ಪ್ರಭುತ್ವದ ಬಗ್ಗೆ ಮಾಹಿತಿ | Information About the Government in Kannada

ಪ್ರಭುತ್ವದ ಬಗ್ಗೆ ಮಾಹಿತಿ Information About the Government Prabhutvada Bagge Mahiti in Kannada

ಪ್ರಭುತ್ವದ ಬಗ್ಗೆ ಮಾಹಿತಿ

Information About the Government in Kannada
Information About the Government in Kannada

ಈ ಲೇಖನಿಯಲ್ಲಿ ಪ್ರಭುತ್ವದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.

ಪ್ರಭುತ್ವ

ಒಂದು ರಾಷ್ಟ್ರದ ಪ್ರಜೆಗಳು ಸುಖ, ಶಾಂತಿ ಹಾಗು ನೆಮ್ಮದಿಯಿಂದ ಜೀವನ ನಡೆಸಲು ಒಂದು ವ್ಯವಸ್ಥಿತ ಆಡಳಿತ ಅವಶ್ಯಕತೆ ಇರುತ್ತದೆ. ಅಂತಹ ಆಡಳಿತ ವ್ಯವಸ್ಥೆಯನ್ನು ನಿಯಮಾನುಸಾರ ಮುಂದುವರೆಸಿಕೊಂಡು ಹೋಗುವ ಅಧಿಕಾರ ಹೊಂದಿರುವ ಸಂಸ್ಥೆಯನ್ನು ಪ್ರಭುತ್ವ ಎನ್ನುತ್ತಾರೆ. ಈ ಸಂಸ್ಥೆಯು ಪ್ರಜೆಗಳಿಗೆ ಅನುಕೂಲಕರವಾಗುವಂತಹ ಕಾನೂನುಗಳನ್ನು ರಚಿಸಿ ಅನುಷ್ಟಾನಗೊಳಿಸುವ ಹಾಗೂ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ಜವಾಬ್ದಾರಿಯನ್ನು ಹೊಂದಿರುತ್ತವೆ.

ಪ್ರಭುತ್ವದ ವಿಧಗಳು

ಪ್ರಭುತ್ವಗಳಲ್ಲಿ ಹಲವು ವಿಧಗಳಿವೆ. ಅವುಗಳಲ್ಲಿ ಪ್ರಮುಖವಾದ ಹಲವು ವಿಧಗಳನ್ನು ಈ ಕೆಳಕಂಡಂತೆ ತಿಳಿಯಬಹುದು.

  • ಪ್ರಜಾಪ್ರಭುತ್ವ ಸರ್ಕಾರ
  • ಸರ್ವಾಧಿಕಾರ ಸರ್ಕಾರ
  • ಸಮತಾವಾದಿ ಸರ್ಕಾರ

ಪ್ರಜಾಪ್ರಭುತ್ವ ಸರ್ಕಾರ

ಪ್ರಜಾಪ್ರಭುತ್ವವು ಒಂದು ಬಗೆಯ ಸರ್ಕಾರವಾಗಿದೆ. ಇಲ್ಲಿ ಜನರಿಂದ ಆಯ್ಕೆಯಾದ ಪ್ರತಿನಿಧಿಗಳ ಮೂಲಕ ನಡೆಯುವ ಆಳ್ವಿಕೆಯನ್ನು ಪ್ರಜಾಪ್ರಭುತ್ವ ಸರ್ಕಾರ ಎನ್ನಲಾಗಿದೆ. ಜನಬೆಂಬಲದಿಂದ, ಪ್ರಜೆಗಳೇ ಪ್ರಭುಗಳಾಗಿ ಆಡಳಿತ ನಡೆಸುವುದರಿಂದ ಇದನ್ನು ಪ್ರಜೆಗಳ ಸರ್ಕಾರವೆಂದು ಕರೆಯಲಾಗುತ್ತದೆ. ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಲು ಪ್ರಜೆಗಳಿಗಿರು ಆಯ್ಕೆಯ ಸ್ವಾತಂತ್ರವೇ ಪ್ರಜಾಪ್ರಭುತ್ವದ ಜೀವಾಳ. ಅಬ್ರಹಾಂ ಲಿಂಕನ್‌ ಅವರು ಪ್ರಜಾಪ್ರಭುತ್ವವೆಂದರೆ “ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ ಇರುವ ಸರ್ಕಾರ” ವೆಂದು ಹೇಳಿದ್ದಾರೆ.

