ಶಿಲೆಗಳ ಬಗ್ಗೆ ಮಾಹಿತಿ Information About Rocks Shilegala Bagge Mahiti in Kannada
ಶಿಲೆಗಳ ಬಗ್ಗೆ ಮಾಹಿತಿ
ಶಿಲೆಗಳು
ವಿವಿಧ ರೀತಿಯಾದ ಖನಿಜಗಳ ಸಂಯೋಜನೆಯಿಂದ ಶಿಲೆಗಳು ನಿರ್ಮಾಣವಾಗಿದೆ. ಶಿಲೆಗಳ ಕುರಿತು ಅಧ್ಯಯನ ಮಾಡುವ ಶಾಸ್ತ್ರಕ್ಕೆ ಶಿಲಾಶಾಸ್ತ್ರ ಅಥವಾ ಪೆಟ್ರೋಲಾಜಿ ಎಂದು ಕರೆಯುವರು.
ಶಿಲೆಗಳ ಪ್ರಕಾರಗಳು
ಅಗ್ನಿಶಿಲೆ :
ಇದನ್ನು ಆಂಗ್ಲ ಭಾಷೆಯಲ್ಲಿ ಇಗ್ನೇಶೀಯಸ್ ರಾಕ್ಸ್ ಎಂದು ಕರೆಯುವರು. ಇದು ಲ್ಯಾಟೀನ್ ಭಾಷೆಯ ಇಗ್ನೀಸ್ ಎಂಬ ಪದದಿಂದ ಬಂದಿದೆ. ಇದರ ಅರ್ಥ ಬೆಂಕಿ. ಈ ಶಿಲೆಯನ್ನು ಪ್ರಾಥಮಿಕ ಶಿಲೆ, ಮೂಲ ಶಿಲೆ, ತಾಯಿ ಶಿಲೆ, ಹರಳು ಶಿಲೆ, ಇಗ್ನೇಶೀಯಸ್ ರಾಕ್ಸ್ ಹೀಗೆ ಬೇರೆ ಬೇರೆ ಹೆಸರುಗಳಿಂದ ಕರೆಯುವರು. ಅತ್ಯಂತ ಗಟ್ಟಿಯಾದ ಶಿಲೆಯಾಗಿದೆ. ರಾಶಿ / ಗುಡ್ಡದ ರೂಪದಲ್ಲಿ ನಿರ್ಮಾಣಗೊಂಡಿರುತ್ತದೆ. ಯಾವುದೇ ಪಳಯುಳಿಕೆಗಳಲ್ಲಿ ಕಂಡು ಬರುವುದಿಲ್ಲ. ಕಟ್ಟಡ ನಿರ್ಮಾಣಕ್ಕೆ ಅತಿ ಹೆಚ್ಚಾಗಿ ಬಳಸುವರು. ಶಿಲಾಗೋಳಾದಲ್ಲಿ ಅತ್ಯಧಿಕವಾಗಿ ಕಂಡು ಬರುವ ಶಿಲೆಯಿದು. ಅಗ್ನಿಶಿಲೆಯಲ್ಲಿ ಎರಡು ಪ್ರಕಾರಗಳಿವೆ
* ಅಂತಸ್ಸರಣ ಶಿಲೆಗಳು
* ಬಹಿಸ್ಸರಣ ಶಿಲೆಗಳು
ಪ್ರಮುಖವಾದ ಅಗ್ನಿ ಶಿಲೆಗಳು :
ಬಸಾಲ್ಟ, ಲ್ಯಾಕೋಲಿತ
ಗ್ಯಾಬ್ರೋ, ಅಬಸಿಡಿಯನ್
ಪದರು ಶಿಲೆ
