ಪ್ರಮುಖ ವಚನಕಾರರ ಬಗ್ಗೆ ಮಾಹಿತಿ | Information About Important Speakers in Kannada

ಪ್ರಮುಖ ವಚನಕಾರರ ಬಗ್ಗೆ ಮಾಹಿತಿ Information About Important Speakers Pramuka Vachangarara Bagge Mahiti in Kannada

ಪ್ರಮುಖ ವಚನಕಾರರ ಬಗ್ಗೆ ಮಾಹಿತಿ

Information About Important Speakers in Kannada
Information About Important Speakers in Kannada

ಈ ಲೇಖನಿಯಲ್ಲಿ ಪ್ರಮುಖ ವಚನಕಾರರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.

ಅಲ್ಲಮಪ್ರಭು :

ಅಲ್ಲಮಪ್ರಭು ೧೨ ನೇ ಶತಮಾನದ ಪ್ರಸಿದ್ದ ಚಿಂತಕ, ಶಿವಶರಣ ಮತ್ತು ವಚನಕಾರರಾಗಿದ್ದರು. ಈತನು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಬಳ್ಳಿಗಾವಿಯಲ್ಲಿ ಜನಿಸಿದರು. ಈತನ ತಂದೆ ನಿರಹಂಕಾರ ಮತ್ತು ತಾಯಿ ಸುಜ್ಞಾನಿ. ಈತ ಕಲ್ಯಾಣದಲ್ಲಿ ಬಸವಣ್ಣ ಸ್ಥಾಪಿಸಿದ ಶೂನ್ಯ ಪೀಠದ ಅಧ್ಯಕ್ಷನಾಗಿ ಅನೇಕರಿಗೆ ಮಾರ್ಗದರ್ಶನ ನೀಡಿದವನು. ಅವನು ಒಬ್ಬ ಅನುಭಾವಿ. ಸತ್ಯಶೋಧನೆಯೇ ಅವನ ಜೀವನದ ಪರಮ ಗುರಿಯಾಗಿತ್ತು. ಅವನ ವಚನಗಳು ಬೆರಗು ಮತ್ತು ಬೆಡಗಿನಿಂದ ಕೂಡಿವೆ. ಗುಹೇಶ್ವರಾ ಎಂಬುದು ಈತನ ವಚನಗಳ ಅಂಕಿತವಾಗಿದೆ.

ತಂದೆ, ತಾಯಿ, ಗುರುಗಳಿಗೆ ದೈವತ್ವದ ಸ್ಥಾನ ಮಾನ ನೀಡಿರುವ ಸಂಸ್ಕೃತಿ ನಮ್ಮದು. ಗುರುವಿನ ಸ್ಥಾನ ಬಹಳ ಪವಿತ್ರವಾದದ್ದು. ಗುರುವಿಗೆ ಸೃಷ್ಟಿ, ಸ್ಥಿತಿ, ಲಯಕಾರಕರಾದ ಬ್ರಹ್ಮ, ವಿಷ್ಣು, ಮಹದೇಶ್ವರರ ಸ್ಥಾನವನ್ನು ನೀಡಿ ಗೌರವಿಸಲಾಗಿದೆ. ಏಕೆಂದರೆ ಶಿಷ್ಯನಿಗೆ ಸಂಸ್ಕಾರ, ವಿದ್ಯೆ, ವಿನಯ ಹಾಗೂ ಬದುಕಿನ ಮಾರ್ಗವನ್ನು ನೀಡುವವನು ಗುರು. ಪರಿವರ್ತನೆ ಜಗದ ನಿಯಮ. ಕಾಲಗತಿಯಲ್ಲಿ ಎಲ್ಲವೂ ಪರಿವರ್ತನೆಗೊಳಪಡುತ್ತದೆ. ಎಂಬುದನ್ನು ಗುರುವಿನ ಸ್ಥಾನ ಹಾಗೂ ಶಿಷ್ಯನ ಕಲಿಕಾ ಪ್ರವೃತ್ತಿಗಳು ನಾಲ್ಕು ಯುಗಗಳಲ್ಲಿ ಹೇಗೆ ಪರಿವರ್ತನೆಯಾಗಿದೆ ಎಂಬುದನ್ನು ಮಾರ್ಮಿಕವಾಗಿ ಈ ವಚನದಲ್ಲಿ ಬಿಂಬಿತವಾಗಿದೆ.