ಪ್ರಜಾಪ್ರಭುತ್ವದ ಮೂಲ ತತ್ವಗಳು :

  • ಸ್ವಾತಂತ್ರ್ಯ :

ಸ್ವಾತಂತ್ರ್ಯವು ಪ್ರಜಾಪ್ರಭುತ್ವದ ಜೀವಾಳವಾಗಿದೆ. ಪ್ರಜೆಗಳು ಮುಕ್ತವಾಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ, ಸರ್ಕಾರದಲ್ಲಿ ಭಾಗವಹಿಸುವ, ತಮ್ಮ ದೇಶದಲ್ಲೆಡೆ ಸಂಚರಿಸುವ, ಸಮಾರಂಭಗಳಲ್ಲಿ ಭಾಗವಹಿಸುವ ಹಾಗೂ ಇನ್ನಿತರ ಸ್ವಾತಂತ್ರಗಳನ್ನು ಪಡೆದಿರುತ್ತಾರೆ.

  • ಸಮಾನತೆ :

ಪ್ರಜಾಪ್ರಭುತ್ವವು ಎಲ್ಲರೂ ಸಮಾನ ಸ್ಥಾನಮಾನಗಳನ್ನು ಹೊಂದಿರುತ್ತಾರೆಂಬ ತತ್ವವನ್ನು ಆಧರಿಸಿದೆ. ಪ್ರತಿಯೊಬ್ಬರಿಗೂ ಸಮಾನ ಅವಕಾಶಗಳು ದೊರೆಯಬೇಕೆಂದು ನಂಬುತ್ತವೆ. ಧರ್ಮ, ಜಾತಿ, ಪಂಗಡ, ಭಾಷೆ, ಲಿಂಗ ಹಾಗೂ ಬಡವ ಶ್ರೀಮಂತರೆಂಬ ಬೇಧಭಾವವಿಲ್ಲದೆ ಎಲ್ಲರನ್ನು ಸಮಾನವಾಗಿ ನೋಡುತ್ತದೆ.

  • ಭ್ರಾತೃತ್ವ :

ಪ್ರಾದೇಶಿಕ ಭಿನ್ನತೆ, ಭಾಷಾ ಭಿನ್ನತೆ, ಧಾರ್ಮಿಕ ಭಿನ್ನತೆ ಹೀಗೆ ಇನ್ನೂ ಹಲವು ರೀತಿಯ ಭಿನ್ನತೆಗಳಿದ್ದರೂ ನಾವೆಲ್ಲರೂ ಒಂದೇ ಎನ್ನುವ ಭಾವನೆಯೇ ಭ್ರಾತೃತ್ವ. ಪ್ರಜಾಪ್ರಭುತ್ವದಲ್ಲಿ ಸಹೋದರ ಭಾವನೆಯನ್ನು ಪ್ರೋತ್ಸಾಹಿಬೇಕಾಗುತ್ತದೆ.

  • ಜನತೆಯ ಕಲ್ಯಾಣ :

ರಾಜಕೀಯ, ಆರ್ಥಿಕ, ಸಾಮಾಜಿಕ ಕೇತ್ರಗಳಲ್ಲಿ ಪ್ರಗತಿ ಸಾಧಿಸಿ ಜನರ ಅಗತ್ಯತೆಗಳನ್ನು ಪೂರೈಸಿ ಸುಖೀ ರಾಜ್ಯವನ್ನು ನಿರ್ಮಾಣ ಮಾಡುವುದು ಪ್ರಜಾಪ್ರಭುತ್ವದ ಮುಖ್ಯವಾದ ಗುರಿಯಾಗಿದೆ.

