ರಾಷ್ಟ್ರೀಯ ಪಂಚಾಯತ್‌ರಾಜ್ ದಿನದ ಬಗ್ಗೆ ಮಾಹಿತಿ Information about National Panchayat Raj Day Rashtriya Panchaytraj Dinda bagge mahiti in Kannada
ಈ ಲೇಖನಿಯಲ್ಲಿ ರಾಷ್ಟ್ರೀಯ ಪಂಚಾಯತ್‌ರಾಜ್ ದಿನದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.
ರಾಷ್ಟ್ರೀಯ ಪಂಚಾಯತ್‌ರಾಜ್ ದಿನ
ರಾಷ್ಟ್ರೀಯ ಪಂಚಾಯತ್‌ರಾಜ್ ದಿನವನ್ನು ಎಪ್ರಿಲ್ ೨೪ ರಂದು ಈ ದಿನವನ್ನು ರಾಷ್ಟ್ರವು ಆಚರಿಸುತ್ತದೆ.
೭೩ ನೇ ತಿದ್ದುಪಡಿ ಕಾಯ್ದೆ ಜಾರಿಗೊಂಡ ಎಪ್ರಿಲ್ ೨೪ ರ ದಿನವನ್ನು ೨೦೧೦ ರಿಂದ ಪ್ರತಿವರ್ಷ ರಾಷ್ಟ್ರೀಯ ಪಂಚಾಯತ್ ರಾಜ್ ದಿನ ಎಂದು ಆಚರಿಸಲಾಗುತ್ತದೆ.
೨೦೧೫ ರ ಪಂಚಾಯತ್ ರಾಜ್ ದಿವಸ ಪಂಚ ಪತಿಗಳ ಆಡಳಿತ ವ್ಯವಸ್ಥೆ ಅಂತ್ಯವಾಗಬೇಕು ಎಂದು ನರೇಂದ್ರ ಮೋದಿ ಹೇಳಿದ್ದಾರೆ.
೨೦೧೬ ರ ಪಂಚಾಯತ್ ರಾಜ್ ದಿವಸದ ಅಂಗವಾಗಿ ಎಪ್ರಿಲ್ ೧೪ ರಿಂದ ೨೪ ರ ವರೆಗೆ ಡಾ. B R ಅಂಬೇಡ್ಕರ್ ೧೨೫ ನೇ ಜನ್ಮ ದಿನಾಚರಣೆಯ ಅಂಗವಾಗಿ ಗ್ರಾಮ ಉದಯಸೇ ಭಾರತ ಉದಯ ಎಂಬ ಅಭಿಯಾನದ ಮೂಲಕ ಆಚರಿಸಲಾಯಿತು.
ಈ ಅಭಿಯಾನದ ಹಂತಗಳು :
ಎಪ್ರಿಲ್ ೧೪ – ೧೬
ಅಂಬೇಡ್ಕರ್ ವಿಚಾರಗಳನ್ನು ಪಂಚಾಯತಿಗಳಲ್ಲಿನ ಮತ್ತು ಸಮಾಜ ಕಲ್ಯಾಣ ಇಲಾಖೆಗಳಲ್ಲಿನ ಸೌಲಭ್ಯಗಳ ಕುರಿತು ಜನರಿಗೆ ತಿಳಿಸುವುದು.
ಎಪ್ರಿಲ್ ೧೭ – ೨೦
ಕಿಸಾನ್ ಗ್ರಾಮಸಭೆಗಳನ್ನು ನಡೆಸುವುದು.
ಎಪ್ರಿಲ್ ೨೧
ಗ್ರಾಮ ಪಂಚಾಯತಿಗಳ ಕೇಂದ್ರ ಸ್ಥಾನದಲ್ಲಿ ಗ್ರಾಮಸಭೆಗಳನ್ನು ನಡೆಸುವುದು ಮತ್ತು ಪಂಚಾಯತ್ ರಾಜ್ ದಿನಾಚರಣೆ.
ಮುಂದಿನ ೫ ವರ್ಷಕ್ಕಾಗಿ ಸಮಗ್ರ ಯೋಜನೆಯನ್ನು ಸಿದ್ದಪಡಿಸುವುದೇ ಇದರ ಮುಖ್ಯ ಉದ್ದೇಶವಾಗಿದೆ. ೨೦೧೬ ರ ರಾಷ್ಟ್ರೀಯ ಪಂಚಾಯತ್ ರಾಜ್ ದಿನಾಚರಣೆಯು ಮೊದಲ ಬಾರಿಗೆ ದೆಹಲಿಯಿಂದ ಹೊರಗೆ ಅಂದರೆ ಜಾರ್ಖಂಡ ರಾಜ್ಯದ ಬಿರ್ಸ ಮೊಡಾರ ಜನ್ಮಸ್ಥಳವಾದ ಛೋಟಾ ನಾಗಪುರ ಎಂದೇ ಪ್ರಸಿದ್ದವಾದ ಜೇಮಶೇಡ್ ಪುರದಲ್ಲಿ ನಡೆಯಿತು.