ಆಯ್ದಕ್ಕಿ ಮಾರಯ್ಯ :

ಈತನ ಕಾಲ ಕ್ರಿ. ಶಕ ಸುಮಾರು ೧೧೬೦ ಶಿವಶರಣ ಹಾಗೂ ವಚನಕಾರ, ರಾಯಚೂರು ಜಿಲ್ಲೆಯ ಅಮರೇಶ್ವರದ ಆಯ್ದಕ್ಕಿ ಲಕ್ಕಮ್ಮನ ಪತಿ. ಆಯ್ದಕ್ಕಿಮಾರಯ್ಯ ಎಂದೇ ಪ್ರಸಿದ್ದ. ಈವರೆಗೆ ಈತನ ಸುಮಾರು ೩೨ ವಚನಗಳು ದೊರೆತಿವೆ. ಎಂಥ ಪರಿಸ್ಥಿತಿ ಎದುರಾದರು ಕಾಯಕವ ಬಿಡದೇ ಮಾಡಬೇಕು, ಕಾಯಕ ಮಾಡಿ ಬದುಕಬೇಕು, ಯಾಚನೆ ಮಾಡಬಾರದು ಹಾಗೂ ಕೂಡಿಡಬಾರದು ಎಂದು ಹೇಳುವ ಮೂಲಕ ಕಾಯಕ ಬದುಕಿನ ಮಹತ್ವವನ್ನು ಸಾರಿದ್ದಾರೆ. ಇಂತಹ ಆದರ್ಶಗಳನ್ನು ಹೊಂದಿರುವ ಈತನ ಅಂಕಿತ ಅಮರೇಶ್ವರಲಿಂಗ ಬೀದಿಯಲ್ಲಿ ಬಿದ್ದ ಅಕ್ಕಿಯನ್ನು ಆಯ್ದು ತಂದು ದಾಸೋಹ ಮಾಡುವುದೇ ಅವರ ಕಾಯಕವಾಗಿತ್ತು.

ಕಾಯಕವೇ ಕೈಲಾಸ ಎಂದು ಹೇಳುವ ಮೂಲಕ ಬಸವಣ್ಣ ಅವರು ಹೇಳಿದ ಕಾಯಕದ ಮಹತ್ವ ಆಯ್ದಕ್ಕಿಮಾರಯ್ಯ ಅವರ ವಚನಗಳಲ್ಲೂ ವ್ಯಕ್ತಾಗಿದೆ. ಮನುಷ್ಯನನಿಗೆ ಕಾಯಕವೇ ಮುಖ್ಯ. ಕಾಯಕದಲ್ಲಿಯೇ ಸರ್ವಸ್ವವನ್ನು ಕಾಣಬಹುದು. ಇದು ಶ್ರೇಷ್ಟ ಹಾಗೂ ಸಾರ್ವಕಾಲಿಕ ಸತ್ಯ. ಕರ್ತವ್ಯ ನಿಷ್ಟೆ ಮತ್ತು ಬದ್ದತೆಯನ್ನು ಸಾರುವ ಈ ವಚನ ಇಂದಿಗೂ ಪ್ರಸ್ತುತ.

ಅಮುಗೆರಾಯಮ್ಮ :

ಈಕೆಯ ಕಾಲ ಕ್ರಿ. ಶಕ. ಸು ೧೧೬೦ / ೧೨ ನೇ ಶತಮಾನದ ವಚನಕಾರ್ತಿಯರಲ್ಲಿ ಒಬ್ಬಳು. ಈಕೆ ಸೊನ್ನಲಿಗೆಯವಳು, ಪತಿ ಅಮುಗೆ ದೇವಯ್ಯ. ನೇಯ್ಗೆ ಇವರ ಕಾಯಕ. ಈಕೆಯ ಅಂಕಿತನಾಮ ಅಮುಗೇಶ್ವರ ತಮ್ಮ ವೈಚಾರಿಕ ಪ್ರಖರತೆ ಹಾಗೂ ಸಾಮಾಜಿಕ ಕಳಕಳಿಯಿಂದ ಜೀವನವನ್ನು ವಿಭಿನ್ನ ದೃಷ್ಟಿಕೋನದಿಂದ ದರ್ಶಿಸಿ, ಚಿಂತನಗೈದು ವಚನ ರಚನೆಯ ಮಹಾಕಾಯಕವನ್ನು ರೂಢಿಸಿಕೊಂಡವರು. ಗಂಡು ಹೆಣ್ಣೆಂಬ ಸಾಂಪ್ರದಾಯಿಕ ವರ್ಗಿಕರಣದ ಚೌಕಟ್ಟಿನಿಂದ ಹೊರಬಂದು ಸಮಾನತೆಯ ತತ್ವದ ಆಧಾರದಿಂದ ತನ್ನ ಧೋರಣೆಯ ಛಾಪನ್ನು ವಚನಗಳಲ್ಲಿ ಮೂಡಿಸಿದ್ದಾಳೆ.

ಪ್ರಕೃತಿಯಲ್ಲಿರುವ ಪ್ರಾಣಿ ಪಕ್ಷಿಗಳಲ್ಲಿ ವಿಶೇಷ ಗುಣಗಳು ಸಹಜವಾಗಿರುತ್ತವೆ. ಆದರೆ ಮಾನ ಹೊಂದಿರುವ ವಿಶೇಷ ಗುಣಗಳನ್ನು ಇತರ ಪ್ರಾಣಿ ಪಕ್ಷಿಗಳು ಅನುಕರಿಸಲು ಸಾಧ್ಯವಿಲ್ಲ ಆದರಿಂದಾಗಿ ಮಾನವನು ಅರಿವು, ಆಚಾರ, ಸಮ್ಯಜ್ಞಾನ ಇವುಗಳಿಂದ ಭಗವಂತನ ಸಾಕ್ಷಾತ್ಕಾರವನ್ನು ಪಡೆಯಬಹುದೆಂಬುದನ್ನು ಅಮುಗೆರಾಯಮ್ಮ ಈ ವಚನದ ಮೂಲಕ ಸ್ಪಷ್ಟಪಡಿಸಿದ್ದಾಳೆ.

