ವಿಶ್ವದ ಪ್ರಮುಖ ಕದನಗಳ ಬಗ್ಗೆ ಮಾಹಿತಿ Information About Major Battles of The World Vishvada Pramuka Kadanagala Bagge Mahiti in Kannada
ವಿಶ್ವದ ಪ್ರಮುಖ ಕದನಗಳ ಬಗ್ಗೆ ಮಾಹಿತಿ
ಈ ಲೇಖನಿಯಲ್ಲಿ ವಿಶ್ವದ ಪ್ರಮುಖ ಕದನಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗುತ್ತದೆ.
ಯುದ್ದ | ವರ್ಷ | ಭಾಗಿಯಾಗಿದ್ದ ದೇಶಗಳು |
ಮ್ಯಾರಾಥಾನ್ ಕದನ | ಕ್ರಿ. ಶಕ ೪೮೦ | ಈ ಕದನವು ಗ್ರೀಕ್ ಮತ್ತು ಪರ್ಶಿಯನ್ ಸೈನ್ಯಗಳ ನಡುವೆ ನಡೆದಿದೆ. ದೊಡ್ಡ ಸೈನ್ಯವನ್ನು ಹೊಂದಿದ ಪರ್ಶಿಯನ್ ರನ್ನರನ್ನು ಗ್ರೀಕರ ಚಿಕ್ಕ ಸೈನ್ಯವು ಸೋಲಿಸುತ್ತದೆ. |
ಸಾಲೋಮ್ಸ್ | ಕ್ರಿ. ಶಕ ೪೮೦ | ಗ್ರಿಕ್ ಮತ್ತು ಪರ್ಶಿಯನ್ ಸೈನ್ಯಗಳ ಕದನ, ಗ್ರಿಕರು ಪರ್ಶಿಯನ್ ಸೈನ್ಯವನ್ನು ಹಿಮ್ಮೆಟ್ಟಿಸುತ್ತಾರೆ. |
ಅಕ್ಟಿಯಂ ಕದನ | ಕ್ರಿ. ಶಕ ೧೪ | ಈ ಕದನದಲ್ಲಿ ಮಾರ್ಕ್ ಅಂಥೋನಿ ಮತ್ತು ಕ್ಲಿಯೋಪಾತ್ರರ ಕೂಟಕ್ಕೆ ರೋಮನ್ ರಾಜ್ಯ ಆಕ್ಟಿವಿನ್ ನಿಂದ ಸೋಲಾಗುತ್ತದೆ. |
ಹೆಸ್ಟಿಂಗ್ಸ್ ಕದನ | ಕ್ರಿ. ಶಕ ೧೦೬೬ | ಈ ಕದನವು ಬ್ರಿಟೀಷ್ ಮತ್ತು ನಾರ್ಮನ್ನರ ನಡುವೆ ನಡೆಯುತ್ತದೆ. ಬ್ರಿಟಿಷ್ ರಾಜ ಹರನಾಲ್ಡ್ ಗೆ ಸೋಲಾಗಿ ಇಂಗ್ಲೆಂಡ್ ನಾರ್ಮನ್ನರ ನಿಯಂತ್ರಣಕ್ಕೆ ಬರುತ್ತದೆ. |
ನೇವಾ ಕದನ | ಕ್ರಿ. ಶಕ ೧೨೪೦ | ನೇವಾ ನದಿಯ ದಡದ ಮೇಲೆ ರಷ್ಯಾದ ದೊರೆ ಅಲೆಗ್ಸಾಂಡರ್ ನೆವ್‌ನ್ಕಿಯು ಸ್ವಿಡಿಸ್ ಪಡೆಗಳನ್ನು ಸೋಲಿಸುತ್ತಾನೆ. |