ಸರ್ವಾಧಿಕಾರಿ ಸರ್ಕಾರ

ಈ ವ್ಯವಸ್ಥೆಯಲ್ಲಿ ರಾಜ್ಯದ ಸಂಪೂರ್ಣ ಅಧಿಕಾರ ಒಬ್ಬ ಅಥವಾ ಒಂದು ಸಣ್ಣ ಗುಂಪಿನಲ್ಲಿ ಕೇಂದ್ರೀಕೃತಗೊಂಡಿರುತ್ತದೆ. ಯಾರ ಅಥವಾ ಯಾವಾ ಬಗೆಯ ನಿರ್ಭಂಧವಿಲ್ಲದ ಏಕ ವ್ಯಕ್ತಿಯ ಅಥವಾ ಒಂದು ಗುಂಪಿನ ಅಭಿಪ್ರಾಯವೇ ಸರ್ವಾಧಿಕಾರಿ ಸರ್ಕಾರ ವ್ಯವಸ್ಥೆಯಾಗಿದೆ. ಸರ್ವಾಧಿಕಾರಿಯು ತನ್ನಿಚ್ಚೆಯಂತೆ ಅಡಳಿತ ನಡೆಸಬಹುದು. ಇಂತಹ ಸರ್ಕಾರದಲ್ಲಿ ನ್ಯಾಯ, ಧರ್ಮ, ಆರ್ಥಿಕತೆ, ಸಾಮಾಜಿಕ ರೀತಿ ನೀತಿಗಳು ಎಲ್ಲವೂ ಪ್ರಭುವಿನ ಆಜ್ಞೆಯಿಂದ ನಿರ್ಧಾರವಾಗುತ್ತದೆ. ನ್ಯಾಯ – ಅನ್ಯಾಯಗಳಲ್ಲಿ ಸರ್ವಾಧಿಕಾರಿಯದೇ ಅಂತಿಮ ತೀರ್ಮಾನವಾಗಿರುತ್ತದೆ.

ಸರ್ವಾಧಿಕಾರಿಯ ಲಕ್ಷಣಗಳು :

  • ವ್ಯಕ್ತಿ ಸ್ವಾತಂತ್ರ್ಯವಿರಿವುದಿಲ್ಲ :

ಸರ್ವಾಧಿಕಾರಿ ವ್ಯವಸ್ಥೆಯಲ್ಲಿ ವ್ಯಕ್ತಿಯು ವೈಯಕ್ತಿಕ ಸ್ವಾತಂತ್ರ್ಯ ಅಥವಾ ಹಕ್ಕನ್ನು ಹೊಂದಿರುವುದಿಲ್ಲ. ಅಲ್ಲಿನ ಕಾನೂನಿಗೆ ಅತಿಯಾದ ಗೌರವ ನೀಡುವುದೆ ವ್ಯಕ್ತಿಯೂ ಹೊಂದಿರುವ ಸ್ವಾತಂತ್ರ್ಯಕ್ಕೆ ಸಮವೆಂದು ಭಾವಿಸುತ್ತದೆ. ಪ್ರಜೆಗಳಿಗೆ ಯಾವುದೇ ರೀತಿಯ ಅಭಿವ್ಯಕ್ತಿ ಸ್ವಾತಂತ್ರವಾಗಲಿ, ಸಭೆ ಸೇರುವುದಾಗಲೀ, ಸಂಘ ಸಂಸ್ಥೆಯನ್ನು ಮಾಡಲು ಅವಕಾಶವನ್ನು ನೀಡುವುದಿಲ್ಲ. ಸರ್ವಾಧಿಕಾರಿಯ ಆಡಳಿತವನ್ನು ಟೀಕಿಸುವಂತಹ ಅಧಿಕಾರವಾಗಲಿ, ಅವಕಾಶವಾಲಿ ಜನರಿಗೆ ಇರುವುದಿಲ್ಲ.

