ತೀವ್ರಗಾಮಿ ಯುಗದ ಬಗ್ಗೆ ಮಾಹಿತಿ | Information about radical age in Kannada

ತೀವ್ರಗಾಮಿ ಯುಗದ ಬಗ್ಗೆ ಮಾಹಿತಿ Information about radical age Teevragami Yugada Bagge Mahiti in Kannada

ತೀವ್ರಗಾಮಿ ಯುಗದ ಬಗ್ಗೆ ಮಾಹಿತಿ

Information about radical age in Kannada
Information about radical age in Kannada

ಈ ಲೇಕನಿಯಲ್ಲಿ ತೀವ್ರಗಾಮಿ ಯುಗದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.

ತೀವ್ರಗಾಮಿ ಯುಗ

೧೯೦೫ ರಿಂದ ೧೯೧೯ರ ವರೆಗಿನ ಅವಧಿಯನ್ನು ತೀವ್ರಗಾಮಿ ಯುಗ ಎನ್ನುತ್ತೇವೆ. ಅಭಿವೃದ್ದಿ ತಮ್ಮ ಸ್ವಂತ ಬಲದಿಂದಲೇ ಹೊರತು ಇನ್ನೊಬ್ಬರು ನೀಡುವ ಭಿಕ್ಷೆಯಿಂದಲ್ಲ ಎಂಬ ಭಾವನೆ ಬಲವಾಗಿ ಹೋರಾಟ ತೀವ್ರವಾಯಿತು.

ತೀವ್ರಗಾಮಿತ್ವದ ಹುಟ್ಟಿಗೆ ಕಾರಣಗಳು

  • ಮಂದಗಾಮಿಗಳ ಮೃದು ಧೋರಣೆಗೆ ಬ್ರಿಟಿಷರು ಉದಾಸೀನ ತೋರಿದರು.
  • ಈ ಸಂಧರ್ಭದಲ್ಲಿ ರಾಷ್ಟ್ರ ನಾಯಕರು ಸ್ವ ಗೌರವವನ್ನು ಭೋಧಿಸಿದರು.
  • ವಿಶ್ವದಲ್ಲಿ ನಡೆದ ಕೆಲ ಘಟನೆಗಳು ಹೋರಾಟದ ತೀವ್ರತನ ಬೆಳೆಯಲು ಕಾರಣವಾದವು.
  • ೧೯೦೫ ರಲ್ಲಿ ಕರಾಚಿ ಕ್ರಾನಿಕಲ್‌ ಎಂಬ ಪತ್ರಿಕೆ ಸಣ್ಣ ದೇಶವಾದ ಜಪಾನ್‌ ರಷ್ಯಾವನ್ನು ಸೋಲಿಸುವದಾದರೆ ಭಾರತ ಇಂಗ್ಲೆಂಡನ್ನು ಸೋಲಿಸಿ ವಿಶ್ವದಲ್ಲಿ ಉನ್ನತ ಸ್ಥಾನ ಪಡೆಯಬಹುದು ಎಂಬ ಲೇಖನ ಪ್ರಕಟಿಸಿತು. ಇದರಿಂದ ತೀವ್ರಗಾಮಿ ಚಳುವಳಿ ಬೆಳೆಯಿತು.

ತೀವ್ರಗಾಮಿ ಚಳುವಳಿಯ ಪ್ರಮುಖ ನಾಯಕರು

  • ಬಾಲಗಂಗಾಧರ್‌ ತಿಲಕ್‌ :

ಲೋಕಮಾನ್ಯ ಎಂದೇ ಹೆಸರಾದ ತಿಲಕರು ಅಪ್ಪಟ ದೇಶಭಕ್ತರು ಬ್ರಿಟಿಷರನ್ನು ಹೊರ ಹಾಕಲು ಹುಟ್ಟಿದ ಅವತಾರ ಪುರುಷ ಎನಿಸಿಕೊಂಡಿದ್ದರು. ೧೮೫೬ ರಲ್ಲಿ ಮಹಾರಾಷ್ಟ್ರದ ಚಿಖಲ್‌ ಎಂಬ ಗ್ರಾಮದಲ್ಲಿ ಜನಿಸಿದರು. ಕೇಸರಿ (ಮರಾಠಿ) ದಿ ಮರಾಠ್‌ (ಇಂಗ್ಲಿಷ್‌) ಮತ್ತು ಕಾಲ ಎಂಬ ಪತ್ರಿಕೆಗಳನ್ನು ಹೊರಡಿಸುವುದರ ಮೂಲಕ ಜನರಿಗೆ ರಾಜಕೀಯ ಶಿಕ್ಷಣ ನೀಡಿದರು. ಇವರ ಹೋರಾಟ ಸಂಘಟನೆ ದೇಶಾಭಿಮಾನ ಕಂಡ ಬ್ರಿಟಿಷರು ಇವರನ್ನು ಅಶಾಂತಿಯ ಜನಕ ಎಂದರು. ತಿಲಕರು ೧೯೨೦ ಆಗಸ್ಟ್‌ ೧ ರಂದು ನ್ಯೂಮೋನಿಯಾ ಕಾಯಿಲೆಯಿಂದ ಮರಣ ಹೊಂದಿದರು. ಆಗ ಗಾಂಧೀಜಿ, “ನನ್ನ ಡೊಡ್ಡ ಮತ್ತು ಬಲವಾದ ಕೋಟೆಯೇ ಕುಸಿದು ಹೋಯಿತು” ಎಂದು ವಿಷಾದವನ್ನು ವ್ಯಕ್ತಪಡಿಸಿದರು.