ಇದಕ್ಕೆ ಆಂಗ್ಲ ಭಾಷೆಯಲ್ಲಿ ಸೆಡಿಮೆಂಟರಿ ರಾಕ್ಸ್ ಎಂದು ಕರೆಯುವರು. ಸೇಡಿ ಮೆಂಟರಿ ಎಂಬ ಪದವು ಲ್ಯಾಟೀನ್ ಭಾಷೆಯ ಸೇಡಿಮೆಂಟರಿ ಎಂಬ ಪದದಿಂದ ಎಂಬ ಪದದಿಂದ ಬಂದಿದೆ. ಇದರ ಅರ್ಥ ತಳಸೇರು, ಒಟ್ಟುಗೂಡು ಎಂದರ್ಥ. ಈ ಶಿಲೆಗಳನ್ನು ದ್ವೀತೀಯ ಶಿಲೆ, ಕಣ ಶಿಲೆ, ಜಲಜ ಶಿಲೆ, ಪುನರ ಜನ್ಮ ಶಿಲೆ ಹೀಗೆ ಬೇರೆ ಬೇರೆ ಹೆಸರುಗಳಿಂದ ಕರೆಯುವರು. ಅತ್ಯಂತ ಮೃದುವಾದ ಶಿಲೆಗಳಾಗಿವೆ. ಪಳೆಯುಳಿಕೆಗಳ ರಚನೆ ಸ್ಷಷ್ಟವಾಗಿ ಕಂಡು ಬರುತ್ತದೆ. ಈ ಶಿಲೆಗಳು ಇರುವ ಭಾಗದಲ್ಲಿ ಭೂಕಂಪ ಜ್ವಾಲಾಮುಖಿಗಳು ಅತಿ ಹೆಚ್ಚಾಗಿ ಉಂಟಾಗುತ್ತದೆ. ಈ ಶಿಲೆಗಳು ಇರುವ ಭಾಗದಲ್ಲಿ ಕಲ್ಲಿದ್ದಲು ನೈಸರ್ಗಿಕ ಅನಿಲ, ಪೆಟ್ರೋಲಿಯಂ, ಅತ್ಯಧಿಕವಾಗಿ ದೊರೆಯುತ್ತದೆ. ಈ ಶಿಲೆಗಳು ಭೂ ಮೇಲ್ಮೈಯಲ್ಲಿ ಅತೀ ಹೆಚ್ಚಾಗಿ ವಿಸ್ತರಿಸಿದೆ.
ರೂಪಾಂತರ ಶಿಲೆರೂಪಾಂತರ ಶಿಲೆ
ಈ ಶಿಲೆಗಳಿಗೆ ಮೇಟೋಮಾರ್ಪಿಕ್ ಅಥವಾ ತೃತೀಯ ಶಿಲೆಗಳು ಎಂದು ಕರೆಯುವರು. ಇವು ಅತ್ಯಂತ ಬೆಲೆ ಬಾಳುವ ಶಿಲೆಗಳು. ಅಗ್ನಿ ಶಿಲೆಗಳು ಹಾಗೂ ಕಣ ಶಿಲೆಗಳು ಅತ್ಯಧಿಕ ಉಷ್ಣ ಮತ್ತು ಒತ್ತಡದ ಪರಿಣಾಮದಿಂದ ಮಾರ್ಪಾಡು ಹೊಂದಿ ರೂಪಾಂತರ ಶಿಲೆಗಳಾಗಿ ರೂಪುಗೊಳ್ಳತ್ತದೆ.
FAQ
ರೂಪಾಂತರ ಶಿಲೆ ಎಂದರೇನು ?
ಈ ಶಿಲೆಗಳಿಗೆ ಮೇಟೋಮಾರ್ಪಿಕ್ ಅಥವಾ ತೃತೀಯ ಶಿಲೆಗಳು ಎಂದು ಕರೆಯುವರು.
ಪ್ರಮುಖವಾದ ಅಗ್ನಿ ಶಿಲೆಗಳನ್ನು ತಿಳಿಸಿ ?
ಬಸಾಲ್ಟ, ಲ್ಯಾಕೋಲಿತ
ಗ್ಯಾಬ್ರೋ, ಅಬಸಿಡಿಯನ್
ಇತರೆ ವಿಷಯಗಳು :
ಮಹಿಳಾ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಮಾಹಿತಿ