ಪಡೆಗಳಿಗೆ ನೀಡಲಾಗಿದೆ. ಆದುದರಿಂದ ರಕ್ಷಣಾಪಡೆಗಳ ಪಾತ್ರ ಮಹತ್ತರವಾದುದಾಗಿದೆ. ಭಾರತವು ಶಿಸ್ತು, ಸಾಮಾರ್ಥ್ಯ ಹೊಂದಿದ ಹಾಗೂ ಪರಾಕ್ರಮಶಾಲಿಯಾದ ರಕ್ಷಣಾಪಡೆಯನ್ನು ಹೊಂದಿರುವುದು. ಹೆಮ್ಮೆಯ ವಿಷಯ. ಸ್ವಾತಂತ್ರ್ಯ ಬಂದ ಮೇಲೆ ನಮ್ಮ ದೇಶದ ಸಮಗ್ರತೆಗೆ ಸಮಾಲುಗಳುಎದುರಾದಾಗ ನಾವು ಅವನ್ನು ಸಮರ್ಥವಾಗಿ ಎದುರಿಸಿದ್ದೇವೆ.

ರಕ್ಷಣಾ ಪಡೆಗಳ ಉದ್ದೇಶ

  • ದೇಶದ ಸಮಗ್ರತೆಯನ್ನು ಕಾಪಾಡುವುದು.
  • ಕಳ್ಳಸಾಗಾಣಿಕೆ ಮತ್ತು ಕಾನೂನುಬಾಹಿರ ಚಟುವಟಿಕೆಗಳನ್ನು ತಡೆಯುವುದು.
  • ದೇಶದಲ್ಲಿ ಪ್ರತಿಯೊಂದು ಪ್ರಜೆಯೂ ಕೂಡ ಸುರಕ್ಷಿತವಾಗಿರಬೇಕು.
  • ನಮ್ಮ ದೇಶದ ಗಡಿ ಭದ್ರತೆಯನ್ನು ಕಾಪಾಡುವುದು.

ಭಾರತದ ರಕ್ಷಣಾಪಡೆಗಳು

  • ಭೂಸೇನೆ
  • ನೌಕಾದಳ
  • ವಾಯುಪಡೆ

ಭಾರತದ ರಾಷ್ಟ್ರಪತಿಯವರಿಗೆ ನಮ್ಮ ರಕ್ಷಣಾಪಡೆಗಳ ಸರ್ವೋಚ್ಚ ಅಧಿಕಾರವನ್ನು ನೀಡಲಾಗಿದೆ. ಈ ರಕ್ಷಣಾಪಡೆಗಳು ಸ್ವಾತಂತ್ರ್ಯೋತ್ಸವ ಮತ್ತು ಗಣರಾಜ್ಯೋತ್ಸವ ಪರೇಡ್ ನಲ್ಲಿ ಪಾಲ್ಗೊಂಡು ತಮ್ಮ ಸೇನಾ ಸಾಮಾರ್ಥ್ಯವನ್ನು ಪ್ರದರ್ಶಿಸುತ್ತವೆ.

ರಕ್ಷಣಾಪಡೆಗಳಲ್ಲಿ ತಮ್ಮ ಸಾಮಾರ್ಥ್ಯಗಳನ್ನು ಮೆರೆಯಲು ತರಬೇತಿ ಕೇಂದ್ರಗಳಿವೆ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ, ರಾಷ್ಟ್ರೀಯ ರಕ್ಷಣಾ ಕಾಲೇಜು, ನವದೆಹಲಿ, ಉದಕಮಂಡಲ, ಡೆಹರಾಡೂನ್‌ ಇನ್ನು ಮುಂತಾದವುಗಳು.

೧. ಭೂಪಡೆ

ಭಾರತದ ಭೂಸೇನೆಯು ವಿಶ್ವದಲ್ಲಿಯೇ ಎರಡನೇ ಅತಿದೊಡ್ಡ ಭೂಸೇನಾಪಡೆಯಾಗಿದೆ. ಭೂಸೇನೆಯು ಪದಾತಿದಳ, ಅಶ್ವದಳ, ಒಂಟೆದಳ ಮತ್ತು ಯುದ್ದ ಟ್ಯಾಂಕರಗಳನ್ನು ಹೊಂದಿದೆ. ಭೂಸೇನೆ ಮುಖ್ಯಸ್ಥರನ್ನು ದಂಡನಾಯಕ ಅಥವಾ ಜನರಲ್‌ ಎಂದು ಕರೆಯುವರು. ಇವರು ಸೇನೆಯ ನಿಯಂತ್ರಣ, ತರಬೇತಿ, ಕಾರ್ಯಾಚರಣೆ ಮತ್ತು ಆಡಳಿತ ವ್ಯವಸ್ಥೆಯನ್ನು ಹೊಸದಿಲ್ಲಿಯಲ್ಲಿರುವ ಭೂಸೇನೆಯ ಪ್ರಧಾನ ಕಚೇರಿಯಿಂದ ನಿರ್ವಹಿಸುತ್ತಾರೆ.

ದೇಶದ ಗಡಿಗಳ ರಕ್ಕಷಣೆಯ ಜೊತೆಗೆ ನೈಸರ್ಗಿಕ ವಿಕೋಪಗಳಾದ ಭೂಕಂಪ, ಪ್ರವಾಹ, ಬರಗಾಲ, ಭೂಕುಸಿತ, ಬಿರುಗಾಳಿ ಮುಂತಾದ ಸಂಧರ್ಭದಲ್ಲಿ ಮಾನವೀಯ ಕಾರ್ಯವನ್ನು ಭೂಸೇನೆಯು ನಿರ್ವಹಿಸುತ್ತದೆ.

೨. ನೌಕಾಪಡೆ

ಕರಾವಳಿ ತೀರವನ್ನು ಹಾಗೂ ದ್ವೀಪಗಳನ್ನು ರಕ್ಷಿಸಲು ನೌಕಾದಳದ ಅಗತ್ಯವಿದೆ. ಭಾರತದ ನೌಕಾದಳವು ಜಗತ್ತಿನಲ್ಲಿ ೬ ನೇ ಅತಿ ದೊಡ್ಡ ನೌಕಾದಳವಾಗಿದೆ. ಅದರ ಮುಖ್ಯಸ್ಥರನ್ನು ಆಡ್ಮಿರಲ್‌ ಎಂದು ಕರೆಯುತ್ತಾರೆ. ನೌಕದಳದ ಮುಖ್ಯ ಕಛೇರಿ ಹೊಸದಿಲ್ಲಿಯಲ್ಲಿದೆ.

ನೌಕಾದಳವು ಆಧುನಿಕ ಮಾದರಿಯ ಕ್ಷೀಪಣಿ ಹಡಗುಗಳು ಮತ್ತು ಜಲಾಂತರ್ಗಾಮಿಗಳನ್ನು ಹೊಂದಿದೆ. ಅವುಗಳಲ್ಲಿ I N S ವಿಭೂತಿ ಮತ್ತು I N S ಗೋದಾವರಿ, ಪ್ರಮುಖವಾದವುಗಲಾಗಿವೆ. ಕರ್ನಾಟಕದ ಕಾರವಾರದಲ್ಲಿ “ಸೀಬರ್ಡ” ನೌಕಾ ನೆಲೆಯನ್ನು ಸ್ಥಾಪಿಸಲಾಗಿದೆ.

೩. ವಾಯುಪಡೆ

ಭಾರತವು ಪ್ರಪಂಚದಲ್ಲಿಯೇ ೫ನೇ ಅತಿ ದೊಡ್ಡ ವಾಯುಪಡೆಯನ್ನು ಹೊಂದಿದೆ. ಇದರ ಮುಖ್ಯಸ್ಥರನ್ನು ಏರ್‌ ಚೀಫ ಮಾರ್ಷಲ್‌ ಎನ್ನುವರು. ಇದರ ಕೇಂದ್ರ ಕಚೇರಿ ಹೊಸದಿಲ್ಲಿಯಲ್ಲಿದೆ. ಆಡಳಿತ ಅನುಕೂಲಕ್ಕಾಗಿ ವಾಯುಪಡೆಯನ್ನು ೫ ಕಮಾಂಡರಾಗಿ ವಿಂಗಡಿಸಲಾಗಿದೆ.

ಬೆಂಗಳೂರು, ಹೈದರಾಬಾದ್‌ ಮತ್ತು ದಿಂಡಿಗಲ್ ನಲ್ಲಿ ( ತಮಿಳುನಾಡು ) ವಾಯುಪಡೆಗೆ ತರಬೇತಿ ನೀಡುವ ಪ್ರಮುಖ ಕೇಂದ್ರಗಳಿವೆ. ವಾಯುಪಡೆಯು ತಂತ್ರಜ್ಞಾನದ ಅಳವಡಿಕೆಯಿಂದ ಅನೇಕ ಹೊಸ ಯುದ್ದ ವಿಮಾನಗಳನ್ನು ಹೊಂದಿ ಶಸ್ತ್ರಸನ್ನದ್ದವಾಗಿದೆ.

ನಮ್ಮ ರಕ್ಕಣಾ ಪಡೆಗಳು ಬಲಾಡ್ಯಾವಾಗಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿಯಾಗಿದೆ.

FAQ

ರಾಷ್ಟ್ರೀಯ ಸೇನಾ ದಿನವನ್ನು ಯಾವಾಗ ಆಚರಿಸುತ್ತಾರೆ ?

ಜನವರಿಬ ೧೫

ಭಾರತೀಯ ನೌಕಾದಿನವನ್ನು ಯಾವಾಗ ಅಚರಿಸುತ್ತಾರೆ ?

ಡಿಸೆಂಬರ್‌ ೪

ಭಾರತೀಯ ವಾಯುಪಡೆ ದಿನವನ್ನು ಯಾವಾಗ ಆಚರಿಸುತ್ತಾರೆ ?

ಅಕ್ಟೋಬರ್‌ ೮

ವಿಶ್ವ ಭೂದಿನವನ್ನು ಯಾವಾಗ ಆಚರಿಸುತ್ತಾರೆ ?

ಮಾರ್ಚ್‌ ೨೨

ಇತರೆ ವಿಷಯಗಳು :

ಕಂಪ್ಯೂಟರ್ ಬಗ್ಗೆ ಪ್ರಬಂಧ

ಸಂವಿಧಾನದ ರಚನೆಯ ಬಗ್ಗೆ ಮಾಹಿತಿ

Leave a Reply

Your email address will not be published. Required fields are marked *