ನೂರು ವರ್ಷಗಳ ಕದನ | ಕ್ರಿ. ಶಕ ೧೩೩೭ – ೧೪೫೩ | ಪ್ರಾನ್ಸ್ ಮತ್ತು ಇಂಗ್ಲೆಂಡ್ |
ಗುಲಾಬಿ ಕದನ | ೧೪೫೫ – ೧೪೮್ | ಇಂಗ್ಲೆಂಡ್ ನಲ್ಲಿ ನಡೆದ ನಾಗರಿಕ ಯುದ್ದವಾಗಿದೆ. |
ಇಟಲಿ ಯುದ್ದಗಳು | ೧೪೯೪ – ೧೫೫೯ | ಈ ಯುದ್ದಗಳು ಫ್ರಾನ್ಸನ ವೇಲೋಯಿಸ್ ರಾಜ್ಯ ವಂಶ ಮತ್ತು ಹ್ಯಾಫ ಬರ್ಗ ನಡುವೆ ಇಟಲಿಯ ಮೇಲಿನ ನಿಯಂತ್ರಣಕ್ಕಾಗಿ ನಡೆಯುತ್ತದೆ. ಇದರಲ್ಲಿ ಯಾವುದೇ ಫಲಿತಾಂಶ ಬರಲಿಲ್ಲ. |
ಇಂಗ್ಲೆಂಡಿನ ಆಂತರಿಕ ಯುದ್ದ | ೧೬೪೨- ೧೬೪೯ | ಇಂಗ್ಲೆಂಡಿನ ಈ ಆಂತರಿಕ ಯುದ್ದವು ಚಾರ್ಲ್ಸ ೧ ದೊರೆಯ ಮತ್ತು ಪಾರ್ಲಿಮೆಂಟ್ ದೊರೆಯ ನಡುವೆ ರಾಜ ನೀತಿಯ ಭಿನ್ನಾಭಿಪ್ರಾಯದಿಂದಾಗಿ ನಡೆಯಿತು. |
ಮೂವತ್ತು ವರ್ಷಗಳ ಕದನ | ೧೬೪೨ – ೧೬೪೮ | ಜರ್ಮನಿಯಲ್ಲಿ ನಡೆದ ಧಾರ್ಮಿಕ ಮತ್ತು ರಾಜಕೀಯ ಕಾಳಗ |
ಇಂಗ್ಲೆಂಡಿನ ನಾಗರಿಕ ಯುದ್ದ | ೧೬೪೨ – ೧೬೪೮ | ಇಂಗ್ಲೆಂಡಿನಲ್ಲಿ ಅರಸರ ಬೆಂಬಲಿಗರು ಹಾಗೂ ಸಂಸತ್ತಿನ ಬೆಂಬಲಿಗರ ಮಧ್ಯ ನಡೆದ ಹೋರಾಟ |
ಬೆನ್ ಹಿಮ್ ಕದನ | ೧೭೦೪ | ಈ ಕದನದಲ್ಲಿ ಇಂಗ್ಲೆಂಡ್ ಮತ್ತು ಆಸ್ಟ್ರೀಯಾ ಕೂಟವು ಫ್ರೆಂಚ್ ಮತ್ತು ಬವಾರಿಯನ್ ಕೂಟವು ಸೋಲಿಸುತ್ತದೆ. |
ಸಪ್ತವಾರ್ಷಿಕ ಕದನ | ೧೭೫೬ – ೧೭೬೩ | ಬ್ರಿಟನ್ ಮಿತ್ರಕೂಟ ಮತ್ತು ಫ್ರಾನ್ಸ – ಬ್ರಿಟನ್ ಮಿತ್ರಕೂಟಕ್ಕೆ ಜಯ |