ಶಿವಶರಣೆ ಲಿಂಗಮ್ಮ :

ಈಕೆಯ ಕಾಲ ಕ್ರಿ. ಶಕ. ಸು ೧೧೬೦. ಹನ್ನೆರಡನೆಯ ಶತಮಾನದ ವಚನಕಾರ್ತಿಯರಲ್ಲಿ ಒಬ್ಬಳು. ಕ್ಷೌರಿಕ ವೃತ್ತಿಯ ಹಡಪದ ಅಪ್ಪಣ್ಣನವರ ಧರ್ಮಪತ್ನಿ. ಈಕೆಯ ಅಂಕಿತನಾಮ ಅಪ್ಪಣಪ್ರಿಯ ಚನ್ನಬಸವಣ್ಣ ಎಂಬುದು. ವ್ಯಕ್ತಿಯ ಹುಟ್ಟಿಗೂ ಅವನ ಸಾಧಿಸುವ ಸಾಧನೆಗೂ ಏನೇನು ಸಂಬಂಧವಿಲ್ಲ ಎಂಬುದನ್ನು ನಿರೂಪಿಸಿದಳು. ಈಕೆಯ ವಚನಗಳಲ್ಲಿ ಬೋಧನೆಯ ಧಾಟಿ, ಕಂಡದರ್ಶನ, ಬೀರಿದ ಬೆಳಕು, ಏರಿದ ನಿಲುವು, ಸಾಧಕರಿಗೂ ಸಾಮಾನ್ಯರಿಗೂ ಶರಣರಿಗೂ ಇರುವ ವ್ಯತ್ಯಾಸವನ್ನು ತಿಳಿಸಿದ್ದಾಳೆ. ಎಲ್ಲೆಡೆಗೂ ಹರಿದಾಡುವ ಮನಸ್ಸನ್ನು ಸ್ವೇಚೆಯಾಗಿ ಹರಿಯಲು ಬಿಡದೆ ಬಯಲಲ್ಲಿ ಓಡಾಡುವ ಶರಣರ ಪಾದದಲ್ಲಿ ಬೆರೆಯಬೇಕ್ಕೆನ್ನುವವಳು.

ವಿದ್ಯೆ ಸಾಧಕನ ಸೊತ್ತು. ವಿದ್ಯೆವಿಹೀನನ ಬದುಕು ನಿರರ್ಥಕವೆಂಬುದು ಸರ್ವೇಸಾಮನ್ಯವಾದ ಅಭಿಪ್ರಾಯ. ಆದರೆ ವಿದ್ಯೆಯನ್ನು ಗಳಿಸಲು ನಡೆಸುವ ಕಸರತ್ತು, ಪರಿಶ್ರಮಗಳು, ವಿದ್ಯೆ ವಿನಯವನ್ನು ತಂದು ಕೊಡದೆ ಸಂಪಾದನೆಗೆ ದಾರಿಯಾಗಿರುವುದನ್ನು ನೆನೆದರೆ ವಿಷಾದವಾಗುತ್ತದೆ. ಅದರೆ ಅಂದೇ ನಮ್ಮ ಶಿವಶರಣರು ಜೀವನವೆಂಬ ಪಾಠಶಾಲೆಯಲ್ಲಿ ಅರಿಷ್ಡ್ವರ್ಗಗಳನ್ನು ನಿಗ್ರಹಿಸಿ ತಮ್ಮ ತಮ್ಮ ಕಾಯದ ಮೂಲಕ ನಿತ್ಯ ಸುಖಿಗಳಾಗಿ ಜೀವನವನ್ನು ಸಾರ್ಥಕಗೊಳಿಸಿಕೊಂಡ ರೀತಿಯನ್ನು ತಮ್ಮ ಈ ವಚನದಲ್ಲಿ ಮಾರ್ಮಿಕವಾಗಿ ತಿಳಿಸಲಾಗಿದೆ.

FAQ

ಆಯ್ದಕ್ಕಿ ಮಾರಯ್ಯ ರವರ ಅಂಕಿತನಾಮವೇನು ?

ಅಮರೇಶ್ವರಲಿಂಗ

ಅಮುಗೆರಾಯಮ್ಮ ನವರ ಅಂಕಿತನಾಮವೇನು ?

ಅಮುಗೇಶ್ವರ

ಇತರೆ ವಿಷಯಗಳು :

ಸಮಾಜ ಸುಧಾರಕರ ಬಗ್ಗೆ ಮಾಹಿತಿ

ಭಾರತದ ವಾಯುಗುಣದ ಬಗ್ಗೆ ಮಾಹಿತಿ

Leave a Reply

Your email address will not be published. Required fields are marked *