ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ಮಾಹಿತಿ | Information About India’s First War of Independence in Kannada

ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ಮಾಹಿತಿ Information About India’s First War of Independence Bharatada Swatantra Sangrama Mahiti in Kannada

ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ಮಾಹಿತಿ

Information About India's First War of Independence in Kannada
Information About India’s First War of Independence in Kannada

ಈ ಲೇಖನಿಯಲ್ಲಿ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.

ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ

ಆಧುನಿಕ ಭಾರತದ ಇತಿಹಾಸದಲ್ಲಿ ಸಾ. ಶ ೧೮೫೭ ರ ವರ್ಷ ಒಂದು ಪ್ರಮುಖ ಐತಿಹಾಸಿಕ ಮೈಲಿಗಲ್ಲಾಗಿದೆ. ಬ್ರಿಟಿಷರು ಸಾ. ಶ. ೧೮೫೭ ರ ಐತಿಹಾಸಿಕ ಘಟನೆಯನ್ನು ಕೇವಲ ಸಿಪಾಯಿಗಳ ದಂಗೆ ಎಂದು ಪರಿಗಣಿಸಿದರೆ, ಭಾರತೀಯ ರಾಷ್ಟ್ರೀಯವಾದಿಗಳು ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಎಂದು ಸಾರಿದರು. ಇದು ಬ್ರಿಟಿಷ್‌ ಸಾಮ್ರಾಜ್ಯಶಾಹಿ ವಿರುದ್ದ ನಡೆದ ಮಹಾಹೋರಾಟವಾಗಿತ್ತು. ಸಿಪಾಯಿಗಳು ಮತ್ತು ನಾಗರಿಕರು ಸಾಮ್ರಾಜ್ಯಶಾಹಿ ಧೋರಣೆಗಳನ್ನು ಬೇರು ಸಮೇತ ಕಿತ್ತೋಗೆಯಲು ಬಯಸಿದರು.

ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೆ ಕಾರಣಗಳು

ಬ್ರಿಟಿಷರು ದೀರ್ಘಾವಧಿಯ ಆಡಳಿತದಿಂದ ಭಾರತದ ಆರ್ಥಿಕ ವ್ಯವಸ್ಥೆಯು ದುರ್ಬಲಗೊಂಡಿತ್ತು. ಜನತೆಯು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದರು. ರೈತರು ತೆರಿಗೆಗಳ ಭಾರಕ್ಕೆ ಕುಸಿದಿದ್ದರು. ಕರಕುಶಲ ಕೈಗಾರಿಕೆಗಳು ನಾಶವಾಗತೊಡಗಿ, ಪರಂಪರಾಗತವಾಗಿ ನಂಬಿಕೊಂಡು ಬಂದಿದ್ದ ವೃತ್ತಿಗಳು ಶಕ್ತಿಯನ್ನು ಕಳೆದುಕೊಂಡು ಜನರು ಬೀದಿಪಾಲಾದರು. ಹೀಗಾಗಿ ಬ್ರಿಟಿಷರ ವಿರುದ್ದ ಸಂಗ್ರಾಮಕ್ಕೆ ಅಣಿಯಾದರು. ಈ ಹೋರಾಟಕ್ಕೆ ಪ್ರೇರಣೆಯಾದ ಅಂಶಗಳನ್ನು ರಾಜಕೀಯ, ಅರ್ಥಿಕ, ಸಾಮಾಜಿಕ, ಧಾರ್ಮಿಕ, ಆಡಳಿತಾತ್ಮಕ ಮತ್ತು ಸೈನಿಕ ಕಾರಣಗಳೆಂದು ವಿಂಗಡಿಸಬಹುದು.

ರಾಜಕೀಯ ಕಾರಣ :