ಅಮೆರಿಕದ ಸ್ವಾತಂತ್ರ ಸಮರ | ೧೭೭೬ – ೧೭೮೩ | ಜಾರ್ಜ ವಾಷಿಂಗಟನ್ ನ ನಾಯಕತ್ವದಲ್ಲಿ ಜರುಗಿದ ಅಮೇರಿಕಾ ಸ್ವಾತಂತ್ರ ಸಮರದಲ್ಲಿ ಬ್ರಿಟನ್ ಪಡೆಗಳಿಗೆ ಸೋಲಾಗಿ ಅಮೇರಿಕಾವು ಸ್ವತಂತ್ರ ರಾಷ್ಟ್ರವಾಗುತ್ತದೆ. |
ನೈಲ್ ಕದನ | ೧೭೯೮ | ಅಲೆಕ್ಸಾಂಡ್ರಿಯಾ ಬಳಿಯ ಅಬೌಕಿರ್ ಕೊಲ್ಲಿಯಲ್ಲಿ ಬ್ರಿಟಿಷ್ ಮತ್ತು ಫ್ರೆಂಚ್ ಪಡೆಗಳ ನಡುವೆ ನಡೆದ ಈ ನೌಕಾ ಕದನದಲ್ಲಿ ಬ್ರಿಟಿಷ್ ಪಡೆಗಳಿಗೆ ಜಯವಾಗುತ್ತದೆ. |
ಟ್ರಫಲ್ಗಾರ್ ಕದನ | ೧೮೦೫ | ಬ್ರಿಟಿಷ್ ನೌಕಾಪಡೆಯು ಫ್ರಾನ್ಸ್ ಮತ್ತು ಸ್ಪೆನ್ ನೌಕಾಪಡೆಗಳನ್ನು ಸೋಲಿಸಿತು. ಈ ಯುದ್ದದಲ್ಲಿ ಬ್ರಿಟಿಷ್ ನೌಕಾಪಡೆಗಳನ್ನು ವಿಜಯದತ್ತ ಮುನ್ನಡೆಸಿದ ಅಡ್ಮಿರಲ್ ನೆಲ್ಸನ್ ಕೊಲ್ಲಲ್ಪಟ್ಟನು. |
ವಾಟರ್ ಲೂ ಕದನ | ೧೮೧೫ | ಬ್ರಿಟನ್ನಿನ ಡ್ಯೂಕ್ ಆಫ್ ವೆಲ್ಲಿಂಗ್ ಟನ್ ನೇತೃತ್ವದ ಬ್ರಿಟನ್ ಮತ್ತು ಮಿತ್ರಕೂಟವು ನೇಪೋಲಿಯನ್ ಸೋಲಿಸಿತು. ಸೋತ ನೇಪೊಲಿಯನ್ ಸೆಂಟ್ ಹೆಲಿನಾ ದ್ವೀಪದಲ್ಲಿ ಸೆರೆಯಲ್ಲಿ ಇಡಲಾಯಿತು. |
ಮೊದಲನೆಯ ಚೀನಾ ಕದನ | ೧೮೪೦ | ಚೀನಾ ಮತ್ತು ಬ್ರಿಟನ್ ಮಧ್ಯ ನಡೆಯಿತು. ಇದನ್ನು ಮೊದಲನೆ ಆಫೀಮು ಯುದ್ದ ಎಂತಲೂ ಕರೆಯುತ್ತಾರೆ. ಚೀನಾಕ್ಕೆ ಸೋಲು. |
ಕ್ರಿಮಿಯನ್ ಯುದ್ದ | ೧೮೫೪ – ೫೬ | ಇಂಗ್ಲೆಂಡ್, ಫ್ರಾನ್ಸ್, ಹಾಗೂ ಟರ್ಕಿಗಳ ಏಕೀಕೃತ ಪಡೆಗಳ ಮೇಲೆ ಯುದ್ದ ನಡೆಯುತ್ತದೆ. ರಷ್ಯಾವು ಶಾಂತಿ ಮೂಡಿಸಲು ಮುಂದಾದ್ದರಿಂದ ಯುದ್ದ ನಿಲುಗಡೆಯಾಗುತ್ತದೆ. |