  • ರಾಷ್ಟ್ರೀಯತೆಯ ವೈಭವೀಕರಣ :

ರಾಷ್ಟ್ರೀಯತೆಗೆ ಅತಯಾದ ಪ್ರಾಮುಖ್ಯತೆಯನ್ನು ನೀಡುತ್ತದೆ. ಜನರಲ್ಲಿ ರಾಷ್ಟ್ರೀಯತೆಯ ಭಾವನೆಯನ್ನು ತುಂಬಿ ರಾಷ್ಟ್ರಪ್ರೀತಿಯನ್ನು ಹೆಚ್ಚಿಸುತ್ತದೆ. ರಾಷ್ಟ್ರಕ್ಕಾಗಿ ಜನರು ಯಾವುದೇ ತ್ಯಾಗಕ್ಕೂ ಸಿದ್ದರಾಗಿರಬೇಕೆಂದು ಸರ್ವಾಧಿಕಾರವು ನಿರೀಕ್ಷಿಸುತ್ತದೆ.

  • ಏಕಾಚಕ್ರಾಧಿಪತ್ಯ :

ಸರ್ವಾಧಿಕಾರವು ಏಕಾಚಕ್ರಾಧಿಪತ್ಯವಾಗಿದ್ದು ಜನರ ಸಾಮಾಜಿಕ, ರಾಜಕೀಯ, ಆರ್ಥಿಕ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಅಂಶಗಳನ್ನು ನಿಯಂತ್ರಿಸುತ್ತದೆ. ರಾಷ್ಟ್ರದ ವಿರುದ್ದ ಯಾವುದೂ ಇರುವಂತಿಲ್ಲ. ಎಲ್ಲವೂ ರಾಷ್ಟ್ರದ ಪರವಾಗಿರಬೇಕು.

  • ಜನಾಂಗ ಶ್ರೇಷ್ಟತೆ :

ಸರ್ವಾಧಿಕಾರತ್ವವು ಜನಾಂಗ ಶ್ರೇಷ್ಟತೆಯನ್ನುಒಪ್ಪತ್ತದೆ. ಜಗತ್ತಿನ ಇತರ ರಾಷ್ಟ್ರಗಳಲ್ಲಿರುವ ಜನರಿಗಿಂತ ತಮ್ಮ ಜನಾಂಗವೇ ಶ್ರೇಷ್ಟವೆಂದು ನಂಬುತ್ತದೆ.

ಸಮತಾವಾದಿ ಸರ್ಕಾರ

ಸಮಾಜದಲ್ಲಿರುವ ಉತ್ಪಾದನೆಯ ಮೂಲಗಳಾದ ಭೂಮಿ, ಕಾರ್ಮಿಕರ ಶ್ರಮ, ಬಂಡವಾಳವು ಸಮುದಾಯಕ್ಕೆ ಸೇರಿದ್ದೆಂಬ ಸಿದ್ದಾಂತ ಮತ್ತು ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಶಕ್ತಿಯಾನುಸಾರ ದುಡಿದು ತನ್ನ ಅವಶ್ಯಕತೆಗನುಸಾರವಾಗಿ ಪಡೆಯಬೇಕೆಂಬ ತತ್ವವನ್ನು ಪ್ರತಿಪಾದಿಸುವ ಸರ್ಕಾರದ ವ್ಯವಸ್ಥೆಯನ್ನು ಸಮತಾವಾದಿ ಸರ್ಕಾರವೆಂದು ಕರೆಯುತ್ತೇವೆ.

  • ಸಮತಾವಾದದ ಲಕ್ಷಣಗಳು :

ಆಸ್ತಿಯು ಸಮುದಾಯದ ಕೈಯಲ್ಲಿರುತ್ತದೆ :

ಉತ್ಪಾದನೆಗೆ ಬೇಕಾದ ಭೂಮಿ, ಕಾರ್ಮಿಕ ಶ್ರಮ ಹಾಗೂ ಬಂಡವಾಳದ ಖಾಸಗಿ ವ್ಯಕ್ತಿಯಲ್ಲಿದ್ದರೆ ಶೋಷಣೆಗೆ ದಾರಿ ಮಾಡಿಕೊಡುತ್ತದೆ. ಪ್ರತಿಯೊಬ್ಬ ಪ್ರಜೆಯೂ ತನ್ನ ಸಾಮಾರ್ಥ್ಯಕ್ಕೆ ತಕ್ಕಂತೆ ಡುಡಿಯಬೇಕು. ಹಾಗೂ ಅವರ ಅವಶ್ಯಕತೆಗೆ ತಕ್ಕಂತೆಪಡೆಯಬೇಕೆಂಬುದು ಸಮತಾವಾದದ ತತ್ವವಾಗಿದೆ.

