ಮಂದಗಾಮಿ ಯುಗದ ಬಗ್ಗೆ ಮಾಹಿತಿ | Information About the Mandagami Yuga

ಮಂದಗಾಮಿ ಯುಗದ ಬಗ್ಗೆ ಮಾಹಿತಿ Information About the Mandagami Yuga Mandagami Yugada Bagge Mahiti in Kannada

ಮಂದಗಾಮಿ ಯುಗದ ಬಗ್ಗೆ ಮಾಹಿತಿ

Information About the Mandagami Yuga
Information About the Mandagami Yuga

ಈ ಲೇಖನಿಯಲ್ಲಿ ಮಂದಗಾಮಿ ಯುಗದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.

ಮಂದಗಾಮಿ ಯುಗ

ಕ್ರಿ. ಶಕ ೧೮೮೫ ರಿಂದ ೧೯೦೫ರ ವರೆಗಿನ ಕಾಲವನ್ನು ಮಂದಗಾಮಿ ಯುಗ ಎನ್ನಲಾಗಿದೆ. ನಾಲ್ಕು ಗೋಡೆಗಳ ಮಧ್ಯ ನ್ಯಾಯದ ಮೂಲಕ, ನಿಧಾನ ಚಳುವಳಿಯ ಮೂಲಕ ಆಡಳಿತ ವ್ಯವಸ್ಥೆಯನ್ನು ಸುಧಾರಿಸುವ ಉದ್ದೇಶವನ್ನು ಹೊಂದಿದ್ದರು. ಮನವಿ, ಚರ್ಚೆ, ಮಾತುಕತೆಗಳ ಮೂಲಕ ಜನರ ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತರುವುದಾಗಿತ್ತು.

ಮಂದಗಾಮಿಗಳ ಉದ್ದೇಶ

 • ಇಂಗ್ಲೆಂಡ್‌ ಮತ್ತು ಭಾರತದಲ್ಲಿ ಏಕಕಾಲಕ್ಕೆ I. C. S ಪರೀಕ್ಷೆಗಳನ್ನು ನಡೆಯಿಸಿ ಭಾರತೀಯರಿಗೆ ಹೆಚ್ಚು ಅವಕಾಶಗಳನ್ನು ನೀಡುವುದು.
 • ಭಾರತದಲ್ಲಿ ಬಡತನ ಹೆಚ್ಚಳ ಮತ್ತು ಬರಗಾಲವನ್ನು ಕುರಿತು, ಆಂಗ್ಲ ಸರ್ಕಾರ ವಿಚಾರಣೆ ನಡೆಸಬೇಕು.
 • ಭಾರತ ಆಡಳಿತದಲ್ಲಿ ಸಂವಿಧಾನಿಕವಾದ ಬದಲಾವಣೆಯನ್ನು ತರಬೇಕು.
 • ಶಾಸನ ಸಬೇಯನ್ನು ವಿಸ್ತರಿಸುವುದು ಮತ್ತು ಅದರ ಸದಸ್ಯರನ್ನು ಚುನಾವಣೆಯಿಂದ ಆರಿಸುವುದು.
 • ಭೂ ಕಂದಾಯವನ್ನು ಕಡಿತ ಮಾಡುವುದು.
 • ಭಾರತದ ಕಷಟಗಳನ್ನು ಬ್ರಿಟಿಷರಿಗೆ ಮನವರಿಕೆ ಮಾಡಿಕೊಡಲು ದಾದಾಬಾಯಿ ನವರೋಜಿ ಅವರು ೧೮೮೯ ರಲ್ಲಿ ಲಂಡನ್ ನಲ್ಲಿ ಬ್ರಿಟಿಷ್‌ ಕಮಿಟಿಯನ್ನು ಸ್ಥಾಪಿಸಿದರು.
 • ಕ್ರಿ. ಶಕ ೧೮೯೦ ರಲ್ಲಿ ದಾದಾಬಾಯಿ ನವರೋಜಿ ಅವರು The Voice of Indiä ( ಭಾರತದ ಧ್ವನಿ ) ಎಂಬ ಪತ್ರಿಕೆಯನ್ನು ಹೊರಡಿಸಿದರು.