  • ಲಾಲಲಜಪತರಾಯ್‌ :

ಪಂಜಾಬದ ಕೇಸರಿ ಎಂದೇ ಹೆಸರಾದ ಲಾಲಾಲಜಪತರಾಯರು ೧೮೬೫ ರಲ್ಲಿ ಪಂಜಾಬಿನ ಜಗರಾನ್‌ ಎಂಬಲ್ಲಿ ಜನಿಸಿದರು. ಲಾಹೋರ್‌ ನಲ್ಲಿ ದಯಾನಂದ ಆಂಗ್ಲೋ ವೇದಿಕೆ ಕಾಲೇಜು ಸ್ಥಾಪಿಸಿದವರಲ್ಲಿ ಇವರು ಒಬ್ಬರು. ೧೯೧೬ ರಲ್ಲಿ ಅಮೇರಿಕಾದಲ್ಲಿ ಇಂಡಿಯನ್‌ ಹೋಂ ರೂಲ್‌ ಲೀಗ್‌ ಅನ್ನು ಆರಂಭಿಸಿದರು.

ಕೃತಿಗಳು : Young India, Unhappy India, Arya Samaja, ಎಂಬ ಕೃತಿಗಳನ್ನು ರಚಿಸಿದ್ದಾರೆ.

  • ಬಿಪಿನ್‌ ಚಂದ್ರಪಾಲ್‌ :

ಕ್ರಾಂತಿಕಾರಕ ವಿಚಾರಧಾರೆಯ ಜನಕ ಎಂದೇ ಹೆಸರಾದ ಇವರು ೧೮೫೮ ರಲ್ಲಿ ಬಾಂಗ್ಲಾದೇಶದ ಪೆಲಿ ಎಂಬ ಗ್ರಾಮದಲ್ಲಿ ಜನಿಸಿದರು. ೧೯೮೬ ರಲ್ಲಿ ಕಾಂಗ್ರೆಸ್‌ ಅನ್ನು ಸೇರುವುದರ ಮೂಲಕ ರಾಜಕೀಯ ಜೀವನ ಆರಂಭಿಸಿದರು. ತೀವ್ರಗಾಮಿ ಚಳುವಳಿಯಲ್ಲಿ ಲಾಲ್‌ ಬಾಲ್‌ ಪಾಲ್‌ ಎಂದೇ ಪ್ರಸಿದ್ದರಾಗಿದ್ದಾರೆ. ಪೆರಿದಾಶಕ ಎಂಬ ಪತ್ರಿಕೆಯನ್ನು ಹೊರಡಿಸುತ್ತಿದ್ದರು.

ಕೃತಿಗಳು : The Spirit of Nationalisum

  • ಅರವಿಂದ ಘೋಷ್‌ :

ಇವರು ಸ್ವತಂತ್ರ ಹೋರಾಟಗಾರರು, ತತ್ವಜ್ಞಾನಿಗಳು ಮತ್ತು ಕವಿಗಳಾಗಿದ್ದರು. ಇವರ ಜನ್ಮ ನಾಮ ಒರೋಬಿಂದೋ ಅಕ್ರಾಯ್ಡ ಘೋಷ್‌ ಇವರ ಮಹಾ ಕಾವ್ಯ ಸಾವಿತ್ರಿ. New lamps for old ಎಂಬ ಶೀರ್ಷಿಕೆಯಡಿ ಮಂದಗಾಮಿಗಳನ್ನು ವಿರೋಧಿ ಲೇಖನವನ್ನು ಪ್ರಕಟಿಸುತ್ತಿದ್ದರು. ಇವರ ಮೇಲೆ ಪ್ರಭಾವ ಬೀರಿದ ವ್ಯಕ್ತಿಗಳೆಂದರೆ ಮದನಮೋಹನ ಮಾಳವೀಯ , ಸುಬಾಷ್‌ಚಂದ್ರ ಬೋಸ್‌, ರವೀಂದ್ರನಾಥ ಟ್ಯಾಗೂರ ಇವರ ಮೇಲೆ ಪ್ರಭಾವ ಬೀರಿದ ವ್ಯಕ್ತಿಗಳಾಗಿದ್ದರು.

FAQ

ಲಾಲಲಜಪತರಾಯ್‌ರವರ ಕೃತಿಗಳನ್ನು ತಿಳಿಸಿ ?

Young India, Unhappy India, Arya Samaja, ಎಂಬ ಕೃತಿಗಳನ್ನು ರಚಿಸಿದ್ದಾರೆ.

ತೀವ್ರಗಾಮಿತ್ವದ ಹುಟ್ಟಿಗೆ ಕಾರಣಗಳನ್ನು ತಿಳಿಸಿ ?

ಮಂದಗಾಮಿಗಳ ಮೃದು ಧೋರಣೆಗೆ ಬ್ರಿಟಿಷರು ಉದಾಸೀನ ತೋರಿದರು, ಈ ಸಂಧರ್ಭದಲ್ಲಿ ರಾಷ್ಟ್ರ ನಾಯಕರು ಸ್ವ ಗೌರವವನ್ನು ಭೋಧಿಸಿದರು.

ಇತರೆ ವಿಷಯಗಳು :

ರಾಷ್ಟ್ರೀಯ ಯುವ ದಿನದ ಬಗ್ಗೆ ಪ್ರಬಂಧ

ವಾಯು ಮಾಲಿನ್ಯ ಬಗ್ಗೆ ಪ್ರಬಂಧ

Leave a Reply

Your email address will not be published. Required fields are marked *