  • ಸಮಾನತೆ :

ಸಮತಾವಾದದಲ್ಲಿ ಪ್ರತಿಯೊಬ್ಬ ಪ್ರಜೆಯೂ ಎಲ್ಲಾ ರೀತಿಯಿಂದಲೂ ಸಮಾನವಾಗಿರುತ್ತಾರೆ. ವರ್ಗ, ಜಾತಿ, ಧರ್ಮ, ಬಣ್ಣದ ಆಧಾರದ ಮೇಲೆ ತಾರತಮ್ಯ ಮಾಡದೆ ಎಲ್ಲರನ್ನೂ ಸಮಾನವಾಗಿ ನೋಡಿಕೊಳ್ಳುತ್ತದೆ.

  • ಕಾರ್ಮಿಕರ ಅಧಿಕಾರ :

ಖಾಸಗಿ ಆಸ್ತಿ ಅಸ್ತಿತ್ವದ್ಲಿದ್ದರೆ ಕ್ರಮೇಣ ಲಾಭದ ಹೆಸರಿನಲ್ಲಿ ಶೋಷಣೆ ನಡೆದು ಮುಂದೆ ವರ್ಗ ಸೃಷ್ಟಿಯಾಗುತ್ತದೆ. ಬಡವ ಶ್ರೀಮಂತನ ನಡುವೆ ಘರ್ಷಣೆಯುಂಟಾಗಿ ಅಂತಿಮಾಗಿ ಅಧಿಕಾರವು ಹೆಚ್ಚಿನ ಸಂಖ್ಯೆಯಲ್ಲಿರುವ ಕಾರ್ಮಿಕರಿಗೆ ದೊರೆಯುತ್ತದೆ.

  • ಕ್ರಾಂತಿಕಾರಿ ಬದಲಾವಣೆ :

ಸಮತಾವಾದಿ ವ್ಯವಸ್ಥೆಯಲ್ಲಿ ಸಮಾಜದ ಬದಲಾವಣೆಯು ಕ್ಷಪ್ರಗತಿಯಲ್ಲಿ ನಡೆಯುತ್ತದೆ. ಆಗ ಪ್ರತಿಯೊಬ್ಬರಿಗೂ ಸಮನಾದ ರಾಜಕೀಯ, ಆರ್ಥಿಕ ಹಾಗೂ ಸಾಮಾಜಿಕ ಅವಕಾಶಗಳು ಲಭಿಸುತ್ತವೆ. ಎಲ್ಲರೂ ಸುಖ ಶಾಂತಿಯಿಂದ ಸಮಾನತೆಯ ಜೀವನವನ್ನು ನಡೆಸಬಹುದುದಾಗಿದೆ.

FAQ

ಅಬ್ರಹಾಂ ಲಿಂಕನ್‌ರವರ ಪ್ರಕಾರ ಪ್ರಜಾಪ್ರಭುತ್ವ ಎಂದರೇನು ?

“ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ ಇರುವ ಸರ್ಕಾರ”ವಾಗಿದೆ.

ಉತ್ತಮ ಆಡಳಿತ ದಿನವನ್ನುಯಾವಾಗ ಆಚರಿಸಲಾಗುತ್ತದೆ ?

ಡಿಸೆಂಬರ್‌ ೨೫

ಇತರೆ ವಿಷಯಗಳು :

ಬಾಲ್ಯ ವಿವಾಹದ ಬಗ್ಗೆ ಮಾಹಿತಿ

ಕಂಪ್ಯೂಟರ್ ಬಗ್ಗೆ ಪ್ರಬಂಧ 

Leave a Reply

Your email address will not be published. Required fields are marked *