ಅಮೇರಿಕದ ಆಂತರಿಕ ಯುದ್ದ | ೧೮೬೧ – ೬೫ | ೧೮೬೧ – ೧೯೬೫ ಈ ಆಂತರಿಕ ಯುದ್ದವು ಉತ್ತರ ಮತ್ತು ದಕ್ಷಿಣ ರಾಜ್ಯಗಳ ನಡುವೆ ಗುಲಾಮಗಿರಿ ಪದ್ದತಿಯ ರದ್ದತಿಗಾಗಿ ನಡೆಯುತ್ತದೆ. ಜಾರ್ಜ ವಾಷಿಂಗ್ ಟನ್‌ನು ದಕ್ಷಿಣ ರಾಜ್ಯಗಳನ್ನು ಸೋಲಿಸುತ್ತಾನೆ. |
ಬೋಯರ್ ಯುದ್ದ | ೧೮೯೯ – ೧೯೦೧ | ಈ ಯುದ್ದವು ಬ್ರಿಟಿಷ್ ಮತ್ತು ಡಚ್ ಪಡೆಗಳ ನಡುವೆ ದಕ್ಷಿಣ ಆಫ್ರಿಕದಲ್ಲಿ ನಡೆಯುತ್ತದೆ. |
ಚೀನಾ ಜಪಾನ್ ಯುದ್ದ | ೧೮೯೪ – ೧೮೯೫ | ಈ ಯುದ್ದವು ಚೀನಾ ಮತ್ತು ಜಪಾನ್ ಗಳ ನಡುವೆ ಚೀನಾಕ್ಕೆ ಸೋಲಾಗುತ್ತದೆ. |
ಸ್ಪೇನ್ ಅಮೆರಿಕದ ಯುದ್ದ | ೧೮೯೮ | ಈ ಯುದ್ದದಲ್ಲಿ ಸ್ಪೇನ್ ಗೆ ಸೋಲಾಗುತ್ತದೆ. |
ರಷ್ಯಾ ಜಪಾನ್ ಕದನ | ೧೯೦೫ | ಜಪಾನ್ ನ ಸಮುದ್ರದಲ್ಲಿ ರಷ್ಯಾ ಹಾಗೂ ಜಪಾನ್ ನಡುವೆ ನಡೆಯಿತು. ಈ ಯುದ್ದವನ್ನು ಪೋರ್ಟ ಆಥರ್ ಕದನ ಅಲ್ಲದೆ ಯಾಲೂ ಕದನವೆಂದೂ ಕರೆಯಲಾಗುತ್ತದೆ. ಬಲಾಡ್ಯ ರಷ್ಯಾವನ್ನು ಸಣ್ಣ ರಾಷ್ಟವಾದ ಜಪಾನ್ ಪರಾಭವಗೊಳಿಸಿತು. |
ಮೊದಲನೆಯ ಬಾಲ್ಕನ್ ಯುದ್ದ | ೧೯೧೨ | ಟರ್ಕಿ ಮತ್ತು ಬಾಲ್ಕನ್ ದೇಶಗಳು ಹಾಗೂ ಗ್ರೀಸ್ ನಡುವೆ ನಡೆಯಿತು. ಟರ್ಕಿ ಪರಾಭವಗೊಂಡಿತು. |
ಎರಡನೆಯ ಬಾಲ್ಕನ್ ಯುದ್ದ | ೧೯೧೩ | ಸರ್ಬಿಯ ಹಾಗೂ ಗ್ರೀಸ್ ಮೇಲೆ ಬಲ್ಗೇರಿಯಾದ ದಾಳಿ ಬಲ್ಗೇರಿಯಾವನ್ನು ಸರ್ಬಿಯಾ ಗ್ರೀಸ್ ಮೈತ್ರಿಕೂಟ ಸೋಲಿಸಿತು. |