ಲಾರ್ಡ್‌ ವೆಲ್ಲೆಸ್ಲಿಯ ಸಹಾಯಕ ಸೈನ್ಯ ಪದ್ದತಿ ಮತ್ತು ಲಾರ್ಡ್‌ ಡಾಲ್‌ ಹೌಸಿಯ ದತ್ತುಮಕ್ಕಳಿಗೆ ಹಕ್ಕಿಲ್ಲ ವೆಂಬ ನೀತಿಗಳೊಂದಾಗಿ ಅನೇಕ ಅರಸರು ಮತ್ತು ನವಾಬರು ಪದಚ್ಯುತಿಗೊಳ್ಳುವಂತಾಯಿತು. ಸತಾರ, ಜೈಪುರ, ಸಂಬಲ್‌ ಪುರ, ಉದಯಪುರ, ಝಾನ್ಸಿ, ಅವದ್‌ ಇವೆ ಮೊದಲಾದ ಪ್ರದೇಶಗಳು ಡಾಲ್‌ ಹೌಸಿಯ ನೀತಿಗೆ ಬಲಿಯಾದ ರಾಜ್ಯಗಳು, ಅಲ್ಲದೆ ಕೆಲವು ರಾಜರ ವಿಶ್ರಾಂತಿ ವೇತನ ತಡೆಹಿಡಿಯಲಾಯಿತು. ರಾಜರ ಬಿರುದುಗಳು ರದ್ದಾದವು. ಇವು ಸಹಜವಾಗಿಯೇ ಭಾರತೀಯ ಆಳುವ ವರ್ಗ ಮತ್ತು ಜನರ ಭಾವನೆಗಳಿಗೆ ಆಘಾತವನ್ನುಂಟು ಮಾಡಿತು.

ಆಡಳಿತಾತ್ಮಕ ಕಾರಣ :

ಬ್ರಿಟಿಷರು ಎಲ್ಲಾ ನಾಗರಿಕ ಮತ್ತು ಸೈನಿಕ ಉನ್ನತ ಹುದ್ದೆಗಳನ್ನು ಯೂರೋಪಿಯನ್ನರಿಗೆ ಮೀಸಲಿಡುವ ಉದ್ದೇಶದಿಂದ ಹೊಸ ಆಡಳಿತ ವ್ಯವಸ್ಥೆಯನ್ನು ರೂಪಿಸಿದರು. ಆಡಳಿತದಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿತ್ತು. ಕಾನೂನಿನ ಆಳ್ವಿಕೆಯು ಸಾಮಾಜಿಕ ಶ್ರೇಣಿ ವ್ಯವಸ್ಥೆಯ ಕುಸಿತಕ್ಕೆ ದಾರಿ ಮಾಡಿಕೊಟ್ಟಿತು. ಪರ್ಷಿಯನ್‌ ಭಾಷೆಗೆ ಬದಲಾಗಿ ಇಂಗ್ಲಿಷ್‌ ನ್ಯಾಯಾಲಯದ ಭಾಷೆಯಾಗಿದ್ದು ಜನತೆಗೆ ಮತ್ತು ಭಾರತೀಯ ಆಳುವ ವರ್ಗಕ್ಕೆ ಸರಿಹೊಂದಲಿಲ್ಲ.

ಆರ್ಥಿಕ ಕಾರಣ :

ಬ್ರಿಟಿಷರು ತಮ್ಮ ಲಾಭಕ್ಕಾಗಿ ಭಾರತದ ಅರ್ಥಿಕ ಸಂಪತ್ತನ್ನು ದೋಚುವುದಕ್ಕಾಗಿ ತಮ್ಮ ರಾಜಕೀಯ ಅಧಿಕಾರವನ್ನು ಬಳಸಿಕೊಂಡರು. ಬ್ರಿಟಿಷರ ವ್ಯಾಪಾರಿ ಹಿತಾಸಕ್ತಿಯಿಂದಾಗಿ ಭಾರತೀಯ ಗುಡಿ ಕೈಗಾರಿಕೆ ಮತ್ತು ಸ್ಥಳೀಯ ಕೈಗಾರಿಕೆಗಳು ನಾಶ ಹೊಂದಿದ್ದವು. ಭೂಕಂದಾಯ ನೀತಿಯು ಅತ್ಯಂತ ಶೋಷಣಾತ್ಮಕವಾಗಿತ್ತು. ತಾಲ್ಲೂಕುದಾರರ ಮತ್ತು ಜಮೀನ್ದಾರರ ಸ್ಥಾನಮಾನ ಮತ್ತು ವರಮಾನದ ಮೂಲವನ್ನು ಕಿತ್ತುಕೊಳ್ಳಲಾಯಿತು. ವ್ಯವಸಾಯದ ವಾಣಿಜ್ಯೀಕರಣದಿಂದಾಗಿ ರೈತರ ಆರ್ಥಿಕ ಶಕ್ತಿಯು ಕ್ಷೀಣಿಸಿತು. ಅಂದಿನ ತೀವ್ರ ಬರಗಾಲಗಳು ಲಕ್ಷಾಂತರ ಜನರನ್ನು ಬಲಿತೆಗೆದುಕೊಂಡವು. ಇವೇ ಮುಂತಾದ ಅಂಶಗಳು ಭಾರತವನ್ನು ಬಡತನಕ್ಕೆ ತಳ್ಳಿದವು.