೭೪ ನೇ ತಿದ್ದುಪಡಿ
೭೪ ನೇ ಸಂವಿಧಾನ ತಿದ್ದುಪಡಿಯು ಲೋಕಸಭೆಯಲ್ಲಿ ೨೨-೧೨-೧೯೯೨ ರಂದು ರಾಜ್ಯಸಭೆಯಲ್ಲಿ ೨೩-೧೨-೧೯೯೨ ರಂದು ಅಂಗೀಕಾರಾಯಿತು.
ನಂತರ ೦೧\೦೬/೧೯೯೩ ರಂದು ರಾಷ್ಟ್ರಪತಿಗಳಿಂದ ಅಂಗೀಕಾರಗೊಂಡಿತು.
೭೪ ನೇ ತಿದ್ದುಪಡಿಯನ್ವಯ ಸಂವಿಧಾನಕ್ಕೆ ೯ A ಭಾಗವನ್ನು ಸೇರಿಸಲಾಗಿದೆ.
೭೪ ನೇ ಸಂವಿಧಾನ ತಿದ್ದುಪಡಿ ಪ್ರಮುಖ ವಿಧಿಗಳು
2̄43-P | ವ್ಯಾಖ್ಯೆಗಳು |
243-Q | ಪೌರ ಸಭೆಗಳ ರಚನೆ |
243-R | ಪೌರ ಸಭೆಗಳ ಅಂಗ ರಚನೆ |
243-S | ಪೌರ ಸಭೆಗಳ ವಿಭಾಗ ಸಮಿತಿಗಳು |
243-T | ಸ್ಥಾನಗಳ ಮೀಸಲಾತಿ |
243-U | ಪೌರ ಭೆಗಳ ಅವಧಿ |
243-V | ಸದಸ್ಯರ ಅರ್ಹತೆ |
243-W | ಪೌರಸಭೆಗಳ ಅಧಿಕಾರಗಳು ಮತ್ತು ಜವಾಬ್ದಾರಿಗಳು |
243-X | ತೆರಿಗೆಯನ್ನು ವಿಧಿಸುವ ಪೌರ ಸಭೆಗಳ ಅಧಿಕಾರಗಳು |
243-Y | ಹಣಕಾಸು ಅಯೋಗ |
243-Z | ಪೌರ ಸಭೆಗಳ ಲೆಕ್ಕ ಪತ್ರಗಳ ಪರಿಶೋಧನೆ |
243-A | ಪೌರ ಸಭೆಗಳ ಚುನಾವಣೆ |
243-B | ಒಕ್ಕೂಟ ರಾಜ್ಯಗಳಿಗೆ ಅನ್ವಯ |
243-C | ಕೆಲವು ಪ್ರದೇಶಗಳಿಗೆ ಅನ್ವಯವಾಗದಿರುವುದು |
243-D | ಜಿಲ್ಲಾ ಯೋಜನಾ ಸಮಿತಿ |
243-E | ಮಹಾನಗರ ಯೋಜನಾ ಸಮಿತಿ |
243-F | ಜಾರಿಯಲ್ಲಿರುವ ಕಾನೂನುಗಳನ್ನು ಮತ್ತು ಅಸ್ತಿತ್ವದಲ್ಲಿರುವ ಪೌರ ಸಭೆಗಳನ್ನು ಮುಂದುವರೆಸುವುದು. |
243-G | ಚುನಾವಣ ವಿಷಯಗಳಲ್ಲಿ ನ್ಯಾಯಾಲಯಗಳ ಮಧ್ಯಪ್ರವೇಶ ನಿಷೇಧ |
FAQ
ರಾಷ್ಟ್ರೀಯ ಪಂಚಾಯತ್ ರಾಜ್ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?
ಎಪ್ರಿಲ್ ೨೪
ಯಾವ ವರ್ಷದಿಂದ ರಾಷ್ಟ್ರೀಯ ಪಂಚಾಯತ್ ರಾಜ್ ದಿನವನ್ನು ಆಚರಿಸಲಾಗಿದೆ ?
೨೦೧೦
ಇತರೆ ವಿಷಯಗಳು :
ವಿಶ್ವ ಗ್ರಾಹಕರ ಹಕ್ಕು ದಿನದ ಬಗ್ಗೆ ಮಾಹಿತಿ