ಮೊದಲನೆಯ ಮಹಾಯುದ್ದ | ೧೯೧೪ – ೧೯೧೮ | ಟ್ರಿಪಲ್ ಅಲೆಯನ್ಸ್ ಕೂಟದ ಜರ್ಮನಿ ಮಿತ್ರಕೂಟ ಹಾಗೂ ಟ್ರಿಪಲ್ ಎಂಟೆಂಟೆ ಕೂಟದ ಫ್ರಾನ್ಸ್ ಮಿತ್ರ ರಾಷ್ಟ್ರಗಳ ನಡುವೆ ನಡೆಯಿತು. ಜರ್ಮನಿ ಮತ್ತು ಅದರ ಮಿತ್ರ ರಾಷ್ಟ್ರಗಳ ಪರಾಭವ ಹೊಂದಿದವು. ೧೯೧೯ ರ ವರ್ಸೇಲ್ಸ್ ಒಪ್ಪಂದದ ಅನುಸಾರ ಯುದ್ದ ಸಮಾಪ್ತಿಯಾಯಿತು. |
ಜುಟ್ಲಾಂಡ್ ಕದನ | ೧೯೧೬ | ಮೊದಲ ಜಾಗತಿಕ ಸಮರದ ಸಮಯದಲ್ಲಿ ಜರ್ಮನಿ ಮತ್ತು ಇಂಗ್ಲೆಂಡ್ ಗಳ ನಡುವೆ ಈ ನೌಕಾ ಯುದ್ದದಲ್ಲಿ ಜರ್ಮನಿ ಸೋಲುತ್ತದೆ. |
೨ ನೇ ಮಹಾಯುದ್ದ | ೧೯೩೯ – ೧೯೪೫ | ಶತೃ ಬಣ ಶಕ್ತಿಗಳಾದ ಜರ್ಮನಿ ಮಿತ್ರಕೂಟ ಹಾಗೂ ಮಿತ್ರಬಣ ಶಕ್ತಿಗಳಾದ ಬ್ರಿಟನ್ ಮಿತ್ರಕೂಟಗಳ ನಡುವೆ ನಡೆಯಿತು. ಆಕ್ಸಿಸ್ ಶಕ್ತಿಗಳು ಸೋಲಲ್ಪಟ್ಟವು. |
ಕೋರಿಯಾ ಯುದ್ದ | ೧೯೫೦ – ೧೯೫೩ | ಈ ಯುದ್ದವು ದಕ್ಷಿಣ ಮತ್ತು ಉತ್ತರ ಕೋರಿಯಾಗಳೊಡನೆ ನಡೆಯಿತು. ವಿಶ್ವಸಂಸ್ಥೆಯ ಮಧ್ಯ ಪ್ರವೇಶದಿಂದ ನಿಯಂತ್ರಣಕ್ಕೆ ಬಂದಿತು. |
ಅರಬ್ ಇಸ್ರೇಲ್ ಯದ್ದ | ಜೂನ್ ೧೯೬೭ | ೬ ದಿನಗಳ ಕಾಲ ನಡೆದ ಈ ಯುದ್ದದಲ್ಲಿ ಈಜಿಪ್ತ್, ಸಿರಿಯಾ ಮತ್ತು ಜೋರ್ಡಾನಿನ ಏಕೀಕೃತ ಪಡೆಯನ್ನು ಇಸ್ರೇಲ್ ಸೋಲಿಸುತ್ತದೆ. |
ಪಾಕಿಸ್ತಾನ್ ಬಾಂಗ್ಲಾದೇಶ ಕದನ | ೧೯೭೧ | ೧೯೭೧ ರಲ್ಲಿ ಪೂರ್ವ ಪಾಕಿಸ್ತಾನವು ಪಾಕ್ ನಿಂದ ಬೇರ್ಪಡೆಯಾಗಿ ಬಾಂಗ್ಲಾ ದೇಶವಾಗಲು ನಡೆಸಿದ ಹೋರಾಟ. ಭಾರತದ ನೆರವು ಪಡೆದ |