ಸಾಮಾಜಿಕ ಮತ್ತು ಧಾರ್ಮಿಕ ಕಾರಣಗಳು :

ಸಾಮಾಜಿಕ ಮತ್ತು ಧಾರ್ಮಿಕ ಅಂಶಗಳು ಸಹ ದಂಗೆಯ ಸ್ಪೋಟಕ್ಕೆ ಕಾರಣವಾಯಿತು. ಬ್ರಿಟೀಷರು “ಭಾರತೀಯರನ್ನು ಸಂಸ್ಕೃತಿ ಮತ್ತು ನಾಗರಿಕತೆಯ ಗಂಧವಿಲ್ಲದ ಅನಾಗರಿಕರು” ಎಂದರು. ಭಾರತೀಯರನ್ನು ಹಂದಿ, ಕರಿ ಮನುಷ್ಯರು ಎಂದು ಸಂಭೋಧಿಸುತ್ತಿದ್ದರು. ಯೂರೋಪಿನಯನ್ನರ ಮೇಲುಸ್ತುವಾರಿಯಲ್ಲಿದ್ದ ಹೋಟೆಲ್‌ ಮತ್ತು ಕ್ಲಬ್ ಗಳಿಗೆ ಭಾರತೀಯರಿಗೆ ಪ್ರವೇಶವಿರಲಿಲ್ಲ. ನಾಯಿಗಳಿಗೆ ಮತ್ತು ಭಾರತೀಯರಿಗೆ ಪ್ರವೇಶವು ನಿಷಿದ್ದ ಎಂಬ ನಾಫಲಕಗಳನ್ನು ದ್ವಾರದಲ್ಲಿ ತೂಗುಹಾಕುತ್ತಿದ್ದರು. ಮೇಲಾಗಿ ಸತಿ ಪದ್ದತಿ ಮತ್ತು ಬಾಲ್ಯ ವಿವಾಹ ನಿಷೇಧ, ವಿಧವಾ ಪುನರ್‌ ವಿವಾಹಕ್ಕೆ ಪ್ರೋತ್ಸಾಹ ಇವೆಲ್ಲವುಗಳಿಂದ ಭಾರತೀಯರು ತಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಬ್ರಿಟಿಷರು ಮಾಡುತ್ತಿರುವ ಹಸ್ತಕ್ಷೇಪ ಎಂದು ಭಾವಿಸಿದರು. ಅಷ್ಟೆ ಅಲ್ಲದೇ ರೈಲ್ವೆಯ ಆಗಮನವು ಮಡಿವಂತ ಭಾರತೀಯರಿಗೆ ಪ್ರಯಾಣ ಮಾಡಬೇಕಾದುದು ಮೇಲ್ವರ್ಗದವರಲ್ಲಿ ಸಿಟ್ಟು ತರಿಸಿತು.

ಸೈನಿಕ ಕಾರಣ :

ಭಾರತೀಯ ಸೈನಿಕರಲ್ಲಿ ಅನೇಕ ಅಸಂತೃಪ್ತಿಗಳಿದ್ದವು. ಸೈನಿಕರು ಪಾರಂಪರಿಕವಾಗಿ ಬಳಸುತ್ತಿದ್ದ ಧಾರ್ಮಿಕ ಚಿಹ್ನೆ ಮತ್ತು ಪೇಟಗಳನ್ನು ಧರಿಸಬಾರದೆಂಬ ನಿಷೇಧಕ್ಕೊಳಪಟ್ಟಿದ್ದರು. ಭಾರತೀಯಸೈನಿಕರಿಗೆ ಅತ್ಯಂತ ಕಡಿಮೆ ವೇತನ ನೀಡುತ್ತಿದ್ದರು. ಮುಂಬಡ್ತಿಯ ಅವಕಾಶಗಳು ಇಲ್ಲದಾಗಿದ್ದವು. ಬ್ರಿಟಿಷರ್‌ ಸೈನಿರಿಗೆ ಮಾತ್ರ ಹೆಚ್ಚಿನ ಸಂಬಳ ಮತ್ತು ಇತರೆ ಸೌಲಭ್ಯಗಳನ್ನು ನೀಡಲಾಗಿತ್ತು. ಭಾರತೀಯ ಸೈನಿಕರನ್ನು ಕಾರ್ಯನಿಮಿತ್ತ ಹೆಚ್ಚುವರಿ ವೇತನವನ್ನು ನೀಡದೆ ಅತ್ಯಂತ ದೂರ ಪ್ರದೇಶಗಳಿಗೆ ನಿಯೋಜಿಸಲಾಗುತ್ತಿತ್ತು. ಲಾರ್ಡ್‌ ಕ್ಯಾನಿಂಗನ ಸಾಮಾನ್ಯ ಸೇನಾ ಸೇವಾ ಕಾಯಿದೆಯ ಪ್ರಕಾರ ಎಲ್ಲಾ ಸೈನಿಕರು ಬ್ರಿಟಿಷ್‌ ಆದೇಸದಂತೆ ಎಲ್ಲೆಂದರಲ್ಲಿ ಕಾರ್ಯನಿಮಿತ್ತ ತೆರಳಬೇಕಿತ್ತು. ಇವೆಲ್ಲವೂ ಭಾರತೀಯ ಸೈನಿಕರಲ್ಲಿ ಅಸಹನೆಯನ್ನು ಉಂಟುಮಾಡಿದವು.