ಮಂದಗಾಮಿ ಚಳುವಳಿಯ ಪ್ರಮುಖ ನಾಯಕರು

 • ದಾದಾಬಾಯಿ ನವರೋಜಿ :

ಕ್ರಿ. ಶಕ ೧೮೨೫ ರಲ್ಲಿ ಮಹಾರಾಷ್ಟ್ರದ ಖಾದರಕ ಎಂಬಲ್ಲಿ ಪಾರ್ಸಿ ಕುಟುಂಬವೊಂದರಲ್ಲಿ ಜನಿಸಿದರು. ಇವರನ್ನು ಭಾರತದ ವೃದ್ದ ಪಿತಾಮಹ ಎಂದು ಕರೆಯುತ್ತಾರೆ. ೧೮೬೬ ರಲ್ಲಿ ಈಸ್ಟ್‌ ಇಂಡಿಯಾ ಅಸೋಷಿಯನ್ ಎಂಬ ಸಂಸ್ಥೆಯನ್ನು ಲಂಡನ್‌ ನಲ್ಲಿ ಸ್ಥಾಪಿಸಿದರು. ಭಾರತದ ಸಂಪತ್ತಿನ ಸೋರಿಕೆಯನ್ನು ಪಾವರ್ಟಿ and ಅನ್‌ ಬ್ರಿಟಿಷ್‌ ರೂಲ್‌ ಇನ್ ಇಂಡಿಯಾ ಎಂಬ ಗ್ರಂಥದಲ್ಲಿ ಚರ್ಚಿಸಿದ್ದಾರೆ. ಹಾಗು ೧೮೯೨ ರಲ್ಲಿ ಬ್ರಿಟಿಷ್‌ ಪಾರ್ಲಿಮೆಂಟ್‌ ಗೆ ಆಯ್ಕೆಯಾದ ಪ್ರಥಮ ಭಾರತೀಯರು.

ಪತ್ರಿಕೆಗಳು : The Voice of India, ರಸ್ತ ಗಫ್ತರ್‌ (ಗುಜರಾತಿ)

 • ಸುರೇಂದ್ರನಾಥ ಬ್ಯಾನರ್ಜಿ :

ಭಾರತದ ರಾಷ್ಟ್ರೀಯ ಚಳುವಳಿಯ ಪಿತಾಮಹ ಎಂದೇ ಹೆಸರಾದ ೧೮೪೮ ರಲ್ಲಿ ಕಲ್ಕತ್ತಾದಲ್ಲಿ ಜನಿಸಿದರು. ೧೮೬೯ ರಲ್ಲಿ I. C. S ಪರೀಕ್ಷೆಯನ್ನು ಪಾಸು ಮಾಡಿ ಉನ್ನತ ಅಧಿಕಾರಿಯಾಗಿದ್ದ ಇವರನ್ನು ಬ್ರಿಟಿಷರು ವಜಾ ಮಾಡಿದಾಗ ರಾಷ್ಟ್ರೀಯ ಚಳುವಳಿಯಲ್ಲಿ ಭಾಗವಹಿಸಿದರು. I. C. S ಪರೀಕ್ಷೆಯನ್ನು ವಯಸ್ಸನ್ನು ೨೧ ರಿಂದ ೧೯ ಕ್ಕೆ ಇಳಿಸಿದಾಗ ರಾಷ್ಟ್ರವ್ಯಾಪ್ತಿ ಹೋರಾಟ ಮಾಡಿದರು. ಆದ್ದರಿಂದಲೇ ಇವರನ್ನು ಅರಾಜಕತೆಯ ಪಿತಾಮಹಾ ಎನ್ನುತ್ತಾರೆ.