ಇರಾನ್ ಇರಾಕ್ ಯುದ್ದ | ೧೯೮೦ – ೧೯೮೮ | ಇರಾನ್ ಮತ್ತು ಇರಾನ್ ನಡುವೆ ೧೯೮೦ ೮೮ ರ ಅವಧಿಯಲ್ಲಿ ನಡೆದ ಈ ಯದ್ದವು ವಿಶ್ವಸಂಸ್ಥೆಯ ಸತತ ಪ್ರಯತ್ನದಿಂದ ನಿಲ್ಲುತ್ತದೆ. ಗಲ್ಪ ಯುದ್ದ ಕ್ರಿ. ಶಕ ೧೯೮೧ ಇರಾಕ್ ದೇಶವು ಕುವೈತ್ ದೇಶವನ್ನು ಆಕ್ರಮಿಸಿಕೊಳ್ಳತ್ತದೆ. ಇರಾಕ್ ಕುವೈತ್ ನಿಂದ ಸರಿಯಲು ಒಪ್ಪದ ಕಾರಣ ಅಮೇರಿಕದ ನಾಯಕತ್ವದಲ್ಲಿ ಬಹುರಾಷ್ಟ್ರೀಯ ಪಡೆಗಳು ಇರಾಕ್ ಮೇಲೆ ದಾಳಿ ಮಾಡುತ್ತದೆ. ಇರಾಕ್ ಗೆ ತೀವ್ರ ನಷ್ಟವಾಗುತ್ತದೆ. |
ಮೊದಲನೆ ಕೊಲ್ಲಿ ಯುದ್ದ | ೨೦೦೩ | ಅಮೆರಿಕ ಮತ್ತು ಅದರ ಮಿತ್ರ ರಾಷ್ಟ್ರಗಳು ಇರಾಕ್ ಸಮೂಹ ವಿನಾಶಕ ಅಸ್ತ್ರಗಳನ್ನು ಹೊಂದಿದೆ ಎಂದು ಆರೋಪಿಸಿ ಇರಾಕ್ ಮೇಲೆ ದಾಳಿ ಮಾಡಿದವು ಇದರಿಂದಾಗಿ ಇರಾಕ್ ನ ಅಧ್ಯಕ್ಷ ಸದ್ದಾಂ ಹುಸೇನ್ ಪದಚ್ಯುತಗೊಂಡರು. ಡಿಸೆಂಬರ್ ೧೪ ರಂದು ಅಮೆರಿಕದ ಪಡೆಗಳು ಸದ್ದಾಂನನ್ನು ಬಂಧಿಸಿದವು. |
ಇರಾಕ್ ಮತ್ತು ಅಮೆರಿಕಾ ಮಿತ್ರಪಡೆಗಳ ನಡುವೆ ನಡೆದ ಯುದ್ದ | ೨೦೦೩ | ವಿಶ್ವಕ್ಕೆ ಮಾರಕವಾದ ರಾಸಾಯನಿಕ ಅಸ್ತ್ರಗಳನ್ನು ಹೊಂದಿದ್ದಾರೆ ಎಂಬ ಆಪಾದನೆಯ ಮೇರೆಗೆ ಇರಾಕ್ ಅಧ್ಯಕ್ಷ ಅಧ್ಯಕ್ಷ ಸದ್ದಾಂ ಹುಸೇನ್ ನನ್ನು ಪದಚ್ಯುತಗೊಳಿಸಲು ಈ ಯುದ್ದ ಮಾರ್ಚ್ ೨೦೦೩ ರಲ್ಲಿ ಪ್ರಾರಂಭವಾಗುತ್ತದೆ. ಸದ್ದಾಮ್ ರ ಪದಚ್ಯುತದಿಂದ ಯುದ್ದ ಕೊನೆಗೊಳ್ಳುತ್ತದೆ. |
FAQ
ಮ್ಯಾರಾಥಾನ್ ಕದನವು ಯಾವಾಗ ಆಯಿತು ?
ಕ್ರಿ. ಪೂ. ೪೯೦
ನೇವಾ ಕದನವು ಯಾವಾಗ ಆಯಿತು ?
ಕ್ರಿ. ಶಕ ೧೨೪೦
ಇತರೆ ವಿಷಯಗಳು :
ಕರ್ನಾಟಕದ ಪ್ರಮುಖ ಪ್ರಶಸ್ತಿಗಳ ಬಗ್ಗೆ ಮಾಹಿತಿ