ತಕ್ಷಣದ ಕಾರಣ :

ಜನಸಮೂಹದ ದಂಗೆಗೆ ಕಾಲ ಸನಿಹಿತವಾಗಿತ್ತು. ಅವರಲ್ಲಿ ಕಿಚ್ಚೆಬ್ಬಿಸಲು ಒಂದೇ ಒಂದು ಕಿಡಿ ಸಾಕಾಗಿತ್ತು. ಸಾ. ಶಕ. ೧೮೫೭ ರಲ್ಲಿ ಒಂದು ಹೊಸ ಮಾದರಿಯ ಬಂದೂಕನ್ನು ( ಎನ್‌ ಫೀಲ್ಡ್‌ ರೈಪಲ್‌ ) ಸೇನೆಯಲ್ಲಿ ತೊಡಗಿಸಿದ್ದು ಸಿಪಾಯಿ ದಂಗೆಗೆ ತಕ್ಷಣದ ಕಾರಣವಾಯಿತು. ಎನ್‌ ಫೀಲ್ಡ್‌ ಬಂದೂಕುಗಳಿಗೆ ತೋಟಾಗಳನ್ನು ತುಂಬುವ ಮುನ್ನ ಅದಕ್ಕೆ ಹೊದಿಸಿದ ಕಾಗದವನ್ನು ಹಲ್ಲಿನಿಂದ ಕಚ್ಚಿ ಹರಿಯಬೇಕಿತ್ತು. ಈ ಕಾಗದಕ್ಕೆಹಂದಿ ಮತ್ತು ಗೋವಿನ ಕೊಬ್ಬು ಬಳಸಲಾಗಿದೆ ಎಂಬ ಸುದ್ದಿ ಕಾಳ್ಗಿಚ್ಚಿನಂತೆ ಸೈನಿಕರಲ್ಲಿ ಹಬ್ಬಿತು. ಇದು ಮಸ್ಲಿಂ ಮತ್ತು ಹಿಂದೂ ಸಿಪಾಯಿಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡುವುದಾಗಿತ್ತು. ಅವುಗಳನ್ನು ಬಳಸಲು ನಿರಾಕರಿಸಿದ ಸೈನಿಕರು ಚಬ್ರಿಟಿಷರಿಂದ ಶಿಕ್ಷೆಗೊಳಗಾದರು.

FAQ

ಭಾರತದ ಸ್ವಾತಂತ್ರ್ಯ ಸಂಗ್ರಾಮ ಯಾವಾಗ ನಡೆಯಿತು ?

೧೮೫೭

ಭಾರತದ ಸ್ವಾತಂತ್ರ್ಯ ಸಂಗ್ರಾಮದ ಇನ್ನೊಂದು ಹೆಸರೇನು ?

ಸಿಪಾಯಿ ದಂಗೆ

ಇತರೆ ವಿಷಯಗಳು :

ಪ್ರಮುಖ ವಚನಕಾರರ ಬಗ್ಗೆ ಮಾಹಿತಿ 

ಪ್ರಭುತ್ವದ ಬಗ್ಗೆ ಮಾಹಿತಿ

Leave a Reply

Your email address will not be published. Required fields are marked *