 • ಗೋಪಾಲ ಕೃಷ್ಣ ಗೋಖಲೆ :

ಕ್ರಿ. ಶಕ ೧೮೬೬ ರಲ್ಲಿ ಮಹಾರಾಷ್ಟ್ರದ ಕೊತಳೂಕು ಎಂಬ ಗ್ರಾಮದಲ್ಲಿ ಜನಿಸಿದರು. ಪುನಾದಲ್ಲಿ ಇವರ ಗುರುಗಳಾದ ಎಂ. ಜಿ ರಾನಡೆ ಸ್ಥಾಪಿಸಿದ ಪುನಾ ಸಾರ್ವಜನಿಕ ಸಭಾ ಸಂಸ್ಥೆಯ ಸುಧಾರಕ ಪತ್ರಿಕೆಯ ಸಂಪಾದಕರಾಗಿ ಕೆಲಸ ಮಾಡಿದರು. ಇವರ ಹೋರಾಟ ಮತ್ತು ಸೇವೆಯನ್ನು ಗೌರವಿಸಿದ ಗಾಂದೀಜಿ ಇವರನ್ನು ತಮ್ಮ ರಾಜಕೀಯ ಗುರು ಎಂದು ಸ್ವೀಕರಿಸಿದರು. ರಾಷ್ಟ್ರೀಯ ಜಾಗೃತಿಗಾಗಿ ಮತ್ತು ರಾಷ್ಟ್ರವಾದಿಗಳನ್ನು ತರಬೇತುಗೊಳಿಸಲು ೧೯೦೫ ರಲ್ಲಿ ಸರ್ವೆಂಟ್ಸ ಆಫ್‌ ಇಂಡಿಯಾ ಸೊಸೈಟಿಯ ಸದಸ್ಯರಾದ ಕನ್ನಡಿಗರು ದಿನಕರ ದೇಸಾಯಿ. ತಿಲಕರು ಇವರನ್ನು ಮಹಾರಾಷ್ಟ್ರದ ಕಪ್ಪುವಜ್ರ, ಕಾರ್ಯಕರ್ತರ ರಾಜಕುಮಾರ ಎಂದೇ ಸಂಭೋದಿಸಿದ್ದಾರೆ.

 • ಪಂಡಿತ ಮದನಮೋಹನ ಮಾಳವೀಯ :

೧೮೬೧ ರಲ್ಲಿ ಅಲಹಾಬಾದ್‌ ನಲ್ಲಿ ಜನಿಸಿದರು. ಆರಂಭದಲ್ಲಿ ಶಿಕ್ಷಕರಾಗಿ ಅನಂತರ ಪ್ರಸಿದ್ದ ವಕೀಲರಾಗಿ ಸೇವೆ ಸಲ್ಲಿಸಿದರು. ಹಿಂದೂಸ್ಥಾನ, ದಿ ಇಂಡಿಯನ್‌ ಯೂನಿಯನ್, ಲೀಡರ್‌ ಎಂಬಪತ್ರಿಕೆಗಳನ್ನು ಹೊರಡಿಸಿದರು. ಇವರ ನೇತೃತ್ವದಲ್ಲಿ ೧೯೧೬ ರಂದು ಬನಾರಸ್‌ ಹಿಂದೂ ವಿಶ್ವವಿದ್ಯಾಲಯವಾಗಿ ಬೆಳೆಯಿತು. ಬ್ರಿಟಿಷರ ಒಡೆದು ಆಳುವ ನೀತಿಯಿಂದ ಹಿಂದೂಗಳನ್ನು ರಕ್ಷಿಸಲು ೧೯೧೫ ರಲ್ಲಿ ಹಿಂದೂ ಮಹಾಸಭಾ ಎಂಬ ಸಂಸ್ಥೆಯನ್ನು ಆರಂಭಿಸಿದರು.

FAQ

ಅರಾಜಕತೆಯ ಪಿತಾಮಹಾ ಎಂದು ಯಾರನ್ನು ಕರೆಯುತ್ತಾರೆ ?

ಸುರೇಂದ್ರನಾಥ ಬ್ಯಾನರ್ಜಿ

ಭಾರತದ ವೃದ್ದ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ ?

ದಾದಾಬಾಯಿ ನವರೋಜಿ

ಇತರೆ ವಿಷಯಗಳು :

ರಾಷ್ಟ್ರೀಯ ಯುವ ದಿನದ ಬಗ್ಗೆ ಪ್ರಬಂಧ

ವಿಜ್ಞಾನ ಮತ್ತು ತಂತ್ರಜ್ಞಾನದ ಬಗ್ಗೆ ಪ್ರಬಂಧ

Leave a Reply

Your email address will not be published. Required fields are marked *